For Quick Alerts
  ALLOW NOTIFICATIONS  
  For Daily Alerts

  ಜೋಯಾ ಅಫ್ರೋಜ್‌ಗೆ 'ಮಿಸ್ ಇಂಡಿಯಾ ಇಂಟರ್ನ್ಯಾಷನಲ್ 2021' ಕಿರೀಟ

  |

  ನಟಿ, ಮಾಡೆಲ್ ಜೋಯಾ ಅಫ್ರೋಜ್ 'ಮಿಸ್ ಇಂಡಿಯಾ 2021' ಆಗಿ ಆಯ್ಕೆ ಆಗಿದ್ದಾರೆ. ಮಿಸ್ ಇಂಟರ್ನ್ಯಾಷನಲ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

  ಗ್ಲ್ಯಾಮಾನಂದ್ ಸೂಪರ್‌ಮಾಡೆಲ್ ವತಿಯಿಂದ ಆಯೋಜಿಸಲಾಗಿದ್ದ ಸೌಂದರ್ಯ ಸ್ಪರ್ಧೆಯಲ್ಲಿ ವಿಜೇತರಾಗಿರುವ ಜೋಯಾ ಅಫ್ರೋಜ್ಗೆ ಮಿಸ್ ಇಂಡಿಯಾ ಕಿರೀಟ ತೊಡಿಸಲಾಗಿದೆ. ಈ ಸ್ಪರ್ಧೆಯಲ್ಲಿ ಗೆಲುವು ಸಾಧಿಸುವ ಮೂಲಕ ಇದೇ ವರ್ಷದ 'ಮಿಸ್ ಇಂಟರ್ನ್ಯಾಷನಲ್' ಸೌಂದರ್ಯ ಸ್ಪರ್ಧೆಗೆ ಭಾರತವನ್ನು ಪ್ರತಿನಿಧಿಸುವ ಅವಕಾಶವನ್ನೂ ಜೋಯಾ ಅಫ್ರೋಜ್ ಪಡೆದಿದ್ದಾರೆ.

  ಮಿಸ್ ಇಂಡಿಯಾ ಕಿರೀಟ ತೊಡಿಸುತ್ತಿರುವ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಜೋಯಾ ಅಫ್ರೋಜ್, ''ನಾನು 60ನೇ ಮಿಸ್ ಇಂಟರ್ನ್ಯಾಷನಲ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದೇನೆ ಎಂಬ ವಿಷಯ ಹಂಚಿಕೊಳ್ಳಲು ಬಹಳ ಹೆಮ್ಮೆಯಾಗುತ್ತಿದೆ. ಗ್ಲ್ಯಾಮಾನಂದ್ ಸೂಪರ್‌ಮಾಡೆಲ್‌ಗೆ ಧನ್ಯವಾದಗಳು'' ಎಂದಿದ್ದಾರೆ.

  ನಟಿಯಾಗಿರುವ ಜೋಯಾ ಸಾಮಾಜಿಕ ಕಾರ್ಯಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ವಿಶೇಷವಾಗಿ ಹೆಣ್ಣು ಮಕ್ಕಳ ಶಿಕ್ಷಣ ಹಾಗೂ ಮಹಿಳೆಯರ ಆರ್ಥಿಕ ಸ್ವಾಲಂಬನೆ ಕುರಿತು ಹಲವು ಅಭಿಯಾನಗಳಲ್ಲಿ ನಟಿ ಭಾಗಿಯಾಗಿದ್ದಾರೆ.

  ದೇಶದ ಹಲವು ಮೂಲೆಗಳಿಂದ ಬಂದಿದ್ದ ಸುಂದರಿಯರು

  ದೇಶದ ಹಲವು ಮೂಲೆಗಳಿಂದ ಬಂದಿದ್ದ ಸುಂದರಿಯರು

  ಆಗಸ್ಟ್ 21ರಂದು ಗುರುಗಾಂವ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ಅರ್ಚನಾ ರವಿ, ಐಶ್ವರ್ಯಾ ದೀಕ್ಷಿತ್, ನೈನಾ ವಿಜಯ್ ಶರ್ಮಾ, ತಾನ್ಯಾ ಸಿನ್ಹಾ, ಸೇಜಲ್ ರೆನಾಕೆ, ಹಿಮಾನಿ ಗಾಯಕ್‌ವಾಡ್, ಮೇಘಾ ಶೆಟ್ಟಿ, ಮೇಘಾ ಜುಲ್ಕಾ, ದೀಕ್ಷಾ ನಾರಂಗ್, ಶಿವಾಣಿ ಟಕ್, ಸಚ್ಚಿ ಗುರುವಾ, ಅಸ್ಮಿತಾ ಚಕ್ರವರ್ತಿ, ತನು ಶ್ರೀ, ಶ್ವೇತಾ ಶಿಂಧೆ, ತಮಲ್‌ಪಾಕ್ಲು, ಸುಶಾಂಗ್ ಶೆರ್ಫಾ, ದಿಶಾ ಶಾಮ್ವಾನಿ, ಇಶಾ ವೈದ್ಯ, ಅನು ಭಾತಿ, ಆರುಷಿ ಸಿಂಗ್, ದಿವಿಜಾ ಗಂಭೀರ್, ಶಾಲಿನಿ ರಾಣಾ, ಅನಿಶಾ ಶರ್ಮಾತೆ ಇನ್ನೂ ಹಲವು ಮಾಡೆಲ್‌ಗಳು, ಯುವತಿಯರು ದೇಶದ ವಿವಿಧ ಭಾಗಗಳಿಂದ ಭಾಗವಹಿಸಿದ್ದರು.

  ಮೂರನೇ ವರ್ಷಕ್ಕೆ ನಟನೆ ಆರಂಭಿಸಿದ್ದ ಜೋಯಾ

  ಮೂರನೇ ವರ್ಷಕ್ಕೆ ನಟನೆ ಆರಂಭಿಸಿದ್ದ ಜೋಯಾ

  ವಿನ್ನರ್ ಜೋಯಾ ಅಫ್ರೋಜ್ ತಮ್ಮ ಮೂರನೇ ವರ್ಷ ವಯಸ್ಸಿನಲ್ಲಿಯೇ ನಟನೆ ಆರಂಭಿಸಿದವರು! ಮಗುವಾಗಿದ್ದಾಗಲೇ ರಸ್ನಾ ಜಾಹೀರಾತಿನಲ್ಲಿ ಕಾಣಿಸಿಕೊಂಡ ಜೋಯಾ ಆ ನಂತರ 'ಹಮ್‌ ಸಾಥ್ ಸಾಥ್ ಹೈ', 'ಮನ್', 'ಕುಚ್‌ ನಾ ಕಹೊ', ಇನ್ನೂ ಹಲವು ಸಿನಿಮಾಗಳಲ್ಲಿ ಬಾಲನಟಿಯಾಗಿ ನಟಿಸಿದ್ದಾರೆ. ಇದೇ ಸಮಯದಲ್ಲಿ ಹಲವು ಪ್ರತಿಷ್ಠಿತ ಬ್ರ್ಯಾಂಡ್‌ಗಳ ಜಾಹೀರಾತಿನಲ್ಲಿಯೂ ಕಾಣಿಸಿಕೊಂಡಿದ್ದಾರೆ.

  ಹದಿನೇಳನೇ ವಯಸ್ಸಿಗೆ ನಾಯಕಿಯಾದ ಜೋಯಾ

  ಹದಿನೇಳನೇ ವಯಸ್ಸಿಗೆ ನಾಯಕಿಯಾದ ಜೋಯಾ

  ಹದಿನೇಳು ವಯಸ್ಸಿನಲ್ಲಿ ನಾಯಕಿಯಾಗಿ ಪಂಜಾಬಿ ಸಿನಿಮಾದಲ್ಲಿ ನಟಿಸಿದ ಜೋಯಾ ಬಾಲಿವುಡ್‌ಗೆ ನಾಯಕಿಯಾಗಿ ಪಾದಾರ್ಪಣೆ ಮಾಡಿದ್ದು 2014ರಲ್ಲಿ ಬಿಡುಗಡೆ ಆದ 'ಎಕ್ಸ್‌ ಪೋಸ್' ಸಿನಿಮಾದ ಮೂಲಕ. ಅದರ ಬಳಿಕ ಒಂದು ತಮಿಳು ಸಿನಿಮಾದಲ್ಲಿ ನಟಿಸಿದರಾದರೂ ಆ ಸಿನಿಮಾ ಬಿಡುಗಡೆ ಆಗಲಿಲ್ಲ. ಆ ನಂತರ ಹಿಂದಿ ಸಿನಿಮಾಗಳಲ್ಲಿ ಬ್ಯುಸಿಯಾದ ಈ ನಟಿ ತಮಿಳಿನ 'ಪಾಂಬನ್' ಹೆಸರಿನ ಸಿನಿಮಾದಲ್ಲಿ ನಟಿಸಿದರು. ಆದರೆ ಈವರೆಗೆ ದೊಡ್ಡ ಬ್ಯಾನರ್‌ನ ಸಿನಿಮಾಗಳ ಅವಕಾಶ ಜೋಯಾಗೆ ಸಿಕ್ಕಿಲ್ಲ. ಇದೀಗ 'ಮಿಸ್ ಇಂಡಿಯಾ' ಕಿರೀಟ ತೊಟ್ಟ ಬಳಿಕ ಅವಕಾಶಗಳು ಸಿಗುವ ನಿರೀಕ್ಷೆ ಇದೆ.

  ಫೆಮಿನಾ ಮಿಸ್ ಇಂಡಿಯಾಗೆ ಹೆಚ್ಚಿನ ಮಾನ್ಯತೆ ಇದೆ

  ಫೆಮಿನಾ ಮಿಸ್ ಇಂಡಿಯಾಗೆ ಹೆಚ್ಚಿನ ಮಾನ್ಯತೆ ಇದೆ

  ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಗೆ ಭಾರತದಲ್ಲಿ ಹೆಚ್ಚು ಮಾನ್ಯತೆ ಇದೆ. ಈ ಸ್ಪರ್ಧೆಯಲ್ಲಿ ವಿಜೇತರಾದರು ಮಿಸ್ ವರ್ಲ್ಡ್ ಸ್ಪರ್ಧೆಗೆ ಭಾಗವಹಿಸಲು ಅರ್ಹತೆ ಪಡೆಯುತ್ತಾರೆ. ಮಿಸ್ ವರ್ಲ್ಡ್ ಮಾತ್ರವೇ ಅಲ್ಲದೆ ನಾಲ್ಕು ಪ್ರತಿಷ್ಠಿತ ಅಂತರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಲು ಅಧಿಕೃತ ಅರ್ಹತೆ ಪಡೆಯುತ್ತಾರೆ. ಜೋಯಾ ಈಗ ಗೆದ್ದಿರುವುದು ಗ್ಲ್ಯಾಮಾನಂದ್ ಸೂಪರ್‌ಮಾಡೆಲ್ ವತಿಯಿಂದ ಆಯೋಜಿಸಲಾಗಿದ್ದ ಸೌಂದರ್ಯ ಸ್ಪರ್ಧೆಯಲ್ಲಿ. 2013 ರಲ್ಲಿ ಫೆಮಿನಾ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು ಈ ನಟಿ.

  English summary
  Actress Zoya Afroz crowned Miss India international 2021. She will represent India in Miss international 2021.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X