Don't Miss!
- Sports
ಶುಭ್ಮನ್ ಗಿಲ್ಗಿದೆ ಶಿಖರ್ ಧವನ್ರ ಈ 3 ದಾಖಲೆ ಮುರಿಯುವ ಅವಕಾಶ
- News
ಬಿಬಿಎಂಪಿಯಿಂದ ಫೆಬ್ರುವರಿ. 2 ರಿಂದ 5 ರವರೆಗೆ 'ಖಾತಾ ಮೇಳ' ಆಯೋಜನೆ
- Lifestyle
ಈ ಚಿಕ್ಕ ಬದಲಾವಣೆ ಮಾಡಿದರೆ ಸಾಕು ತೂಕ ಕಡಿಮೆಯಾಗುವುದು
- Technology
WhatsApp: ವಾಟ್ಸಾಪ್ ಮ್ಯಾಕ್ಒಎಸ್ MacOS ಆ್ಯಪ್ ಬಿಡುಗಡೆ! ಇದನ್ನು ಬಳಸುವುದು ಹೇಗೆ?
- Finance
Budget 2023: ಹಲ್ವಾ ಸಮಾರಂಭ ಎಂದರೇನು, ಪ್ರಾಮುಖ್ಯತೆಯೇನು?
- Automobiles
ಬೊಲೆರೊ ನಿಯೋ ಲಿಮಿಟೆಡ್ ಎಡಿಷನ್ ಕುರಿತ ಟಾಪ್ ವಿಷಯಗಳಿವು
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ದಕ್ಷಿಣದ ಸಿನಿಮಾಗಳ ಮೇಲೆ ಅಸಹನೆ ತೋರಿದ ಅಜಯ್, ದಕ್ಷಿಣದಿಂದ ಕದ್ದಿರುವ ಸಿನಿಮಾಗಳ ಪಟ್ಟಿ ಇಲ್ಲಿದೆ
ನಟ ಅಜಯ್ ದೇವಗನ್ ದಕ್ಷಿಣ ಭಾರತ ಚಿತ್ರರಂಗದ ಮೇಲೆ ತಮ್ಮ ಅಸಹನೆ ವ್ಯಕ್ತಪಡಿಸಿದ್ದಾರೆ. ಹಿಂದಿ ರಾಷ್ಟ್ರಭಾಷೆಯಲ್ಲ ಎಂದ ಸುದೀಪ್ ಮಾತಿಗೆ ವಿರೋಧ ವ್ಯಕ್ತಪಡಿಸುತ್ತಾ, 'ನಿಮ್ಮ ಸಿನಿಮಾಗಳನ್ನು ಹಿಂದಿಯಲ್ಲಿ ಡಬ್ ಮಾಡಬೇಡಿ' ಎಂದು ಹೇಳಿದ್ದಾರೆ.
Recommended Video

ಹಿಂದಿ ಭಾಷೆಗೆ ಡಬ್ ಮಾಡಬೇಕೊ ಬೇಡವೊ ಎಂದು ಹೇಳಲು ಅಜಯ್ ದೇವಗನ್ ಯಾರೂ ಅಲ್ಲ. ಹಿಂದಿ ಭಾಷೆಗೆ ಡಬ್ ಮಾಡಬೇಡಿ ಎಂದ ಅಜಯ್ ದೇವಗನ್ ಅಸಲಿಗೆ ಎಷ್ಟು ದಕ್ಷಿಣ ಭಾರತದ ಸಿನಿಮಾಗಳನ್ನು ರೀಮೇಕ್ ಮಾಡಿದ್ದಾರೆ ಗೊತ್ತೆ?
ಕಿಚ್ಚನ
ಬೆಂಬಲಕ್ಕೆ
ನಿಂತ
ಕನ್ನಡ
ನಟ-ನಟಿಯರು
ಯಾರು?
ಅಸಲಿಗೆ ತಮ್ಮ ವೃತ್ತಿ ಜೀವನದ ಆರಂಭದಿಂದಲೂ ದಕ್ಷಿಣ ಭಾರತ ಸಿನಿಮಾಗಳನ್ನು ರೀಮೇಕ್ ಮಾಡಿಕೊಂಡೆ ಬೆಳೆದು ಬಂದಿರುವ ನಟ ಅಜಯ್ ದೇವಗನ್. ಆದರೆ ಇಂದು ದಕ್ಷಿಣ ಭಾರತ ಸಿನಿಮಾಗಳನ್ನು ಹಿಂದಿಗೆ ಡಬ್ ಮಾಡಬೇಡಿ ಎನ್ನುತ್ತಿದ್ದಾರೆ. ಹಾಗಿದ್ದರೆ ಅಜಯ್ ನಟಿಸಿರುವ ಯಾವ ಯಾವ ಸಿನಿಮಾಗಳು ದಕ್ಷಿಣ ಭಾರತ ಸಿನಿಮಾಗಳ ರೀಮೇಕ್ ಎಂಬುದನ್ನು ಇಲ್ಲಿ ನೋಡಿ...

ಅಜಯ್ ನಟಿಸಿದ ಮೊದಲ ಸಿನಿಮಾ ತಮಿಳು ಸಿನಿಮಾದ ರೀಮೇಕ್
ಅಜಯ್ ದೇವಗನ್ ಬಾಲನಟನಾಗಿ ನಟಿಸಿದ ಮೊದಲ ಸಿನಿಮಾ 'ಪ್ಯಾರಿ ಬೆಹನಾ' ತಮಿಳಿನ 'ಮುಲ್ಲಮ್ ಮುಲ್ಲ' ಸಿನಿಮಾದ ರೀಮೇಕ್ ಆಗಿದೆ. ಅಜಯ್ ದೇವಗನ್ ನಾಯಕನಾಗಿ ಎಂಟ್ರಿ ಕೊಟ್ಟು ಸೂಪರ್ ಡೂಪರ್ ಹಿಟ್ ಆದ ಆ ಮೂಲಕ ಅಜಯ್ ದೇವಗನ್ ಚಿತ್ರರಂಗದಲ್ಲಿ ನೆಲೆ ನಿಲ್ಲಲು ಕಾರಣವಾದ ಸಿನಿಮಾ 'ಫೂಲ್ ಔರ್ ಕಾಂಟೆ' ಮಲಯಾಳಂ ಸಿನಿಮಾ 'ಪರಂಪರಾ'ದ ರೀಮೇಕ್ ಆಗಿದೆ. ಅಜಯ್ ದೇವಗನ್ ಸಿನಿಮಾ ಜೀವನದ ಮತ್ತೊಂದು ಸೂಪರ್ ಹಿಟ್ ಸಿನಿಮಾ 'ದೀವಾನಗಿ' ತಮಿಳಿನ 'ಕಾದಲ್ ಕಿರುಕ್ಕುನ್' ಸಿನಿಮಾದ ರೀಮೇಕ್. ಇದು 'ಪ್ರೀಮಲ್ ಫಿಯರ್' ಎಂಬ ಇಂಗ್ಲೀಷ್ ಸಿನಿಮಾದಿಂದ ಸ್ಪೂರ್ತಿ ಪಡೆದ ಸಿನಿಮಾ ಎಂದೂ ಹೇಳಲಾಗುತ್ತದೆ.

ಹಲವು ತಮಿಳು ಸಿನಿಮಾಗಳನ್ನು ಕದ್ದಿದ್ದಾರೆ ಅಜಯ್
ಅಜಯ್ ದೇವಗನ್ ವೃತ್ತಿ ಜೀವನದ ಭಿನ್ನ ಸಿನಿಮಾಗಳಲ್ಲಿ ಒಂದಾದ 'ಯುವ' ತಮಿಳಿನ 'ಆಯತ್ತು ಇಜುತ್ತು' ಸಿನಿಮಾದ ರೀಮೇಕ್ ಈ ಸಿನಿಮಾವನ್ನು ತಮಿಳಿನ ಮಣಿರತ್ನಂ ನಿರ್ದೇಶನ ಮಾಡಿದ್ದರು. ಅಜಯ್ ದೇವಗನ್ ನಟಿಸಿದ್ದ 'ಇನ್ಸಾನ್' ಸಿನಿಮಾ ತೆಲುಗಿನಲ್ಲಿ ಪ್ರಕಾಶ್ ರೈ, ರವಿತೇಜ ನಟಿಸಿದ್ದ 'ಖಡ್ಗಂ' ಸಿನಿಮಾದ ರೀಮೇಕ್.
ಅಜಯ್‌ರ ಮತ್ತೊಂದು ಹಿಟ್ ಸಿನಿಮಾ 'ಜಮೀರ್' ಮಲಯಾಳಂನ ಮಜಯೇತ್ತುಮ್ ಮುನ್ಪೆ ಸಿನಿಮಾದ ರೀಮೇಕ್. ಅಜಯ್ ದೇವಗನ್‌ಗೆ ಕಾಮಿಡಿ ನಟನ ಶೇಡ್ ನೀಡಿದ 'ಗೋಲ್ ಮಾಲ್' ಸಿನಿಮಾ ಮಲಯಾಳಂನ 'ಕಕ್ಕಕುಯಿಲ್' ಸಿನಿಮಾದ ರೀಮೇಕ್. ಅಜಯ್, ಅರ್ಷದ್ ವಾರ್ಸಿ ಜೊತೆ ನಟಿಸಿದ 'ಸಂಡೇ' ಸಿನಿಮಾ ತೆಲುಗಿನ 'ಅನುಕೋಕುಂಡ ಒಕ ರೋಜು' ಸಿನಿಮಾದ ಯಥಾವತ್ತು ರೀಮೇಕ್.

ಕನ್ನಡ ಸಿನಿಮಾಗಳನ್ನೂ ರೀಮೇಕ್ ಮಾಡಿದ್ದಾರೆ
ಕನ್ನಡದ ಸಿನಿಮಾಗಳನ್ನೂ ರೀಮೇಕ್ ಮಾಡಿದ್ದಾರೆ ಅಜಯ್ ದೇವಗನ್. ಅವರ ನಟನೆಯ 'ಆಲ್ ದಿ ಬೆಸ್ಟ್' ಸಿನಿಮಾ 'ಗಲಾಟೆ ಸಂಸಾರ' ಸಿನಿಮಾದ ರೀಮೇಕ್. 'ಸನ್ ಆಫ್ ಸರ್ದಾರ್' ಹೆಸರಿನ ಸಿನಿಮಾದಲ್ಲಿ ಅಜಯ್ ನಟಿಸಿದ್ದು ಆ ಸಿನಿಮಾ ಎಸ್.ನಾರಾಯಣ್ ನಟನೆಯ 'ಬಲಗಾಲಿಟ್ಟು ಒಳಗೆ ಬಾ' ಸಿನಿಮಾದ ರೀಮೇಕ್. 'ರೆಡಿ' ಸಿನಿಮಾದಲ್ಲಿ ಅಜಯ್‌ರದ್ದು ಅತಿಥಿ ಪಾತ್ರ, ಆ ಸಿನಿಮಾವನ್ನು ತೆಲುಗಿನಿಂದ ಎತ್ತಿಕೊಳ್ಳಲಾಗಿದೆ. ಹೆಸರೂ ಸಹ ಬದಲಿಸದೇ ರೀಮೇಕ್ ಮಾಡಿದ್ದಾರೆ ಸಲ್ಮಾನ್ ಖಾನ್.

ದಕ್ಷಿಣ ಭಾರತದ ಸಿನಿಮಾಗಳನ್ನೇ ಹೆಚ್ಚಾಗಿ ರೀಮೇಕ್ ಮಾಡಿದ್ದಾರೆ
ಇನ್ನು ಅಜಯ್‌ಗೆ ಮತ್ತೆ ಆಕ್ಷನ್ ಸ್ಟಾರ್ ಪಟ್ಟ ಕೊಟ್ಟ 'ಸಿಂಘಂ' ಸಿನಿಮಾ ತಮಿಳಿನ 'ಸಿಂಗಂ' ಸಿನಿಮಾದ ಅಪ್ಪಟ ರೀಮೇಕ್. ಅಜಯ್ ನಟಿಸಿರುವ 'ಹಿಮ್ಮತ್‌ವಾಲಾ' ಸಿನಿಮಾ ತೆಲುಗಿನ 'ಊರಿಕಿ ಮನಗಾಡು' ಸಿನಿಮಾದ ಸೀನ್ ಟು ಸೀನ್ ರೀಮೇಕ್. 'ಸಿಂಘಂ ರಿಟರ್ನ್ಸ್' ಸಿನಿಮಾ 'ಏಕಲವ್ಯನ್' ತಮಿಳು ಸಿನಿಮಾದ ರೀಮೇಕ್. ಸೂಪರ್ ಹಿಟ್ ಸಿನಿಮಾ 'ದೃಶ್ಯಂ' ಸಿನಿಮಾ ಮಲಯಾಳಂನ 'ದೃಶ್ಯಂ' ಸಿನಿಮಾದ ರೀಮೇಕ್ ಎಂಬುದನ್ನು ಬಿಡಿಸಿ ಹೇಳುವ ಅವಶ್ಯಕತೆ ಇಲ್ಲ. ಇನ್ನು ಅಜಯ್ ಅತಿಥಿ ಪಾತ್ರದಲ್ಲಿ ನಟಿಸಿರುವ 'ಸಿಂಭ' ಸಿನಿಮಾ ತೆಲುಗಿನಲ್ಲಿ ಜೂ ಎನ್‌ಟಿಆರ್ ನಟಿಸಿರುವ 'ಟೆಂಪರ್' ಸಿನಿಮಾದ ರೀಮೇಕ್. ಬಳಿಕ ಈಗ ನಟಿಸುತ್ತಿರುವ 'ದೃಶ್ಯಂ 2' ಸಿನಿಮಾ ಮಲಯಾಳಂನ 'ದೃಶ್ಯಂ 2' ಸಿನಿಮಾದ ರೀಮೇಕ್. ಇವುಗಳಷ್ಟೆ ಅಲ್ಲದೆ, ಮರಾಠಿ ಹಾಗೂ ಇಂಗ್ಲೀಷ್‌ನ ಹಲವಾರು ಸಿನಿಮಾಗಳನ್ನು ರೀಮೇಕ್ ಮಾಡಿ ಯಶಸ್ಸು ಗಳಿಸಿದ್ದಾರೆ ಅಜಯ್ ದೇವಗನ್.

ಯಶಸ್ಸಿಗೆ ದಕ್ಷಿಣ ಭಾರತ ಚಿತ್ರರಂಗದ ಮೇಲೆ ಅವಲಂಬಿತ ಅಜಯ್
ಇದು ಮಾತ್ರವೇ ಅಲ್ಲದೆ ದಕ್ಷಿಣ ಭಾರತದ ನಿರ್ದೇಶಕರೊಟ್ಟಿಗೆ ಕೆಲಸ ಮಾಡಿ ಸಾಕಷ್ಟು ಯಶಸ್ಸನ್ನು ಅಜಯ್ ಬಾಲಿವುಡ್‌ನಲ್ಲಿ ಪಡೆದಿದ್ದಾರೆ. ಅಜಯ್ ನಟನೆಯ ಸೂಪರ್ ಹಿಟ್ ಸಿನಿಮಾ 'ಜಂಗ್' ಅನ್ನು ನಿರ್ದೇಶಿಸಿದ್ದು ತೆಲುಗಿನ ಟಿ ರಾಮಾರಾವ್. ಅಜಯ್‌ರ ಸೂಪರ್ ಹಿಟ್ ಸಿನಿಮಾ 'ಕಂಪೆನಿ' ನಿರ್ದೇಶಿಸಿದ್ದು ತೆಲುಗಿನ ರಾಮ್ ಗೋಪಾಲ್ ವರ್ಮಾ. ವರ್ಮಾ ಅವರೇ ಅಜಯ್‌ಗಾಗಿ 'ಭೂತ್' ಸಿನಿಮಾ ಸಹ ಮಾಡಿದರು ಆ ಸಿನಿಮಾಗಳೂ ಸೂಪರ್ ಡೂಪರ್ ಹಿಟ್ ಆಗಿವೆ. ಹೀಗೆ ತಮ್ಮ ಯಶಸ್ಸಿಗೆ ದಕ್ಷಿಣ ಭಾರತ ಚಿತ್ರರಂಗದ ಮೇಲೆ ಅವಲಂಬಿತವಾಗಿರುವ ಅಜಯ್ ದೇವಗನ್ ಈಗ ದಕ್ಷಿಣದ ಸಿನಿಮಾಗಳನ್ನು ಹಿಂದಿಗೆ ಡಬ್ ಮಾಡಬೇಡಿ ಎನ್ನುತ್ತಿದ್ದಾರೆ. ಇದ್ಯಾವ ಸೀಮೆಯ ನ್ಯಾಯ?