For Quick Alerts
  ALLOW NOTIFICATIONS  
  For Daily Alerts

  Neha Gowda: ಕೊನೆಗೂ ಬಿಗ್‌ಬಾಸ್‌ಗೆ ಕಾಲಿಟ್ಟ 'ಬೊಂಬೆ'ಯ ಬಗ್ಗೆ ತಿಳಿಯಿರಿ

  |

  ನಟಿ ನೇಹಾ ಗೌಡ ಎಂದರೆ ತಿಳಿಯದವರು ಕಡಿಮೆ, ಒಂದೊಮ್ಮೆ ನೇಹಾ ಗೌಡ ಹೆಸರಿನಿಂದ ಗುರುತಿಸದವರೂ ಸಹ 'ಲಕ್ಷ್ಮಿ ಬಾರಮ್ಮ' ಧಾರಾವಾಹಿಯ ಬೊಂಬೆ ಎಂದ ಕೂಡಲೇ ಥಟ್ಟನೆ 'ಓಹ್ ಅವರಾ?' ಎಂದು ಉದ್ಘಾರ ತೆಗೆಯುತ್ತಾರೆ.

  ನೇಹಾ ಗೌಡ ಬಿಗ್‌ಬಾಸ್‌ಗೆ ಬರುತ್ತಾರೆ ಎಂದು ಪ್ರತಿ ಸೀಸನ್‌ ಆರಂಭವಾದಾಗಲೂ ಒಂದಲ್ಲ ಒಂದು ಕಡೆ ಸದ್ದಿಯಾಗುತ್ತದೆ. ಆದರೆ ನೇಹಾ ಮಾತ್ರ ಬಿಗ್‌ಬಾಸ್‌ಗೆ ಬಂದಿರಲಿಲ್ಲ. ಆದರೆ ಈ ಬಾರಿ ಕೊನೆಗೂ ನೇಹಾ, ಬಿಗ್‌ಬಾಸ್‌ಗೆ ಕಾಲಿಟ್ಟಿದ್ದಾರೆ.

  'ಲಕ್ಷ್ಮಿ ಬಾರಮ್ಮ' ಖ್ಯಾತಿಯ ನೇಹಾ ಧಾರಾವಾಹಿಯ ಪಾತ್ರದಂತೆಯೇ ಛಲಗಾರ್ತಿ, ಗಟ್ಟಿಗಿತ್ತು ಜೊತೆಗೆ ಜನರನ್ನು ಅತಿಯಾಗಿ ಹಚ್ಚಿಕೊಳ್ಳುವ ಮನಸ್ಥಿತಿ ಉಳ್ಳವರು.

  ಬಿಕಾಂ ಓದುತ್ತಿರುವಾಗ ನೇಹಾ ಗೌಡ, ಫ್ಯಾಷನ್ ಡಿಸೈನರ್ ಆಗಬೇಕು ಎಂದು ಆಸೆ ಪಟ್ಟಿದ್ದರು. ಅದೇ ಸಮಯದಲ್ಲಿ ಸಿಕ್ಕ ಅವಕಾಶವನ್ನು ಕೈಚೆಲ್ಲದೆ, ಲಕ್ಷ್ಮೀ ಬಾರಮ್ಮ ಸೀರಿಯಲ್ ನಲ್ಲಿ ಗೊಂಬೆ ಪಾತ್ರ ಚೆನ್ನಾಗಿದೆ ಎಂದು ನಟಿಸಲು ಮುಂದಾದರು. ಆದರೆ ಈ ಧಾರಾವಾಹಿ ಮಾಡುವಾಗ ಕಿರುತೆರೆಯಲ್ಲೇ ಮುಂದುವರೆಯಬೇಕು ಎಂಬ ಆಲೋಚನೆ ಸಹ ನೇಹಾ ಗೌಡ ಅವರಿಗೆ ಇರಲಿಲ್ಲ. ಪಾಲಿಗೆ ಬಂದಿದೆ ಮಾಡಿಬಿಡೋಣ ಎಂಬ ಮನಸ್ಥಿತಿ ಇತ್ತಂತೆ. ನೇಹಾರ ತಂದೆಗೆ ಮಗಳು ಲಾಯರ್ ಆಗಲಿ ಎಂಬ ಆಸೆಯಿತ್ತಂತೆ. ಆದರೆ ಆಗಿದ್ದೇ ಬೇರೆ.

  'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಭಾರಿ ದೊಡ್ಡ ಹಿಟ್ ಆಯಿತು ಸರಿ ಸುಮಾರು 6 ವರ್ಷಗಳ ಕಾಲ ಪ್ರಸಾರವಾಗಿತ್ತು. ಇದರಲ್ಲಿನ ನೇಹಾ ಅವರ ಗೊಂಬೆಯ ಪಾತ್ರವನ್ನು ಎಲ್ಲರೂ ಮೆಚ್ಚಿಕೊಂಡಿದ್ದರು. ನನಗೆ ಆ ಧಾರಾವಾಹಿಯಿಂದ ಸಿಕ್ಕ ಪ್ರೀತಿ ಬಹಳ ವಿಶೇಷವಾದುದು. ಜನ ಪ್ರೀತಿಯಿಂದ ಮಾತನಾಡಿಸುತ್ತಿದ್ದರು, ಮನೆಯ ಮಗಳಂತೆ ಕಾಣುತ್ತಿದ್ದರು. ಕರೆದು ಆರತಿ ಮಾಡುತ್ತಿದ್ದರು ಅದಕ್ಕಿಂತಲೂ ಇನ್ನೇನು ಬೇಕು ಎಂದು ನೇಹಾ ಹೇಳಿದ್ದಾರೆ.

  ನೇಹಾ ಗೌಡ ಅವರು ಕೇವಲ ಸೀರಿಯಲ್ ಅಷ್ಟೇ ಅಲ್ಲದೇ, ಕಿರುಚಿತ್ರ ಹಾಗೂ ರಿಯಾಲಿಟಿ ಶೋನಲ್ಲೂ ಭಾಗಿಯಾಗಿದ್ದಾರೆ. ಟೇಕ್ ಆಫ್ ಎಂಬ ಶಾರ್ಟ್ ಮೂವಿಯಲ್ಲಿ ನೇಹಾ ನಟಿಸಿದ್ದು, ಇದರಲ್ಲಿ ಅವರ ಪಾತ್ರಕ್ಕೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಕನ್ನಡದ ಜೊತೆಗೆ ತೆಲುಗು, ತಮಿಳು ಭಾಷೆಗಳಲ್ಲೂ ಕೂಡ ನೇಹಾ ಗೌಡ ಕೆಲಸ ಮಾಡಿದ್ದಾರೆ. ಇನ್ನು ಕನ್ನಡದ ರಿಯಾಲಿಟಿ ಶೋನಲ್ಲೂ ನೇಹಾ ಗೌಡ ಭಾಗವಹಿಸಿದ್ದರು. ರಾಜಾ-ರಾಣಿ ರಿಯಾಲಿಟಿ ಶೋನಲ್ಲಿ ನೇಹಾ ಗೌಡ ಹಾಗೂ ಅವರ ಪತಿ ಜೊತೆ ಭಾಗವಹಿಸಿದ್ದರು.

  ನೇಹಾ ಗೌಡ, ತಮ್ಮ ಬಾಲ್ಯದ ಗೆಳೆಯ ಚಂದನ್ ಅನ್ನೇ ವಿವಾಹವಾಗಿದ್ದಾರೆ. ಇಬ್ಬರೂ ಒಟ್ಟಿಗೆ ಶಾಲೆ ಕಲಿಯುತ್ತಿದ್ದರಂತೆ. ಆದಲೇ ಚಂದನ್, ನೇಹಾಗೆ ಪ್ರೊಪೋಸ್ ಮಾಡಿದ್ದರಂತೆ. ಹಲವು ತಿಂಗಳು ಬಿಟ್ಟು ನೇಹಾ ಸಹ ಒಪ್ಪಿಕೊಂಡಿದ್ದರಂತೆ. ಆದರೆ ಸಂಪರ್ಕ ಕಡಿದು ಹೋಗಿತ್ತು. ಆದರೆ ದೂರವಿದ್ದರೂ ಪರಸ್ಪರರ ಮೇಲೆ ಇದ್ದ ಪ್ರೀತಿ ಇಬ್ಬರನ್ನೂ ಮತ್ತೆ ಒಂದಾಗುವಂತೆ ಮಾಡಿದೆ.

  ಇದೀಗ ನಟಿ ನೇಹಾ ಗೌಡ ಬಿಗ್‌ಬಾಸ್ ಮನೆ ಪ್ರವೇಶ ಮಾಡಿದ್ದಾರೆ. ವಾರಕ್ಕಿಂತಲೂ ಹೆಚ್ಚು ದಿನ ಮನೆ ಬಿಟ್ಟು ಇರದ ನೇಹಾ, ನೂರಕ್ಕೂ ಹೆಚ್ಚು ದಿನ ಬಿಗ್‌ಬಾಸ್‌ ಮನೆಯಲ್ಲಿ ಇರಬಲ್ಲರಾ? ಕಾದು ನೋಡಬೇಕಿದೆ.

  English summary
  Bigg Boss Kannada Season 9: Actress Neha Gowda entered Bigg Boss house. Here is the biography of Neha Gowda.
  Sunday, September 25, 2022, 1:34
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X