Just In
Don't Miss!
- News
ಅಂತಾರಾಷ್ಟ್ರೀಯ ಮಹಿಳಾ ದಿನ; ಸವಾಲುಗಳೇ ಮಹಿಳೆಯ ಸಾಧನೆಯ ಮೆಟ್ಟಿಲು: ಡಾ.ಹೇಮಾ
- Finance
ಅಡಿಕೆ, ಕಾಫೀ, ಮೆಣಸು ಹಾಗೂ ರಬ್ಬರ್ನ ಮಾ. 08ರ ಮಾರುಕಟ್ಟೆ ದರ ಇಲ್ಲಿದೆ
- Automobiles
ಸ್ಕ್ರ್ಯಾಪೇಜ್ ನೀತಿ ಅಳವಡಿಸಿಕೊಳ್ಳುವ ವಾಹನ ಮಾಲೀಕರಿಗೆ ಸಿಹಿಸುದ್ದಿ ನೀಡಿದ ಕೇಂದ್ರ ಸರ್ಕಾರ
- Sports
ಸೌತಾಂಪ್ಟನ್ನಲ್ಲಿ ಭಾರತ-ನ್ಯೂಜಿಲೆಂಡ್ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್
- Lifestyle
ಹೀಗೆ ಆಯ್ಕೆ ಮಾಡಿದರೆ ನೀವು ಬಯಸಿದಂಥ ಸಂಗಾತಿಯೇ ಸಿಗುವರು
- Education
Indian Postal Circle Recruitment 2021: 1421 ಬಿಪಿಎಂ, ಅಬಿಪಿಎಂ ಮತ್ತು ದಖ್ ಸೇವಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಯೂಟ್ಯೂಬ್ ಬಗ್ಗೆ ನಿಮಗೆ ಗೊತ್ತಿರದ ಹಲವು ಆಸಕ್ತಿಕರ ಸಂಗತಿಗಳು
2005 ರಲ್ಲಿ ಸ್ಥಾಪನೆಯಾದ 'ಯೂಟ್ಯೂಬ್' ಇಂದು ವಿಶ್ವದ ಜನಪ್ರಿಯ ವೆಬ್‌ಸೈಟ್. ಅಷ್ಟೇ ಅಲ್ಲ ಅತಿ ಹೆಚ್ಚು ಆದಾಯ ತರುವ ಹಾಗೂ ಹೆಚ್ಚು ಮಂದಿಗೆ ಸಂಭಾವನೆ ವಿತರಣೆ ಮಾಡುವ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಮುಖವಾದುದ್ದು ಯೂಟ್ಯೂಬ್.
2005 ರಲ್ಲಿ ಚಾಡ್ ಹರ್ಲಿ, ಸ್ಟೀವ್ ಚೆನ್, ಜಾವೆದ್ ಕರೀಮ್ ಎಂಬ ಮೂವರು ಯೂಟ್ಯೂಬ್ ಅನ್ನು ಮೊದಲಿಗೆ ಸ್ಥಾಪಿಸಿದರು. ಮೊದಲ ಯೂಟ್ಯೂಬ್ ಅಪ್‌ಲೋಡ್ ಆದದ್ದು ಏಪ್ರಿಲ್ 23 , 2005 ರಂದು. ಅದಾದ ಒಂದೇ ವರ್ಷಕ್ಕೆ ಅಂದರೆ ಅಕ್ಟೋಬರ್ 09 , 2006 ರಲ್ಲಿ ಗೂಗಲ್ ಸಂಸ್ಥೆಯು ಯೂಟ್ಯೂಬ್ ಅನ್ನು 12 ಸಾವಿರ ಕೋಟಿ ರೂಪಾಯಿ ಕೊಟ್ಟು ಖರೀದಿಸಿತು.
ಯೂಟ್ಯೂಬ್ ವೆಬ್‌ಸೈಟ್ ನಿರ್ಮಿಸಲು ಮೂಲ ಕಾರಣವಾಗಿದ್ದು 2004 ರಲ್ಲಿ ಅಪ್ಪಳಿಸಿದ ಸುನಾಮಿ. ಹೌದು, 2004 ರಲ್ಲಿ ಭಾರತ ಸೇರಿ ಹಲವು ರಾಷ್ಟ್ರಗಳಿಗೆ ಅಪ್ಪಳಿಸಿದ ಸುನಾಮಿಯ ವಿಡಿಯೋಗಳನ್ನು ಹುಡುಕಲು ಕರೀಮ್ ಯತ್ನಿಸಿದಾಗ ಅವು ಅಂತರ್ಜಾಲದಲ್ಲಿ ಸಿಗಲಿಲ್ಲ. ಆಗ ಅವರಿಗೆ ಅನಿಸಿದ್ದು, ವಿಡಿಯೋಗಳನ್ನು ಹಂಚಿಕೊಳ್ಳಲು ಮತ್ತೊಬ್ಬರು ಅವನ್ನು ನೋಡುವಂತಾಗಲು ವೇದಿಕೆಯೊಂದು ಬೇಕೆಂದು ಆಗಲೇ ಹೊಳೆದಿದ್ದು ಯೂಟ್ಯೂಬ್ ಐಡಿಯಾ. ಆ ನಂತರ ನಡೆದಿದ್ದೆಲ್ಲಾ ಇತಿಹಾಸ. ಕೆಲವೇ ವರ್ಷಗಳಲ್ಲಿ ಯೂಟ್ಯೂಬ್ ಎಂಬುದು ಅಕ್ಷಯ ಪಾತ್ರೆಯಾಗಿ ಹೋಯಿತು. ಈ ಅದ್ಭುತ ತಾಣ ಯೂಟ್ಯೂಬ್ ಬಗ್ಗೆ ಹಲವು ಆಸಕ್ತಿಕರ ಸಂಗತಿಗಳು ನಿಮಗಾಗಿ...

ಪ್ರತಿ ನಿಮಿಷಕ್ಕೆ 300 ನಿಮಿಷದ ವಿಡಿಯೋ ಅಪ್‌ಲೋಡ್
ಯೂಟ್ಯೂಬ್‌ಗೆ ಪ್ರತಿ ನಿಮಿಷ ಸುಮಾರು 300 ನಿಮಿಷಗಳಷ್ಟು ಲೆಂತ್‌ನ ವಿಡಿಯೋಗಳು ಅಪ್‌ಲೋಡ್ ಆಗುತ್ತವೆ. ಅಂದರೆ ಸತತವಾಗಿ ಬಿಡದೇ ನೋಡಿದರೂ 13 ದಿನ ಸತತವಾಗಿ ನೋಡಬಹುದಾದಷ್ಟು ವಿಡಿಯೋಗಳು ಕೇವಲ ಒಂದು ನಿಮಿಷದಲ್ಲಿ ಯೂಟ್ಯೂಬ್‌ಗೆ ವಿಶ್ವದಾದ್ಯಂತದಿಂದ ಅಪ್‌ಲೋಡ್ ಆಗುತ್ತವೆ.

ಪ್ರತಿದಿನ 500 ಕೋಟಿ ವಿಡಿಯೋಗಳ ವೀಕ್ಷಣೆ
ವಿಶ್ವದಾದ್ಯಂತ 130 ಕೋಟಿಗೂ ಹೆಚ್ಚು ಮಂದಿ ಯೂಟ್ಯೂಬ್ ಅನ್ನು ಬಳಸುತ್ತಾರೆ. ಪ್ರತಿ ದಿನ 500 ಕೋಟಿ ಯೂಟ್ಯೂಬ್ ವಿಡಿಯೋಗಳನ್ನು ವೀಕ್ಷಿಸಲಾಗುತ್ತದೆ. ಪ್ರತಿ ತಿಂಗಳು ಸರಾಸರಿ 3250 ಕೋಟಿ ಗಂಟೆಗಳ ಕಾಲದ ಯೂಟ್ಯೂಬ್ ವಿಡಿಯೋಗಳನ್ನು ನೋಡಲಾಗುತ್ತದೆ.

ಎಲ್ಲ ವಿಡಿಯೋ ನೋಡಲು ಒಬ್ಬ ವ್ಯಕ್ತಿಗೆ ಎಷ್ಟು ವರ್ಷ ಬೇಕು?
ಕೇವಲ 10,000 ವಿಡಿಯೋಗಳಿಂದಲೇ ಯೂಟ್ಯೂಬ್‌ಗೆ 100 ಕೋಟಿಗೂ ಹೆಚ್ಚು ವೀವ್ಸ್ ಸಿಗುತ್ತದೆ. ಹಾಗಿದ್ದ ಮೇಲೆ ಯುಟ್ಯೂಬ್‌ನಲ್ಲಿರುವ ಎಲ್ಲ ವಿಡಿಯೋಗಳಿಂದ ಎಷ್ಟು ವೀವ್ಸ್ ಬರುವುದೆಂದು ಲೆಕ್ಕ ಹಾಕಲು ಸಾಧ್ಯವೇ ಇಲ್ಲ. ಯೂಟ್ಯೂಬ್‌ನಲ್ಲಿ ಅದೆಷ್ಟು ವಿಡಿಯೋಗಳಿವೆಯೆಂದರೆ ಒಬ್ಬ ವ್ಯಕ್ತಿಗೆ ಕನಿಷ್ಟ 500 ವರ್ಷಗಳು ಬೇಕು ಎಲ್ಲ ವಿಡಿಯೋಗಳನ್ನು ನೋಡಿ ಮುಗಿಸಲು!

ಯೂಟ್ಯೂಬ್ ನಿರ್ವಣೆಗೆ ಆಗುವ ಖರ್ಚೆಷ್ಟು?
ಯೂಟ್ಯೂಬ್ ನ ಒಂದು ವರ್ಷದ ನಿರ್ವಹಣೆ ಖರ್ಚು 46 ಸಾವಿರ ಕೋಟಿ ರುಪಾಯಿಗೂ ಹೆಚ್ಚು. ನಿರ್ವಣೆ, ಖರ್ಚು ಎಲ್ಲ ಕಳೆದು ಗೂಗಲ್ ಪ್ರತಿ ವರ್ಷ ಯೂಟ್ಯೂಬ್ ಒಂದರಿಂದಲೇ 29 ಸಾವಿರ ಕೋಟಿಗೂ ಹೆಚ್ಚು ಹಣ ಗಳಿಸುತ್ತದೆ. ಗೂಗಲ್‌ನ ಒಟ್ಟು ಜಾಹೀರಾತು ಲಾಭದ ಶೇ 6 ರಷ್ಟು ಯೂಟ್ಯೂಬ್ ಒಂದರಿಂದಲೇ ಬರುತ್ತದೆ.

ವರ್ಷಕ್ಕೆ 924 ಕೋಟಿ ಗಳಿಸಿದ್ದ ಒಬ್ಬ ಯೂಟ್ಯೂಬರ್
2007ರಲ್ಲಿಯೇ ಯೂಟ್ಯೂಬ್ ಕಂಟೆಂಟ್ ಕ್ರಿಯೇಟರ್‌ಗಳಿಗೆ 9000 ಕೋಟಿಗೂ ಹೆಚ್ಚು ಹಣ ನೀಡಿತ್ತು. ಈಗ ಈ ಹಣ ಹತ್ತು ಪಟ್ಟು ಹೆಚ್ಚಾಗಿದೆ ಎನ್ನಲಾಗುತ್ತದೆ. 2017 ರಲ್ಲಿ ಒಬ್ಬನೇ ಯೂಟ್ಯೂಬರ್, ಯೂಟ್ಯೂಬ್‌ನಿಂದ ವರ್ಷಕ್ಕೆ 924 ಕೋಟಿ ಗಳಿಸಿದ್ದ. (ಯೂಟ್ಯೂಬ್‌ನಲ್ಲಿ ಹಣ ಗಳಿಸುವುದು ಹೇಗೆ, ಹೆಚ್ಚು ಯಾರು ಗಳಿಸುತ್ತಿದ್ದಾರೆ ಎಂಬ ಮಾಹಿತಿ ಮುಂದಿನ ಲೇಖನದಲ್ಲಿ ದೊರೆಯಲಿದೆ, ನಿರೀಕ್ಷಿಸಿ)

ಒಬ್ಬ ವ್ಯಕ್ತಿ ಸರಾಸರಿ 40 ನಿಮಿಷ ಯೂಟ್ಯೂಬ್ ವೀಕ್ಷಿಸುತ್ತಾನೆ
ಯೂಟ್ಯೂಬ್ ಗಳಿಸುವ ಒಟ್ಟು ವೀವ್ಸ್‌ನ ಆಧಾರದ ಮೇಲೆ ಲೆಕ್ಕ ಹಾಕಿ ದೊರಕಿರುವ ಮಾಹಿತಿಯಂತೆ, ಯೂಟ್ಯೂಬ್ ಬಳಸುವ ವ್ಯಕ್ತಿ ದಿನಕ್ಕೆ ಸರಾಸರಿ 40 ನಿಮಿಷ ಯೂಟ್ಯೂಬ್ ನೋಡುತ್ತಾನಂತೆ. ಮುಂದಿನ ದಿನಗಳಲ್ಲಿ ಈ ಅವಧಿ ಹೆಚ್ಚಾಗುತ್ತದೆ ಎನ್ನಲಾಗುತ್ತಿದೆ.

ಹಲವು ಭಾಷೆಗಳಲ್ಲಿ ಯೂಟ್ಯೂಬ್ ವಿಡಿಯೋಗಳಿವೆ
ಬರೋಬ್ಬರಿ 76 ಭಿನ್ನ ಭಾಷೆಗಳಲ್ಲಿ ಯೂಟ್ಯೂಬ್ ಆಯ್ಕೆಗಳು ಲಭ್ಯವಿದೆ. ಯೂಟ್ಯೂಬ್ ವಿಡಿಯೋಗಳಲ್ಲಿ ಬಳಸಲಾಗಿರುವ ಭಾಷೆಗಳು 4000 ಕ್ಕೂ ಹೆಚ್ಚು. ಅತಿ ಹೆಚ್ಚು ಯೂಟ್ಯೂಬ್ ನೋಡುವವರ ಸಂಖ್ಯೆ ಅಮೆರಿಕದಿಂದ ಹೊರಗೆ ಹೆಚ್ಚು ಇದೆ. ಅಮೆರಿಕದ ಬಹುತೇಕ ಎಲ್ಲ ಉದ್ದಿಮೆಗಳೂ ಸಹ ಯೂಟ್ಯೂಬ್ ಅನ್ನು ಬಳಸುತ್ತವೆ.