twitter
    For Quick Alerts
    ALLOW NOTIFICATIONS  
    For Daily Alerts

    ಹ್ಯಾಪಿ ಬರ್ಥಡೇ ರೆಬೆಲ್ ಸ್ಟಾರ್: ಚಿತ್ರರಂಗಕ್ಕೆ ಕಾಡುತ್ತಿದೆ ಅಂಬರೀಷ್ ಅನುಪಸ್ಥಿತಿ

    By Avani Malnad
    |

    ಇಂದು ಅಂಬರೀಷ್ ಜನ್ಮದಿನ. ರೆಬೆಲ್ ಸ್ಟಾರ್, ಕಲಿಯುಗದ ಕರ್ಣ, ಮಂಡ್ಯದ ಗಂಡು ಮುಂತಾದ ಬಿರುದುಗಳೆಲ್ಲವೂ ಅಂಬರೀಷ್ ಅವರ ವ್ಯಕ್ತಿತ್ವಕ್ಕೆ ಪೂರಕವಾಗಿ ನಾಮಕರಣವಾಗಿದ್ದವು. ಚಿತ್ರರಂಗಕ್ಕೆ ಬರುವ ಮೊದಲಿನಿಂದಲೂ ಅಂಬರೀಷ್ ಮಾತಲ್ಲಿ ಒರಟು, ಹೃದಯದಲ್ಲಿ ಮಗುವಿನಂತೆ ಕಂಡವರು. ವಯಸ್ಸು ಮಾಗಿದಂತೆ ಆ ಗುಣಗಳು ಅವರಲ್ಲಿ ಇನ್ನಷ್ಟು ಗಟ್ಟಿಯಾಗತೊಡಗಿದ್ದವು.

    Recommended Video

    ಅಂಬಿ ಹುಟ್ಟು ಹಬ್ಬದ ಆಚರಣೆಗೆ ಅಂಬಿ ಸ್ಮಾರಕದ ಬಳಿ ಯಾರೆಲ್ಲಾ ಬಂದಿದ್ದಾರೆ ನೋಡಿ| Ambareesh

    ಅಂಬಿ ಮರೆಯಾಗಿ ಒಂದೂವರೆ ವರ್ಷವಾಗಿದೆ. ಅವರ ನೆನಪು ಅಭಿಮಾನಿಗಳಲ್ಲಿ ಹಸಿರಾಗಿದೆ. ಆದರೆ ಅವರು ಇಲ್ಲ ಎಂಬ ವಾಸ್ತವ ಭೌತಿಕವಾಗಿ ಕಾಡುತ್ತಿದೆ. ಮುಖ್ಯವಾಗಿ ಚಿತ್ರರಂಗದ ಇಂದಿನ ಈ ಸಂದರ್ಭದಲ್ಲಿ ಅಂಬರೀಷ್ ತೀರಾ ಅಗತ್ಯವಾಗಿದ್ದರು. ಕೆಲವೊಂದು ಸಂಭ್ರಮಗಳು, ಸಂಕಷ್ಟದ ಸನ್ನಿವೇಶಗಳಲ್ಲಿ ಅಂಬರೀಷ್ ಇಲ್ಲವಲ್ಲ ಎಂಬ ನೋವು, ಕೊರತೆ ಕಾಣಿಸುತ್ತಿದೆ. ಅಂಬರೀಷ್ ಇದ್ದಿದ್ದರೆ ಈ ಸಂದರ್ಭದಲ್ಲಿ ಚಿತ್ರರಂಗಕ್ಕೆ ಒಂದು ಹಾದಿ ತೋರಿಸುವ ಭರವಸೆ ಸಿಗುತ್ತಿತ್ತು. ಮುಂದೆ ಓದಿ...

    ರೆಬೆಲ್ ಸ್ಟಾರ್ ಅಂಬರೀಶ್ ಬಗ್ಗೆ ನಿಮಗೆಷ್ಟು ಗೊತ್ತು?: ಈ 10 ಪ್ರಶ್ನೆಗಳಿಗೆ ಉತ್ತರಿಸಿರೆಬೆಲ್ ಸ್ಟಾರ್ ಅಂಬರೀಶ್ ಬಗ್ಗೆ ನಿಮಗೆಷ್ಟು ಗೊತ್ತು?: ಈ 10 ಪ್ರಶ್ನೆಗಳಿಗೆ ಉತ್ತರಿಸಿ

    ಅಂಬರೀಷ್ ಅನುಪಸ್ಥಿತಿ

    ಅಂಬರೀಷ್ ಅನುಪಸ್ಥಿತಿ

    ಲಾಕ್ ಡೌನ್ ಸಂದರ್ಭದಲ್ಲಿ ಇಡೀ ಸಿನಿಮಾ ರಂಗ ಸ್ತಬ್ಧಗೊಂಡಿದ್ದಾಗ ಅಂಬರೀಷ್ ಅನುಪಸ್ಥಿತಿ ಕಾಡಿರುವುದು ನಿಜ. ನೆರೆಯ ತೆಲುಗು ಚಿತ್ರರಂಗದಲ್ಲಿನ ಬೆಳವಣಿಗೆಗಳು ನಮ್ಮಲ್ಲಿಯೂ ನಡೆಯಬೇಕಿತ್ತು. ಕೊರೊನಾ ವೈರಸ್‌ನಿಂದಾಗಿ ಚಿತ್ರರಂಗದ ಭವಿಷ್ಯದ ದಾರಿ ಮಸುಕಾಗಿದೆ. ಇದನ್ನು ಸರಿಪಡಿಸುವುದು ಹೇಗೆ ಎನ್ನುವುದು ಚಿತ್ರರಂಗಕ್ಕೆ ಅರಿವಾಗುತ್ತಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಚಿತ್ರರಂಗ ಒಗ್ಗಟ್ಟಿನಿಂದ ಕುಳಿತು ಈ ಬಗ್ಗೆ ಪರಿಹಾರಾತ್ಮಕ ಮಾರ್ಗ ಕಂಡುಕೊಳ್ಳುವ ಚರ್ಚೆ ನಡೆಸುವ ಪ್ರಯತ್ನವನ್ನೇ ನಡೆಸಿಲ್ಲ.

    ತೆಲುಗು ಚಿತ್ರರಂಗದಲ್ಲಿ ಚರ್ಚೆ

    ತೆಲುಗು ಚಿತ್ರರಂಗದಲ್ಲಿ ಚರ್ಚೆ

    ಇತ್ತೀಚೆಗೆ ತೆಲುಗು ಚಿತ್ರರಂಗದ ಭವಿಷ್ಯದ ಕುರಿತು, ಸಿನಿಮಾಗಳ ರೂಪು ರೇಷೆ ಬಗ್ಗೆ ಚರ್ಚೆ ನಡೆದಿದೆ. ತೆಲಂಗಾಣದ ಸಿಮಾಟೊಗ್ರಫಿ ಸಚಿವರೇ ಖುದ್ದು ಹಿರಿಯ ನಟ ಚಿರಂಜೀವಿ ಮನೆಗೆ ತೆರಳಿ ಮಾತುಕತೆ ನಡೆಸಿದ್ದರು. ರಾಜಮೌಳಿ, ತ್ರಿವಿಕ್ರಮ್ ಶ್ರೀನಿವಾಸ್ ಮುಂತಾದ ನಿರ್ದೇಶಕರು ಭಾಗಿಯಾಗಿದ್ದರು. ಚಿತ್ರರಂಗ ಮತ್ತು ಧಾರಾವಾಹಿಗಳ ಕುರಿತು ಸಚಿವರೇ ಆಸ್ಥೆ ವಹಿಸಿ ಚಿತ್ರರಂಗದ ಗಣ್ಯರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಈಗಿನ ಬಿಕ್ಕಟ್ಟಿನ ಸಂದರ್ಭದಲ್ಲಿ ಚಿತ್ರರಂಗದಲ್ಲಿ ಯಾವ ಬದಲಾವಣೆಗಳು ಆಗಬೇಕು, ಸರ್ಕಾರದಿಂದ ಅಪೇಕ್ಷಿಸುವ ನೆರವುಗಳೇನು ಎಂಬ ಸಂಗತಿಗಳ ಕುರಿತು ಮಾತನಾಡಿದ್ದರು.

    ರೆಬೆಲ್ ಸ್ಟಾರ್ ಜನ್ಮದಿನಕ್ಕೆ ನಟ ನೀನಾಸಂ ಸತೀಶ್ ಹಾಡಿನ ಗೌರವರೆಬೆಲ್ ಸ್ಟಾರ್ ಜನ್ಮದಿನಕ್ಕೆ ನಟ ನೀನಾಸಂ ಸತೀಶ್ ಹಾಡಿನ ಗೌರವ

    ನಮ್ಮಲ್ಲಿ ಯಾರಿದ್ದಾರೆ?

    ನಮ್ಮಲ್ಲಿ ಯಾರಿದ್ದಾರೆ?

    ಈ ಕಾರ್ಯ ಕನ್ನಡ ಚಿತ್ರರಂಗದಲ್ಲಿಯೂ ನಡೆಯಬೇಕಿತ್ತು. ಸರ್ಕಾರ ಮತ್ತು ಚಿತ್ರರಂಗದ ನಡುವೆ ಈ ರೀತಿಯ ಚರ್ಚೆಗಳು ನಡೆದಾಗಲೇ ಚಿತ್ರರಂಗದ ಸಮಸ್ಯೆಗಳಿಗೆ ಆಳುವವರಿಂದ ಸ್ಪಂದನೆ ಸಿಗಲು ಸಾಧ್ಯ. ಆದರೆ ಅವುಗಳನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವವರು ಯಾರು? ನಮಗೆ ಈ ರೀತಿಯ ಸಹಾಯ ಬೇಕು ಎಂದು ಅಧಿಕಾರಯುತವಾಗಿ ಹಕ್ಕು ಮಂಡಿಸುವವರು ಯಾರು?

    ಅಂಬರೀಷ್ ನಾಯಕತ್ವಕ್ಕೆ ಮನ್ನಣೆ

    ಅಂಬರೀಷ್ ನಾಯಕತ್ವಕ್ಕೆ ಮನ್ನಣೆ

    ಡಾ. ರಾಜ್ ಕುಮಾರ್ ಅವರ ನಿಧನದ ಬಳಿಕ ಚಿತ್ರರಂಗಕ್ಕೆ ಎದುರಾದ ನಾಯಕತ್ವದ ಕೊರತೆಯನ್ನು ಅಂಬರೀಷ್ ಒಂದು ಮಟ್ಟಿಗೆ ನಿಭಾಯಿಸಿದರು. ಚಿತ್ರರಂಗದ ಒಟ್ಟಾರೆ ಸಂಕಷ್ಟಗಳು ಮಾತ್ರವಲ್ಲ, ಕಲಾವಿದರ ವೈಯಕ್ತಿಕ ಸಮಸ್ಯೆಗಳಿಗೂ ಅಂಬರೀಷ್ ನ್ಯಾಯ ಪಂಚಾಯ್ತಿ ಮಾಡುವವರಾಗಿದ್ದರು. ಅವರ ತೀರ್ಪು ಅಂತಿಮವಾಗಿರುತ್ತಿತ್ತು. ಹಾಗೆಯೇ ಚಿತ್ರರಂಗದ ಎಲ್ಲರೂ ಅದನ್ನು ಒಪ್ಪಿಕೊಂಡು ಪಾಲಿಸುತ್ತಿದ್ದರು. ಅಲ್ಲಿಗೇ ಅನೇಕ ವಿವಾದಗಳು, ಸಮಸ್ಯೆಗಳು ಅಂತ್ಯಗೊಳ್ಳುತ್ತಿದ್ದವು.

    ಅಂಬಿ ಜೊತೆಗಿನ ಫೋಟೋ ಶೇರ್ ಮಾಡಿ ಹಳೆ ದಿನಗಳನ್ನು ನೆನೆದ ಸುದೀಪ್ಅಂಬಿ ಜೊತೆಗಿನ ಫೋಟೋ ಶೇರ್ ಮಾಡಿ ಹಳೆ ದಿನಗಳನ್ನು ನೆನೆದ ಸುದೀಪ್

    ನಾಯಕತ್ವದ ಕೊರತೆ

    ನಾಯಕತ್ವದ ಕೊರತೆ

    ಕೊರೊನಾ ವೈರಸ್ ಕಾರಣ ನಿಂತು ಹೋಗಿರುವ ಚಟುವಟಿಕೆಗಳು, ಬೀದಿಗೆ ಬಂದ ಸಿನಿಮಾ ಕಾರ್ಮಿಕರು ಬದುಕು, ಪರಿಹಾರ ನೆರವು ವಿತರಣೆಯಲ್ಲಿ ಗೊಂದಲ-ಕಿತ್ತಾಟಗಳು, ಒಟಿಟಿ-ಪ್ರದರ್ಶಕರು-ನಿರ್ಮಾಪಕರ ನಡುವಿನ ಸಂಘರ್ಷ ಮುಂತಾದ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ವಿಚಾರದಲ್ಲಿ ಒಬ್ಬ ನಾಯಕ ಚಿತ್ರರಂಗಕ್ಕೆ ಬೇಕಿತ್ತು. ಹಾಗೆ ಎಲ್ಲರನ್ನೂ ಒಂದುಗೂಡಿಸಿಕೊಂಡು ಮುಂದೆ ಸಾಕುವ ಛಾತಿ ಇದ್ದಿದ್ದು ಅಂಬರೀಷ್ ಅವರಲ್ಲಿ. ಇಂದೂ ಚಿತ್ರರಂಗದಲ್ಲಿ ಸ್ಟಾರ್ ಕಲಾವಿದರು, ನಿರ್ದೇಶಕರು, ನಿರ್ಮಾಪಕರು, ಹಿರಿಯರು ಇದ್ದಾರೆ. ಆದರೆ ಒಬ್ಬರ ಮಾತಿಗೆ ಓಗೊಟ್ಟು ಎಲ್ಲರೂ ಸೇರುವಂತಹ ನಾಯಕತ್ವ ಯಾರಲ್ಲಿಯೂ ಕಾಣಿಸುತ್ತಿಲ್ಲ. ಹಾಗೆ ನಾಯಕತ್ವ ವಹಿಸಿಕೊಳ್ಳಲು ಯಾರೂ ಮುಂದಾಗುತ್ತಿಲ್ಲ ಎನ್ನುವುದು ಮತ್ತೊಂದು ಸಂಗತಿ.

    ಭವಿಷ್ಯದಲ್ಲಿ ಮತ್ತಷ್ಟು ಕಾಡಲಿದೆ

    ಭವಿಷ್ಯದಲ್ಲಿ ಮತ್ತಷ್ಟು ಕಾಡಲಿದೆ

    ರಾಜಕೀಯವಾಗಿಯೂ ಅಂಬರೀಷ್ ಅವರಿಗೆ ಎಲ್ಲ ಪಕ್ಷಗಳಲ್ಲಿಯೂ ಸ್ನೇಹಿತರಿದ್ದರು. ಅವರ ಮಾತಿಗೆ ಬೆಲೆ ಕೊಡುವ ನಾಯಕರಿದ್ದರು. ಇಂದು ಒಂದೊಂದೇ ಸಂಘಟನೆಗಳು, ಸಂಸ್ಥೆಗಳು ಸರ್ಕಾರವನ್ನು ಭೇಟಿ ಮಾಡಿ ತಮ್ಮ ಮನವಿಗಳನ್ನು ಸಲ್ಲಿಸುತ್ತಿವೆ. ಸಮಸ್ಯೆಗಳಿಗೆ ರಚನಾತ್ಮಕ ಪರಿಹಾರ ಕಂಡುಕೊಳ್ಳುವಲ್ಲಿ ಚಿತ್ರರಂಗ ಸಫಲವಾಗಿಲ್ಲ. ಅಂಬರೀಷ್ ಇದ್ದಿದ್ದರೆ ಚಿತ್ರರಂಗದ ಅನೇಕ ಸಮಸ್ಯೆಗಳಿಗೆ ಧ್ವನಿಯಾಗುತ್ತಿದ್ದರು. ಚಿತ್ರರಂಗದ ಎಲ್ಲ ವಿಭಾಗಗಳು ಮತ್ತು ಸರ್ಕಾರದ ನಡುವೆ ಕೊಂಡಿಯಾಗಿರುತ್ತಿದ್ದರು. ಚಿತ್ರರಂಗಕ್ಕೆ ಅಗತ್ಯವಾಗಿದ್ದನ್ನು ಕೊಡಿಸುತ್ತಿದ್ದರು ಎಂದು ಅವರನ್ನು ಪದೇ ಪದೇ ನೆನಪಿಸಿಕೊಳ್ಳುವಷ್ಟು ಅವರ ಅನುಪಸ್ಥಿತಿ ಕಾಡುತ್ತಿದೆ. ಸ್ಟಾರ್ ವಾರ್‌ಗಳು ತೀವ್ರಗೊಳ್ಳುತ್ತಿರುವಾಗ, ಬಹುಶಃ ಭವಿಷ್ಯದಲ್ಲಿ ಅಂಬರೀಷ್ ಇಲ್ಲ ಎಂಬ ಕೊರತೆ ಮತ್ತಷ್ಟು ತೀವ್ರವಾಗಿ ತಟ್ಟಲಿದೆ.

    English summary
    Rebel Star Ambareesh 68th Birthday Celebration: Kannada film industry is experiencing the absence of Ambareesh in this crisis situation.
    Saturday, May 30, 2020, 0:05
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X