For Quick Alerts
  ALLOW NOTIFICATIONS  
  For Daily Alerts

  Yahoo 2020: ಅತಿ ಹೆಚ್ಚು ಹುಡುಕಲ್ಪಟ್ಟ ಸೆಲೆಬ್ರಿಟಿ ನಟ ಯಾರು?

  |

  2020ನೇ ವರ್ಷ ಮುಗಿತಾ ಬಂತು. ಈ ವರ್ಷ ಚಿತ್ರಜಗತ್ತಿನಲ್ಲಿ ಕೊರೊನಾ ವೈರಸ್‌ ಕಾಟವೇ ದೊಡ್ಡ ಸುದ್ದಿ. ಕೊವಿಡ್ ಕಾರಣದಿಂದ ಇಡೀ ಚಿತ್ರರಂಗ ಆರೇಳು ತಿಂಗಳು ಸ್ತಬ್ದವಾಗಿತ್ತು. ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಇಡೀ ದೇಶದ ಪ್ರಮುಖ ಚರ್ಚಾ ವಿಷಯವಾಯ್ತು.

  ವರ್ಷಾಂತ್ಯಕ್ಕೆ Yahoo ಜಾಲತಾಣವೂ ಅತಿ ಹೆಚ್ಚು ಹುಡುಕಲ್ಪಟ್ಟ ಸೆಲೆಬ್ರಿಟಿಗಳು ಯಾರು ಎಂದು ಪಟ್ಟಿ ಬಿಡುಗಡೆ ಮಾಡಿದೆ. ವರ್ಷ ಪೂರ್ತಿ ಸುದ್ದಿಯಲ್ಲಿದ್ದವರು ಪೈಕಿ ಸುಶಾಂತ್ ಸಿಂಗ್ ಹೆಸರು ಪಿಎಂ ಮೋದಿಯನ್ನು ಸಹ ಹಿಂದಿಕ್ಕಿದೆ. ಸೆಲೆಬ್ರಿಟಿ ನಟರ ವಿಭಾಗದಲ್ಲಿಯೂ ಸುಶಾಂತ್ ಸಿಂಗ್ ಹೆಸರು ಎಲ್ಲ ಸ್ಟಾರ್ ನಟರನ್ನು ಹಿಂದಿಕ್ಕಿದೆ.

  2021ರಲ್ಲಿ ಅಕ್ಷಯ್ ಕುಮಾರ್ ಶೋ: ಮತ್ತೊಂದು ಹೊಸ ಪ್ರಾಜೆಕ್ಟ್‌ಗೆ‌ ಸಹಿ

  ಹಾಗಾದ್ರೆ, Yahoo ಪ್ರಕಟಿಸಿರುವ ಪಟ್ಟಿಯಲ್ಲಿ ಯಾವೆಲ್ಲ ಸೆಲೆಬ್ರಿಟಿ ನಟರು ಸ್ಥಾನ ಪಡೆದುಕೊಂಡಿದ್ದಾರೆ. ಯಾವ ನಟರ ಬಗ್ಗೆ ತಿಳಿದುಕೊಳ್ಳಲು ನೆಟ್ಟಿಗರು Yahoo ಬಳಸಿದ್ದಾರೆ. ಈ ಪಟ್ಟಿಯಲ್ಲಿ ಯಾರ ಎಷ್ಟನೇ ಸ್ಥಾನದಲ್ಲಿದ್ದಾರೆ ಎಂದು ತಿಳಿಯಲು ಮುಂದೆ ಓದಿ...

  10. ತೆಲುಗು ನಟ ಅಲ್ಲು ಅರ್ಜುನ್

  10. ತೆಲುಗು ನಟ ಅಲ್ಲು ಅರ್ಜುನ್

  Yahooನಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ನಟರ ಪೈಕಿ ತೆಲುಗು ಸ್ಟಾರ್ ಅಲ್ಲು ಅರ್ಜುನ್ ಹತ್ತನೇ ಸ್ಥಾನದಲ್ಲಿದ್ದಾರೆ. ಸುಕುಮಾರ್ ನಿರ್ದೇಶನದ 'ಪುಷ್ಪ' ಸಿನಿಮಾದ ಚಿತ್ರೀಕರಣ ಮಾಡುತ್ತಿರುವ ನಟ ಲಾಕ್‌ಡೌನ್ ನಿಯಮ ಉಲ್ಲಂಘಿಸಿದ್ದರು ಎಂಬ ಕಾರಣಕ್ಕೆ ಸುದ್ದಿಯಾಗಿದ್ದರು. ಅರಣ್ಯ ಪ್ರದೇಶದಲ್ಲಿ ಶೂಟಿಂಗ್ ಮಾಡುವ ವೇಳೆ ಅರಣ್ಯ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಘಟನೆಯಿಂದ ಅಲ್ಲು ಅರ್ಜುನ್ ಕುರಿತು ಹೆಚ್ಚು ಸರ್ಚ್ ಮಾಡಿದ್ದಾರೆ.

  9. ಅನುರಾಗ್ ಕಶ್ಯಪ್

  9. ಅನುರಾಗ್ ಕಶ್ಯಪ್

  ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಒಂಬತ್ತನೇ ಸ್ಥಾನದಲ್ಲಿದ್ದಾರೆ. ಅನುರಾಗ್ ಕಶ್ಯಪ್ ವಿರುದ್ಧ ನಟಿ ಪಾಯಲ್ ಘೋಷ್ ಮೀಟೂ ಆರೋಪ ಮಾಡಿ ಸಂಚಲನ ಸೃಷ್ಟಿಸಿದ್ದರು. ಈ ಸಂಬಂಧ ನಿರ್ದೇಶಕನ ವಿರುದ್ಧ ಮುಂಬೈ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ಸಹ ದಾಖಲಾಗಿತ್ತು. ಪೊಲೀಸರು ವಿಚಾರಣೆ ಕೂಡ ಮಾಡಿದ್ದರು.

  ಸುಶಾಂತ್ ಸಿಂಗ್ ಸಾವಿನ ಪ್ರಕರಣ: 3 ತಿಂಗಳ ಬಳಿಕ ಮೌನ ಮುರಿದ ಬಿಹಾರ ಸಿಎಂ ನಿತೀಶ್ ಕುಮಾರ್

  8. ರಿಯಲ್ ಹೀರೋ ಸೋನು ಸೂದ್

  8. ರಿಯಲ್ ಹೀರೋ ಸೋನು ಸೂದ್

  Yahoo ಸರ್ಚ್‌ನಲ್ಲಿ ಸೋನು ಸೂದ್ ಏಂಟನೇ ಸ್ಥಾನ. ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಅತಿ ಹೆಚ್ಚು ಸುದ್ದಿಯಲ್ಲಿದ್ದ ನಟ ಸೋನು ಸೂದ್. ಲಾಕ್‌ಡೌನ್‌ನಿಂದ ಸಿಲುಕಿಕೊಂಡಿದ್ದವರಿಗೆ ಊರುಗಳಿಗೆ ತೆರೆಳಲು ಬಸ್ ವ್ಯವಸ್ಥೆ, ಊಟದ ವ್ಯವಸ್ಥೆ ಹಾಗೂ ವಿದೇಶದಲ್ಲಿ ಸಿಲುಕಿಕೊಂಡಿದ್ದವರಿಗೆ ವಿಮಾನ ವ್ಯವಸ್ಥೆಯನ್ನು ಸೋನು ಸೂದ್ ಮಾಡಿದ್ದರು, ಇದರ ಜೊತೆ ಹಲವು ಸಾಮಾಜಿಕ ಕೆಲಸ ಮಾಡಿ ರಿಯಲ್ ಹೀರೋ ಎನಿಸಿಕೊಂಡರು. ಸೋನು ಸೂದ್ ಮಾನವೀಯತೆ ಕಾರ್ಯಕ್ಕೆ ವಿಶ್ವಸಂಸ್ಥೆ ಗುರುತಿಸಿ ಪ್ರಶಸ್ತಿ ನೀಡಿದೆ. ಪಂಜಾಬ್ ಚುನಾವಣಾ ರಾಯಭಾರಿನ್ನಾಗಿ ನೇಮಕವಾಗಿದ್ದಾರೆ.

  7. ಎಸ್‌ ಪಿ ಬಾಲಸುಬ್ರಹ್ಮಣ್ಯಂ

  7. ಎಸ್‌ ಪಿ ಬಾಲಸುಬ್ರಹ್ಮಣ್ಯಂ

  ದಿಗ್ಗಜ ಗಾಯಕ ಎಸ್‌ಪಿಬಿ ಬಾಲಸುಬ್ರಹ್ಮಣ್ಯಂ ಅವರು ಸೆಪ್ಟೆಂಬರ್ 25 ರಂದು ನಿಧನರಾದರು. ಕೊರೊನಾ ವೈರಸ್‌ಗೆ ತುತ್ತಾಗಿ ಆಸ್ಪತ್ರೆ ಸೇರಿದ್ದ ಗಾಯಕ ಕೊನೆಗೂ ಬದುಕಿ ಬರಲಿಲ್ಲ. ಸುಮಾರು ಒಂದೂವರೆ ತಿಂಗಳು ಆಸ್ಪತ್ರೆಯಲ್ಲೇ ಇದ್ದರು.

  ಸಂಗೀತ, ನೃತ್ಯ ಶಾಲೆಗೆ ಎಸ್‌ಪಿ ಬಾಲಸುಬ್ರಹ್ಮಣ್ಯಂ ಹೆಸರಿಟ್ಟ ಆಂಧ್ರ ಸರ್ಕಾರ

  6. ಹಿರಿಯ ನಟ ರಿಷಿ ಕಪೂರ್

  6. ಹಿರಿಯ ನಟ ರಿಷಿ ಕಪೂರ್

  ಬಾಲಿವುಡ್ ನಟ ಹಿರಿಯ ರಿಷಿ ಕಪೂರ್ ಸಹ ಇದೇ ವರ್ಷ ನಿಧನರಾದರು. ಕಳೆದ ಎರಡು ವರ್ಷದಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ನಟ ಏಪ್ರಿಲ್ 30 ರಂದು ವಿಧಿವಶರಾದರು.

  5. ಇರ್ಫಾನ್ ಖಾನ್

  5. ಇರ್ಫಾನ್ ಖಾನ್

  ಹಿರಿಯ ನಟ ರಿಷಿ ಕಪೂರ್ ಸಾಯುವುದಕ್ಕೂ ಒಂದು ದಿನ ಮುಂಚೆ (ಏಪ್ರಿಲ್ 29) ಕಲಾತ್ಮಕ ನಟ ಇರ್ಫಾನ್ ಖಾನ್ ಸಹ ಕೊನೆಯುಸಿರೆಳೆದರು. ಬಾಲಿವುಡ್‌ನಲ್ಲಿ ಹಲವು ವಿಶೇಷ ಪಾತ್ರಗಳ ಮೂಲಕ ಜನರ ಅಭಿಮಾನ ಗಳಿಸಿದ್ದ ಇರ್ಫಾನ್ ಖಾನ್ ಕ್ಯಾನ್ಸರ್ ಗಡ್ಡೆಯಿಂದ ಬಳಲುತ್ತಿದ್ದರು.

  ಸೋನು ಸೂದ್ ಹೆಸರಿನಲ್ಲಿ ನಡೆಯುತ್ತಿದೆ ಮಹಾಮೋಸ; ಎಚ್ಚರವಿರಲಿ ಎಂದ ನಟ

  4. ಸಲ್ಮಾನ್ ಖಾನ್

  4. ಸಲ್ಮಾನ್ ಖಾನ್

  ಈ ಪಟ್ಟಿಯಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಹೆಸರು ಇಲ್ಲ ಅಂದ್ರೆ ಅಚ್ಚರಿಯಾಗಬಹುದು. 2019ರ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆಯಾಗಿದ್ದ ದಬಾಂಗ್ 3 ಸಿನಿಮಾ ಈ ವರ್ಷದ ಆರಂಭದಲ್ಲಿ ಸದ್ದು ಮಾಡಿತ್ತು. ನಂತರ ಸುಶಾಂತ್ ಸಿಂಗ್ ಸಾವಿನ ಬಳಿಕ ಸಲ್ಮಾನ್ ಖಾನ್ ಅವರನ್ನು ಹಲವರು ಟೀಕೆ ಮಾಡಿದ್ದರು.

  3. ಅಕ್ಷಯ್ ಕುಮಾರ್

  3. ಅಕ್ಷಯ್ ಕುಮಾರ್

  ಬಾಲಿವುಡ್ ಅಕ್ಷಯ್ ಕುಮಾರ್ Yahoo ಸರ್ಚ್‌ನಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಈ ವರ್ಷ ಲಕ್ಷ್ಮಿ ಬಾಂಬ್ ಸಿನಿಮಾ ಮಾತ್ರ ಬಿಡುಗಡೆಯಾಗಿತ್ತು. ಚಿತ್ರದ ಟೈಟಲ್ ಗೆ ಸಂಬಂಧಪಟ್ಟಂತೆ ರಜಪೂತ್ ಕರ್ಣಿ ಸೇನೆ ಅಕ್ಷಯ್ ಕುಮಾರ್ ಅವರಿಗೆ ಎಚ್ಚರಿಕೆ ಕೊಟ್ಟಿತ್ತು. ಸುಶಾಂತ್ ಸಾವಿನ ವಿಚಾರದಲ್ಲಿ ಅಕ್ಷಯ್ ಹೆಸರು ಕೇಳಿ ಬಂದ ಕಾರಣ ನಟ ಕೋಪಗೊಂಡಿದ್ದರು.

  2. ಅಮಿತಾಭ್ ಬಚ್ಚನ್

  2. ಅಮಿತಾಭ್ ಬಚ್ಚನ್

  ಸಿನಿಮಾ ಇಂಡಸ್ಟ್ರಿಯಲ್ಲಿ 51 ವರ್ಷ ಪೂರೈಸಿದ ನಟ ಅಮಿತಾಭ್ ಬಚ್ಚನ್ ಈ ವರ್ಷ 12ನೇ ಆವೃತ್ತಿಯ 'ಕೌನ್ ಬನೇಗಾ ಕರೋಡ್ ಪತಿ' ಕಾರ್ಯಕ್ರಮ ಸಹ ಆರಂಭಿಸಿದರು. ಕೆಲವು ಹೊಸ ಚಿತ್ರಗಳನ್ನು ಸಹ ಬಿಗ್ ಬಿ ಪ್ರಾರಂಭಿಸಿದ್ದಾರೆ. ಕೊರೊನಾ ವೈರಸ್‌ಗೆ ತುತ್ತಾಗಿದ್ದ ನಟ ಕೆಲವು ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಕೆ ಕಂಡಿದ್ದರು.

  1. ಸುಶಾಂತ್ ಸಿಂಗ್ ನಿಧನ

  1. ಸುಶಾಂತ್ ಸಿಂಗ್ ನಿಧನ

  ಈ ವರ್ಷ Yahoo ನಲ್ಲಿ ಅತಿ ಹೆಚ್ಚು ಸರ್ಚ್ ಆಗಿರುವ ನಟ ಸುಶಾಂತ್ ಸಿಂಗ್ ರಜಪೂತ್. ಜೂನ್ 14 ರಂದು ಆತ್ಮಹತ್ಯೆಗೆ ಶರಣಾಗಿದ್ದ ನಟನ ಸಾವು ಹಲವು ಅನುಮಾನ ಉಂಟು ಮಾಡಿತ್ತು. ಈಗಲೂ ಈ ಪ್ರಕರಣವನ್ನು ಸಿಬಿಐ ತನಿಖೆ ಮಾಡುತ್ತಿದ್ದು, ಸ್ಪಷ್ಟತೆ ಸಿಕ್ಕಿಲ್ಲ. ಈ ವರ್ಷ ಹೆಚ್ಚು ಸುದ್ದಿಯಲ್ಲಿದ್ದು, ಹೆಚ್ಚು ಹುಡುಕಲ್ಪಟ್ಟ, ಹೆಚ್ಚು ಗಮನ ಸೆಳೆದ ಹೆಸರು ಸುಶಾಂತ್ ಸಿಂಗ್ ಎನ್ನುವುದರಲ್ಲಿ ಯಾವುದೇ ಅನುಮಾನ ಇಲ್ಲ.

  English summary
  Best of 2020: Ten Most Searched Male Celebrities on Yahoo 2020.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X