For Quick Alerts
  ALLOW NOTIFICATIONS  
  For Daily Alerts

  ಆಶಿಶ್ ವಿದ್ಯಾರ್ಥಿ ಹೇಳಿದ ತಂದೆ-ಮಕ್ಕಳ ಭಾವುಕ ಕಥೆ

  |

  ಬದುಕು ಹೊಸ ಹೊಸ ಸವಾಲುಗಳನ್ನು ನೀಡುತ್ತಲೇ ಇರುತ್ತವೆ. ನಾವು ನಮ್ಮ 'ಕಂಫರ್ಟ್' ವಲಯದಿಂದ ಹೊರಬಂದು ಅವುಗಳನ್ನು ಹೇಗೆ ಎದುರಿಸುತ್ತೇವೆ ಮತ್ತು ಕಷ್ಟಗಳನ್ನು ಹೇಗೆ ಮೆಟ್ಟಿನಿಲ್ಲುತ್ತೇವೆ ಎನ್ನುವುದು ನಮ್ಮ ಮಾನಸಿಕ ಸ್ಥೈರ್ಯದ ಮೇಲೆ ನಿಂತಿರುತ್ತದೆ. ಅಂತಹ ಸ್ಥೈರ್ಯ ಪ್ರೌಢತೆ ಬೆಳೆದವರಿಗೆ ಮಾತ್ರವಲ್ಲ, ಪುಟ್ಟ ಮಕ್ಕಳಲ್ಲಿಯೂ ಬಂದಿರುತ್ತದೆ. ಅವರು ಕೆಲವು ಸಂದರ್ಭಗಳಲ್ಲಿ ನಮಗಿಂತಲೂ ದೊಡ್ಡವರಾಗಿ ಬೆಳೆದಿರುತ್ತಾರೆ ಎಂಬುದನ್ನು ನಟ ಆಶಿಶ್ ವಿದ್ಯಾರ್ಥಿ ಒಂದು ಭಾವುಕ ಕಥೆಯ ಮೂಲಕ ಹೇಳಿದ್ದಾರೆ.

  ಮುಂಬೈನಿಂದ ಪುಣೆಯತ್ತ ಸ್ನೇಹಿತರ ಜತೆಗೆ ಕಾರಿನಲ್ಲಿ ಹೊರಟಿದ್ದ ಆಶಿಶ್ ವಿದ್ಯಾರ್ಥಿ ತಮ್ಮ ಕಾರು ಚಾಲಕನ ಮೂಲಕ ಬದುಕಿನ ಹೊಸ ಮುಖವನ್ನು ಹಾಗೂ ಮಾದರಿಯನ್ನು ಕಂಡಿದ್ದಾಗಿ ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಅವರು ಹಂಚಿಕೊಂಡಿದ್ದು, 20 ಸಾವಿರಕ್ಕೂ ಅಧಿಕ ಮಂದಿ ಅದನ್ನು ಇಷ್ಟಪಟ್ಟಿದ್ದಾರೆ. ಸಾವಿರಾರು ಮಂದಿ ಹಂಚಿಕೊಂಡಿದ್ದಾರೆ.

  ಬದುಕು ಹಾಗೂ ಸಂಬಂಧಗಳ ಕುರಿತು ಆಶಿಶ್ ವಿದ್ಯಾರ್ಥಿ ಅನೇಕ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಸಿನಿಮಾ ರಂಗದಲ್ಲಿ ಖಳನಾಯಕನಾಗಿಯೇ ಹೆಚ್ಚು ಕಾಣಿಸಿಕೊಂಡಿರುವ ಆಶಿಶ್ ವಿದ್ಯಾರ್ಥಿ, ನೈಜ ಜೀವನದಲ್ಲಿ ಮಾನವೀಯ ಮೌಲ್ಯಗಳನ್ನು ಬಿತ್ತುವ ಪ್ರಯತ್ನಗಳ ಮೂಲಕ ಗಮನ ಸೆಳೆದಿದ್ದಾರೆ. ಅವರ ಹೇಳಿದ ಅಪ್ಪ-ಮಕ್ಕಳ ಕಥೆಯೇನು? ಮುಂದೆ ಓದಿ...

  ಮುಂಬೈ ಟು ಪುಣೆ ಪಯಣ

  ಮುಂಬೈ ಟು ಪುಣೆ ಪಯಣ

  ನಮಸ್ಕಾರ, ನಾನು ಆಶಿಶ್ ವಿದ್ಯಾರ್ಥಿ. ನಾನು ಮುಂಬೈನಿಂದ ಪುಣೆಗೆ ಕಾರಿನಲ್ಲಿ ಹೋಗುವಾಗ ಅದ್ಭುತವಾದ ಘಟನೆಯೊಂದು ಸಂಭವಿಸಿತು. ಹೀಗಾಗಿ ನನ್ನ ಕೆಲಸದ ಮಧ್ಯೆ ಒಂದು ವಿರಾಮ ನೀಡಿ ಈ ಬಹಳ ಆಸಕ್ತಿಕರವಾದ ಸಂಗತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕು ಎನಿಸಿತು.

  ಮುಂಬೈನಿಂದ ನಮ್ಮ ಪಯಣವನ್ನು ಬೆಳಿಗ್ಗೆ 4 ಗಂಟೆಗೆ ಆರಂಭಿಸಿದ್ದೆವು. ಮೌನಿಯಾಗಿದ್ದ ವ್ಯಕ್ತಿ ನಮ್ಮ ಕಾರು ಚಲಾಯಿಸುತ್ತಿದ್ದ. ಒಂದು ಜಾಗದಲ್ಲಿ ನಾನು ಒಂದಿಬ್ಬರು ಗೆಳೆಯರನ್ನು ಹತ್ತಿಸಿಕೊಂಡೆ. ಪುಣೆ ಮುಟ್ಟುವ ಮುನ್ನ ಸುಮಾರು ಆರು ಗಂಟೆ ವೇಳೆಗೆ ಕಾರು ಚಾಲಕ, 'ನನ್ನ ಫೋನ್ ಡೆಡ್ ಆಗಿದೆ, ನಿಮ್ಮ ಫೋನ್ ಬಳಸಬಹುದೇ' ಎಂದು ಕೇಳಿದ. ಇದು ವಿಚಿತ್ರ ಮನವಿ ಎನಿಸಿದರೂ ನನ್ನ ಗೆಳೆಯ 'ಓ ಖಂಡಿತವಾಗಿ' ಎಂದ. ಬಳಿಕ ಆತ ತನ್ನ ಮಗಳಿಗೆ ಕರೆ ಮಾಡಿದ.

  ಮಗು ಎದ್ದು, ತಿಂಡಿ ಮಾಡು...

  ಆತ ಸ್ಪೀಕರ್ ಫೋನ್ ಆನ್ ಮಾಡಿದ್ದ. 'ಮಗು ಎದ್ದೇಳು' ಎಂದ. 'ಅಪ್ಪಾ ನಾನು ನಿನಗೆ ಐದು ಗಂಟೆಗೆ ಎಬ್ಬಿಸಲು ಹೇಳಿದ್ದೆ. ನೀನು ಈಗ ಎಬ್ಬಿಸುತ್ತಿದ್ದೀಯ..' ಎಂದು ಆ ಕಡೆಯಿಂದ ಆತನ ಮಗಳು ತುಸು ಮುನಿಸಿನಿಂದ ಹೇಳಿದಳು. ಆತನಿಗೆ ಮುಜುಗರವಾಗಿದ್ದನ್ನು ನಾನು ಕಂಡೆ.

  'ಪರವಾಗಿಲ್ಲ ಮಗಳೇ, ನೀನು ಈಗ ಏಳು. ತಿಂಡಿ ರೆಡಿ ಮಾಡು, ಬಳಿಕ ನೀನು ಶಾಲೆಗೆ ಹೋಗಬೇಕು'... ಆ ಪುಟ್ಟ ಬಾಲಕಿ ಇನ್ನೊಂದು ಬದಿಯಿಂದ ಸಣ್ಣ ಧ್ವನಿಯಲ್ಲಿ ಹೇಳಿದಳು, 'ಅಪ್ಪಾ ನಾನು ನಾಲ್ಕು ಗಂಟೆಗೇ ಎದ್ದು ತಿಂಡಿಯನ್ನೂ ಸಿದ್ಧಪಡಿಸಿ ಈಗ ಶಾಲೆಗೆ ಕೂಡ ಹೊರಟಿದ್ದೇನೆ...'

  ಹೆಂಡತಿಯನ್ನು ಕಳೆದುಕೊಂಡಿದ್ದ ಚಾಲಕ

  ಹೆಂಡತಿಯನ್ನು ಕಳೆದುಕೊಂಡಿದ್ದ ಚಾಲಕ

  ಅಲ್ಲಿ ಏನೋ ಆಗಿದೆ ಎಂದು ನನಗೆ ಎನಿಸಿತು. ಆದರೆ ಅದೇನೆಂದು ಖಚಿತವಾಗಿ ಗೊತ್ತಾಗಲಿಲ್ಲ. ಬಳಿಕ ಕರೆ ಕಟ್ ಆಯಿತು. ನಮ್ಮ ಕಾರು ಚಾಲಕ ಸಣ್ಣನೆ ಹೇಳಿದ, 'ಅವಳು ಬೆಳೆದುಬಿಟ್ಟಿದ್ದಾಳೆ...'

  ನಾನು ಪರೋಕ್ಷವಾಗಿ ಆತನನ್ನು, 'ನಿಮ್ಮ ಮನೆಯಲ್ಲಿ ಯಾರು ಯಾರು ಇದ್ದೀರಿ?' ಎಂದು ಕೇಳಿದೆ. ನನ್ನ 12 ವರ್ಷದ ಮಗಳು ಮತ್ತು 7 ವರ್ಷದ ಮಗ. ಕಳೆದ 25ರಂದು ನನ್ನ ಹೆಂಡತಿಯನ್ನು ಕಳೆದುಕೊಂಡೆ, ಕ್ರಿಸ್ ಮಸ್ ದಿನ...' ಎಂದು ಮೌನವಾದ.

  'ನಾನು ನಾಲ್ಕು ಗಂಟೆಯಿಂದಲೇ ಎದ್ದಿದ್ದೀನಿ' ಎಂದು ಅಪ್ಪನ ಬಗ್ಗೆ ಆ ಮಗು ಹಾಸ್ಯ ಮಾಡಿದಾಗ, 'ನಾನು ಅಡುಗೆ ಮಾಡಿದ್ದೀನಿ, ನಾನು ಶಾಲೆಗೆ ಹೋಗಲು ಸಿದ್ಧಳಾಗಿದ್ದೀನಿ' ಎಂದಾಗ ನಮಗೆ ಆಕೆಯ ವಯಸ್ಸು ಗೊತ್ತಿರಲಿಲ್ಲ. ಆದರೆ ಅದು ಆಗ ನಾವು 'ವಾಹ್ ವಾಹ್ ವಾಹ್, ವಾಹ್ ಮಗಳೇ ವಾಹ್' ಎನ್ನಲು ಶುರುಮಾಡಿದ್ದೆವು.

  ತಂದೆ ಮತ್ತು ಇಬ್ಬರು ಮಕ್ಕಳು ಕಂಡರು...

  ತಂದೆ ಮತ್ತು ಇಬ್ಬರು ಮಕ್ಕಳು ಕಂಡರು...

  ನಮ್ಮ ಕಾರು ಚಾಲಕ ತನ್ನ ಕಥೆಯನ್ನು ಪೂರ್ತಿ ಹೇಳಿದಾಗಲೇ ನಮಗೆ ಅರಿವಾಗಿದ್ದು, ಸಣ್ಣ ಮಗುವೊಂದು ಮಹಿಳೆಯಾಗಿ ಬೆಳೆದಿದ್ದಾಳೆ ಎಂದು. ತನ್ನ ಬದುಕಿನ ಜವಾಬ್ದಾರಿಯನ್ನು ಆಕೆ ಆಗಲೇ ಹೊತ್ತುಕೊಂಡಿದ್ದಳು. ಅಲ್ಲಿ ನಾವು ಒಬ್ಬ ತಂದೆ ಮತ್ತು ಇಬ್ಬರು ಮಕ್ಕಳನ್ನು ಕಂಡೆವು. ಮನೆಯಿಂದ ದೂರ ಇದ್ದಾಗಲೂ ತನ್ನ ಪ್ರಯತ್ನ ಮೀರಿ ತನ್ನ ಮಕ್ಕಳನ್ನು ಬೆಳೆಸಲು ಮತ್ತು ಅವರಿಗೆ ಉತ್ತಮ ಶಿಕ್ಷಣ ಒದಗಿಸಲು ಆತ ಪ್ರಯತ್ನಿಸುತ್ತಿದ್ದ. ಇದು ನಿಜಕ್ಕೂ ನನ್ನ ಮನಮುಟ್ಟಿತು. ಹಾಗಾಗಿಯೇ ನನ್ನ ಕೆಲಸವನ್ನು ಅರೆಕ್ಷಣ ನಿಲ್ಲಿಸಿ ಈ ಕಥೆ ಹೇಳಲು ಬಯಸಿದೆ.

  ನಮಗೂ ಅಡೆ ತಡೆಗಳಿರುತ್ತವೆ, ಆದರೆ...

  ನಮಗೂ ಅಡೆ ತಡೆಗಳಿರುತ್ತವೆ, ಆದರೆ...

  ನಾವು ಪ್ರತಿಯೊಬ್ಬರೂ ಜೀವನದಲ್ಲಿ ಅಡೆತಡೆಗಳನ್ನು ನೋಡುತ್ತೇವೆಯಲ್ಲವೇ? ಅದರಿಂದ ಕಂಗೆಟ್ಟು ನಾವು ಚಿಂತಿಸಲು ಆರಂಭಿಸುತ್ತೇವೆ. ಮತ್ತಷ್ಟು ಯೋಚಿಸಲು ಬಯಸುತ್ತೇವೆ. ಆದರೆ ಇದು ಸತ್ಯ ಗೆಳೆಯರೇ. ನಮ್ಮ ದಿನ ನಿತ್ಯದ ಬದುಕಿನಲ್ಲಿ ಅನೇಕ ಜನರು ಅತಿ ಸಣ್ಣ ಅವಕಾಶಗಳಲ್ಲಿ ಅಂತಹ ಸಾಕಷ್ಟು ಕೆಲಸಗಳನ್ನು ಸಾಧಿಸುತ್ತಿದ್ದಾರೆ.

  ಆರಾಮದಾಯಕ ಬದುಕಿನಿಂದ ದೊಡ್ಡರಾಗಬಹುದೇ?

  ಆರಾಮದಾಯಕ ಬದುಕಿನಿಂದ ದೊಡ್ಡರಾಗಬಹುದೇ?

  ನಾನು ನನ್ನನ್ನು ನೆನಪಿಸಿಕೊಳ್ಳುತ್ತಿರುವಂತೆ ನಿಮಗೂ ನೆನಪಿಸುತ್ತಿದ್ದೇನೆ, ನಮಗೆ ಜೀವನ ಏನನ್ನು ನೀಡುತ್ತದೆಯೋ ನಾವು ಅದಕ್ಕೆ ಋಣಿಯಾಗಿರಬೇಕು. ಅದನ್ನು ಮಹಾನ್ ಅವಕಾಶವಾಗಿ ಬಳಸಿಕೊಳ್ಳಬೇಕು. ಪ್ರತಿಯೊಂದನ್ನೂ ಆರಾಮಾಗಿ ಹಾಗೂ ಚೆನ್ನಾಗಿರುವಂತೆ ಪ್ರಯತ್ನಿಸಲಷ್ಟೇ ನಮ್ಮ ಗಮನ ಇರಬಾರದು. ಜನರು ತಮ್ಮ ಸನ್ನಿವೇಶಗಳಿಗಿಂತಲೂ ದೊಡ್ಡವರಾಗಿರಲು ಸಾಧ್ಯವೇ? ಅವರ ಪರಿಸ್ಥಿತಿಗಿಂತಲೂ ದೊಡ್ಡರಾಗಲು ಸಾಧ್ಯವೇ?

  ಆ ಆರಾಮದಾಯಕ ಬದುಕು ನಮಗೆ ಸಿಗಬೇಕು ಎಂದು ಬಯಸುತ್ತೇವೆ. ಆದರೆ ಆ ಬದುಕಿನಿಂದ ನಾವು ದೊಡ್ಡರಾಗಬಹುದೇ? ಇದರ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಅದರ ಬಗ್ಗೆ ಕೇಳಲು ಬಯಸುತ್ತೇನೆ. ಧನ್ಯವಾದ ಗೆಳೆಯರೇ, ಧನ್ಯವಾದ ಬದುಕು... ಎಂದು ಆಶಿಶ್ ವಿದ್ಯಾರ್ಥಿ ಬದುಕಿನ ಸೊಗಸಾದ ವಿಶ್ಲೇಷಣೆಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

  English summary
  Actor Ashish Vidyarthi shared and video in social media analising the life with a true story of a father and his two children.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more
  X