For Quick Alerts
  ALLOW NOTIFICATIONS  
  For Daily Alerts

  2020 ಫ್ಲ್ಯಾಶ್ ಬ್ಯಾಕ್; ಕೊರೊನಾಗೆ ಬಲಿಯಾದ ಸಿನಿತಾರೆಯರೆಷ್ಟು? ಇಲ್ಲಿದೆ ಮಾಹಿತಿ

  |

  ಕೊರೊನಾ ವೈರಸ್ ಗೆ ಇಡೀ ವಿಶ್ವವೇ ಬೆಚ್ಚಿಬಿದ್ದಿದೆ. ಜಗತ್ತನ್ನು ತೀರಾ ಸಂಕಷ್ಟಕ್ಕೆ ಸಿಲುಕಿಸಿ, ಕೊರೊನಾ ವೈರಸ್ ಲಕ್ಷಾಂತರ ಮಂದಿಯನ್ನು ಬಲಿಪಡೆದಿದೆ. 2020 ವರ್ಷವನ್ನು ಕೊರೊನಾ ವರ್ಷವೆಂದೆ ಕರೆಯಲಾಗುತ್ತಿದೆ. ಕರಾಳ ವರ್ಷದಲ್ಲಿ ಸಿನಿಮಾರಂಗದ ಅನೇಕರು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.

  ಕನ್ನಡ ಕಲಾವಿದರು ಸೇರಿದಂತೆ ಬೇರೆ ಬೇರೆ ಭಾಷೆಯ ಅನೇಕ ಸೆಲೆಬ್ರಿಟಿಗಳು ಕೊರೊನಾದಿಂದ ಮೃತಪಟ್ಟಿದ್ದಾರೆ. ಈ ವರ್ಷ ತಳಕು ಬಳುಕಿನ ರಂಗಿನ ಲೋಕ ಅನೇಕರನ್ನು ಕಳೆದುಕೊಂಡಿದೆ. 2020 ಚಿತ್ರರಂಗದಲ್ಲಿ ಮರೆಯಾದವರ ಸಂಖ್ಯೆ ಜಾಸ್ತಿಯೇ ಇದೆ. ಇದರಲ್ಲಿ ಕೊರೊನಾದಿಂದ ಮೃತಪಟ್ಟವರ ಸಿನಿ ಸೆಲೆಬ್ರಿಟಿಗಳ ಪಟ್ಟಿ ಇಲ್ಲಿದೆ.

  ಜಪಾನ್ ಹಾಸ್ಯ ನಟ ಕೆನ್ ಶಿಮುರಾ

  ಜಪಾನ್ ಹಾಸ್ಯ ನಟ ಕೆನ್ ಶಿಮುರಾ

  2020 ಮಾರ್ಚ್ ತಿಂಗಳಲ್ಲಿ ಜಪಾನ್‌ನ ಖ್ಯಾತ ಹಾಸ್ಯ ನಟ ಕೆನ್ ಶಿಮುರಾ ಕೊರೊನಾ ವೈರಸ್ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಾರ್ಚ್ 30ರಂದು ಮೃತಪಟ್ಟಿದ್ದಾರೆ. ವೈರಸ್‌ಗೆ ಬಲಿಯಾದ ಜಪಾನ್‌ನ ಮೊದಲ ಸೆಲೆಬ್ರಿಟಿ ಎನಿಸಿದ್ದಾರೆ. 70 ವರ್ಷದ ಶಿಮುರಾ, ಜಪಾನ್‌ನ ಪ್ರಸಿದ್ಧ ಹಾಸ್ಯನಟರಲ್ಲಿ ಒಬ್ಬರು. 1970ರಲ್ಲಿ ನಟನೆಯ ವೃತ್ತಿ ಆರಂಭಿಸಿದ ಅವರು, 2016ರಲ್ಲಿ ಶ್ವಾಸಕೋಶದ ಶಸ್ತ್ರಚಿಕಿತ್ಸಗೆ ಒಳಗಾಗಿದ್ದರು. ಮಾರ್ಚ್ 19ರಂದು ಅವರಲ್ಲಿ ಜ್ವರ ಮತ್ತು ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಬಳಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಲ್ಲಿ ಕೊರೊನಾ ವೈರಸ್ ಇರುವುದು ಪತ್ತೆಯಾಗಿತ್ತು.

  ಕೊರೊನಾ ವೈರಸ್‌ಗೆ ಬಲಿಯಾದ ಜಪಾನ್ ಹಾಸ್ಯ ನಟ ಶಿಮುರಾಕೊರೊನಾ ವೈರಸ್‌ಗೆ ಬಲಿಯಾದ ಜಪಾನ್ ಹಾಸ್ಯ ನಟ ಶಿಮುರಾ

  ಗಾಯಕ ವಾಜಿದ್ ಖಾನ್ ನಿಧನ

  ಗಾಯಕ ವಾಜಿದ್ ಖಾನ್ ನಿಧನ

  ಹಿಂದಿ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ, ಗಾಯಕ ವಾಜಿದ್ ಖಾನ್ (42) ಜೂನ್ 1ರಂದು ನಿಧನರಾದರು. ಸಾಜಿದ್- ವಾಜಿದ್ ಸಹೋದರ ಜೋಡಿಯ ಸಂಗೀತ ನಿರ್ದೇಶನ ಬಾಲಿವುಡ್‌ನಲ್ಲಿ ಮನೆ ಮಾತಾಗಿತ್ತು. ಅವರಲ್ಲಿ ವಾಜಿದ್ ಅವರ ಹಠಾತ್ ನಿರ್ಗಮನ ಬಾಲಿವುಡ್‌ಗೆ ಆಘಾತ ಮೂಡಿಸಿತ್ತು. ಮೂತ್ರಪಿಂಡದ ಸೋಂಕಿನ ಕಾರಣದಿಂದ ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರಲ್ಲಿ ಕೊರೊನಾ ವೈರಸ್ ಪಾಸಿಟಿವ್ ಕೂಡ ಪತ್ತೆಯಾಗಿತ್ತು.

  ಸಲ್ಮಾನ್ ಖಾನ್ ಚಿತ್ರಗಳಿಂದ ಹೆಸರಾಗಿದ್ದ ಖ್ಯಾತ ಸಂಗೀತ ನಿರ್ದೇಶಕ ವಾಜಿದ್ ಖಾನ್ ನಿಧನಸಲ್ಮಾನ್ ಖಾನ್ ಚಿತ್ರಗಳಿಂದ ಹೆಸರಾಗಿದ್ದ ಖ್ಯಾತ ಸಂಗೀತ ನಿರ್ದೇಶಕ ವಾಜಿದ್ ಖಾನ್ ನಿಧನ

  ನಿರ್ಮಾಪಕ ಪೋಕುರಿ ರಾಮಾ ರಾವ್

  ನಿರ್ಮಾಪಕ ಪೋಕುರಿ ರಾಮಾ ರಾವ್

  ತೆಲುಗಿನ ಖ್ಯಾತ ನಿರ್ಮಾಪಕ ಪೋಕುರಿ ರಾಮಾ ರಾವ್ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಜುಲೈ 4ರಂದು ಪೊಕುರಿ ರಾಮ ರಾವ್ ನಿಧನ ಹೊಂದಿದ್ದಾರೆ. 65 ವರ್ಷದ ರಾಮ ರಾವ್ ಕೊರೊನಾ ಪಾಸಿಟಿವ್ ಬಂದ ಬಳಿಕ ಆಸ್ಪತ್ರೆಗೆ ದಾಖಲಾಗಿದ್ದು. ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ. ರಣಂ, ಯಜ್ಞಂ, ಅಮ್ಮಾಯಿ ಕೋಸಂ, ಮಾ ಆಯನ ಬಂಗಾರಂ, ಪ್ರಜಾಸ್ವಾಯಂ ಇನ್ನೂ ಹಲವು ಸಿನಿಮಾಗಳನ್ನು ಅವರು ನಿರ್ಮಿಸಿದ್ದರು.

  ಕೊರೊನಾ ವೈರಸ್‌ಗೆ ತೆಲುಗಿನ ಪ್ರಮುಖ ಸಿನಿಮಾ ನಿರ್ಮಾಪಕ ಬಲಿಕೊರೊನಾ ವೈರಸ್‌ಗೆ ತೆಲುಗಿನ ಪ್ರಮುಖ ಸಿನಿಮಾ ನಿರ್ಮಾಪಕ ಬಲಿ

  ಹಿರಿಯ ನಟ ಹುಲಿವಾನ್ ಗಂಗಾಧರ್

  ಹಿರಿಯ ನಟ ಹುಲಿವಾನ್ ಗಂಗಾಧರ್

  ಸ್ಯಾಂಡಲ್ ವುಡ್ ನ ಹಿರಿಯ ನಟ ಹುಲಿವಾನ್ ಗಂಗಾಧರ್ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. 70 ವರ್ಷದ ಗಂಗಾಧರ್ ಅನೇಕ ಧಾರಾವಾಹಿ ಮತ್ತು ಸಿನಿಮಾಗಳಲ್ಲಿ ನಟಿಸಿದ್ದರು. ಜುಲೈ 17ರಂದು ಗಂಗಾಧರ್ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

  ಹಿರಿಯ ನಟ ಹುಲಿವಾನ್ ಗಂಗಾಧರ್ ಕೊರೊನಾ ಸೋಂಕಿಗೆ ಬಲಿಹಿರಿಯ ನಟ ಹುಲಿವಾನ್ ಗಂಗಾಧರ್ ಕೊರೊನಾ ಸೋಂಕಿಗೆ ಬಲಿ

  ಯುವ ಬರಹಗಾರ ವಂಶಿ ರಾಜೇಶ್

  ಯುವ ಬರಹಗಾರ ವಂಶಿ ರಾಜೇಶ್

  2020ಯಲ್ಲಿ ಕೊರೊನಾದಿಂದ ಇಹಲೋಕ ತ್ಯಜಿಸಿದ ಸಿನಿತಾರೆಯರಲ್ಲಿ ತೆಲುಗು ಇಂಡಸ್ಟ್ರಿಯ ಯುವ ಬರಹಗಾರ ವಂಶಿ ರಾಜೇಶ್ ಕೊಂಡವೀಟಿ ಕೂಡ ಒಬ್ಬರು. ನವೆಂಬರ್ 12 ರಂದು ರಾತ್ರಿ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ವಂಶಿ ರಾಜೇಶ್ ಕೊನೆಯುಸಿರೆಳೆದಿದ್ದಾರೆ. ತಿಂಗಳ ಹಿಂದೆಯೇ ವಂಶಿ ರಾಜೇಶ್ ಕೊಂಡವೀಟಿಗೆ ಕೊರೊನಾ ಸೋಂಕು ತಗುಲಿತ್ತು. ನಂತರ ಆಸ್ಪತ್ರೆಗೆ ಸಹ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಧನಹೊಂದಿದ್ದಾರೆ.

  ಕೊರೊನಾಗೆ ಬಲಿಯಾದ ಯುವ ಬರಹಗಾರ ವಂಶಿ ರಾಜೇಶ್ ಕೊಂಡವೀಟಿಕೊರೊನಾಗೆ ಬಲಿಯಾದ ಯುವ ಬರಹಗಾರ ವಂಶಿ ರಾಜೇಶ್ ಕೊಂಡವೀಟಿ

  ಮರಾಠಿ ನಟಿ ಆಶಾಲತಾ

  ಮರಾಠಿ ನಟಿ ಆಶಾಲತಾ

  ಕೊರೊನಾ ಸೋಂಕಿಗೆ ತುತ್ತಾಗಿದ್ದ ಮರಾಠಿ ಭಾಷೆಯ ಹಿರಿಯ ನಟಿ ಆಶಾಲತಾ ವಬ್ ಗಾಂವಕರ್ ಸೆಪ್ಟಂಬರ್ 22ರಂದು ನಿಧನ ಹೊಂದಿದ್ದಾರೆ. ಅವರಿಗೆ 79 ವರ್ಷ ವಯಸ್ಸಾಗಿತ್ತು. ಆಶಾಲತಾ ವಬ್ ಗಾಂವಕರ್ ಅವರು ಟಿವಿ ಧಾರಾವಾಹಿ ಚಿತ್ರೀಕರಣಕ್ಕಾಗಿ ಸತಾರಾಗೆ ತೆರಳಿದ್ದರು. ಕೊರೊನಾ ಪಾಸಿಟಿವ್ ಎಂದು ಗೊತ್ತಾದ ಬಳಿಕ ಆಶಾಲತಾ ಸತಾರಾದಲ್ಲಿಯೇ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆಶಾಲತಾ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ.

  ಮರಾಠಿ ಹಿರಿಯ ನಟಿ ಆಶಾಲತಾ ಕೊರೊನಾದಿಂದ ಸಾವುಮರಾಠಿ ಹಿರಿಯ ನಟಿ ಆಶಾಲತಾ ಕೊರೊನಾದಿಂದ ಸಾವು

  ಬೆಂಗಾಲಿಯ ಖ್ಯಾತ ನಟ ಸೌಮಿತ್ರ ಚಟರ್ಜಿ

  ಬೆಂಗಾಲಿಯ ಖ್ಯಾತ ನಟ ಸೌಮಿತ್ರ ಚಟರ್ಜಿ

  ಬೆಂಗಾಲಿಯ ಸೂಪರ್ ಸ್ಟಾರ್, ದಂತಕತೆ ನಟ ಸೌಮಿತ್ರಾ ಚಟರ್ಜಿ ನವೆಂಬರ್ 15ರಂದು ಕೊನೆ ಉಸಿರೆಳೆದಿದ್ದಾರೆ. ಸೌಮಿತ್ರಾ ಚಟರ್ಜಿ ಅವರಿಗೆ ಒಂದು ತಿಂಗಳ ಹಿಂದೆ ಕೊರೊನಾ ಸೋಂಕು ತಗುಲಿತ್ತು, 85 ವರ್ಷ ವಯಸ್ಸಿನ ಅವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಕಾರಣ ಅವರನ್ನು ಅಕ್ಟೋಬರ್ 6 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅನೇಕ ದಿನಗಳಿಂದ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಸೌಮಿತ್ರ ಚಟರ್ಜಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

  ಬೆಂಗಾಲಿಯ ಸೂಪರ್ ಸ್ಟಾರ್ ಸೌಮಿತ್ರಾ ಚಟರ್ಜಿ ಕೋವಿಡ್‌ಗೆ ಬಲಿಬೆಂಗಾಲಿಯ ಸೂಪರ್ ಸ್ಟಾರ್ ಸೌಮಿತ್ರಾ ಚಟರ್ಜಿ ಕೋವಿಡ್‌ಗೆ ಬಲಿ

  Arjun Sarjaಗೆ ಇನ್ನೂ ಮರೆಯಾಗಿಲ್ಲ ಆ ನೋವು | Filmibeat Kannada
  ಧಾರಾವಾಹಿ ನಟಿ ದಿವ್ಯಾ

  ಧಾರಾವಾಹಿ ನಟಿ ದಿವ್ಯಾ

  ಹಿಂದಿ ಕಿರುತೆರೆ ಲೋಕದ ಜನಪ್ರಿಯ ನಟಿಯರಲ್ಲಿ ಒಬ್ಬರಾಗಿದ್ದ ದಿವ್ಯಾ ಭಟ್ನಾಗರ್ ಡಿಸೆಂಬರ್ 7ರಂದು ಕೊರೊನಾದಿಂದ ಇಹಲೋಕ ತ್ಯಜಿಸಿದ್ದಾರೆ. ದಿವ್ಯಾ ಭಟ್ನಾಗರ್ ಗೆ ಕೆಲವು ದಿನಗಳ ಹಿಂದೆ ಕೊರೊನಾ ಪಾಸಿಟಿವ್ ವರದಿ ಬಂದಿತ್ತು. ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಕಾರಣ ಅವರನ್ನು ವೆಂಟಿಲೇಟರ್‌ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಕಾರಿಯಾಗದೆ 34 ವರ್ಷದ ದಿವ್ಯಾ ಕೊನೆಯುಸಿರೆಳೆದಿದ್ದಾರೆ.

  ಕೊರೊನಾ ಕ್ಕೆ ಬಲಿಯಾದ ಧಾರಾವಾಹಿ ನಟಿ ದಿವ್ಯಾಕೊರೊನಾ ಕ್ಕೆ ಬಲಿಯಾದ ಧಾರಾವಾಹಿ ನಟಿ ದಿವ್ಯಾ

  English summary
  2020 FlashBack: Film Celebrities who died in 2020 due to coronavirus to coronavirus.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X