Don't Miss!
- Finance
ಅದಾನಿ ಗ್ರೂಪ್ ವಿರುದ್ಧ ಆರೋಪ: 'ನಾವು ಜಾಗರೂಕರಾಗಿದ್ದೇವೆ' ಎಂದ ಭಾರತದ ಉನ್ನತ ಬ್ಯಾಂಕ್ಗಳು
- News
ಹಾಸನ ಟಿಕೆಟ್ ಬಗ್ಗೆ ಮಾತನಾಡಲು ರೇವಣ್ಣ ಬಿಟ್ಟರೆ ಯಾರಿಗೂ ಅವಕಾಶವಿಲ್ಲ; HDKಗೆ ಸೂರಜ್ ಟಾಂಗ್
- Technology
ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಫೈರ್ಬೋಲ್ಟ್ ಕಂಪೆನಿ!..ಪ್ರತಿಸ್ಫರ್ಧಿಗಳು ಕಂಗಾಲು!
- Lifestyle
ಬಿಪಿ ಸಮಸ್ಯೆಯೇ? ಪಿಜ್ಜಾ, ಮಜ್ಜಿಗೆ ಈ ಬಗೆಯ ಅಧಿಕ ಸೋಡಿಯಂ ಆಹಾರ ಸೇವಿಸಲೇಬೇಡಿ
- Sports
Women's Premier League : ಫೆಬ್ರವರಿ 2ನೇ ವಾರ ಆಟಗಾರರ ಹರಾಜು: ದೆಹಲಿಯಲ್ಲಿ ಹರಾಜು ಪ್ರಕ್ರಿಯೆ
- Automobiles
ಬಾಕ್ಸ್ ಆಫೀಸ್ನಲ್ಲಿ 'ಪಠಾಣ್' ಅಬ್ಬರ: ಈ ಚಿತ್ರದಲ್ಲಿ ಕಾಣಿಸಿಕೊಂಡ ಆಕರ್ಷಕ ಕಾರುಗಳಿವು...
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಥ್ರೀ ಈಡಿಯಟ್ಸ್' ಚಿತ್ರಕ್ಕೆ 11 ವರ್ಷ: ಸಿನಿಮಾದ ಕುರಿತು ಕೆಲವು ಆಸಕ್ತಿಕರ ಸಂಗತಿಗಳು ಇಲ್ಲಿವೆ
ರಾಜ್ ಕುಮಾರ್ ಹಿರಾನಿ ನಿರ್ದೇಶನದ 'ಥ್ರೀ ಈಡಿಯಟ್ಸ್' ಬಿಡುಗಡೆಯಾಗಿ 11 ವರ್ಷವಾಗುತ್ತಾ ಬಂದಿದೆ. ಈಗಲೂ ಈ ಚಿತ್ರ ಹೆಚ್ಚಿನವರ ಅಚ್ಚುಮೆಚ್ಚಿನ ಚಿತ್ರಗಳಲ್ಲಿ ಒಂದು. ಅಮೀರ್ ಖಾನ್, ಶರ್ಮಾನ್ ಜೋಷಿ, ಆರ್. ಮಾಧವನ್, ಕರೀನಾ ಕಪೂರ್, ಬೋಮನ್ ಇರಾನಿ ಮುಂತಾದವರು ನಟಿಸಿದ್ದ ಚಿತ್ರ, ಭಾರತ ಮಾತ್ರವಲ್ಲದೆ ವಿದೇಶಿ ಬಾಕ್ಸ್ ಆಫೀಸಿನಲ್ಲಿಯೂ ಭಾರಿ ಗಳಿಕೆ ಕಂಡಿತ್ತು.
Recommended Video
ಅತ್ಯುತ್ತಮ ಜನಪ್ರಿಯ ಚಿತ್ರ, ಅತ್ಯುತ್ತಮ ಸಾಹಿತ್ಯ ಮತ್ತು ಆಡಿಯೋಗ್ರಫಿ ವಿಭಾಗದಲ್ಲಿ ಒಟ್ಟು ಮೂರು ರಾಷ್ಟ್ರೀಯ ಪ್ರಶಸ್ತಿಗಳನ್ನು ಕೂಡ ಬಾಚಿಕೊಂಡಿತ್ತು. ಚೀನಾದ ಸಿನಿಮಾರಂಗ ಕೂಡ ರೀಮೇಕ್ ಮಾಡಲು ಬಯಸಿದ್ದ ಮೊದಲ ಬಾಲಿವುಡ್ ಚಿತ್ರವಿದು. ಅಮೀರ್ ಖಾನ್ ಕಾಲೇಜು ಯುವಕನ ಪಾತ್ರದಲ್ಲಿ ಅಚ್ಚರಿ ಮೂಡಿಸಿದ್ದರು. ಈ ಚಿತ್ರದ ಅನೇಕ ಕುತೂಹಲಕಾರಿ ಸಂಗತಿಗಳು ಹೆಚ್ಚಿನವರಿಗೆ ತಿಳಿದಿಲ್ಲ. ಅವುಗಳಲ್ಲಿ ಕೆಲವು ಇಲ್ಲಿವೆ...
ಮಿಸ್ಟರ್
ಪರ್ಫೆಕ್ಷನಿಸ್ಟ್
ಆಮೀರ್
ಖಾನ್
ಅಭಿಮಾನಿಗಳಿಗೆ
ಭಾರಿ
ನಿರಾಸೆ

ಶಾರುಖ್ ಖಾನ್ ಮೊದಲ ಆಯ್ಕೆ
ಅಮೀರ್ ಖಾನ್ ಅವರ 'ರಾಂಚೋ' ಪಾತ್ರಕ್ಕೆ ಅಮೀರ್ ಖಾನ್‌ಗೂ ಮೊದಲು ಶಾರುಖ್ ಖಾನ್ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಡೇಟ್ಸ್ ಹೊಂದಾಣಿಕೆಯಾಗದ ಕಾರಣ ಆ ಪಾತ್ರ ಅಮೀರ್ ಖಾನ್ ಬಳಿ ಹೋಯಿತು. ಆ ವೇಳೆ ಶಾರೂಖ್ 'ಮೈ ನೇಮ್ ಈಸ್ ಖಾನ್' ಚಿತ್ರದಲ್ಲಿ ಬಿಜಿಯಾಗಿದ್ದರು. ಈ ಚಿತ್ರ ಬಿಡುಗಡೆಯಾದ ನಂತರ 'ಥ್ರೀ ಈಡಿಯಟ್ಸ್' ಮಿಸ್ ಮಾಡಿಕೊಂಡ ಶಾರುಖ್, ನಾಲ್ಕನೆಯ ಈಡಿಯಟ್ ಎಂದು ಅನೇಕರು ಲೇವಡಿ ಮಾಡಿದ್ದರು.

ಅರ್ಷಾದ್ ವಾರ್ಸಿ
ಫರ್ಹಾನ್ ಅಥವಾ ರಾಜು ಪಾತ್ರಕ್ಕೆ ಅರ್ಷಾದ್ ವಾರ್ಸಿ ಅವರನ್ನು ಮೊದಲ ಆಯ್ಕೆಯಾಗಿ ಪರಿಗಣಿಸಲಾಗಿತ್ತು. ಅವರಿಗೂ ಡೇಟ್ಸ್ ಹೊಂದಾಣಿಕೆಯಾಗಿರಲಿಲ್ಲ. ಬಳಿಕ ಫರ್ಹಾನ್ ಪಾತ್ರ ಜಾನ್ ಅಬ್ರಹಾಂ ಮತ್ತು ರಾಜು ಪಾತ್ರ ಸೈಫ್ ಅಲಿ ಖಾನ್ ಬಳಿ ಹೋಗಿತ್ತು. ಕೊನೆಗೆ ಶರ್ಮನ್ ಮತ್ತು ಆರ್ ಮಾಧವನ್ ಅವರಿಗೆ ಒಲಿಯಿತು.

ಐದೇ ವರ್ಷ ಚಿಕ್ಕವರು
ಕಾಲೇಜು ಯುವಕನ ಪಾತ್ರ ಮಾಡುವಾಗ ಅಮೀರ್ ಖಾನ್‌ಗೆ 44 ವರ್ಷ. ಕಾಲೇಜ್ ಪ್ರಿನ್ಸಿಪಾಲ್ ಪಾತ್ರ ಮಾಡಿದ್ದ ಬೋಮನ್ ಇರಾನಿ, ಅಮೀರ್‌ಗಿಂತ ಐದು ವರ್ಷವಷ್ಟೇ ದೊಡ್ಡವರು. ಇದರಲ್ಲಿ ಅಮೀರ್ ಪಾತ್ರದ ಸ್ವರೂಪ ಬೇರೆ ಇತ್ತು. ಆದರೆ ತಮ್ಮ ಕಸಿನ್ ವರ್ತನೆಯನ್ನು ನೋಡಿ ಅಮೀರ್ ಖಾನ್, ಈಗಿನ ಪೀಳಿಗೆಗೆ ಹೊಂದಿಕೆಯಾಗುವಂತೆ ಪಾತ್ರವನ್ನು ಹೊಂದಿಸಿಕೊಂಡರು.
ಕಾಜೋಲ್
ಜೊತೆ
ನಟಿಸಬೇಡ:
ಆಮೀರ್
ಖಾನ್
ಗೆ
ಶಾರುಖ್
ಹೀಗೆ
ಹೇಳಿದ್ದೇಕೆ?

ಮುನ್ನಭಾಯಿಗೆ ಬರೆದಿದ್ದ ಸನ್ನಿವೇಶ
ಹೆರಿಗೆ ಮಾಡಿಸುವ ಸನ್ನಿವೇಶವನ್ನು ವಾಸ್ತವವಾಗಿ ಹಿರಾನಿ ತಮ್ಮ ಹಿಂದಿನ ಸಿನಿಮಾ 'ಮುನ್ನಾ ಭಾಯಿ ಎಂಬಿಬಿಎಸ್' ಚಿತ್ರಕ್ಕಾಗಿ ರೂಪಿಸಿದ್ದರು. ಕೆಲವು ಕಾರಣಗಳಿಂದ ಆ ದೃಶ್ಯವನ್ನು ಚಿತ್ರೀಕರಿಸಿರಲಿಲ್ಲ. ಆದರೆ ಅದು ಕೊನೆಗೆ 'ಥ್ರೀ ಈಡಿಯಟ್ಸ್' ಕಥೆಗೆ ಸೂಕ್ತವಾಗಿ ಹೊಂದಾಣಿಕೆಯಾಯಿತು. ಮುನ್ನಾ ಭಾಯಿ ಎಂಬಿಬಿಎಸ್ (2003) ಚಿತ್ರ ಮಾಡುವ ಮುನ್ನವೇ ಹಿರಾನಿ, ಎಂಜಿನಿಯರಿಂಗ್ ಓದುವ ಮೂವರು ವಿದ್ಯಾರ್ಥಿಗಳ ಕಳೆತ ಕರಡನ್ನು ಬರೆದಿಟ್ಟಿದ್ದರು.

ಬೆಂಗಳೂರಿನಲ್ಲಿರುವ ಕಾಲೇಜು
ಈ ಚಿತ್ರದಲ್ಲಿ ತೋರಿಸಿರುವ ದಿ ಇಂಪೀರಿಯಲ್ ಕಾಲೇಜ್ ಆಫ್ ಎಂಜಿನಿಯರಿಂಗ್ ವಾಸ್ತವವಾಗಿ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಕಟ್ಟಡ. ಹಾಗೆಯೇ ಶರ್ಮಾನ್ ಜೋಷಿ ಆತ್ಮಹತ್ಯೆ ಯತ್ನ ಮಾಡಿದ ಬಳಿಕ ದಾಖಲಿಸುವ ಆಸ್ಪತ್ರೆ ನೋಯ್ಡಾದ ಫೋರ್ಟಿಸ್ ಹಾಸ್ಪಿಟಲ್. ಸ್ಪೆಷಲ್ ಎಫೆಕ್ಟ್‌ಗಾಗಿ ಸ್ಮೋಕ್ ಮೆಷಿನ್ ಒಂದನ್ನು ಬಳಸುವ ಪರೀಕ್ಷೆ ನಡೆಸುವ ವೇಳೆ ನಿರ್ದೇಶಕ ರಾಜ್ ಕುಮಾರ್ ಹಿರಾನಿ ಹೊಗೆ ಸೇವಿಸಿ ಅಸ್ವಸ್ಥರಾಗಿದ್ದರು. ಇಡೀ ಚಿತ್ರತಂಡ ಸ್ಥಳದಿಂದ ಕೆಲ ಕಾಲ ಕಾಲ್ಕಿತ್ತಿತ್ತು.

ಈಡಿಯಟ್ಸ್ ಶೀರ್ಷಿಕೆ ಸಿಕ್ಕಿರಲಿಲ್ಲ
ಈ ಚಿತ್ರವನ್ನು ಶೂಟಿಂಗ್ ಮಾಡಿದ್ದು ರಿವರ್ಸ್ ರೀತಿಯಲ್ಲಿ. ಅಂದರೆ, ಆರಂಭದ ಹಾಗೂ ಕೊನೆಯಲ್ಲಿ ಬರುವ ಪ್ರಸ್ತುತದ ದಿನಗಳ ಭಾಗಗಳನ್ನು ಮೊದಲೇ ಚಿತ್ರೀಕರಿಸಲಾಗಿತ್ತು. ಕಾಲೇಜು ದಿನಗಳ ಭಾಗವನ್ನು ನಂತರ ಚಿತ್ರೀಕರಿಸಲಾಗಿತ್ತು. ಈ ಚಿತ್ರಕ್ಕೆ ಮೊದಲು ಈಡಿಯಟ್ಸ್ ಎಂದು ಹೆಸರಿಡಲು ಹಿರಾನಿ ಬಯಸಿದ್ದರು. ಆದರೆ ದೀಪಕ್ ಶಿವ್ದಾಸಾನಿ ಅವರು ಈ ಶೀರ್ಷಿಕೆ ನೋಂದಣಿ ಮಾಡಿಸಿದ್ದರು. ನಿರ್ಮಾಪಕರು ಮನವಿ ಮಾಡಿದ್ದರೂ ದೀಪಕ್ ಈ ಶೀರ್ಷಿಕೆ ನೀಡಲು ಒಪ್ಪಿರಲಿಲ್ಲ. ಈ ಚಿತ್ರಕ್ಕೆ ಮೊದಲು ಚಿತ್ರೀಕರಿಸಿದ ದೃಶ್ಯವೆಂದರೆ ಮಾಧವನ್ ವಿಮಾನದಲ್ಲಿದ್ದ ಸನ್ನಿವೇಶ.

ನಿಜವಾಗಿಯೂ ಕುಡಿದಿದ್ದರು
ರಾಂಚೋ ಪಾತ್ರದ ಫ್ಲೈಯಿಂಗ್ ಹೆಲಿಕಾಪ್ಟರ್ ಯೋಜನೆಯ ಮೂಲ ಉಪಾಯ ಕೊಟ್ಟವರು ನಟಿ ದಿಯಾ ಮಿರ್ಜಾ. ಇದನ್ನು ನಿರ್ಮಾಪಕ ವಿಧು ವಿನೋದ್ ಚೋಪ್ರಾ ಬಹಿರಂಗಪಡಿಸಿದ್ದರು. ನಟರು ರಾತ್ರಿ ಕ್ಲಾಸ್ ರೂಮ್‌ನಲ್ಲಿ ಕುಡಿದು ಅಲ್ಲಿಯೇ ಮಲಗುವ ದೃಶ್ಯದಲ್ಲಿ ಸಹಜತೆ ಇರಬೇಕೆಂದು, ಎಲ್ಲರೂ ನಿಜವಾಗಿಯೂ ಕುಡಿಯುವಂತೆ ಅಮೀರ್ ಖಾನ್ ಸಲಹೆ ನೀಡಿದ್ದರು. ಆದರೆ ಅದರ ಪರಿಣಾಮವಾಗಿ ಅನೇಕ ರೀಟೇಕ್‌ಗಳನ್ನು ತೆಗೆಯುವಂತಾಯಿತು. ಕ್ಯಾಮೆರಾ ರೋಲ್ ಕೂಡ ಖಾಲಿಯಾಗಿತ್ತು.

ಹಾಲು, ಬಾಳೆಹಣ್ಣಿನ ಡಯಟ್
ಹಿರಾನಿ ಅವರ ಮೆಚ್ಚಿನ ನಟ ಸಂಜಯ್ ದತ್, ಈ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಬೇಕಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಸಂಜಯ್ ದತ್ ಕಾಣಿಸಿಕೊಳ್ಳದ ಹಿರಾನಿ ಅವರ ಏಕೈಕ ಚಿತ್ರವಿದು. ಅಮೀರ್ ಈ ಪಾತ್ರದಲ್ಲಿ ಕಾಲೇಜು ಹುಡುಗನಂತೆ ಕಾಣಿಸಲು ಕಠಿಣ ಡಯಟ್ ಮಾಡುತ್ತಿದ್ದರು. ತಮ್ಮ ಜನ್ಮದಿನದಂದು ಕೇಕ್ ಕೂಡ ತಿಂದಿರಲಿಲ್ಲ. ಹಾಲು ಮತ್ತು ಬಾಳೆ ಹಣ್ಣುಗಳಲ್ಲಿಯೇ ಊಟ ಮುಗಿಸಿ ತೂಕ ಕಳೆದುಕೊಂಡಿದ್ದರು.

ಅನುಷ್ಕಾ ಶರ್ಮಾ ಆಡಿಷನ್ ನಡೆಸಿದ್ದರು
ಈ ಚಿತ್ರಕ್ಕೂ ಮುನ್ನ ಅಮೀರ್ ಖಾನ್, ಶರ್ಮಾನ್ ಮತ್ತು ಮಾಧವನ್ 'ರಂಗ್ ದೇ ಬಸಂತಿ' ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. ಫುನ್ಸುಖ್ ವಾಂಗ್ದು ಪಾತ್ರವು ಲೇಹ್‌ನ ಎಂಜಿನಿಯರ್ ಸೋನಮ್ ವಾಂಗ್ಚುಕ್ ಅವರಿಂದ ಪ್ರಭಾವಿತಗೊಂಡಿತ್ತು. ಹಿರಾನಿ ಚಿತ್ರದಲ್ಲಿ ನಟಿಸಬೇಕೆಂಬ ಕರೀನಾ ಕಪೂರ್ ಆಸೆ ಈ ಸಿನಿಮಾದಿಂದ ಈಡೇರಿತು. ಅನುಷ್ಕಾ ಶರ್ಮಾ ಅವರನ್ನೂ ಈ ಪಾತ್ರಕ್ಕೆ ಆಡಿಷನ್ ಮಾಡಲಾಗಿತ್ತು.

ದಾಖಲೆಯ ಗಳಿಕೆ
ಹಾಲಿವುಡ್ ನಿರ್ದೇಶಕ ಸ್ಟೀವನ್ ಸ್ಪೀಲ್‌ಬರ್ಗ್ ಈ ಚಿತ್ರವನ್ನು ಮೂರು ಬಾರಿ ನೋಡಿದ್ದಾಗಿ ತಿಳಿಸಿದ್ದರು. ದಿ ಗಾಡ್ ಫಾದರ್, ಇ.ಟಿ. ದಿ ಎಕ್ಸ್ಟ್ರಾ-ಟೆರಸ್ಟ್ರಿಯಲ್, ಸೇವಿಂಗ್ ಪ್ರೈವೇಟ್ ರಿಯಾನ್ ಮತ್ತು ಜಾವ್ಸ್ ಚಿತ್ರಗಳ ಜತೆ ತಮ್ಮ ಇಷ್ಟದ ಸಿನಿಮಾವಾಗಿ ಪಟ್ಟಿ ಮಾಡಿದ್ದರು. 200 ಕೋಟಿ ಬಾಕ್ಸಾಫೀಸ್ ಗಳಿಕೆ ಮತ್ತು ವಿಶ್ವವ್ಯಾಪಿ 395 ರೂ ಗಳಿಕೆ ಕಂಡ ಬಾಲಿವುಡ್‌ನ ಮೊದಲ ಚಿತ್ರ ಎಂಬ ಹೆಗ್ಗಳಿಕೆ ಈ ಚಿತ್ರದ್ದು. ಅತಿ ಹೆಚ್ಚು ಬಾಕ್ಸಾಫೀಸ್ ಗಳಿಕೆ ಕಂಡ ಬಾಲಿವುಡ್ ಚಿತ್ರ ಎಂಬ ದಾಖಲೆ ಕೂಡ ಈ ಚಿತ್ರದ್ದು. ಸಮೀಕ್ಷೆಯೊಂದರ ಪ್ರಕಾರ ಚೀನೀಯರ ಫೇವರಿಟ್ ಚಿತ್ರಗಳಲ್ಲಿ ಇದು 12ನೇ ಸ್ಥಾನ ಪಡೆದಿದೆ.

ಹಾಸ್ಟೆಲ್‌ನಲ್ಲಿಯೇ ಉಳಿದುಕೊಂಡಿದ್ದ ಅಮೀರ್
ಬೆಂಗಳೂರಿನಲ್ಲಿ ಚಿತ್ರೀಕರಣದ ವೇಳೆ ಹೋಟೆಲ್‌ನಲ್ಲಿ ಉಳಿಯದೆ ಹಾಸ್ಟೆಲ್‌ನಲ್ಲಿಯೇ ಉಳಿದುಕೊಳ್ಳಲು ಅಮೀರ್ ಖಾನ್ ಬಯಸಿದ್ದರು. ಇದು ಮಾಧವನ್ ಅವರಿಗೆ ಇಷ್ಟವಿರಲಿಲ್ಲ. ವಿರಾಮದ ನಡುವೆ ಅಮೀರ್ ಖಾನ್ ಹಾಸ್ಟೆಲ್ ವಿದ್ಯಾರ್ಥಿಗಳ ಜತೆ ಚೆಸ್ ಮತ್ತು ಟೆನಿಸ್ ಆಡುತ್ತಿದ್ದರು. ಲೇಹ್‌ನ ಡ್ರುಕ್ ಪದ್ಮಾ ಕಾರ್ಪೋ ಶಾಲೆಯ ಗೋಡೆ ಈಗ 'ರಾಂಚೋ ವಾಲ್' ಆಗಿ ಪ್ರಸಿದ್ಧ ಪ್ರವಾಸಿ ಸ್ಥಳವಾಗಿದೆ.
50
ಜನರ
ನಡುವೆ
ಸೆಕ್ಸ್
ಸೀನ್
ಮಾಡುವುದು
ಹೇಗೆ?:
ಮುಜುಗರದ
ದೃಶ್ಯ
ನೆನಪಿಸಿಕೊಂಡ
ಪೂಜಾ
ಬೇಡಿ