twitter
    For Quick Alerts
    ALLOW NOTIFICATIONS  
    For Daily Alerts

    ದೇಶದ ಆರ್ಥಿಕತೆಗೆ 6800 ಕೋಟಿ ಕೊಡುಗೆ ಕೊಟ್ಟ ಯೂಟೂಬರ್‌ಗಳು!

    |

    ಸಾಮಾಜಿಕ ಜಾಲತಾಣ ನೋಡುವುದು, ಅದರಲ್ಲಿ ತೊಡಗಿಕೊಳ್ಳುವುದು ಸಮಯ ವ್ಯರ್ಥ ಎಂದೇ ಪರಿಗಣಿಸಲಾಗುತ್ತದೆ. ಆದರೆ ಸಾಮಾಜಿಕ ಜಾಲತಾಣ ದೇಶದ ಆರ್ಥಿಕತೆಗೆ ದೊಡ್ಡ ಕೊಡುಗೆಯನ್ನು ನೀಡುತ್ತಿವೆ ಎಂದು ಅಧ್ಯಯನ ಹೇಳುತ್ತಿದೆ.

    ಯೂಟ್ಯೂಬ್ ಚಾನೆಲ್‌ಗಳನ್ನು ಮಾಡಿ ವಿವಿಧ ರೀತಿಯ ಕಂಟೆಂಟ್ ಅನ್ನು ಜನರಿಗೆ ತಲುಪಿಸಲಾಗುತ್ತಿದೆ. ಯೂಟ್ಯೂಬ್ ಕಂಟೆಂಟ್ ಕ್ರಿಯೇಟರ್‌ಗಳು ದೊಡ್ಡ ಮೊತ್ತದ ಹಣವನ್ನು ಇದರಿಂದ ಗಳಿಸುತ್ತಿದ್ದಾರೆ. ಹಣ ಗಳಿಸುವುದು ಮಾತ್ರವಲ್ಲ ಯೂಟ್ಯೂಬ್ ಕಂಟೆಂಟ್ ಕ್ರಿಯೇಟರ್‌ಗಳು ದೇಶದ ಆರ್ಥಿಕತೆಗೂ ಕೊಡುಗೆ ನೀಡುತ್ತಿದ್ದಾರೆ.

    ಅಶ್ಲೀಲ ಮಾತನಾಡಿ ಕೋಟಿಗಟ್ಟಲೆ ಹಣ ಗಳಿಸಿದ್ದ ದಂಪತಿಯ ಬಂಧನಅಶ್ಲೀಲ ಮಾತನಾಡಿ ಕೋಟಿಗಟ್ಟಲೆ ಹಣ ಗಳಿಸಿದ್ದ ದಂಪತಿಯ ಬಂಧನ

    2020ರಲ್ಲಿ ಯೂಟ್ಯೂಬ್ ಕಂಟೆಂಟ್ ಕ್ರಿಯೇಟರ್‌ಗಳು ದೇಶದ ಜಿಡಿಪಿಗೆ 6800 ಕೋಟಿ ರುಪಾಯಿ ಕೊಡುಗೆ ನೀಡಿದ್ದಾರೆ. ದೇಶದಲ್ಲಿ 45000 ಕ್ಕೂ ಹೆಚ್ಚು ಯೂಟ್ಯೂಬ್ ಚಾನೆಲ್‌ಗಳಿದ್ದು ಇವು ತಲಾ ಒಂದು ಲಕ್ಷಕ್ಕೂ ಹೆಚ್ಚು ಚಂದಾದಾರರನ್ನು ಹೊಂದಿವೆ. ಶೇ 45ಕ್ಕಿಂತಲೂ ಹೆಚ್ಚಿನ ಪ್ರಗತಿಯನ್ನು ಕಳೆದ ಒಂದೆರಡು ವರ್ಷಗಳಲ್ಲಿ ಸಾಧಿಸಿವೆ.

    YouTube Content Creaters Contributed 6800 Crore To Indian GDP

    ಭಾರತದ ಯೂಟ್ಯೂಬರ್ಸ್‌ಗಳು ದೇಶದ ಜಿಡಿಪಿಗೆ ದೊಡ್ಡ ಕೊಡುಗೆ ನೀಡುತ್ತಿರುವುದನ್ನು ಆಕ್ಸ್‌ಪರ್ಡ್‌ ಎಕನಾಮಿಕ್ಸ್ ಗುರುತಿಸಿದೆ. ಜಿಡಿಪಿಗೆ 6800 ಕೋಟಿ ರುಪಾಯಿ ಕೊಡುಗೆ ನೀಡಿರುವುದು 6.80 ಲಕ್ಷ ಪೂರ್ಣ ಪ್ರಮಾಣದ ಉದ್ಯೋಗಗಳಿಗೆ ಸಮ ಎಂದು ಆಕ್ಸ್‌ಪರ್ಡ್‌ ಎಕನಾಮಿಕ್ಸ್ ಹೇಳಿದೆ.

    ಕೋಟಿಗಟ್ಟಲೆ ಯೂಟ್ಯೂಬ್ ವೀವ್ಸ್‌ ಹಿಂದಿನ ಮರ್ಮ ಬಿಚ್ಚಿಟ್ಟ ಜಾಕ್ ಮಂಜುಕೋಟಿಗಟ್ಟಲೆ ಯೂಟ್ಯೂಬ್ ವೀವ್ಸ್‌ ಹಿಂದಿನ ಮರ್ಮ ಬಿಚ್ಚಿಟ್ಟ ಜಾಕ್ ಮಂಜು

    ಹಲವು ಕಂಟೆಂಟ್ ಕ್ರಿಯೇಟರ್‌ಗಳು ಯೂಟ್ಯಬ್‌ನಿಂದಲೇ ಸ್ಟಾರ್ ಆಗಿದ್ದಾರೆ. ಭುವನ್ ಬಾಮ್, ಪ್ರಾಜಕ್ತಾ ಕೋಳಿ, ಆಶಿಶ್ ಚಂಚ್ಲಾನಿ, ತನ್ಮಯ್ ಭಟ್ ಇನ್ನೂ ಹಲವು ಸ್ಟಾರ್ ಯೂಟ್ಯೂಬ್ ಕಂಟೆಂಟ್ ಕ್ರಿಯೇಟರ್‌ಗಳಿದ್ದು ತಿಂಗಳೊಂದಕ್ಕೆ ಲಕ್ಷಾಂತರ ರುಪಾಯಿ ಹಣವನ್ನು ಯೂಟ್ಯೂಬ್ ಒಂದರಿಂದಲೇ ಗಳಿಸುತ್ತಿದ್ದಾರೆ.

    ಅನಾರೋಗ್ಯದಿಂದ ಆಸ್ಪತ್ರೆ ಸೇರಿದ ಜನಪ್ರಿಯ ಯೂಟ್ಯೂಬರ್, ಅಭಿಮಾನಿಗಳಲ್ಲಿ ಆತಂಕಅನಾರೋಗ್ಯದಿಂದ ಆಸ್ಪತ್ರೆ ಸೇರಿದ ಜನಪ್ರಿಯ ಯೂಟ್ಯೂಬರ್, ಅಭಿಮಾನಿಗಳಲ್ಲಿ ಆತಂಕ

    ಯೂಟ್ಯೂಬ್‌ ಚಾನೆಲ್‌ಗಳ ಮೂಲಕ ಸುದ್ದಿ ಪ್ರಸಾರ, ಚರ್ಚೆ, ಮನರಂಜನೆ, ಗೇಮಿಂಗ್, ಹಾಸ್ಯ, ಆರೋಗ್ಯ, ಅಡುಗೆ ಇನ್ನೂ ಹಲವು ವಿಧದ ಮಾಹಿತಿ ಪ್ರಸರಿಸಲಾಗುತ್ತಿದೆ. ಭಾರತದಲ್ಲಿ ಯೂಟೂಬ್ ಕಂಟೆಂಟ್ ಕ್ರಿಯೇಟರ್‌ಗಳ ಸಮುದಾಯ ಬಹಳ ವೇಗವಾಗಿ ಬೆಳೆಯುತ್ತಿದೆ.

    English summary
    Indian Youtube content creaters contributed 6800 crore to Indian GDP in 2020. Report says this is equal to 6.80 lakh full time job.
    Saturday, March 5, 2022, 10:15
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X