For Quick Alerts
  ALLOW NOTIFICATIONS  
  For Daily Alerts

  ನಟಿ ಕತ್ರೀನಾ ಕೈಫ್ ಗೆ ಕ್ರಿಕೆಟಿಗ ಯಜುವೇಂದ್ರ ಚಾಹಲ್ ಮಾಡಿದ ಕಾಮೆಂಟ್ ಏನು?

  |

  ಸಿನಿಮಾರಂಗ ಮತ್ತು ಕ್ರೀಡಾರಂಗಕ್ಕೂ ಬಿಡಿಸಲಾಗದ ನಂಟು. ಸಿನಿಮಾ ಮತ್ತು ಕ್ರೀಡಾ ಸೆಲೆಬ್ರಿಟಿಗಳ ಮಧ್ಯೆ ಆಗಾಗ ಗಾಸಿಪ್, ಲಿಂಕಪ್ ಸುದ್ದಿಗಳು ಕೇಳಿ ಬರುತ್ತಿರುತ್ತೆ. ಸದ್ಯ ಭಾರತೀಯ ಕ್ರಿಕೆಟ್ ತಂಡದಲ್ಲಿ ಮಿಂಚುತ್ತಿರುವ ಬೌಲರ್ ಯಜುವೇಂದ್ರ ಚಾಹಲ್ ಗೆ ಬಾಲಿವುಡ್ ನಟಿ ಕತ್ರೀನಾ ಕೈಫ್ ಮೇಲೆ ಕ್ರಶ್ ಆಗಿದೆಯಂತೆ.

  ಹೌದು, ಚಹಲ್ ಗೆ ಕತ್ರೀನಾ ಕೈಫ್ ಅಂದ್ರೆ ತುಂಬಾ ಇಷ್ಟವಂತೆ. ಕತ್ರೀನಾ ಕೈಫ್ ಬಿಗ್ ಫ್ಯಾನ್ ಆಗಿರುವ ಯಜುವೇಂದ್ರ ಚಾಹಲ್ ಇತ್ತೀಚಿಗೆ ಕತ್ರೀನಾ ಬಗ್ಗೆ ಮಾಡಿರುವ ಕಾಮೆಂಟ್ ವೈರಲ್ ಆಗಿದೆ. ಕತ್ರೀನಾಗೆ ಅಪಾರ ಸಂಖ್ಯೆಯ ಅಭಿಮಾನಿ ಬಳಗವಿದೆ. ಲಕ್ಷಾಂತರ ಅಭಿಮಾನಿಗಳಲ್ಲಿ ಕ್ರಿಕೆಟಿಗ ಚಹಲ್ ಕೂಡ ಒಬ್ಬರು ಎನ್ನುವುದೇ ವಿಶೇಷ.

  ಕತ್ರೀನಾ ಕೈಫ್ ಆಗಿ ಬದಲಾದ ಕ್ರಿಕೆಟಿಗ ಡೇವಿಡ್ ವಾರ್ನರ್ ಮುದ್ದು ಮಗಳುಕತ್ರೀನಾ ಕೈಫ್ ಆಗಿ ಬದಲಾದ ಕ್ರಿಕೆಟಿಗ ಡೇವಿಡ್ ವಾರ್ನರ್ ಮುದ್ದು ಮಗಳು

  ಇತ್ತೀಚಿಗೆ ಕತ್ರೀನಾ ಇನ್ಸ್ಟಾಗ್ರಾಮ್ ಲೈವ್ ಬಂದಿದ್ದರು. ಸ್ಟಾರ್ ನಟಿಯರು ಲೈವ್ ಬರುತ್ತಾರೆ ಅಂದರೆ ಕೇಳಬೇಕಾ? ಅಭಿಮಾನಿಗಳು ತರಹೇವಾರಿ ಪ್ರಶ್ನೆಗಳ ಸುರಿಮಳೆಯನ್ನೇ ಸರಿಸುತ್ತಿರುತ್ತಾರೆ. ಕತ್ರೀನಾಗೂ ಸಾಕಷ್ಟು ಕಾಮೆಂಟ್ ಗಳು ಹರಿದು ಬರುತ್ತಿತ್ತು. ಅಭಿಮಾನಿಗಳ ಕಾಮೆಂಟ್ ನಲ್ಲಿ ಕ್ರಿಕೆಟಿಗ ಚಹಲ್ ಕಾಮೆಂಟ್ ಎಲ್ಲರಿಗೂ ಅಚ್ಚರಿ ಮೂಡಿಸಿದೆ.

  ಲೈವ್ ನಲ್ಲಿ ಚಹಲ್ "ಹಾಯ್ ಕತ್ರೀನಾ ಮೇಡಮ್" ಎಂದು ಕಾಮೆಂಟ್ ಮಾಡುವ ಮೂಲಕ, ಕತ್ರೀನಾ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಚಹಲ್ ಮಾಡಿರುವ ಕಾಮೆಂಟ್ ನ ಸ್ಕ್ರೀನ್ ಶಾಟ್ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ.

  ಅಂದ್ಹಾಗೆ ಚಹಲ್, ಕತ್ರೀನಾ ಅವರ ಫ್ಯಾನ್ ಎನ್ನುವುದನ್ನು ಸಂದರ್ಶವೊಂದರಲ್ಲಿ ಹೇಳಿಕೊಂಡಿದ್ದಾರೆ. "ಕತ್ರೀನಾ ಮೇಲೆ ಕ್ರಶ್ ಆಗಿದ್ದು, ಅವರ ನಗು ತುಂಬಾ ಇಷ್ಟ" ಎಂದು ಚಹಲ್ ಹೇಳಿದ್ದರು. ಅಭಿಮಾನವನ್ನು ಕತ್ರೀನಾ ಲೈವ್ ನಲ್ಲಿ ಇರುವಾಗಲೂ ವ್ಯಕ್ತಪಡಿಸಿದ್ದಾರೆ.

  English summary
  Yuzvendra Chahal says 'Hi Katrina Mam' to Katrina kaif in live chat.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X