For Quick Alerts
  ALLOW NOTIFICATIONS  
  For Daily Alerts

  ಧನುಷ್ ಆಸ್ತಿ ಮೌಲ್ಯವೆಷ್ಟು? ಸಿನಿಮಾಕ್ಕೆ ಪಡೆವ ಸಂಭಾವನೆ ಎಷ್ಟು?

  |

  ದಕ್ಷಿಣ ಭಾರತದ ಅತ್ಯಂತ ಯಶಸ್ವಿ, ಪ್ರಯೋಗಶೀಲ ನಾಯಕ ನಟ ಧನುಷ್. ನಟನೆಗೆ ರಾಷ್ಟ್ರಪ್ರಶಸ್ತಿ ಪಡೆದಿರುವ ಧನುಷ್ ಭಾಷೆಗಳ ಗಡಿಗಳನ್ನು ದಾಟಿ ತಮ್ಮ ಪ್ರತಿಭೆಯಿಂದ ಸಿನಿ ಪ್ರೇಮಿಗಳನ್ನು ರಂಜಿಸಿದ್ದಾರೆ.

  ತಮಿಳಿನಲ್ಲಿ ಸಾಲು-ಸಾಲು ಹಿಟ್ ಸಿನಿಮಾಗಳನ್ನು ನೀಡಿರುವ ಧನುಷ್ ಇದೀಗ ಹಿಂದಿ ಹಾಗೂ ಇಂಗ್ಲೀಷ್ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ. ವಿಶ್ವಖ್ಯಾತಿ ಪಡೆದಿರುವ 'ಅವೇಂಜರ್ಸ್' ಸಿನಿಮಾದ ನಿರ್ದೇಶಕರ ಹೊಸ ಸಿನಿಮಾ, 'ಗ್ರೇ ಮ್ಯನ್'ನಲ್ಲಿ ನಟಿಸುತ್ತಿದ್ದಾರೆ. ಹಾಲಿವುಡ್‌ನಲ್ಲಿ ಭಾರಿ ಸಂಭಾವನೆಯನ್ನೇ ಧನುಷ್ ಪಡೆಯಲಿದ್ದಾರೆ.

  ಧನುಷ್ ಅತ್ಯುತ್ತಮ ನಟ ಮಾತ್ರವೇ ಅಲ್ಲ ದಕ್ಷಿಣ ಭಾರತದ ಅತ್ಯಂತ ಶ್ರೀಮಂತ ನಟರಲ್ಲಿ ಒಬ್ಬರು ಸಹ. ಧನುಷ್, ಇತ್ತೀಚೆಗಷ್ಟೆ ಚೆನ್ನೈನ ಬಹು ದುಬಾರಿ ಏರಿಯಾದಲ್ಲಿ ಹೊಸ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ್ದಾರೆ. ಶ್ರೀಮಂತ ಧನುಷ್ ಬಳಿ ಈ ನಟರಲ್ಲಿ ಒಬ್ಬರಾಗಿರುವ ಧನುಷ್ ಒಟ್ಟು ಆಸ್ತಿ ಮೌಲ್ಯ ಎಷ್ಟು? ಇರುವ ಕಾರುಗಳೆಷ್ಟು?

  ದುಬಾರಿ ಸಂಭಾವನೆ ಪಡೆಯುತ್ತಾರೆ ಧನುಷ್

  ದುಬಾರಿ ಸಂಭಾವನೆ ಪಡೆಯುತ್ತಾರೆ ಧನುಷ್

  ಧನುಷ್ ದುಬಾರಿ ಸಂಭಾವನೆಯನ್ನೇ ಸಿನಿಮಾಕ್ಕೆ ಪಡೆಯುತ್ತಾರೆ. ಧನುಷ್ ಸಿನಿಮಾ ಒಂದಕ್ಕೆ 12-14 ಕೋಟಿ ಸಂಭಾವನೆ ಪಡೆಯುತ್ತಾರೆ. ಧನುಷ್ ಅತ್ಯಂತ ಕಡಿಮೆ ದಿನಗಳಲ್ಲಿಯೇ ಚಿತ್ರೀಕರಣ ಮುಗಿಸುತ್ತಾರೆ ಬೇಗ ಚಿತ್ರೀಕರಣ ಮುಗಿಯುವಂಥಹಾ ಕತೆಗಳನ್ನೇ ಅವರು ಆಯ್ಕೆ ಮಾಡಿಕೊಳ್ಳುತ್ತಾರೆ. ಮತ್ತು ಜಾಹೀರಾತುಗಳಲ್ಲಿ ನಟಿಸಲು ಕನಿಷ್ಟ 2 ಕೋಟಿ ಹಣ ಪಡೆಯುತ್ತಾರೆ. ಜಾಹಿರಾತುಗಳ ವಿಷಯದಲ್ಲಿ ಬ್ರ್ಯಾಂಡ್‌ಗೆ ತಕ್ಕಂತೆ ಸಂಭಾವನೆ ಭಿನ್ನವಾಗುತ್ತದೆ.

  ಧನುಷ್ ಆಸ್ತಿ ಮೌಲ್ಯ 145 ಕೋಟಿ

  ಧನುಷ್ ಆಸ್ತಿ ಮೌಲ್ಯ 145 ಕೋಟಿ

  ವರದಿಗಳ ಪ್ರಕಾರ ಧನುಷ್‌ರ ಒಟ್ಟು ಆಸ್ತಿ ಮೌಲ್ಯ 145 ಕೋಟಿ. ಧನುಷ್ ರಿಯಲ್‌ ಎಸ್ಟೇಟ್, ಮ್ಯೂಚ್ಯೂಲ್ ಫಂಡ್, ಷೇರುಗಳು, ಕೆಲವು ಉದ್ಯಮದಲ್ಲಿ ಪಾಲುದಾರಿಕೆ, ಜೊತೆಗೆ ವಂಡರ್‌ಬಾರ್ ಫಿಲಮ್ಸ್ ಹೆಸರಿನ ನಿರ್ಮಾಣ ಸಂಸ್ಥೆಯನ್ನು ಸಹ ಧನುಷ್ ಹೊಂದಿದ್ದಾರೆ. ನಿರ್ಮಾಣ ಸಂಸ್ಥೆ ಮೂಲಕ '3', 'ವೇಲೆಯಿಲ್ಲ ಪಟ್ಟಧಾರಿ', 'ವಿಸಾರಣೈ', 'ಕಾಲಾ', 'ಕಾಕ ಮೊಟ್ಟೈ', 'ವಡಾ ಚೆನ್ನೈ' ಅಂಥಹಾ ಸೂಪರ್ ಹಿಟ್ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಸಿನಿಮಾ ನಿರ್ಮಾಣದಿಂದ ಸಾಕಷ್ಟು ಹಣವನ್ನು ಧನುಷ್ ಸಂಪಾದನೆ ಮಾಡುತ್ತಾರೆ.

  ಐಶಾರಾಮಿ ಕಾರುಗಳ ದೊಡ್ಡ ಸಂಗ್ರಹ ಇದೆ

  ಐಶಾರಾಮಿ ಕಾರುಗಳ ದೊಡ್ಡ ಸಂಗ್ರಹ ಇದೆ

  ಧನುಷ್ ಬಳಿ ದುಬಾರಿ ಕಾರುಗಳ ಸಂಗ್ರಹವೇ ಇದೆ. 7 ಕೋಟಿ ಮೌಲ್ಯದ ರೋಲ್ಸ್ ರಾಯ್ಸ್ ಗೋಸ್ಟ್, 3.40 ಕೋಟಿ ಮೌಲ್ಯದ ಬೆಂಟ್ಲಿ, 1.60 ಕೋಟಿ ಮೌಲ್ಯದ ಆಡಿ ಕ್ಯೂ8, 75 ಲಕ್ಷದ ಪೋರ್ಡ್ ಮುಸ್ತಾಂಗ್ ಜಿಟಿ, 45 ಲಕ್ಷದ ಜಾಗ್ವಾರ್ ಇನ್ನೂ ಹಲವು ಐಶಾರಾಮಿ ಕಾರುಗಳನ್ನು ನಟ ಧನುಷ್ ಹೊಂದಿದ್ದಾರೆ. ಜೊತೆಗೆ ಕೆಲವು ವಿಂಟೇಜ್ ಕಾರುಗಳನ್ನು ಸಹ ಧನುಷ್ ಹೊಂದಿದ್ದಾರಂತೆ.

  ಐಶಾರಾಮಿ ಮನೆ ನಿರ್ಮಿಸುತ್ತಿರುವ ಧನುಷ್

  ಐಶಾರಾಮಿ ಮನೆ ನಿರ್ಮಿಸುತ್ತಿರುವ ಧನುಷ್

  ಚೆನ್ನೈನ ದುಬಾರಿ ಏರಿಯಾಗಳಲ್ಲಿ ಒಂದಾದ ಪೋಯೆಸ್ ಗಾರ್ಡನ್‌ನಲ್ಲಿ ಐಶಾರಾಮಿ ಮನೆ ನಿರ್ಮಾಣ ಮಾಡಲು ಆರಂಭಿಸಿದ್ದಾರೆ ನಟ ಧುನುಷ್. ತಮಿಳುನಾಡಿನ ಮಾಜಿ ಸಿಎಂ, ದಿವಂಗತ ಜಯಲಲಿತಾ ಅವರ ಬಂಗಲೆ ಬಳಿಯೇ ಧನುಷ್ ಅವರ ಹೊಸ ಮನೆ ನಿರ್ಮಾಣವಾಗಲಿದೆ. ನಟ ರಜನೀಕಾಂತ್ ಸಹ ಪೋಯೆಸ್ ಗಾರ್ಡನ್‌ನಲ್ಲಿಯೇ ಮನೆ ನಿರ್ಮಿಸಿ ವಾಸವಿದ್ದಾರೆ. ಇದೀಗ ಅಳಿಯ ಧನುಷ್ ಮಗಳು ಐಶ್ವರ್ಯಾ ಸಹ ಅದೇ ಏರಿಯಾದಲ್ಲಿ ಮನೆ ನಿರ್ಮಾಣ ಮಾಡುತ್ತಿದ್ದಾರೆ. ಒಳಾಂಗಣ ವಿನ್ಯಾಸ, ಸೈಟ್ ವೆಚ್ಚ ಹೊರತುಪಡಿಸಿ, ಹೊಸ ಮನೆ ನಿರ್ಮಾಣ ಕಾರ್ಯಕ್ಕೆ ಸುಮಾರು 25 ಕೋಟಿ ಮೀಸಲಿಟ್ಟಿದ್ದಾರೆ ಧನುಷ್ ಎನ್ನಲಾಗುತ್ತಿದೆ. ಪೋಯೆಸ್ ಗಾರ್ಡನ್ ಚೆನ್ನೈನ ಅತ್ಯಂತ ದುಬಾರಿ ಏರಿಯಾ. ಇಲ್ಲಿ ಒಂದು ಚದರ ಅಡಿ ಭೂಮಿಗೆ 40,000 ರೂ ಗಿಂತಲೂ ಹೆಚ್ಚು ಬೆಲೆ ಇದೆ. ಒಂದು 30-40 ಸೈಟು ಖರೀದಿಸಲು ಸುಮಾರು 7 ರಿಂದ 8 ಕೋಟಿ ಹಣ ತೆರಬೇಕಾಗುತ್ತದೆ. ಅಂಥಹಾ ದುಬಾರಿ ಏರಿಯಾದಲ್ಲಿ ಧನುಷ್ ಮನೆ ನಿರ್ಮಾಣ ಮಾಡುತ್ತಿದ್ದಾರೆ.

  ಧನುಷ್ ಕೈಯಲ್ಲಿವೆ ಹಲವು ಸಿನಿಮಾಗಳು

  ಧನುಷ್ ಕೈಯಲ್ಲಿವೆ ಹಲವು ಸಿನಿಮಾಗಳು

  ಧನುಷ್ ನಟನೆಯ 'ಕರ್ಣನ್', 'ಜಗಮೇ ಥಂದಿರಮ್' ಸಿನಿಮಾ ಇತ್ತೀಚೆಗಷ್ಟೆ ಬಿಡುಗಡೆ ಆದಿ ಹಿಟ್ ಆಯಿತು. ಇದೀಗ ಹಿಂದಿಯ 'ಅತರಂಗಿ ರೇ' ಸಿನಿಮಾ ಹಾಗೂ ಹಾಲಿವುಡ್‌ನ 'ಗ್ರೇ ಮ್ಯಾನ್' ಸಿನಿಮಾದ ಚಿತ್ರೀಕರಣವನ್ನು ಧನುಷ್ ಮುಗಿಸಿದ್ದಾರೆ. ತೆಲುಗಿನ ಹಿಟ್ ನಿರ್ದೇಶಕ ಶೇಖರ್ ಕಮ್ಮುಲ ನಿರ್ದೇಶನದ ಮುಂದಿನ ಸಿನಿಮಾದಲ್ಲಿ ಧನುಷ್ ನಟಿಸಲಿದ್ದಾರೆ ಅದರ ಜತೊಗೆ ಮಿತ್ರಾನ್ ಜವಾಹರ್ ನಿರ್ದೇಶನದ ಸಿನಿಮಾದಲ್ಲಿ ನಟಿಸಲಿದ್ದಾರೆ ಇದು ಧನುಷ್‌ರ 45ನೇ ಸಿನಿಮಾ ಆಗಲಿದೆ. ಅದರ ಬಳಿಕ ತಮ್ಮ ಅಣ್ಣನ ನಿರ್ದೇಶನದಲ್ಲಿ 'ಆಯರತ್ತಿಲ್ ಒರುವನ್ 2' ನಲ್ಲಿ ನಟಿಸಲಿದ್ದಾರೆ. ಬಳಿಕ ಕಾರ್ತಿಕ್ ನಿರ್ದೇಶಣದ 'ಮಾರನ್', ಧನುಷ್ ಅಣ್ಣ ಸೆಲ್ವರಾಘವನ್ ನಿರ್ದೇಶನದ 'ನಾನೇ ವರುವೇನ್' ಸಿನಿಮಾದಲ್ಲಿಯೂ ನಟಿಸಲಿದ್ದಾರೆ.

  English summary
  Actor Dhanush's net worth, remuneration, cars he owned etc. Dhanush's upcoming movies.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X