twitter
    For Quick Alerts
    ALLOW NOTIFICATIONS  
    For Daily Alerts

    ಅಹೋರಾತ್ರ v/s ಸುದೀಪ್ ಅಭಿಮಾನಿಗಳು: ಯಾರದ್ದು ಸರಿ? ಯಾರದ್ದು ತಪ್ಪು?

    |

    ಜ್ಯೋತಿಷಿ, ಆಧ್ಯಾತ್ಮಿಕ ಚಿಂತಕ, ಬರಹಗಾರ ಅಹೋರಾತ್ರ ಅವರ ಮನೆ ಮೇಲೆ ಸುದೀಪ್ ಅಭಿಮಾನಿಗಳು ದಾಳಿ ಮಾಡಿದ ಸುದ್ದಿ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ.

    'ಸುದೀಪ್ ಅಭಿಮಾನಿಗಳು ನನ್ನನ್ನು ಕೊಲ್ಲಲು ಯತ್ನಿಸಿದರು', 'ಪೊಲೀಸರು ಪಕ್ಷಪಾತಿಗಳಾಗಿದ್ದಾರೆ' ಎಂದು ಅಹೋರಾತ್ರ ಆರೋಪಿಸಿದ್ದಾರೆ. ಮತ್ತೊಂದೆಡೆ, 'ಅಹೋರಾತ್ರ ಬರೀ ಸುಳ್ಳು ಹೇಳುತ್ತಿದ್ದಾರೆ, ನಮ್ಮ ಬಳಿ ಸಾಕ್ಷಿ ಇದೆ' ಎಂದು ಸುದೀಪ್ ಅಭಿಮಾನಿಗಳು ಹೇಳುತ್ತಿದ್ದಾರೆ. ಹಾಗಿದ್ದರೆ ಅಂದು ನಡೆದಿದ್ದು ಏನು? ಅಹೋರಾತ್ರ ಮನೆ ಮೇಲೆ ಸುದೀಪ್ ಅಭಿಮಾನಿಗಳು ದಾಳಿ ಮಾಡಲು ಕಾರಣ ಏನು? ಪ್ರಕರಣದಲ್ಲಿ ತಪ್ಪು ಯಾರದ್ದು?

    ಸುದೀಪ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿರುವ 'ಅಹೋರಾತ್ರ' ಯಾರು?ಸುದೀಪ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿರುವ 'ಅಹೋರಾತ್ರ' ಯಾರು?

    ಇದೆಲ್ಲವೂ ಪ್ರಾರಂಭವಾಗಿದ್ದು ಒಂದು ವರ್ಷಕ್ಕೂ ಹಿಂದೆ ಪ್ರಸಾರವಾಗಿದ್ದ ರಮ್ಮಿ ಸರ್ಕಲ್ ಜಾಹಿರಾತಿನಿಂದ. ರಮ್ಮಿ ಸರ್ಕಲ್ ಜಾಹೀರಾತಿನಲ್ಲಿ ನಟ ಸುದೀಪ್ ಅಭಿನಯಿಸಿದ್ದರು. ಇದನ್ನು ಖಂಡಿಸಿ ಅಹೋರಾತ್ರ ಫೇಸ್‌ಬುಕ್‌ನಲ್ಲಿ ಅಭಿಯಾನ ಪ್ರಾರಂಭಿಸಿದರು. ಒಳ್ಳೆಯ ಉದ್ದೇಶವಿದ್ದ ಈ ಫೇಸ್‌ಬುಕ್ ಅಭಿಯಾನಕ್ಕೆ ಹಲವರ ಬೆಂಬಲ ಸಹ ವ್ಯಕ್ತವಾಯಿತು. ಬೆಂಬಲ ಹೆಚ್ಚಾಗುತ್ತಿದ್ದಂತೆ ಅಭಿಯಾನವು ತುಸು ಹಾದಿತಪ್ಪಿದಂತಾಗಿ ರಮ್ಮಿ, ಜೂಜು ಎಲ್ಲವನ್ನೂ ಬಿಟ್ಟು ಸುದೀಪ್ ನಿಂದನೆ ಕಡೆಗೆ ತಿರುಗಿತು. ಸಮಸ್ಯೆ ಪ್ರಾರಂಭವಾಗಿದ್ದು ಇಲ್ಲಿಂದಲೇ.

    ಅಹೋರಾತ್ರ ವಿರುದ್ಧ ಪ್ರತಿದೂರು ದಾಖಲಿಸಿದ ಸುದೀಪ್ ಅಭಿಮಾನಿಗಳುಅಹೋರಾತ್ರ ವಿರುದ್ಧ ಪ್ರತಿದೂರು ದಾಖಲಿಸಿದ ಸುದೀಪ್ ಅಭಿಮಾನಿಗಳು

    ಆನ್‌ಲೈನ್ ಜೂಜು ವಿರೋಧಿಸಿ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಹಲವಾರು ಹೈಕೋರ್ಟ್, ಸುಪ್ರೀಂಕೋರ್ಟ್‌ಗಳ ಮೊರೆ ಹೋಗುತ್ತಿರುವ ಹೊತ್ತಿನಲ್ಲಿ ಅಹೋರಾತ್ರ ಅವರು ಫೇಸ್‌ಬುಕ್‌ನಲ್ಲಿ ರಮ್ಮಿ ಜಾಹೀರಾತಿನಲ್ಲಿ ಅಭಿನಯಿಸಿದ ನಟ-ನಟಿಯರ ವಿರುದ್ಧ ಫೇಸ್‌ಬುಕ್‌ ಪೋಸ್ಟ್‌ಗಳನ್ನು ಹಾಕುವುದರಲ್ಲಿ ನಿರತರಾಗಿದ್ದರು. ಇವರ ಪೋಸ್ಟ್‌ಗಳು ರಮ್ಮಿ ಜಾಹೀರಾತಿನಲ್ಲಿ ನಟಿಸಿದ್ದ ನಟ-ನಟಿಯರ ವಿರುದ್ಧ ಮಾತ್ರವೇ ಇರುತ್ತಿತ್ತು, ಜೂಜು ಆಡಿಸುವ ಸಂಸ್ಥೆ, ಆಡಿಸಲು ಅವಕಾಶ ಕೊಟ್ಟ ಸರ್ಕಾರಗಳ ವಿರುದ್ಧ ಚಕಾರವೆತ್ತುತ್ತಿರಲಿಲ್ಲ ಎಂಬುದು ಗಮನಿಸಬೇಕಾದ ಅಂಶ. ಅದರಲ್ಲಿಯೂ ಸುದೀಪ್ ಅವರ ಹೆಸರನ್ನು ಪರೋಕ್ಷವಾಗಿ ಬಳಸಿ ಕೆಣಕುವ, ವ್ಯಂಗ್ಯದ ಪೋಸ್ಟ್‌ಗಳನ್ನು ಪ್ರತಿದಿನ ಮಾಡುತ್ತಿದ್ದರು ಅಹೋರಾತ್ರ. ರಮ್ಮಿ ಸರ್ಕಲ್ ಸಂಸ್ಥೆಯ ವಿರುದ್ಧ ಅವರು ಒಂದು ಪೋಸ್ಟ್ ಸಹ ಹಾಕದಿರುವುದು ಹಾಗೂ ಅವರ ಅಭಿಯಾನ ಕೇವಲ 'ಸುದೀಪ್ ನಿಂದನೆ'ಗೆ ಸೀಮಿತವಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಇದು ಸುದೀಪ್ ಅಭಿಮಾನಿಗಳನ್ನು ಕೆರಳಿಸಿತು.

    ಅಹೋರಾತ್ರಗೆ ಕರೆ ಮಾಡಿ ತೆಗಳಿ, ಬೆದರಿಕೆ ಹಾಕಿದ ಸುದೀಪ್ ಅಭಿಮಾನಿಗಳು

    ಅಹೋರಾತ್ರಗೆ ಕರೆ ಮಾಡಿ ತೆಗಳಿ, ಬೆದರಿಕೆ ಹಾಕಿದ ಸುದೀಪ್ ಅಭಿಮಾನಿಗಳು

    ಅಹೋರಾತ್ರ ಅವರ 'ಸುದೀಪ್ ನಿಂದನೆ'ಯಿಂದ ಕೆರಳಿದ ಅಭಿಮಾನಿಗಳು ರಾಜ್ಯದ ಹಲವೆಡೆಗಳಿಂದ ಅಹೋರಾತ್ರ ಅವರಿಗೆ ಕರೆ ಮಾಡಲು ಆರಂಭಿಸಿದರು. ಅಭಿಮಾನಿಗಳು ಅಹೋರಾತ್ರರನ್ನು ಬೈದರು, ತೆಗಳಿದರು ಕೆಲವರು ಬೆದರಿಕೆಯನ್ನೂ ಹಾಕಿದರು. ತಮಗೆ ಬಂದ ಬಹುತೇಕ ಕರೆಗಳನ್ನು ಸ್ವೀಕರಿಸುತ್ತಿದ್ದ ಅಹೋರಾತ್ರ ಅವುಗಳನ್ನೆಲ್ಲಾ ರೆಕಾರ್ಡ್ ಮಾಡಿಕೊಂಡು ಎಲ್ಲವನ್ನೂ ಫೇಸ್‌ಬುಕ್‌ನಲ್ಲಿ ಕ್ಯಾಪ್ಷನ್ ಜೊತೆಗೆ ಪ್ರಕಟಿಸಿದರು. ಸುದೀಪ್ ಅಭಿಮಾನಿಗಳು ಬೆದರಿಕೆ ಹಾಕುತ್ತಿದ್ದಾರೆ, ನಿಂದನೆ ಮಾಡುತ್ತಿದ್ದಾರೆ ಎಂದು ಫೇಸ್‌ಬುಕ್‌ನಲ್ಲಿ ಅವಲತ್ತುಕೊಂಡರು.

    ಜಾಕ್ ಮಂಜು ಕರೆ ಮಾಡಿ ವಿಷಯ ತಿಳಿಸುವ ಯತ್ನ ಮಾಡಿದರು

    ಜಾಕ್ ಮಂಜು ಕರೆ ಮಾಡಿ ವಿಷಯ ತಿಳಿಸುವ ಯತ್ನ ಮಾಡಿದರು

    ಈ ನಡುವೆ ಸುದೀಪ್ ಅವರ ಮ್ಯಾನೇಜರ್ ಜಾಕ್ ಮಂಜು ಅವರು ಅಹೋರಾತ್ರ ಅವರಿಗೆ ಕರೆ ಮಾಡಿ ವಿಷಯ ಮನದಟ್ಟು ಮಾಡುವ ಪ್ರಯತ್ನ ಮಾಡಿದರು. 'ರಮ್ಮಿ ಸರ್ಕಲ್ ಅನ್ನು ಸುಪ್ರೀಂಕೋರ್ಟ್ 'ಸ್ಕಿಲ್ಡ್ ಗೇಮ್' ಎಂದು ಹೇಳಿ ಅದನ್ನು ಆನ್‌ಲೈನ್‌ನಲ್ಲಿ, ಆಫ್‌ಲೈನ್‌ನಲ್ಲಿ ಆಡಲು ಅನುಮತಿ ನೀಡಿದೆ. ಅಷ್ಟೇ ಅಲ್ಲದೆ ರಮ್ಮಿ ಸರ್ಕಲ್ ಜೊತೆ ಸುದೀಪ್ ಅವರು ಒಪ್ಪಂದ ಎರಡು ತಿಂಗಳಲ್ಲಿ ಮುಗಿದು ಹೋಗುತ್ತದೆ. ಆ ನಂತರ ಅವರು ಜಾಹೀರಾತಿನಲ್ಲಿ ನಟಿಸುವುದಿಲ್ಲ' ಎಂದು ಹೇಳಿದರು. ಆದರೆ ಅಹೋರಾತ್ರ, ಈ ಶಾಂತಿ ಮಾತುಕತೆಗೆ ಒಪ್ಪದೇ ಆ ಮಾತುಕತೆಯನ್ನು ಫೇಸ್‌ಬುಕ್‌ನಲ್ಲಿ ತಪ್ಪು ಮಾಹಿತಿಯೊಂದಿಗೆ ಹಂಚಿಕೊಂಡರು. ನಂತರ ಬಿಗ್‌ಬಾಸ್ ದಿವಾಕರ್ ಇನ್ನೂ ಕೆಲವರು ಅಹೋರಾತ್ರಗೆ ಕರೆ ಮಾಡಿ ಮಾತನಾಡಿದರು ಎಲ್ಲವನ್ನೂ ಅಹೋರಾತ್ರ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದರು. ಸಿಂಪತಿ ಗಿಟ್ಟಿಸಿಕೊಳ್ಳಲು ಹೀಗೆ ಮಾಡುತ್ತಿದ್ದಾರೆ ಎಂದು ಹಲವರು ಕಮೆಂಟ್ ಮಾಡಿದ್ದರು. ಅವರು ವಿಡಿಯೋಗಳಲ್ಲಿ ಆಡುತ್ತಿದ್ದ ಮಾತುಗಳೂ ಸಹ ಇದಕ್ಕೆ ಪುರಾವೆ ಒದಗಿಸುತ್ತಿದ್ದವು.

    ಅಹೋರಾತ್ರನ ಮನೆಗೆ ನುಗ್ಗಿದ್ದೇಕೆ? ಅಲ್ಲಿ ನಡೆದಿದ್ದು ಏನು? ಕಾರಣ ಹೇಳಿದ ಸುದೀಪ್ ಅಭಿಮಾನಿಅಹೋರಾತ್ರನ ಮನೆಗೆ ನುಗ್ಗಿದ್ದೇಕೆ? ಅಲ್ಲಿ ನಡೆದಿದ್ದು ಏನು? ಕಾರಣ ಹೇಳಿದ ಸುದೀಪ್ ಅಭಿಮಾನಿ

    ಜಾಹೀರಾತು ನಿಂತರೂ ನಿಲ್ಲಲಿಲ್ಲ ಸುದೀಪ್ ನಿಂದನೆ

    ಜಾಹೀರಾತು ನಿಂತರೂ ನಿಲ್ಲಲಿಲ್ಲ ಸುದೀಪ್ ನಿಂದನೆ

    ನಂತರ ಸುದೀಪ್ ಅವರು ಆನ್‌ಲೈನ್ ಜಾಹೀರಾತಿನಲ್ಲಿ ಅಭಿನಯಿಸುವುದು ನಿಲ್ಲಿಸಿದರು. ಅವರ ಒಪ್ಪಂದ ಮುಗಿಯಿತು. ಆದರೆ ಅಹೋರಾತ್ರ ಅವರು ತಮ್ಮ 'ಸುದೀಪ್ ನಿಂದನೆ' ಬಿಡಲಿಲ್ಲ. ಸುದೀಪ್ ಅವರು ಬಹಿರಂಗವಾಗಿ ಕಾಣಿಸಿಕೊಂಡಾಗಲೆಲ್ಲಾ ಸುದೀಪ್ ವಿರುದ್ಧ ಒಮ್ಮೆಲೆ ಹಲವು ನಿಂದನಾತ್ಮಕ ಪೋಸ್ಟ್‌ಗಳನ್ನು ಹಾಕುತ್ತಿದ್ದರು. ಭುರ್ಜ್ ಖಲೀಫಾ ಮೇಲೆ ವಿಕ್ರಾಂತ್ ರೋಣ ಟೀಸರ್ ಬಿಡುಗಡೆ ಮಾಡಿದಾಗ. 'ಕೋಟಿಗೊಬ್ಬ' ಆಡಿಯೋ ಬಿಡುಗಡೆ ಮಾಡಿದಾಗ. ಲಾಕ್‌ಡೌನ್ ಸಮಯದಲ್ಲಿ ಕಾರ್ಮಿಕರಿಗೆ ಸಹಾಯ ಮಾಡಿದಾಗ, ಶಾಲೆ ದತ್ತು ಪಡೆದಾಗ, ಮೊನ್ನೆ ಸಿಎಂ ಯಡಿಯೂರಪ್ಪ ಜೊತೆಗೆ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಾಗ ಹೀಗೆ ಸುದೀಪ್ ಬಹಿರಂಗವಾಗಿ ಕಾಣಿಸಿಕೊಂಡಾಗಲೆಲ್ಲ ಅಹೋರಾತ್ರ ಅವರು ಯಾರೋ ಕೀಲಿ ಕೊಟ್ಟಂತೆ ಸುದೀಪ್ ನಿಂದನೆಗೆ ಫೇಸ್‌ಬುಕ್‌ನಲ್ಲಿ ಹಾಜರಾಗುತ್ತಿದ್ದರು.

    ಉತ್ಪ್ರೇಕ್ಷಿತ ಆರೋಪಗಳನ್ನು ಅಹೋರಾತ್ರ ಮಾಡಿದರು

    ಉತ್ಪ್ರೇಕ್ಷಿತ ಆರೋಪಗಳನ್ನು ಅಹೋರಾತ್ರ ಮಾಡಿದರು

    ನಾಲ್ಕೈದು ದಿನಗಳ ಹಿಂದೆ ಅಹೋರಾತ್ರ ಅವರು ವಿಡಿಯೋ ಒಂದನ್ನು ಪ್ರಕಟಿಸಿದ್ದರು. ಆ ವಿಡಿಯೋದಲ್ಲಿ ನೇರವಾಗಿ ಸುದೀಪ್ ಬಗ್ಗೆ ಮಾತನಾಡಿದ್ದರು. ಸುದೀಪ್ ಅವರಿಂದ ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಅವರ ಅಭಿಮಾನಿಗಳಿಂದಾಗಿ ಹೆಣ್ಣು ಮಕ್ಕಳು ಧೈರ್ಯವಾಗಿ ಓಡಾಡದಂತಾಗಿದೆ ಎಂದೆಲ್ಲಾ ತಸು ಉತ್ರ್ಪೇಕ್ಷೆ ಎನಿಸಬಹುದಾದ ರೀತಿ ಮಾತನಾಡಿದ್ದರು. ಸುದೀಪ್ ಅವರು ಹಿಟ್ಲರ್ ಅಂತೆ ವರ್ತಿಸುತ್ತಾರೆ ಎಂದೆಲ್ಲಾ ಏಕವಚನದಲ್ಲಿ ಮಾತನಾಡಿದ್ದರು. ಅಲ್ಲದೆ ಕೆಲವು ದಿನಗಳ ಹಿಂದೆ ಸುದೀಪ್ ಅನ್ನು ಬೈದಿದ್ದ ದರ್ಶನ್ ಅಭಿಮಾನಿಗೆ ಸುದೀಪ್ ಅಭಿಮಾನಿಗಳು ಬುದ್ಧಿ ಹೇಳಿದ ವಿಷಯವನ್ನೂ ಎಳೆದು ತಂದರು. ಜೊತೆಗೆ ತಾವು ಕರ್ನಾಟಕಕ್ಕೆ ಬರುತ್ತಿರುವುದಾಗಿಯೂ ವಿಡಿಯೋದಲ್ಲಿ ಚಾಲೆಂಜ್ ನೀಡಿದರು.

    ಪೊಲೀಸರ ತನಿಖೆ ಮೇಲೆ ಅಹೋರಾತ್ರ ಅನುಮಾನ: ಸುದೀಪ್ ಬಂಧಿಸಲು ಆಗ್ರಹಪೊಲೀಸರ ತನಿಖೆ ಮೇಲೆ ಅಹೋರಾತ್ರ ಅನುಮಾನ: ಸುದೀಪ್ ಬಂಧಿಸಲು ಆಗ್ರಹ

    ಕ್ಷಮಾಪಣೆ ಕೇಳಿಸಲು ಮನೆಗೆ ನುಗ್ಗಿದ ಅಭಿಮಾನಿಗಳು

    ಕ್ಷಮಾಪಣೆ ಕೇಳಿಸಲು ಮನೆಗೆ ನುಗ್ಗಿದ ಅಭಿಮಾನಿಗಳು

    ಇದಕ್ಕಾಗಿಯೇ ಕಾಯುತ್ತಿದ್ದ ಸುದೀಪ್ ಅಭಿಮಾನಿಗಳು ಸತತವಾಗಿ ಸುದೀಪ್ ನಿಂದನೆ ಮಾಡುತ್ತಿದ್ದ ವ್ಯಕ್ತಿಗೆ ಬುದ್ಧಿ ಕಲಿಸಬೇಕೆಂದು ಅಹೋರಾತ್ರನ ಮನೆಗೆ ನುಗ್ಗಿದರು. ಅಲ್ಲಿ ಅಹೋರಾತ್ರನ ಅನುಯಾಯಿಗಳು ಹಾಗೂ ಸುದೀಪ್ ಅಭಿಮಾನಿಗಳ ನಡುವೆ ಸಾಕಷ್ಟು ನೂಕಾಟ-ತಳ್ಳಾಟ ಆಗಿದೆ. 'ನಾವು ಜಗಳ ಮಾಡಲು ಬಂದಿಲ್ಲ' ಎಂದು ಸುದೀಪ್ ಅಭಿಮಾನಿ ಬಳಗದ ಅಧ್ಯಕ್ಷ ಕೂಗುತ್ತಿರುವುದು, ಜಗಳ ಬೇಡ ಎಂದು ಅಹೋರಾತ್ರ ಅನುಯಾಯಿಗಳು ಕೂಗುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಆದರೆ ಸುದೀಪ್ ಅಭಿಮಾನಿಗಳು ಮನೆಯಿಂದ ಹೊರಗೆ ಹೋದ ಬಳಿಕ ಅಹೋರಾತ್ರ ಹಾಗೂ ಅವರ ಅನುಯಾಯಿಗಳು ಸುದೀಪ್ ಬಗ್ಗೆ ಬಹು ಅವಾಚ್ಯವಾಗಿ ಮಾತನಾಡಿರುವುದು ವಿಡಿಯೋದಲ್ಲಿ ಕಾಣುತ್ತಿದೆ. ನಂತರ ಮಾರನೇಯ ದಿನ ಅಹೋರಾತ್ರ ಮಾಡಿದ ವಿಡಿಯೋದಲ್ಲಿ ಸುದೀಪ್ ಅಭಿಮಾನಿಗಳು ಪೊಲೀಸರನ್ನು ಬೈದರೆಂದು ಎತ್ತಿಕಟ್ಟುತ್ತಿರುವುದು ಸಹ ಗೊತ್ತಾಗುತ್ತಿದೆ.

    ದೂರು, ಪ್ರತಿದೂರು ದಾಖಲಾಗಿದೆ

    ದೂರು, ಪ್ರತಿದೂರು ದಾಖಲಾಗಿದೆ

    ಪ್ರಕರಣ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಅಹೋರಾತ್ರ ಅವರು ಸುದೀಪ್ ಅಭಿಮಾನಿಗಳ ವಿರುದ್ಧ ದೂರು ಸಲ್ಲಿಸಿದ್ದಾರೆ. ಸುದೀಪ್ ಅಭಿಮಾನಿಗಳು ಸಹ ಅಹೋರಾತ್ರ ಮೇಲೆ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಈ ಕುರಿತಂತೆ ಎಫ್‌ಐಆರ್ ದಾಖಲಿಸುವುದಾಗಿ ಚೆನ್ನಮ್ಮನ ಅಚ್ಚುಕಟ್ಟು ಪ್ರದೇಶ ಪೊಲೀಸ್ ಠಾಣೆ ಉಪನೀರೀಕ್ಷಿಕರು ಹೇಳಿದ್ದಾರೆ. ಪ್ರಕರಣದ ಬಗ್ಗೆ ಪೂರ್ಣ ತನಿಖೆ ಆಗಬೇಕಿದೆ. ತಪ್ಪು ಯಾರದ್ದೆಂದು ಹೊರಗೆ ಬರಬೇಕಿದೆ.

    English summary
    Why Ahorathra is angry about Sudeep. Why Sudeep Fans attacked Ahorathra's house in Bengaluru. Who is right and who is wrong.
    Tuesday, March 23, 2021, 13:54
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X