»   » ಶಾಹೀದ್ ಕಪೂರ್ ತಂದೆಯಾಗುತ್ತಿರೋದು ಪಕ್ಕಾ

ಶಾಹೀದ್ ಕಪೂರ್ ತಂದೆಯಾಗುತ್ತಿರೋದು ಪಕ್ಕಾ

Posted By: ಸೋನು ಗೌಡ
Subscribe to Filmibeat Kannada

ಬಾಲಿವುಡ್ ನಟ ಶಾಹಿದ್ ಕಪೂರ್ ಅವರು ತಂದೆಯಾಗುತ್ತಿದ್ದಾರೆ ಎಂಬ ವಿಚಾರ ಇತ್ತೀಚೆಗೆ ಬಿಟೌನ್ ನ ಗಲ್ಲಿ-ಗಲ್ಲಿಗಳಲ್ಲಿ ಸುದ್ದಿಯಾಗಿತ್ತು. ಆದರೆ ಇದರ ಬಗ್ಗೆ ಕಪೂರ್ ಫ್ಯಾಮಿಲಿಯಿಂದ ಮಾತ್ರ ಯಾವುದೇ ರೀತಿಯ ಖಚಿತ ಮಾಹಿತಿ ಬಂದಿರಲಿಲ್ಲ.

ಇದೀಗ ಎಲ್ಲಾ ಅಂತೆ-ಕಂತೆಗಳಿಗೆ ನಟ ಶಾಹೀದ್ ಕಪೂರ್ ಅವರು 'ಉಡ್ತಾ ಪಂಜಾಬ್' ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ತೆರೆ ಎಳೆದಿದ್ದಾರೆ.[ಚಿತ್ರಗಳು ; ಮೊದಲ ಮಗುವಿನ ನಿರೀಕ್ಷೆಯಲ್ಲಿ ನಟ ಶಾಹೀದ್ ಕಪೂರ್?]

Yes I am going to become a father: Says Actor Shahid Kapoor

'ಉಡ್ತಾ ಪಂಜಾಬ್' ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು 'ಸುತ್ತಿ ಬಳಸಿ ಯಾಕೆ ಪ್ರಶ್ನೆ ಕೇಳುತ್ತೀರಿ, ಹೌದು ನಾನು ತಂದೆಯಾಗುತ್ತಿದ್ದೇನೆ' ಎಂದು ಹೇಳುವ ಮೂಲಕ ಎಲ್ಲಾ ಗಾಸಿಪ್ ಗಳಿಗೆ ಬ್ರೇಕ್ ಹಾಕಿದ್ದಾರೆ.

ಈ ಮೊದಲು ಶಾಹೀದ್ ಕಪೂರ್ ಅವರ ಪತ್ನಿ ಮೀರಾ ರಜಪೂತ್ ಅವರು ಲ್ಯಾಕ್ಮೆ ಫ್ಯಾಶನ್ ಶೋ ಸಮಾರಂಭದಲ್ಲಿ ಭಾಗವಹಿಸಿದ್ದರು. ಈ ವೇಳೆ ರ್ಯಾಂಪ್ ವಾಕ್ ಮಾಡಿದ ಸಂದರ್ಭದಲ್ಲಿ ಇದನ್ನು ನೋಡಿದ ಕೆಲವರು ಗರ್ಬಿಣಿಯಾಗಿದ್ದಾರೆ ಎಂದು ಸುದ್ದಿ ಮಾಡಿದ್ದರು.

ಇದೀಗ ಖುದ್ದು ಶಾಹೀದ್ ಕಪೂರ್ ಅವರೇ ತಂದೆಯಾಗುತ್ತಿರುವ ವಿಚಾರವನ್ನು ಮಾಧ್ಯಮದ ಮುಂದೆ ತೆರೆದಿಟ್ಟಿದ್ದು, ಎಲ್ಲಾ ಅಂತೆ-ಕಂತೆಗಳಿಗೆ ತೆರೆ ಎಳೆದಿದ್ದಾರೆ.

ನಟ ಶಾಹೀದ್ ಕಪೂರ್ ಮತ್ತು ಮೀರಾ ರಜಪೂತ್ ಅವರು ಕಳೆದ ವರ್ಷ ಜುಲೈ ತಿಂಗಳಿನಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದರು.

-
-
-
-
-
-
-
-
-
-
-
-
-
-
-
-
-
-
-
-
English summary
After days of speculation over his wife Mira Rajput’s pregnancy, Bollywood actor Shahid Kapoor said on Saturday (April 16th) he is going to become a father.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada