For Quick Alerts
  ALLOW NOTIFICATIONS  
  For Daily Alerts

  2020: ಹೆಚ್ಚು ಹುಡುಕಲ್ಪಟ್ಟ ವಿಶ್ವದ ಟಾಪ್ 10 ನಟರಲ್ಲಿ ಒಬ್ಬ ಭಾರತೀಯ ನಟ!

  |

  ಭಾರತೀಯ ಚಿತ್ರರಂಗದ ವಿಶ್ವದ ಗಮನ ಸೆಳೆದು ವರ್ಷಗಳೇ ಕಳೆದಿವೆ. ವಿಶ್ವಸಿನಿಮಾ ರಂಗ ಭಾರತದ ಸಿನಿಮಾಗಳನ್ನು ಎರಡೂ ಕಣ್ಣುಬಿಟ್ಟು ಗಮನಿಸುತ್ತಿರುವ ಕಾಲವಿದು. ಹಾಲಿವುಡ್‌ನ ದೊಡ್ಡ ನಿರ್ಮಾಣ ಸಂಸ್ಥೆಗಳು ಭಾರತೀಯ ಸಿನಿಮಾಗಳ ಮೇಲೆ ಬಂಡವಾಳ ಹೂಡುತ್ತಿರುವುದು ಇದಕ್ಕೆ ಸಾಕ್ಷಿ.

  ವಿಶ್ವ ಸಿನಿಮಾ ರಂಗವನ್ನು ಮಾತ್ರವಲ್ಲ, ವಿಶ್ವ ಸಿನಿ ಪ್ರೇಕ್ಷಕರನ್ನೂ ಭಾರತೀಯ ಸಿನಿಮಾ ರಂಗ ಸೆಳೆಯುತ್ತಲೇ ಇದೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ, ಈ ವರ್ಷ ವಿಶ್ಯದಾದ್ಯಂತ ಗೂಗಲ್‌ ನಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ನಟರ ಪಟ್ಟಿಯಲ್ಲಿ ಭಾರತೀಯ ನಟರೊಬ್ಬರು ಸ್ಥಾನ ಪಡೆದಿದ್ದಾರೆ.

  2020ರಲ್ಲಿ ಹೆಚ್ಚು ಹುಡುಕಲ್ಪಟ್ಟ 10 ನಟಿಯರು: ಸನ್ನಿ ಲಿಯೋನ್‌ಗೆ ಎಷ್ಟನೇ ಸ್ಥಾನ?

  ಈ ವರ್ಷ ಅತಿ ಹೆಚ್ಚು ಹುಡುಕಲ್ಪಟ್ಟ ವ್ಯಕ್ತಿಗಳು, ನಟರು, ಸಿನಿಮಾಗಳು, ಸುದ್ದಿಗಳು, ವಿಷಯಗಳು, ವೆಬ್ ಸರಣಿಗಳ ಪಟ್ಟಿಯನ್ನು ಗೂಗಲ್ ಬಿಡುಗಡೆ ಮಾಡಿದ್ದು, ವಿಶ್ವದಲ್ಲಿ ಹೆಚ್ಚು ಹುಡುಕಲ್ಪಟ್ಟ ಟಾಪ್ 10 ನಟರಲ್ಲಿ ಭಾರತದ ಅಮಿತಾಬ್ ಬಚ್ಚನ್ ಸ್ಥಾನ ಪಡೆದಿದ್ದಾರೆ.

  ಮೂರನೇ ಸ್ಥಾನದಲ್ಲಿದ್ದಾರೆ ಅಮಿತಾಬ್

  ಮೂರನೇ ಸ್ಥಾನದಲ್ಲಿದ್ದಾರೆ ಅಮಿತಾಬ್

  ಹೌದು, ಬಾಲಿವುಡ್ ಸೂಪರ್ ಸ್ಟಾರ್, ನಟ ಅಮಿತಾಬ್ ಬಚ್ಚನ್ ಅವರು, ವಿಶ್ವದಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ಟಾಪ್ 10 ನಟರ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ. ಅದರಲ್ಲೂ ಈ ವರ್ಷದ ಜುಲೈ ತಿಂಗಳಲ್ಲಿ ಅಮಿತಾಬ್ ಬಚ್ಚನ್ ಬಗ್ಗೆ ಅತಿ ಹೆಚ್ಚು ಹುಡುಕಾಟ ನಡೆದಿದೆ ಗೂಗಲ್‌ನಲ್ಲಿ.

  ಹಲವು ದೇಶಗಳ ಜನ ಬಚ್ಚನ್ ಬಗ್ಗೆ ಹುಡುಕಿದ್ದಾರೆ

  ಹಲವು ದೇಶಗಳ ಜನ ಬಚ್ಚನ್ ಬಗ್ಗೆ ಹುಡುಕಿದ್ದಾರೆ

  ಭಾರತದಲ್ಲಿ ಅಮಿತಾಬ್ ಬಚ್ಚನ್ ಬಗ್ಗೆ ಹೆಚ್ಚು ಹುಡುಕಾಟ ನಡೆದಿದೆ. ಅದನ್ನು ಹೊರತುಪಡಿಸಿದರೆ, ಭೂತಾನ್, ನೇಪಾಳ, ಫಿಜಿ, ಮಾರಿಷನ್, ಮಾಲ್ಡೀವ್ಸ್, ಪಾಕಿಸ್ತಾನ, ಅರಬ್ ದೇಶಗಳ ಜನ ಹೆಚ್ಚ-ಹೆಚ್ಚು ಅಮಿತಾಬ್ ಬಚ್ಚನ್ ಬಗ್ಗೆ ಹುಡುಕಾಟ ನಡೆಸಿದ್ದಾರೆ.

  Yahoo 2020: ಅತಿ ಹೆಚ್ಚು ಹುಡುಕಲ್ಪಟ್ಟ ಸೆಲೆಬ್ರಿಟಿ ನಟ ಯಾರು?

  ಮೊದಲ ಸ್ಥಾನದಲ್ಲಿ ಟಾಮ್ ಹಾಂಕ್ಸ್

  ಮೊದಲ ಸ್ಥಾನದಲ್ಲಿ ಟಾಮ್ ಹಾಂಕ್ಸ್

  ಅತಿ ಹೆಚ್ಚು ಹುಡುಕಲ್ಪಟ್ಟ ನಟರ ಪಟ್ಟಿಯಲ್ಲಿ ಹಾಲಿವುಡ್ ನಟ ಟಾಮ್ ಹಾಂಕ್ಸ್‌ ಇದ್ದಾರೆ. ಫಾರೆಸ್ಟ್ ಗಂಪ್, ಅಪೋಲೊ 11, ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಟಾಮ್ ಹಾಂಕ್ಸ್‌ ಅನ್ನು ಹೆಚ್ಚು ಜನ ಹುಡುಕಿದ್ದಾರೆ.

  ಎರಡನೇ ಸ್ಥಾನದಲ್ಲಿ ಜಾಕ್ವಿನ್ ಫಿಯೋನೆಕ್ಸ್‌

  ಎರಡನೇ ಸ್ಥಾನದಲ್ಲಿ ಜಾಕ್ವಿನ್ ಫಿಯೋನೆಕ್ಸ್‌

  ಎರಡನೇ ಸ್ಥಾನದಲ್ಲಿ ಜೋಕರ್ ಖ್ಯಾತಿಯ ಜಾಕ್ವಿನ್ ಫಿಯೋನೆಕ್ಸ್, ಮೂರನೇ ಸ್ಥಾನದಲ್ಲಿ ಅಮಿತಾಬ್ ಬಚ್ಚನ್. ನಾಲ್ಕನೇ ಸ್ಥಾನದಲ್ಲಿ ರಿಕ್ಕಿ ಗೆರವೇಸ್, ಐದನೇ ಸ್ಥಾನದಲ್ಲಿ ನಟಿ ಜಾಡಾ ಪಿಂಕೆಟ್ ಸ್ಮಿತ್, ಆರನೇ ಸ್ಥಾನದಲ್ಲಿ ಜಸ್ಟಿನ್ ಹಾರ್ಟ್ಲಿ, ಏಳರಲ್ಲಿ ನಟಿ ಲಿಯಾ ಮಿಶೆಲ್, ಎಂಟರಲ್ಲಿ ಎಲೇಜರ್ ಗೊಮೇಜ್, ಒಂಬತ್ತರಲ್ಲಿ ಅಸ್ನಲ್ ಎಲ್ಗೋರ್ಟ್ ಇದ್ದಾರೆ.

  2020: ಗೂಗಲ್‌ನಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ವೆಬ್ ಸಿರೀಸ್ ಯಾವುದು?

  English summary
  Bollywood actor Amitabh Bachchan Is The Only Actor In Top 10 Most Searched Actors Of 2020.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X