For Quick Alerts
  ALLOW NOTIFICATIONS  
  For Daily Alerts

  ಸಣ್ಣ ಪಾತ್ರದಿಂದ ಮುಖ್ಯ ಪಾತ್ರದವರೆಗೆ: ನಟ ಜಾನ್‌ನ ಅದ್ಭುತ ಪಯಣ

  By ಫಿಲ್ಮೀಬೀಟ್ ಡೆಸ್ಕ್‌
  |

  ಇಂದು ಸ್ಟಾರ್ ಆಗಿ ಮೆರೆಯುತ್ತಿರುವ ಚಿರಂಜೀವಿ, ರಜನೀಕಾಂತ್, ಕನ್ನಡದ ದರ್ಶನ್, ಸುದೀಪ್, ಯಶ್, ಜಗ್ಗೇಶ್, ಗಣೇಶ್, ದುನಿಯಾ ವಿಜಯ್, ಸ್ವತಃ ಡಾ.ರಾಜ್‌ಕುಮಾರ್ ಇನ್ನೂ ಹಲವು ಸ್ಟಾರ್ ನಟರು ತಮ್ಮ ನಟನಾ ವೃತ್ತಿ ಆರಂಭಿಸಿದ್ದು ಸಣ್ಣ ಪಾತ್ರದ ಮೂಲಕವೇ.

  ಸಣ್ಣ ಪಾತ್ರಗಳಲ್ಲಿ ನಟಿಸುತ್ತಾ ತಮ್ಮ ಕನಸಿನ ಬೆನ್ನು ಬಿಡದೆ ಸತತ ಪರಿಶ್ರಮದಿಂದ ಮೇಲೆ ಬಂದ ಹಲವು ನಟ-ನಟಿಯರು ಚಿತ್ರರಂಗದಲ್ಲಿದ್ದಾರೆ. ಆದರೆ ಸಣ್ಣ ಪಾತ್ರಗಳೆಂದರೆ ಮೂಗು ಮುರಿಯುವ ಕೆಲವು ಯುವ ನಟರು ಚಿತ್ರರಂಗದಲ್ಲಿದ್ದಾರೆ. ಅಂಥಹವರಿಗೆ ಸ್ಪುರ್ತಿ ತುಂಬಬಲ್ಲ ಮತ್ತೊಂದು ಉದಾಹರಣೆ ಜಾನ್.

  ಕೆಜಿಎಫ್ ಚಾಪ್ಟರ್ 1 ಸೇರಿದಂತೆ ಹಲವು ಸಿನಿಮಾಗಳಲ್ಲಿ ವಿಲನ್‌ ಆಗಿ ನಟಿಸಿರುವ ಜಾನ್ ಪೂರ್ಣ ಹೆಸರು ಜಾನ್ ಕೊಕ್ಕೆನ್. ಸಣ್ಣ ಪುಟ್ಟ ಪಾತ್ರಗಳ ಮೂಲಕ ಸಿನಿ ಜರ್ನಿ ಆರಂಭಿಸಿದ ಜಾನ್ ಇದೀಗ ಪೂರ್ಣ ಪ್ರಮಾಣದ ವಿಲನ್ ಆಗಿ ಬದಲಾಗಿದ್ದಾರೆ. ಅವರ ಸಿನಿ ಪಯಣ ಸಾಮಾನ್ಯದ್ದಲ್ಲ.

  'ಬಾಹುಬಲಿ; ದಿ ಬಿಗಿನಿಂಗ್' ಸಿನಿಮಾದಲ್ಲಿ ವಿಲನ್ ಕಾಲಕೇಯನ ಪಾತ್ರ ಎಲ್ಲರಿಗೂ ನೆನಪಿರುತ್ತದೆ. 'ನಿಮ್ಡಾ ದೂಸ್ರ ಟೆಲ್‌ ಮಿ' ಎಂದೆಲ್ಲ ಅಬ್ಬರಿಸುತ್ತಾ ಬಾಹುಬಲಿ, ಬಲ್ಲಾಳದೇವನ ಎದುರೇ ರಮ್ಯಾಕೃಷ್ಣಗೆ ಅವಾಚ್ಯ ಶುಬ್ದಗಳಿಂದ ನಿಂದಿಸುವ ದೃಶ್ಯವಂತೂ ಪಕ್ಕಾ ನೆನಪಿರುತ್ತದೆ. ಆ ದೃಶ್ಯದಲ್ಲಿ ಕಾಲಕೇಯನ ಹಿಂದೆ ಮೌನವಾಗಿ ನಿಂತಿರುವ ವ್ಯಕ್ತಿಯ ಪಾತ್ರ ಮಾಡಿದ್ದ ಜಾನ್ ಇದೀಗ ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆ ಆಗಿರುವ 'ಸರ್ಪಟ್ಟ ಪರಮ್‌ಬರೈ' ಸಿನಿಮಾದಲ್ಲಿ ವಿಲನ್. ಅವರ ಪಾತ್ರದ ಹೆಸರು ವೆಂಬುಲಿ.

  'ಬಾಹುಬಲಿ'ಯಲ್ಲಿ ಬಹಳ ಸಣ್ಣ ಪಾತ್ರ

  'ಬಾಹುಬಲಿ'ಯಲ್ಲಿ ಬಹಳ ಸಣ್ಣ ಪಾತ್ರ

  ಕಾಲಕೇಯನ ಹಿಂದೆ ತಾವು ಮೌನವಾಗಿ ನಿಂತಿರುವ ಚಿತ್ರವನ್ನು ಹಂಚಿಕೊಂಡಿರುವ ಜಾನ್ ಕೊಕ್ಕೆನ್, ''ಇದು ನನ್ನ ಉತ್ತರ. 'ಬಾಹುಬಲಿ'ಯಲ್ಲಿ ಸಣ್ಣ ಪಾತ್ರ ಮಾಡಿದ್ದೆ. ಆ ಶೂಟಿಂಗ್ ನಡೆಯುವ ದಿನದ ನೆನಪು ನನಗಿದೆ. ಅಲ್ಲಿ ಯಾರಿಗೂ ನನ್ನ ಹೆಸರು ಗೊತ್ತಿರಲಿಲ್ಲ. ಅಂದೇ ನನಗೆ ನಾನು ಹೇಳಿಕೊಂಡೆ, ನಾನೊಂದು ದಿನ ದೊಡ್ಡದಾಗಿ ಬೆಳೆಯುತ್ತೇನೆ. ಅಂದು ಎಲ್ಲರಿಗೂ ನನ್ನ ಹೆಸರು ನೆನಪಿರುತ್ತದೆ ಎಂದು. ಆ ದಿನ 'ಸರ್ಪಟ್ಟ ಪರಂಬರೈ' ಸಿನಿಮಾ ಮೂಲಕ ಬಂದಿತು'' ಎಂದಿದ್ದಾರೆ.

  'ಕೆಜಿಎಫ್' ನನ್ನ ಪಾತ್ರವನ್ನು ಗಮನಿಸಿರುವುದಿಲ್ಲ: ಜಾನ್

  'ಕೆಜಿಎಫ್' ನನ್ನ ಪಾತ್ರವನ್ನು ಗಮನಿಸಿರುವುದಿಲ್ಲ: ಜಾನ್

  ಅದೇ ಚಿತ್ರಕ್ಕೆ ಸಂಬಂಧಿಸಿದಂತೆ ಮತ್ತೊಂದು ಟ್ವೀಟ್ ಮಾಡಿರುವ ಜಾನ್, ''ಯಾವುದೂ ಅಸಾಧ್ಯವಲ್ಲ. ಆಸೆಗಳನ್ನು ಕೈಚೆಲ್ಲಬೇಡಿ. ನಿಮ್ಮ ಕನಸಿಗಾಗಿ ಹೋರಾಡಿ'' ಎಂದಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ತಾವು 'ಕೆಜಿಎಫ್; ಚಾಪ್ಟರ್ 1' ನಲ್ಲಿ ನಟಿಸಿರುವ ದೃಶ್ಯದ ಚಿತ್ರ ಹಂಚಿಕೊಂಡಿರುವ ಜಾನ್, ''ಈ ಸಿನಿಮಾವನ್ನು ಹಲವರು ನೋಡಿಯೇ ಇರುತ್ತೀರಿ. ಆದರೆ ನಾನು ಸಿನಿಮಾದಲ್ಲಿ ನಟಿಸಿದ್ದೀನಿ ಎಂಬುದನ್ನು ಗುರುತಿಸಿರುವುದಿಲ್ಲ. ನನ್ನ ಪಾತ್ರ 'ಕೆಜಿಎಫ್; ಚಾಪ್ಟರ್ 2'ನಲ್ಲಿಯೂ ಇದೆ. ನನ್ನದು ದೊಡ್ಡ ಪಾತ್ರವೇನೂ ಅಲ್ಲ ಆದರೆ ಮುಖ್ಯವಾದ ಪಾತ್ರ'' ಎಂದಿದ್ದಾರೆ ಜಾನ್.

  ಕೆಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ

  ಕೆಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ

  ಜಾನ್, ಕನ್ನಡದ 'ಕೆಜಿಎಫ್; ಚಾಪ್ಟರ್ 1', 'ಯುವರತ್ನ', 'ವಿಲನ್', 'ಕೆಜಿಎಫ್ 2' ಇನ್ನೂ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅತ್ಯುತ್ತಮ ದೇಹಧಾರ್ಡ್ಯ ಪಟುವಾಗಿರುವ ಹಾನ್ ಯೋಗ ಪಟುವೂ ಹೌದು. ತಮ್ಮ ಪತ್ನಿಯ ಜೊತೆಗೆ ಹಲವು ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಸಿನಿಮಾಗಳು ಮಾತ್ರವೇ ಅಲ್ಲದೆ ವೆಬ್ ಸರಣಿಯಲ್ಲಿಯೂ ಜಾನ್ ನಟಿಸಿದ್ದಾರೆ. ಜಾನ್ ನಟಿಸಿದ್ದ 'ರಾಮ್‌ಯುಗ್' ಹೆಸರಿನ ವೆಬ್ ಸರಣಿ ಮ್ಯಾಕ್ಸ್‌ ಪ್ಲೇಯರ್‌ನಲ್ಲಿ ಪ್ರಸಾರವಾಗಿತ್ತು.

  ರಾಜ್‌ಕುಮಾರ್ ಸಿನಿಮಾಗಳ ಉಡುಗೊರೆ ಪಡೆದಿರುವ ಜಾನ್

  ರಾಜ್‌ಕುಮಾರ್ ಸಿನಿಮಾಗಳ ಉಡುಗೊರೆ ಪಡೆದಿರುವ ಜಾನ್

  ಕನ್ನಡ ಸಿನಿಮಾಗಳಲ್ಲಿಯೂ ನಟಿಸಿರುವ ಜಾನ್ ಕನ್ನಡದ ಬಗ್ಗೆ ಹಾಗೂ ಡಾ.ರಾಜ್‌ಕುಮಾರ್ ಬಗ್ಗೆ ವಿಶೇಷ ಅಭಿಮಾನವನ್ನು ಹೊಂದಿದ್ದಾರೆ. ಪುನೀತ್ ರಾಜ್‌ಕುಮಾರ್‌ಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದ ಜಾನ್, ''ನನಗೆ ಕನ್ನಡ ಕಲಿಸಿದ ಪುನೀತ್‌ ರಾಜ್‌ಕುಮಾರ್‌ಗೆ ಧನ್ಯವಾದ ಹಾಗೂ ಅಪ್ಪಾಜಿ ಅವರ ಸಿನಿಮಾಗಳನ್ನು ಉಡುಗೊರೆಯಾಗಿ ನೀಡಿದ್ದ ನಾನು ಸದಾ ಋಣಿ'' ಎಂದಿದ್ದರು. ನಟ ಯಶ್‌ ಜೊತೆಗೂ ಹಲವು ಚಿತ್ರಗಳನ್ನು ಹಂಚಿಕೊಂಡಿದ್ದ ಜಾನ್ ಯಶ್ ಬಗ್ಗೆ ಒಳ್ಳೆಯ ಮಾತುಗಳನ್ನು ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

  English summary
  Actor Jhan Kokken shared a image from Bahubali movie in which he plays in a very small role. Now he is playing main villain character in movies.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X