For Quick Alerts
  ALLOW NOTIFICATIONS  
  For Daily Alerts

  ಶ್ರೀದೇವಿ ಪುತ್ರಿ ಅಥವಾ ಶಾರುಖ್ ಪುತ್ರಿ ಇಬ್ಬರಲ್ಲಿ ಯಾರಿಗೆ ಜೋಡಿ ಆಗ್ತಾರೆ ಬಚ್ಚನ್ ಮೊಮ್ಮಗ

  By ಫಿಲ್ಮಿಬೀಟ್ ಡೆಸ್ಕ್
  |

  ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಮೊಮ್ಮಗ ಅಗಸ್ತ್ಯ ನಂದ ಸದ್ಯ ಸುದ್ದಿಯಲ್ಲಿದ್ದಾರೆ. ಅಗಸ್ತ್ಯ ಇನ್ನು ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿಲ್ಲ, ಆಗಲೇ ಸದ್ದು ಮಾಡುತ್ತಿದ್ದಾರೆ. ಸ್ಟಾರ್ ಕಿಡ್ ಅಂದ್ಮೇಲೆ ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಶ್ರೀದೇವಿ ಎರಡನೇ ಪುತ್ರಿ, ಶಾರುಖ್ ಖಾನ್ ಪುತ್ರಿ, ಬಚ್ಚನ್ ಮೊಮ್ಮಕ್ಕಳು ಹೀಗೆ ಬಾಲಿವುಡ್‌ನ ಖ್ಯಾತ ಕಲಾವಿದರ ಮಕ್ಕಳು ಒಂದಲ್ಲೊಂದು ವಿಚಾರಕ್ಕೆ ಸದಾ ಸುದ್ದಿಯಲ್ಲಿರುತ್ತಾರೆ.

  ಇದೀಗ ಶಾರುಖ್ ಪುತ್ರಿ ಸುಹಾನಾ ಖಾನ್ ಮತ್ತು ಶ್ರೀದೇವಿ ಎರಡನೇ ಪುತ್ರಿ ಖುಷಿ ಕಪೂರ್ ಬಣ್ಣದ ಲೋಕದ ಎಂಟ್ರಿಯ ಬಗ್ಗೆ ಸಿಕ್ಕಾಪಟ್ಟೆ ಚರ್ಚೆ ನಡೆಯುತ್ತಿದೆ. ಕಳೆದ ಎರಡು ವರ್ಷಗಳಿಂದ ಇಬ್ಬರ ಸಿನಿಮಾ ಎಂಟ್ರಿ ಯಾವಾಗ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ. ಸದ್ಯ ಶಾರುಖ್ ಪುತ್ರಿ ಸುಹಾನಾ ಬಣ್ಣದ ಲೋಕಕ್ಕೆ ಎಂಟ್ರಿ ಕೊಡಲು ಸಜ್ಜಾಗಿದ್ದು, ಖ್ಯಾತ ನಿರ್ದೇಶಕಿ ಜೋಯಾ ಅಖ್ತರ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎನ್ನುವ ಮಾತು ಈಗಾಗಲೇ ವೈರಲ್ ಆಗಿದೆ.

  ಸದ್ಯ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ಜೋಯಾ ಅಖ್ತರ್ ಸಿನಿಮಾದಲ್ಲಿ ಶಾರುಖ್ ಪುತ್ರಿ ಜೊತೆ ಶ್ರೀದೇವಿ ಎರಡನೇ ಪುತ್ರಿ ಮತ್ತು ಅಮಿತಾಬ್ ಬಚ್ಚನ್ ಮೊಮ್ಮಗ ಅಗಸ್ತ್ಯ ನಂದ ಕೂಡ ಇದೇ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಡಲಿದ್ದಾರೆ ಎನ್ನುವ ಮಾತು ಬಿ ಟೌನ್‌ನಲ್ಲಿ ಗುಲ್ಲಾಗಿದೆ. ಗಲ್ಲಿ ಬಾಯ್ ನಿರ್ದೇಶಕಿ ಜೋಯಾ ಅಖ್ತರ್ ಸಿನಿಮಾದಲ್ಲಿ ಬಾಲವುಡ್ ನ ಮೂವರು ಸ್ಟಾರ್ ಕಿಡ್ಸ್ ನಟಿಸಲಿದ್ದಾರೆ.

  ಜೋಯಾ ಅಖ್ತರ್ ಈಗಾಗಲೇ ಮುಂದಿನ ಸಿನಿಮಾಗಾಗಿ ತಯಾರಿ ನಡೆಸಿದ್ದು, ಕಲಾವಿದರ ಆಯ್ಕೆಯಲ್ಲಿ ಬ್ಯುಸಿಯಾಗಿದ್ದಾರೆ. ಗಲ್ಲಿ ಬಾಯ್ ಅಂತ ಸೂಪರ್ ಹಿಟ್ ಸಿನಿಮಾ ನಿರ್ದೇಶನ ಮಾಡಿದ ಬಳಿಕ ಜೋಯಾ ಅಖ್ತರ್, ಮೇಡ್ ಇನ್ ಹೆವೆನ್ ಸೀರಿಸ್ ಅನ್ನು ನಿರ್ದೇಶಿಸಿದ್ದರು. ಬಳಿಕ ನೆಟ್ ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದ್ದ ಗೋಸ್ಟ್ ಸ್ಟೋರೀಸ್ ಸೀರಿಸ್‌ನ ಒಂದು ಭಾಗಕ್ಕೆ ಜೋಯಾ ಆಕ್ಷನ್ ಕಟ್ ಹೇಳಿದ್ದರು.

  ಗಲ್ಲಿ ಬಾಯ್ ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿತ್ತು. ಆಸ್ಕರ್ ರೇಸ್‌ನಲ್ಲೂ ಇತ್ತು ಎನ್ನುವುದು ವಿಶೇಷ. ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಜೋಯಾ ಅಖ್ತರ್ ನಿರ್ದೇಶನದಲ್ಲಿ ಸುಹಾನಾ, ಖುಷಿ ಮತ್ತು ಅಗಸ್ತ್ಯ ಬಣ್ಣದ ಲೋಕಕ್ಕೆ ಎಂಟ್ರಿ ಕೊಡುತ್ತಿರುವುದು ವಿಶೇಷ.

  ಅಂದಹಾಗೆ ಜೋಯಾ ಸದ್ಯ ಸಿನಿಮಾ ಮಾಡಲು ಮುಂದಾಗಿದ್ದು, ಅಂತರಾಷ್ಟ್ರೀಯ ಕಾಮಿಕ್ ಪುಸ್ತಕವನ್ನು ಆಧರಿಸಿ ಚಿತ್ರ. ಈ ಸಿನಿಮಾ ಒಟಿಟಿ ವೇದಿಕೆಯಾದ ನೆಟ್ ಫ್ಲಿಕ್ಸ್‌ನಲ್ಲಿ ಬಿಡುಗಡೆ ಮಾಡಲು ತಯಾರಿ ನಡೆಸಿದ್ದಾರೆ. ಇದೊಂದು ಹದಿಹರೆಯದ ಪ್ರೇಮ ಕಥೆಯಾಗಿದ್ದು, ಈ ಸಿನಿಮಾಗಾಗಿ ಈಗಾಗಲೇ ಒಂದಿಷ್ಟು ಕಲಾವಿದರನ್ನು ಆಯ್ಕೆ ಮಾಡಿದ್ದಾರೆ. ಅದರಲ್ಲಿ ಸುಹಾನಾ, ಖುಷಿ ಮತ್ತು ಅಗಸ್ತ್ಯ ಫೈನಲ್ ಆಗಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಅಂದಹಾಗೆ ಇಬ್ಬರು ನಟಿಯರಲ್ಲಿ ಅಗಸ್ತ್ಯ ಜೋಡಿಯಾಗಿ ಯಾರು ನಟಿಸಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ.

  ಅಂದ ಹಾಗೆ ಸುಹಾನಾಗೆ ನಟನೆ ಹೊಸದಲ್ಲ ಈಗಾಗಲೇ ನಾಟಕಗಳಲ್ಲಿ ನಟಿಸಿದ್ದಾರೆ. ಲಂಡನ್‌ನಲ್ಲಿ ರೋಮಿಯೋ ಜೂಲಿಯಟ್ ನಾಯಕದಲ್ಲಿ ಭಾಗಿಯಾಗಿ ಎಲ್ಲರ ಗಮನ ಸೆಳೆದಿದ್ದರು. ಜೊತೆಗೆ ಕಿರುಚಿತ್ರದಲ್ಲೂ ಸುಹಾನಾ ನಟಿಸಿದ್ದರು. ಇದೀಗ ಸಿನಿಮಾ ಮೂಲಕ ಮೊದಲ ಬಾರಿಗೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗುತ್ತಿದ್ದಾರೆ.

  ಇನ್ನು ಅಮಿತಾಬ್ ಬಚ್ಚನ್ ಮೊಮ್ಮಗ ಅಗಸ್ತ್ಯ ಕೂಡ ಈಗಾಗಲೇ ತಯಾರಿ ನಡೆಸುತ್ತಿದ್ದಾರೆ. ವಿದ್ಯಾಭ್ಯಾಸ ಮುಗಿಸಿರುವ ಅಗಸ್ತ್ಯ ಸಿನಿಮಾದಲ್ಲಿ ಮಿಂಚುವ ಕನಸು ಕಂಡಿದ್ದಾರೆ. ಜೋಯಾ ಅಖ್ತರ್ ಸಿನಿಮಾ ಮೂಲಕ ಒಟಿಟಿ ಪ್ರೇಕ್ಷಕರ ಮುಂದೆ ಬರಲು ಅಗಸ್ತ್ಯ ಸಜ್ಜಾಗಿದ್ದಾರೆ. ಜೋಯಾ ಸದ್ಯ ಈ ಸಿನಿಮಾ ಮುಗಿಸಿ ಬಳಿಕ ರಣ್ವೀರ್ ಸಿಂಗ್ ಕತ್ರಿನಾ ಕೈಫ್ ನಟನೆಯ ಗ್ಯಾಂಗ್ ಸ್ಟರ್ ಸಿನಿಮಾ ಕೈಗೆತ್ತಿಕೊಳ್ಳಲಿದ್ದಾರೆ.

  ವರ್ಷದ ಕೊನೆಯಲ್ಲಿ ಜೋಯಾ ಹೊಸ ಸಿನಿಮಾ ಪ್ರಾರಂಭವಾಗುವ ಸಾಧ್ಯತೆ ಇದೆ. ಒಂದೇ ಸಿನಿಮಾ ಮೂಲಕ ಮೂವರು ಸ್ಟಾರ್ ಮಕ್ಕಳು ಮ್ಯಾಜಿಕ್ ಮಾಡುತ್ತಾರಾ ಎಂದು ಕಾದುನೋಡಬೇಕು.

  English summary
  Bolywood Director Zoya Akhtar to launch Agastya Nanda, Khushi Kapoor and Suhana Khan in her next movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X