ಎರಡನೇ ಮದುವೆಗೆ ಮುಂದಾದ ಜೀನತ್ ಅಮನ್
ಎಪ್ಪತ್ತು, ಎಂಬತ್ತರ ದಶಕದಲ್ಲಿ ಬಾಲಿವುಡ್ ಚಿತ್ರರಸಿಕರನ್ನು ತಮ್ಮ ಮೋಹಕ ಮೈಮಾಟದಿಂದ ಮನ ಸೆಳೆದಿದ್ದ ತಾರೆ ಜೀನತ್ ಅಮನ್. ಜೀವನದಲ್ಲಿ ಒಂದು ಬಾರಿ ಮದುವೆಯಾಗಿದ್ದೇ ಸಾಕು. ಇನ್ನೆಂದೂ ಮದುವೆ ಆಗಬಾರದು ಎಂದು ಆಕೆ ದೃಢವಾಗಿ ನಿಶ್ಚಯಿಸಿದ್ದರು. ಈಗ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ 60ರ ಹರೆಯದ ತಾರೆ.
ಇದಕ್ಕೆ ಕಾರಣವಾಗಿರುವುದು ಆಕೆಯ ಇಬ್ಬರು ಪುತ್ರರು. ಇನ್ನೊಂದು ಮದುವೆಯಾಗು ಎಂದು ಅವರ ಮಕ್ಕಳು ಒತ್ತಾಯಿಸುತ್ತಿದ್ದರಂತೆ. ಕಡೆಗೂ ಮಕ್ಕಳ ಮಾತಿಗೆ ಬೆಲೆ ಕೊಟ್ಟಿರುವ ಅವರು ಎರಡನೆ ಮದುವೆ ಮಾಡಿಕೊಳ್ಳಲು ಮುಂದಾಗಿದ್ದಾರೆ.
ಆದರೆ ತಮ್ಮ ಭಾವಿ ಪತಿಯ ಬಗ್ಗೆ ಅವರು ವಿವರಗಳನ್ನು ನೀಡಿಲ್ಲ. ಈ ಬಗ್ಗೆ ಹೆಚ್ಚು ಮಾತನಾಡುವುದು ಬೇಡ ಎಂದಿದ್ದಾರೆ. ಆದರೆ ಅವರು ನಮ್ಮ ದೇಶದವರೇ ಎಂಬ ಸಣ್ಣ ಸುಳಿವನ್ನು ಬಿಟ್ಟುಕೊಟ್ಟಿದ್ದಾರೆ. ಮದುವೆಯಾಗಿ ಸರಸ, ಸಲ್ಲಾಪ ಮಾಡುವ ವಯಸ್ಸು ಅವರಲ್ಲದಿದ್ದರೂ. ಇಳಿವಯಸ್ಸಲ್ಲಿ ಅವರಿಗೆ ಜೊತೆ ಬೇಕು ಎನ್ನಿಸಿದೆಯಂತೆ.

ಗಂಡ ಯಾವಾಗಲು ಆಕೆಯ ಮೇಲೆ ಕೈಮಾಡುತ್ತಿದ್ದ. ಇದರಿಂದ ರೋಸಿ ಹೋದ ಆಕೆ ವಿವಾಹ ವಿಚ್ಛೇದನಕ್ಕೂ ಮುಂದಾಗಿದ್ದರು. ಆದರೆ ದುರದೃಷ್ಟವಶಾತ್ ಮಜ್ಹರ್ ಖಾನ್ 1998ರಲ್ಲಿ ತೀರಿಕೊಂಡರು. ಅದಾಗಲೇ ಅವರಿಗೆ ಇಬ್ಬರು ಮಕ್ಕಳಿದ್ದರು. ಅಂದಿನಿಂದ ತನ್ನ ಮಕ್ಕಳೊಂದಿಗೆ ಜೀವಿಸುತ್ತಿದ್ದ ಜೀನತ್ ಎರಡನೆ ಮದುವೆ ಬಗ್ಗೆ ಎಂದೂ ಕನಸು ಮನಸಿನಲ್ಲೂ ಊಹಿಸಿರಲಿಲ್ಲವಂತೆ.
ಈಗ ಅವರು ಎರಡನೆ ಮದುವೆಗೆ ಸಿದ್ಧವಾಗುತ್ತಿದ್ದು, ಈ ಬಗ್ಗೆ ಮಾತನಾಡುತ್ತಾ, "ಭಗವಂತನ ಆಟ ಬಲ್ಲವರ್ಯಾರು. ಎರಡನೇ ಮದುವೆಗೆ ಸಿದ್ಧವಾಗುತ್ತಿದ್ದೇನೆ. ಏನೋ ಒಂಥರಾ ಸಂಭ್ರಮ, ಸಡಗರ ಮನೆ ಮಾಡಿದೆ" ಎಂದಿದ್ದಾರೆ ಜೀನತ್. (ಏಜೆನ್ಸೀಸ್)


Click it and Unblock the Notifications











