For Quick Alerts
  ALLOW NOTIFICATIONS  
  For Daily Alerts

  ಅಪ್ಪನನ್ನು ಮೀರಿಸಿದ ಮಗ! ಹೆಚ್ಚು ಹುಡುಕಲ್ಪಟ್ಟ ವ್ಯಕ್ತಿಗಳ ಪಟ್ಟಿಯಲ್ಲಿ ಆರ್ಯನ್ ಖಾನ್!

  |

  ಸಿನಿಮಾ ರಂಗದಲ್ಲಿ ಶಾರುಖ್ ಖಾನ್ ಸಾಧನೆ ದೊಡ್ಡದು. ದೆಹಲಿಯ ಸಾಮಾನ್ಯ ಗಲ್ಲಿಯಿಂದ ಯಾವುದೇ ಗಾಡ್‌ಫಾದರ್‌ಗಳ ಬೆಂಬಲವಿಲ್ಲದೆ ಬಂದ ಶಾರುಖ್, ಕಿಂಗ್ ಖಾನ್ ಆಗಿ ಬೆಳೆದು ನಿಂತಿದ್ದಾರೆ.

  ಶಾರುಖ್ ಖಾನ್ ಅವರ ಸಾಧನೆಯನ್ನು ಮೆಟ್ಟಿ ನಿಲ್ಲುವ ಪ್ರತಿಭೆಗಳು ಕಡಿಮೆಯೇ. ಶಾರುಖ್ ಖಾನ್‌ಗೆ ಮೂವರು ಮಕ್ಕಳು. ಅವರೂ ಸಹ ಅಪ್ಪನನ್ನು ಮೀರಿಸುವ ಸಾಧನೆ ಮಾಡುವ ಪ್ರತಿಭೆ ಹೊಂದಿಲ್ಲವೆಂಬುದು ಜನಜನಿತ.

  ಶಾರುಖ್ ಖಾನ್ ಅವರಷ್ಟು ಸಾಧನೆ ಮಾಡದೇ ಇದ್ದರೂ ಅವರ ಪುತ್ರ ಆರ್ಯನ್ ಖಾನ್ ಹೆಸರು ಸಾಧಕರ ಪಟ್ಟಿಯಲ್ಲಿ ಸೇರಿಕೊಂಡು ಬಿಟ್ಟಿದೆ.

  2021 ಅಂತ್ಯವಾಗುತ್ತಿರುವ ಸಮಯದಲ್ಲಿ ಗೂಗಲ್, ಈ ವರ್ಷ ಅತಿ ಹೆಚ್ಚು ಹುಡುಕಲ್ಪಟ್ಟ ವ್ಯಕ್ತಿಗಳ ಹೆಸರು, ಹೆಚ್ಚು ಹುಡುಕಲ್ಪಟ್ಟ ಸಿನಿಮಾ, ಹೆಚ್ಚು ಚರ್ಚಿತ ವಿಷಯ ಹೀಗೆ ಹಲವು ಮಾಹಿತಿಗಳನ್ನು ಬಹಿರಂಗಗೊಳಿಸಿದ್ದು, 2021 ರಲ್ಲಿ ಭಾರತೀಯರು ಗೂಗಲ್‌ನಲ್ಲಿ ಅತಿ ಹೆಚ್ಚು ಹುಡುಕಾಡಿದ ವ್ಯಕ್ತಿಗಳ ಪಟ್ಟಿಯಲ್ಲಿ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಹೆಸರು ಇದೆ. ಆರ್ಯನ್ ಖಾನ್ ಮಾತ್ರವೇ ಅಲ್ಲದೆ ಸಿನಿಮಾ ರಂಗಕ್ಕೆ ಸೇರಿದ ಇನ್ನೂ ಮೂರು ಜನರ ಹೆಸರು ಪಟ್ಟಿಯಲ್ಲಿದೆ. ಭಾರತೀಯರು ಯಾರ ಬಗ್ಗೆ ಹೆಚ್ಚು ಹುಡುಕಿದ್ದಾರೆ, ಅದರಲ್ಲಿ ಆರ್ಯನ್ ಖಾನ್‌ ಎಷ್ಟನೇ ಸ್ಥಾನದಲ್ಲಿದ್ದಾರೆ? ಇಲ್ಲಿದೆ ಪಟ್ಟಿ.

  ಆರ್ಯನ್‌ ಖಾನ್‌ಗೆ ಎರಡನೇ ಸ್ಥಾನ

  ಆರ್ಯನ್‌ ಖಾನ್‌ಗೆ ಎರಡನೇ ಸ್ಥಾನ

  ಅತಿ ಹೆಚ್ಚು ಹುಡುಕಲ್ಪಟ್ಟ ವ್ಯಕ್ತಿಗಳ ಪಟ್ಟಿಯಲ್ಲಿ ಆರ್ಯನ್‌ ಖಾನ್‌ಗೆ ಎರಡನೇ ಸ್ಥಾನ. ಎನ್‌ಸಿಬಿಯು ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ಯನ್ ಖಾನ್ ಅನ್ನು ಬಂಧಿಸಿದ ಕಾರಣ ಆರ್ಯನ್ ಖಾನ್ ದೊಡ್ಡ ಸುದ್ದಿಯಾದರು. ಡ್ರಗ್ಸ್ ಪ್ರಕರಣ ಸಾಕಷ್ಟು ಗೊಂದಲಗಳಿಗೆ ಸಹ ಕಾರಣವಾಗಿ ಹಲವು ದಿನ ಈ ವಿಷಯ ಚರ್ಚೆಯಲ್ಲಿತ್ತು. ಆರ್ಯನ್ ಖಾನ್ ಪ್ರಕರಣದಲ್ಲಿ ಎನ್‌ಸಿಬಿ ಕರ್ತವ್ಯ ಲೋಪ ಎಸಗಿದೆ ಎಂಬ ವಿಷಯ ಸಹ ಚರ್ಚೆಗೆ ಬಂದು ಆರ್ಯನ್ ಅನ್ನು ಬಂಧಿಸಿದ್ದ ಅಧಿಕಾರಿ ವಿರುದ್ಧ ತನಿಖೆ ನಡೆಯಿತು. ಒಟ್ಟಾರೆ ಬಹುದಿನಗಳ ಕಾಲ ಆರ್ಯನ್ ಖಾನ್ ಸುದ್ದಿಯಲ್ಲಿದ್ದರು. ಹೆಚ್ಚು ಹುಡುಕಲ್ಪಟ್ಟ ವ್ಯಕ್ತಿಗಳ ಪಟ್ಟಿಯಲ್ಲಿ ಮಾತ್ರವಲ್ಲ, ಒಟ್ಟಾರೆಯಾಗಿ ಭಾರತೀಯರು ಗೂಗಲ್‌ನಲ್ಲಿ ಅತಿ ಹೆಚ್ಚು ಹುಡುಕಿದ ಪಟ್ಟಿಯಲ್ಲಿ ಸಹ ಆರ್ಯನ್ ಖಾನ್ ಸ್ಥಾನ ಪಡೆದಿದ್ದಾರೆ.

  ಶೆಹ್ನಾಜ್ ಗಿಲ್‌ ಬಗ್ಗೆ ಹೆಚ್ಚು ಹುಡುಕಾಟ

  ಶೆಹ್ನಾಜ್ ಗಿಲ್‌ ಬಗ್ಗೆ ಹೆಚ್ಚು ಹುಡುಕಾಟ

  ನಟಿ, ಗಾಯಕಿ ಶೆಹ್ನಾಜ್ ಗಿಲ್‌ಗೆ ಪಟ್ಟಿಯಲ್ಲಿ ಮೂರನೇ ಸ್ಥಾನ. ಶೆಹ್ನಾಜ್ ಗಿಲ್‌ ಬಾಯ್‌ಫ್ರೆಂಡ್ ನಟ ಸಿದ್ಧಾರ್ಥ್ ಶುಕ್ಲಾ ಇದೇ ವರ್ಷ ಸೆಪ್ಟೆಂಬರ್ 02 ರಂದು ಹೃದಯಾಘಾತದಿಂದ ನಿಧನ ಹೊಂದಿದರು. ಆ ಸಮಯದಲ್ಲಿ ಶೆಹ್ನಾಜ್ ಗಿಲ್ ವಿಪರೀತ ಸುದ್ದಿಗೆ ಬಂದಿದ್ದರು. ಬಾಯ್‌ಫ್ರೆಂಡ್‌ ಅಗಲಿಕೆಯಿಂದ ತೀವ್ರ ದುಃಖದಲ್ಲಿರುವ ಶೆಹ್ನಾಜ್ ಗಿಲ್ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದನ್ನೇ ನಿಲ್ಲಿಸಿದ್ದಾರೆ.

  ರಾಜ್‌ ಕುಂದ್ರಾ ಬಗ್ಗೆಯೂ ಕುತೂಹಲ

  ರಾಜ್‌ ಕುಂದ್ರಾ ಬಗ್ಗೆಯೂ ಕುತೂಹಲ

  ಅತಿ ಹೆಚ್ಚು ಹುಡುಕಲ್ಪಟ್ಟ ವ್ಯಕ್ತಿಗಳ ಪಟ್ಟಿಯಲ್ಲಿರುವ ಮತ್ತೊಬ್ಬ ಸಿನಿಮಾ ಸಂಬಂಧಿ ವ್ಯಕ್ತಿ ರಾಜ್ ಕುಂದ್ರಾ. ನಟಿ ಶಿಲ್ಪಾ ಶೆಟ್ಟಿಯ ಪತಿ ರಾಜ್ ಕುಂದ್ರಾ ಸಹ ಋಣಾತ್ಮಕ ಕಾರಣದಿಂದಲೇ ಸುದ್ದಿಯಾದವರು. ಅಶ್ಲೀಲ ವಿಡಿಯೋ ಚಿತ್ರೀಕರಣ ಮತ್ತು ಮಾರಾಟ ಪ್ರಕರಣದಲ್ಲಿ ರಾಜ್ ಕುಂದ್ರಾ ಅನ್ನು ಮುಂಬೈ ಪೊಲೀಸರು ಬಂಧಿಸಿ, ಕೆಲ ತಿಂಗಳು ಜೈಲಿನಲ್ಲಿರಿಸಿದ್ದರು. ಪೂನಂ ಪಾಂಡೆ, ಶೆರ್ಲಿನ್ ಚೋಪ್ರಾ ಸೇರಿದಂತೆ ಹಲವು ನಟಿಯರು ರಾಜ್ ಕುಂದ್ರಾ ವಿರುದ್ಧ ಹಲವು ಆರೋಪಗಳನ್ನು ಮಾಡಿದರು. ಹಾಗಾಗಿ ಕುಂದ್ರಾ ಸಹ ಬಹು ಸಮಯ ಚರ್ಚೆಯಲ್ಲಿದ್ದರು. ಹೀಗಾಗಿ ಅತಿ ಹೆಚ್ಚು ಹುಡುಕಲ್ಪಟ್ಟ ವ್ಯಕ್ತಿಗಳ ಪಟ್ಟಿಯಲ್ಲಿ ರಾಜ್ ಕುಂದ್ರಾ ನಾಲ್ಕನೇ ಸ್ಥಾನದಲ್ಲಿದ್ದಾರೆ.

  ವಿಕ್ಕಿ ಕೌಶಲ್‌ಗೆ ಎಷ್ಟನೇ ಸ್ಥಾನ?

  ವಿಕ್ಕಿ ಕೌಶಲ್‌ಗೆ ಎಷ್ಟನೇ ಸ್ಥಾನ?

  ಇದೇ ಪಟ್ಟಿಯಲ್ಲಿರುವ ಮತ್ತೊಬ್ಬ ಸಿನಿಮಾ ಸ್ಟಾರ್ ವಿಕ್ಕಿ ಕೌಶಲ್. ನಟ ವಿಕ್ಕಿ ಕೌಶಲ್ ಹೆಸರು ಪಟ್ಟಿಯಲ್ಲಿ ಕಾಣಿಸಿಕೊಳ್ಳಲು ಕಾರಣ ಕತ್ರಿನಾ ಕೈಫ್. ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಡೇಟಿಂಗ್ ಮಾಡಲು ಆರಂಭಿಸಿದ ಮೇಲೆ ವಿಕ್ಕಿ ಕೌಶಲ್‌ ಬಗ್ಗೆ ನೆಟ್ಟಿಗರಿಗೆ ಆಸಕ್ತಿ ಹೆಚ್ಚಾಯಿತು. ನಂತರ ಇಬ್ಬರ ಮದುವೆ ಗೊತ್ತಾದ ಬಳಿಕವಂತೂ ವಿಕ್ಕಿ ಕೌಶಲ್ ಸಿನಿಮಾಗಳು, ಆ ಮುಂಚಿನ ಜೀವನ ಎಲ್ಲದರ ಬಗ್ಗೆ ಕುತೂಹಲದಿಂದ ಹುಡುಕಾಡಿದ್ದಾರೆ. ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್‌ರ ವಿವಾಹ ಎರಡು ದಿನದಿಂದ ರಾಜಸ್ಥಾನದಲ್ಲಿ ಅದ್ಧೂರಿಯಾಗಿ ನಡೆಯುತ್ತಿದೆ. ಗೂಗಲ್‌ನಲ್ಲಿ ಅತಿ ಹೆಚ್ಚು ಹುಡುಕಾಡಿದವರ ಪಟ್ಟಿಯಲ್ಲಿ ವಿಕ್ಕಿ ಕೌಶಲ್ ಆರನೇ ಸ್ಥಾನದಲ್ಲಿದ್ದಾರೆ.

  ಯಾರಿದು ನತಾಶಾ ದಲಾಲ್?

  ಯಾರಿದು ನತಾಶಾ ದಲಾಲ್?

  ಈ ಪಟ್ಟಿಯಲ್ಲಿರುವ ಕೊನೆಯ ಸಿನಿಮಾ ಸಂಬಂಧಿ ವ್ಯಕ್ತಿ ನತಾಶಾ ದಲಾಲ್. ಈಕೆ ಬಾಲಿವುಡ್ ನಟ ವರುಣ್ ಧವನ್ ಪತ್ನಿ. ಇದೇ ವರ್ಷದ ಜನವರಿ 24 ರಂದು ವರುಣ್ ಧವನ್ ಹಾಗೂ ನತಾಶಾ ದಲಾಲ್ ವಿವಾಹವಾದರು ಹಾಗಾಗಿ ನತಾಶಾ ದಲಾಲ್ ಬಗ್ಗೆ ನೆಟ್ಟಿಗರು ಕುತೂಹಲದಿಂದ ಸರ್ಚ್ ಮಾಡಿದ್ದರು. ಪಟ್ಟಿಯಲ್ಲಿ ನತಾಶಾ ದಲಾಲ್ ಹತ್ತನೇ ಸ್ಥಾನದಲ್ಲಿದ್ದಾರೆ.

  ಮೊದಲ ಸ್ಥಾನದಲ್ಲಿ ಯಾರಿದ್ದಾರೆ?

  ಮೊದಲ ಸ್ಥಾನದಲ್ಲಿ ಯಾರಿದ್ದಾರೆ?

  ಭಾರತೀಯರು 2021ರಲ್ಲಿ ಗೂಗಲ್‌ನಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ವ್ಯಕ್ತಿಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಒಲಿಂಪಿಕ್‌ನಲ್ಲಿ ಚಿನ್ನ ಗೆದ್ದ ನೀರಜ್ ಚೋಪ್ರಾ ಹೆಸರಿದೆ. ಐದನೇ ಸ್ಥಾನದಲ್ಲಿ ಟೆಸ್ಲಾ ಸಂಸ್ಥೆಯ ಮಾಲೀಕ ಎಲಾನ್ ಮಸ್ಕ್‌ ಹೆಸರಿದೆ. ಏಳನೇ ಸ್ಥಾನದಲ್ಲಿ ಒಲಿಂಪಿಕ್‌ನಲ್ಲಿ ಕಂಚು ಗೆದ್ದ ಪಿವಿ ಸಿಂಧು, ಎಂಟನೇ ಸ್ಥಾನದಲ್ಲಿ ಭಜರಂಗ್ ಪೂನಿಯಾ, 9 ನೇ ಸ್ಥಾನದಲ್ಲಿ ಕುಸ್ತಿ ಪಟು ಸುಶಿಲ್ ಕುಮಾರ್ ಇದ್ದಾರೆ. ಸುಶಿಲ್ ಕುಮಾರ್ ಅನ್ನು ಕೊಲೆ ಪ್ರಕರಣದಲ್ಲಿ ದೆಹಲಿ ಪೊಲೀಸರು ಬಂಧಿಸಿದ್ದರು ಹಾಗಾಗಿ ಅವರ ಹೆಸರು ಪಟ್ಟಿಗೆ ಬಂದಿದೆ.

  English summary
  Shah Rukh Khan son Aryan Khan is in most searched people list of Google 2021. Some more movie industry people also were in the list.
  Saturday, December 11, 2021, 8:31
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X