For Quick Alerts
  ALLOW NOTIFICATIONS  
  For Daily Alerts

  ಖ್ಯಾತ ಹಿನ್ನಲೆ ಗಾಯಕಿ ಲತಾ ಮಂಗೇಶ್ಕರ್ ರನ್ನು ವಿಷ ಕೊಟ್ಟು ಕೊಲ್ಲಲು ಯತ್ನಿಸಿದ್ದೇಕೆ?

  |

  ಭಾರತದ ಖ್ಯಾತ ಹಿನ್ನಲೆ ಗಾಯಕಿ, ಸಂಗೀತ ಲೋಕದ ಸರಸ್ವತಿ ಲತಾ ಮಂಗೇಶ್ಕರ್ ಕಂಠಕ್ಕೆ ಮಾರುಹೋಗದವರಿಲ್ಲ. ಭಾರತೀಯರು ಮಾತ್ರವಲ್ಲದೆ ವಿದೇಶದವರು ಸಹ ಗಾನ ಕೋಗಿಲೆ ಲತಾ ಮಂಗೇಶ್ಕರ್ ಹಾಡಿಗೆ ಮನಸೋತಿದ್ದಾರೆ.

  ಹಿಂದಿ ಭಾಷೆಯೊಂದರಲ್ಲೆ 1000ರಕ್ಕು ಹೆಚ್ಚು ರೆಕಾರ್ಡ್ ಹಾಡುಗಳನ್ನು ಹಾಡಿದ್ದಾರೆ. ಬಾಲಿವುಡ್ ಸಿನಿಮಾಗಳ ಜೊತೆಗೆ ಒಟ್ಟು 36 ಪ್ರಾದೇಶಿಕ ಭಾಷೆಯ ಚಲನಚಿತ್ರಗಳು ಮತ್ತು ವಿದೇಶಿ ಭಾಷೆಗಳ ಚತ್ರಗಳಿಗೂ ಕಂಠದಾನ ಮಾಡಿದ್ದಾರೆ. ಇಂಥಹಾ ಮಹಾನ್ ಗಾಯಕಿಗೆ ಸ್ಲೋ ಪಾಯಿಸನ್ ಕೊಟ್ಟು ಕೊಲೆ ಯತ್ನ ಮಾಡಲಾಗಿತ್ತು ಎನ್ನುವ ಸತ್ಯ ಅನೇಕರಿಗೆ ಗೊತ್ತಿಲ್ಲ. ಹೌದು, ಭಾರತದ ಗಾನ ಕೋಗಿಲೆಗೆ ವಿಷ ಕೊಟ್ಟು ಕೊಲೆ ಮಾಡುವ ಪ್ರಯತ್ನ ಮಾಡಿರುವ ವಿಚಾರ ಅನೇಕರಿಗೆ ಶಾಕ್ ನೀಡಿದೆ. ಅನೇಕ ವರ್ಷಗಳ ಹಿಂದೆ ನಡೆದ ಘಟನೆ ಇದು. ಮುಂದೆ ಓದಿ...

  1963ರಲ್ಲಿ ನಡೆದ ಘಟನೆ

  1963ರಲ್ಲಿ ನಡೆದ ಘಟನೆ

  1963 ರಲ್ಲಿ ನಡೆದ ಘಟನೆ ಇದಾಗಿದೆ. ಅಂದರೆ ಸುಮಾರು 57 ವರ್ಷಗಳ ಹಿಂದಿನ ಘಟನೆ. ಆಗಿನ್ನೂ ಲತಾ ಮಂಗೇಶ್ಕರ್ ಅವರಿಗೆ 33 ವರ್ಷವಂತೆ. ಆ ಸಮಯದಲ್ಲಿ ಲತಾ ಮಂಗೇಶ್ಕರ್ ಅವರನ್ನು ಕೊಲೆ ಮಾಡುವ ಯತ್ನ ಮಾಡಲಾಗಿತ್ತು ಎಂದು ಖ್ಯಾತ ಬರಹಗಾರ್ತಿ ಪದ್ಮ ಸಚ್ ದೇವ್ ಅವರು ಬರೆದ "ಐಸಾ ಕಹಾನ್ ಸೆ ಲಾವೊ" ಪುಸ್ತಕದಲ್ಲಿ ಕಹಿ ಸತ್ಯವನ್ನು ಬಹಿರಂಗ ಪಡಿಸಿದ್ದಾರೆ.

  ಅಂದು ನಡೆದಿದ್ದೇನು?

  ಅಂದು ನಡೆದಿದ್ದೇನು?

  "ಲತಾ ಜೀ ನನಗೆ ಈ ವಿಚಾರವನ್ನು ಬಹಿರಂಗ ಪಡಿಸಿದರು. 1963 ರಲ್ಲಿ ಅವರಿಗೆ 33 ವರ್ಷ. ಬೆಳಗ್ಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿತು. ಆ ನಂತರ ವಾಂತಿ ಮಾಡಿಕೊಂಡರು. ನೋವನ್ನು ತಡೆಯಲು ಲತಾಗೆ ಸಾಧ್ಯವಾಗಲಿಲ್ಲ. ಮೂರು ದಿನಗಳ ಕಾಲ ನೋವಿನಿಂದ ಪರದಾಡಿದ್ದಾರೆ. ಆ ನಂತರ ನಿಧಾನವಾಗಿ ಚೇತರಿಸಿಕೊಳ್ಳಲು ಪ್ರಯತ್ನಿಸಿದ್ದರು. ವೈದ್ಯರು ಲತಾಗೆ ಯಾರೋ ಸ್ಲೋ ಪಾಯಿಸನ್ ನೀಡುತ್ತಿದ್ದಾರೆ ಎನ್ನುವ ಸತ್ಯವನ್ನು ಹೇಳಿದ್ದಾರೆ" ಎಂದು ತಮ್ಮ ಪುಸ್ತಕದಲ್ಲಿ ಲತಾ ಮಂಗೇಶ್ಕರ್ ಹೇಳಿದ ಘಟನೆಯನ್ನು ಬರೆದುಕೊಂಡಿದ್ದಾರೆ.

  ಅಡುಗೆಯವರು ಕಣ್ಮರೆ

  ಅಡುಗೆಯವರು ಕಣ್ಮರೆ

  "ಈ ಘಟನೆ ನಡೆದ ನಂತರ ಲತಾ ಮಂಗೇಶ್ಕರ್ ಮನೆಯ ಅಡುಗೆಯವರು ಯಾವುದೆ ಸಂಬಳ ಪಡೆಯದೆ, ಮನೆಯವರಿಗೆ ಹೇಳದೆ ಕೇಳದೆ ಕಣ್ಮರೆಯಾಗಿದ್ದಾರೆ" ಎಂದು ಪದ್ಮ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ.

  ಖ್ಯಾತ ಗೀತರಚನೆಕಾರನ ಸಹಾಯ

  ಖ್ಯಾತ ಗೀತರಚನೆಕಾರನ ಸಹಾಯ

  "ಬಾಲಿವುಡ್ ನ ಖ್ಯಾತ ಗೀತರಚನೆಕಾರ ಮಜ್ರೂಹ್ ಸುಲ್ತಾನಪುರಿ, ಲತಾ ಮಂಗೇಶ್ಕರ್ ಮನೆಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿಕೊಂಡು ಬರುತ್ತಿದ್ದರು. ಜೊತೆಗೆ ಲತಾ ಮಂಗೇಶ್ಕರ ಊಟ ಮಾಡುವ ಮೊದಲ ಮಜ್ರೂಹ್ ತಿಂದು ಪರೀಕ್ಷಿಸಿದ ನಂತರ ಲತಾ ಊಟ ಮಾಡುತ್ತಿದ್ದರು. ಲತಾ ಅವರನ್ನು ಸಂತೋಷವಾಗಿ ಇಡಲು ಕಥೆ, ಕವನಗಳನ್ನು ಹೇಳುತ್ತಿದ್ದರು" ಎನ್ನುವ ಬಗ್ಗೆಯೂ ಲೇಖಕಿ ಪದ್ಮ ಬರೆದಿದ್ದಾರೆ.

  ಖ್ಯಾತ ಗಾಯಕಿಯ ಸಾವು ಬಯಸಿದವರು ಯಾರು?

  ಖ್ಯಾತ ಗಾಯಕಿಯ ಸಾವು ಬಯಸಿದವರು ಯಾರು?

  ಭಾರತದ ಖ್ಯಾತ ಗಾಯಕಿಯ ಸಾವನ್ನು ಬಯಸಿದವರು ಯಾರು, ಅವರಿಗೆ ಸ್ಲೋ ಪಾಯಿಸನ್ ನೀಡುತ್ತಿದ್ದವರು ಯಾರು ಎನ್ನುವ ಬಗ್ಗೆ ಇನ್ನೂ ರಿವೀಲ್ ಆಗಿಲ್ಲ. ಈ ಸುದ್ದಿ ಅನೇಕರಿಗೆ ಅಚ್ಚರಿ ವುಂಟುಮಾಡಿದೆ. ಅನೇಕ ವರ್ಷಗಳ ಹಿಂದೆ ನಡೆದ ಘಟನೆ ಇಂದಿಗೂ ಲತಾ ಅಭಿಮಾನಿಗಳನ್ನು ಕಾಡುತ್ತಿದೆ.

  ಅತ್ಯುನ್ನತ ಭಾರತ ರತ್ನಕ್ಕೆ ಪಾತ್ರರಾಗಿದ್ದಾರೆ

  ಅತ್ಯುನ್ನತ ಭಾರತ ರತ್ನಕ್ಕೆ ಪಾತ್ರರಾಗಿದ್ದಾರೆ

  1942ರಲ್ಲಿ ಮರಾಠಿ ಭಾಷೆಯಲ್ಲಿ ಹಾಡಲು ಪ್ರಾರಂಭಿಸಿದ ಮಂಗೇಶ್ಕರ್, 1946ರಲ್ಲಿ ಆಪ್ ಕಿ ಸೇವಾಮೇ ಹಿಂದಿ ಸಿನಿಮಾದಲ್ಲಿ ಹಾಡುವ ಮೂಲಕ ಬಾಲಿವುಡ್ ಗೆ ಕಾಲಿಡುತ್ತಾರೆ. ಆ ನಂತರ ಖ್ಯಾತ ಗಾಯಕಿಯಾಗಿ, ದೇಶ ವಿದೇಶದಲ್ಲಿ ಪ್ರಸಿದ್ಧಿ ಗಳಿಸುತ್ತಾರೆ. 2001ರಲ್ಲಿ ದೇಶದ ಅತ್ಯುನ್ನತ ನಾಗರಿಕ ಪುರಸ್ಕಾರ ಭಾರತ ರತ್ನಕ್ಕೆ ಪಾತ್ರರಾಗಿದ್ದಾರೆ.

  English summary
  Famous Singer Lata Mangeshkar was given slow poison for a year.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X