For Quick Alerts
  ALLOW NOTIFICATIONS  
  For Daily Alerts

  ಕೋಸ್ಟಲ್‌ವುಡ್‌ನಲ್ಲಿ ಧೂಳೆಬ್ಬಿಸುತ್ತಿದೆ 'ರಾಜ್ ಸೌಂಡ್ಸ್ ಆಂಡ್ ಲೈಟ್ಸ್' ತುಳು ಸಿನಿಮಾ

  By ಪೂರ್ವ
  |

  ಕೋಸ್ಟಲ್‌ವುಡ್‌ನ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ 'ರಾಜ್ ಸೌಂಡ್ಸ್ ಅಂಡ್ ಲೈಟ್ಸ್' ಧೂಳೆಬ್ಬಿಸುತ್ತಿದೆ. ಕರಾವಳಿಯ ಕಲಾವಿದರ ತಂಡ ನಿರ್ಮಿಸಿದ ಈ ಸಿನಿಮಾ ಕರಾವಳಿ ಜನರ ಮೆಚ್ಚುಗೆಗೆ ಪಾತ್ರವಾಗುತ್ತಿದೆ.

  ಮೇ 20ರಂದು ಈ ಸಿನಿಮಾ ಮಂಗಳೂರಿನಲ್ಲಿ ತೆರೆಕಂಡಿದೆ. ತುಳುನಾಡಿನ ಜನರಿಗೆ ರಸದೌತಣವನ್ನು ಉಣ ಬಡಿಸುತ್ತಿದೆ. ಚಿತ್ರದಲ್ಲಿ ಕಾಮಿಡಿಯ ಝಲಕ್ ಅದ್ಭುತವಾಗಿ ಮೂಡಿದೆ. ಚಿತ್ರ ಬಿಡುಗಡೆಯಾಗಿ ಒಂದು ತಿಂಗಳಾಗಿದ್ದು ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದೆ. ರಾಜ್ ಸೌಂಡ್ಸ್ ಆಂಡ್ ಲೈಟ್ಸ್ ಸಿನಿಮಾಕ್ಕೆ ಕರಾವಳಿಯ ಜನ ಕುಟುಂಬ ಸಮೇತವಾಗಿ ಹೋಗಿ ಮನತುಂಬಿ ನಕ್ಕು ಬರುತ್ತಿದ್ದಾರೆ.

  ಸಿನಿಮಾದಲ್ಲಿರುವ ಮಾಸ್ ಡೈಲಾಗ್‌ಗಳು ಜನರ ಮನಸೂರೆಗೊಂಡಿದೆ. ಚಿತ್ರದ ನಾಯಕ ನಟನಾಗಿ ವಿನೀತ್ ಕುಮಾರ್ ಅಭಿನಯಿಸಿದ್ದಾರೆ. ಹೀರೋಯಿನ್ ಪಾತ್ರದಲ್ಲಿ 'ಚಂಡಿಕೋರಿ' ಖ್ಯಾತಿಯ ಕರೀಷ್ಮಾ ಅಮೀನ್ ನಟಿಸಿದ್ದಾರೆ. ತನ್ನ ಬಬ್ಲಿ ಲುಕ್‌ನಿಂದ ಸೆಳೆಯುತ್ತಿರುವ ಯಶಾ ರವಿಶಂಕರ್ ನಟಿಸಿದ್ದು, ಆಕೆಯ ಅಭಿನಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.

  ಪೈಲ್ವಾನ್ ಲುಕ್‌ನಲ್ಲಿ ಕಾಣಿಸಿಕೊಂಡ ಅರವಿಂದ್ ಬೋಳಾರ್

  ಪೈಲ್ವಾನ್ ಲುಕ್‌ನಲ್ಲಿ ಕಾಣಿಸಿಕೊಂಡ ಅರವಿಂದ್ ಬೋಳಾರ್

  ಕರಾವಳಿ ಜನರ ಸಿನಿಮಾಗಳಲ್ಲಿ ಹೆಚ್ಚು ನಿರೀಕ್ಷಿಸುವುದು ಹಾಸ್ಯ. ಅಂತೆಯೇ ಈ ಸಿನಿಮಾ ಸಹ ಹಾಸ್ಯಮಯವಾಗಿದ್ದು ನೋಡುಗರಿಗೆ ಖುಷಿ ನೀಡುತ್ತಿದೆ. ಅರವಿಂದ್ ಬೋಳಾರ್ ಪೈಲ್ವಾನ್ ಲುಕ್‌ನಲ್ಲಿ ಜನರನ್ನು ನಗೆಗಡಲಲ್ಲಿ ತೇಲಿಸಿದ್ದಾರೆ, ಭೋಜರಾಜ್ ವಾಮಂಜೂರು ಅವರ ಹಾಸ್ಯ ಚಟಾಕಿ ಜನರನ್ನು ಮೋಡಿ ಮಾಡುತ್ತಿದೆ. ನವೀನ್ ಡಿ ಪಡೀಲ್ ಅವರು ಚಿತ್ರದಲ್ಲಿ ಸೀಮಿತ ಪಾತ್ರದಲ್ಲಿ ಕಾಣಿಸಿಕೊಂಡರು, ನಟಿಸಿರುವ ಪಾತ್ರಕ್ಕೆ ಜೀವ ತುಂಬಿದ್ದಾರೆ. ಪ್ರಸನ್ನ ಶೆಟ್ಟಿ ಹಾಗೂ ಸಂದೀಪ್ ಶೆಟ್ಟಿ ಚಿತ್ರಕ್ಕೆ ಭರ್ಜರಿಯಾಗಿ ಎಂಟ್ರಿಯನ್ನು ನೀಡಿ ಜನರನ್ನು ರಂಜಿಸಿದ್ದಾರೆ.

  ರಾಹುಲ್ ಅಮಿನ್ ನಿರ್ದೇಶನದಲ್ಲಿ ಮೂಡಿಬಂದ ಚಿತ್ರ

  ರಾಹುಲ್ ಅಮಿನ್ ನಿರ್ದೇಶನದಲ್ಲಿ ಮೂಡಿಬಂದ ಚಿತ್ರ

  ಪರದೆಯ ಹಿಂದೆ ಅನೇಕ ಕಷ್ಟಪಟ್ಟ ಕಲಾವಿದರು ತಮ್ಮ ಸಿನಿಮಾ ಸಕ್ಸಸ್ ಆಗುತ್ತಿರುವುದನ್ನು ಕಂಡು ಖುಷಿಪಡುತ್ತಿದ್ದಾರೆ, ಪ್ರತಿಭಾವಂತ ನಟ ರಾಹುಲ್ ಅಮಿನ್ ಅವರ ನಿರ್ದೇಶನದಲ್ಲಿ ಮೂಡಿಬಂದ ಉತ್ತಮ ಚಿತ್ರ 'ರಾಜ್ ಸೌಂಡ್ಸ್ ಆಂಡ್ ಲೈಟ್ಸ್'. ರಾಹುಲ್ ಅಮೀನ್ ಅವರಿಗೆ ಇದು ಚೊಚ್ಚಲ ಸಿನಿಮಾವಾಗಿದ್ದು ಪ್ರೇಕ್ಷಕರ ನಿರೀಕ್ಷೆ ಹೆಚ್ಚಾಗಿಯೇ ಇತ್ತು. ಆದರೆ ಇದೀಗ ಚಿತ್ರ ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದೆ.

  ಸಿನಿಮಾದ ತಾಂತ್ರಿಕ ವರ್ಗ ಇಂತಿದೆ

  ಸಿನಿಮಾದ ತಾಂತ್ರಿಕ ವರ್ಗ ಇಂತಿದೆ

  ಚಿತ್ರಕ್ಕೆ ವಿಷ್ಣು ಪ್ರಸಾದ್‌ರವರ ಕ್ಯಾಮರಾ ವರ್ಕ್ ಇದೆ. ಸೃಜನ್ ಕುಮಾರ್ ತೋನ್ಸೆಯವರ ಅವರ ಅದ್ಭುತ ಸಂಗೀತ ನಿರ್ದೇಶನವಿದೆ. ವಿನೀತ್ ಕುಮಾರ್ ಅವರ ಕಥೆ ಮತ್ತು ಚಿತ್ರ ಕಥೆ ಹೊಂದಿದ್ದು ವೀಕ್ಷಕರ ಮನಗೆದ್ದಿದೆ. ಗಿರ್‌ಗಿಟ್ ಖ್ಯಾತಿಯ ಪ್ರಸನ್ನ ಶೆಟ್ಟಿ ಬೈಲೂರು ಅವರ ಸಂಭಾಷಣೆ ಚಿತ್ರಕ್ಕಿದೆ. ಯುವ ಪ್ರತಿಭಾನ್ವಿತ ಗುಂಪೊಂದು ದೊಡ್ಡ ಪರದೆಯ ಮೇಲೆ ತಮ್ಮ ಕೌಶಲ್ಯವನ್ನು ತೋರ್ಪಡಿಸಿರುವುದನ್ನು ನೋಡಲು ಜನರಿಗೆ ಖುಷಿಯಾಗಿದೆ. ಒಟ್ಟಿನಲ್ಲಿ 'ರಾಜ್ ಸೌಂಡ್ಸ್ ಆಂಡ್ ಲೈಟ್ಸ್' ಸಿನಿಮಾ ಹಾಸ್ಯ ಪ್ರಧಾನ ಮನೋರಂಜನಾತ್ಮಕ ಚಿತ್ರವಾಗಿದ್ದರೂ ತುಳು ಚಿತ್ರರಂಗದಲ್ಲಿ ಹಲವು ದಾಖಲೆಗಳನ್ನು ನಿರ್ಮಿಸುವ ರೀತಿಯಲ್ಲಿ ಮೂಡಿ ಬಂದಿದೆ.

  'ಒಂದು ಮೊಟ್ಟೆಯ ಕತೆ' ತಂಡ

  'ಒಂದು ಮೊಟ್ಟೆಯ ಕತೆ' ತಂಡ

  'ಒಂದು ಮೊಟ್ಟೆಯ ಕತೆ' ಸಿನಿಮಾ ತಂಡದಲ್ಲಿದ್ದ ಹಲವರು 'ರಾಜ್ ಸೌಂಡ್ಸ್ ಆಂಡ್ ಲೈಟ್ಸ್' ತಂಡದಲ್ಲಿ ಕೆಲಸ ಮಾಡಿರುವುದು ವಿಶೇಷ. ರಾಜ್ ಬಿ ಶೆಟ್ಟಿ ನಿರ್ದೇಶಿಸಿ, ನಟಿಸಿದ್ದ 'ಒಂದು ಮೊಟ್ಟೆಯ ಕತೆ' ಕನ್ನಡ ಸಿನಿಮಾ ಭಾರಿ ದೊಡ್ಡ ಹಿಟ್ ಆಗಿತ್ತು. ಆ ಸಿನಿಮಾದ ಮೂಲಕ ರಾಜ್ ಬಿ ಶೆಟ್ಟಿ ಕನ್ನಡದ ಭರವಸೆಯ ನಟ ಹಾಗೂ ನಿರ್ದೇಶಕರಾದರು. 'ವೃಷಭ ವಾಹನ ಗರುಡ ಗಮನ' ಮೂಲಕ ಇನ್ನಷ್ಟು ಎತ್ತರಕ್ಕೆ ಬೆಳೆದರು.

  English summary
  One of the most anticipated and high budget Coastalwood movie 'Raj Sounds & Lights' directed by Rahul Amin was released in theaters and became hit.
  IIFA Banner

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X