For Quick Alerts
  ALLOW NOTIFICATIONS  
  For Daily Alerts

  2020ರಲ್ಲಿ ಹಸೆಮಣೆ ಏರಿದ ಬಾಲಿವುಡ್ ತಾರೆಯರು

  |

  2020ನೇ ವರ್ಷದಲ್ಲಿ ಮೊದಲ ಎರಡೂವರೆ ತಿಂಗಳ ಎಲ್ಲವೂ ಸಹಜವಾಗಿತ್ತು. ಮಾರ್ಚ್ ಮೂರನೇ ವಾರದಲ್ಲಿ ಕೊರೊನಾ ಭೀತಿಯಿಂದ ಲಾಕ್‌ಡೌನ್ ಜಾರಿಯಾಯಿತು. ಈ ಅವಧಿಯಲ್ಲಿ ಯಾವುದೇ ಸಮಾರಂಭಗಳು ನಡೆಸಲು ಅನುಮತಿ ಇರಲಿಲ್ಲ. ನಿಶ್ಚಿಯವಾಗಿದ್ದ ಮದುವೆಗಳು, ನಿಶ್ಚಿತಾರ್ಥಗಳು ಮುಂದೂಡಲ್ಪಟ್ಟವು.

  ಬಳಿಕ ನಿಧಾನವಾಗಿ ಮದುವೆ ಸೇರಿದಂತೆ ಸಾರ್ವಜನಿಕ ಕಾರ್ಯಕ್ರಮಗಳಿಗೆ ಅನುಮತಿ ದೊರೆಯಿತು. ಕೊರೊನಾ ಭೀತಿಯ ನಡುವೆಯೂ ಕೆಲವು ಬಾಲಿವುಡ್ ತಾರೆಯರು ಈ ವರ್ಷ ಸಪ್ತಪದಿ ತುಳಿದಿದ್ದಾರೆ. ಹಾಗಿದ್ರೆ, ಈ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಟೌನ್ ಸೆಲೆಬ್ರಿಟಿಗಳು ಯಾರು? ಮುಂದೆ ಓದಿ...

  ಸನಾ ಖಾನ್ Weds ಅನಾಸ್ ಸೈಯದ್

  ಸನಾ ಖಾನ್ Weds ಅನಾಸ್ ಸೈಯದ್

  ಬಾಲಿವುಡ್ ನಟಿ-ಮಾಡೆಲ್ ಸನಾ ಖಾನ್ ಅವರು ನವೆಂಬರ್ 20 ರಂದು ಇಸ್ಲಾಮಿಕ್ ಧರ್ಮಗುರು ಮುಫ್ತಿ ಅನಸ್ ಸೈಯದ್ ಅವರನ್ನು ವಿವಾಹವಾದರು. ಸನಾ ಖಾನ್ ಐಟಂ ಹಾಡುಗಳಿಗೆ ಹೆಚ್ಚು ಖ್ಯಾತಿ ಗಳಿಸಿಕೊಂಡಿದ್ದರು.

  2020 ರಲ್ಲಿ ಬಾಲಿವುಡ್‌ ಕಳೆದುಕೊಂಡ ತಾರೆಗಳೆಷ್ಟು? ಇಲ್ಲಿದೆ ಪಟ್ಟಿ

  ಪ್ರಾಚಿ Weds ರೋಹಿತ್ ಸರೋಹಾ

  ಪ್ರಾಚಿ Weds ರೋಹಿತ್ ಸರೋಹಾ

  ಬಾಲಿವುಡ್ ನಟಿ ಹಾಗೂ ರಾಷ್ಟ್ರೀಯ ನೆಟ್‌ಬಾಲ್ ಆಟಗಾರ್ತಿ ಪ್ರಾಚಿ ತೆಹ್ಲಾನ್ ಆಗಸ್ಟ್ 7 ರಂದು ರೋಹಿತ್ ಸರೋಹಾ ಜೊತೆ ದಾಂಪತ್ಯ ಜೀವನ ಆರಂಭಿಸಿದರು. ಪ್ರಾಚಿ ತೆಹ್ಲಾನ್ 2010ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ್ದರು.

  ಪೂಜಾ ಬ್ಯಾನರ್ಜಿ Weds ಕುನಾಲ್ ವರ್ಮಾ

  ಪೂಜಾ ಬ್ಯಾನರ್ಜಿ Weds ಕುನಾಲ್ ವರ್ಮಾ

  ನಟಿ ಪೂಜಾ ಬ್ಯಾನರ್ಜಿ ತನ್ನ ಗೆಳೆಯ ಕುನಾಲ್ ವರ್ಮಾ 2017 ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. 2020 ರ ಏಪ್ರಿಲ್‌ನಲ್ಲಿ ಅದ್ಧೂರಿಯಾಗಿ ವಿವಾಹ ಮಾಡಿಕೊಳ್ಳಲು ಪ್ಲಾನ್ ಮಾಡಿದ್ದರು. ಆದ್ರೆ, ಕೊರೊನಾ ಕಾರಣದಿಂದ ಆಸೆ ನೆರವೇರಲಿಲ್ಲ. ಹಾಗಾಗಿ, ರಿಜಿಸ್ಟರ್ ಮದುವೆ ಆಗುವ ಮೂಲಕ ಈ ಜೋಡಿ ಗಮನ ಸೆಳೆದಿದೆ. ಮದುವೆಗಾಗಿ ಮೀಸಲಿಟ್ಟಿದ್ದ ಹಣವನ್ನು ದಾನ ಮಾಡಿ ಮೆಚ್ಚುಗೆ ಗಳಿಸಿಕೊಂಡರು.

  2020 ಫ್ಲ್ಯಾಶ್ ಬ್ಯಾಕ್; ಈ ವರ್ಷ ಮೋಡದ ಮರೆಗೆ ಸರಿದ ತಮಿಳು, ತೆಲುಗು, ಮಲಯಾಳಂ ಚಿತ್ರರಂಗದ ತಾರೆಯರು

  ಮನೀಶ್ Weds ಸಂಗೀತ ಚೌಹಾಣ್

  ಮನೀಶ್ Weds ಸಂಗೀತ ಚೌಹಾಣ್

  'ಸಾಸುರಾಲ್ ಸಿಮರ್ ಕಾ' ಖ್ಯಾತಿಯ ನಟ ಮನೀಶ್ ಮತ್ತು ಅಭಿಮಾನ್ ಖ್ಯಾತಿಯ ನಟಿ ಸಂಗೀತ ಜೋಡಿ ಜೂನ್ 30 ರಂದು ಕೇವಲ 5 ಜನರ ಸಮ್ಮುಖದಲ್ಲಿ ವಿವಾಹವಾದರು. ವಯಸ್ಸಾದ ಕಾರಣ ಅವರ ಪೋಷಕರು ಸಹ ಈ ಮದುವೆಗೆ ಹಾಜರಾಗಿರಲಿಲ್ಲ.

  English summary
  Year end 2020: List of Bollywood celebs who got married this year.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X