twitter
    For Quick Alerts
    ALLOW NOTIFICATIONS  
    For Daily Alerts

    ಇಂದಿರಾ ಗಾಂಧಿ ಮತ್ತು ಸಿನಿಮಾರಂಗ: ತೆರೆಮೇಲೆ 'ಉಕ್ಕಿನ ಮಹಿಳೆ' ಗತ್ತು

    |

    ಸ್ವಾತಂತ್ರ್ಯ ನಂತರ ಭಾರತ ದೇಶವನ್ನು ಹಲವು ಪ್ರಧಾನ ಮಂತ್ರಿಗಳು ಮುನ್ನಡೆಸಿದರು. ಆದರೆ ದೇಶವನ್ನಾಳಿದ ಪ್ರಥಮ ಹಾಗೂ ಏಕೈಕ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ. ಜವಾಹರಲಾಲ್ ನೆಹರೂ ಮಗಳಾಗಿದ್ದ ಇಂದಿರಾ ಸುಮಾರು ಹದಿನೈದು ವರ್ಷಗಳ ಕಾಲ ಭಾರತದ ಪ್ರಧಾನಿಮಂತ್ರಿ ಸ್ಥಾನಯಲ್ಲಿದ್ದರು. ಒಟ್ಟು ನಾಲ್ಕು ಭಾರಿ ಪ್ರಧಾನಿ ಹುದ್ದೆ ಅಲಂಕರಿಸಿದ್ದರು.

    ದೇಶದ ಅಭಿವೃದ್ದಿ ಹಾಗೂ ಭದ್ರತೆ ದೃಷ್ಟಿಯಿಂದ ಇಂದಿರಾ ಗಾಂಧಿ ಕೈಗೊಂಡ ಕೆಲವು ದಿಟ್ಟ ನಿರ್ಧಾರಗಳು ಆಕೆಯನ್ನು 'ಉಕ್ಕಿನ ಮಹಿಳೆ'ಯನ್ನಾಗಿ ಬಿಂಬಿಸಿತು. 1975ರಲ್ಲಿ ಇಡೀ ರಾಷ್ಟ್ರ ತುರ್ತುಪರಿಸ್ಥಿತಿ ಎದುರಿಸಿದ್ದು ಇಂದಿರಾ ಗಾಂಧಿ ಆಡಳಿತದ ಸಮಯದಲ್ಲಿಯೇ. ಇಂದಿರಾ ಗಾಂಧಿ ಸ್ವಾತಂತ್ರ್ಯ ಪೂರ್ವ ಭಾರತದಲ್ಲಿ ಮಹಾತ್ಮ ಗಾಂಧಿ ಜೊತೆ ಗುರುತಿಸಿಕೊಂಡಿದ್ದರು. ಸ್ವಾತಂತ್ರ್ಯ ನಂತರ ದೇಶವನ್ನು ಮುನ್ನಡೆಸಿದವರು. ಇಂದಿರಾ ಜೀವನದ ಬಗ್ಗೆ ಆಳವಾಗಿ ತಿಳಿಯಲು ಹೊರಟರೆ ರೋಚಕ ಪುಟಗಳು ತೆರೆದುಕೊಳ್ಳುತ್ತದೆ.

    'ಬೆಲ್ ಬಾಟಮ್' ಚಿತ್ರದಲ್ಲಿ ಇಂದಿರಾ ಗಾಂಧಿ ಪಾತ್ರ ಮಾಡಿರೋದು ಯಾರು?'ಬೆಲ್ ಬಾಟಮ್' ಚಿತ್ರದಲ್ಲಿ ಇಂದಿರಾ ಗಾಂಧಿ ಪಾತ್ರ ಮಾಡಿರೋದು ಯಾರು?

    ಅದಕ್ಕೆ ಅನ್ಸುತ್ತೆ, ಸಿನಿಮಾರಂಗದಲ್ಲಿ ಪದೇ ಪದೇ ಇಂದಿರಾ ಗಾಂಧಿಯ ಪಾತ್ರಗಳು ಬರ್ತಾನೆ ಇವೆ. ಸಾಮಾನ್ಯವಾಗಿ 1970-80ರ ಕಾಲಘಟ್ಟದ ರಾಜಕೀಯ ಸುತ್ತ ಸಿನಿಮಾ ಮಾಡುವುದಾದರೆ ಇಂದಿರಾ ಗಾಂಧಿ ಪ್ರಮುಖ ಆಕರ್ಷಣೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಈಗಾಗಲೇ ಹಲವು ಚಿತ್ರಗಳಲ್ಲಿ ಇಂದಿರಾ ಗಾಂಧಿ ಪಾತ್ರ ಬಂದು ಹೋಗಿದೆ. ಈಗ ಬರ್ತಿರುವ ಸಿನಿಮಾಗಳಲ್ಲೂ ಉಕ್ಕಿನ ಮಹಿಳೆಯ ಪಾತ್ರ ಪ್ರಮುಖ ಅಸ್ತ್ರವಾಗಿ ಗೋಚರವಾಗುತ್ತಿದೆ. ಹಾಗಾದ್ರೆ, ಯಾವ ಯಾವ ಸಿನಿಮಾಗಳಲ್ಲಿ ಇಂದಿರಾ ಗಾಂಧಿ ಪ್ರಭಾವ ಹೆಚ್ಚು ಗಮನ ಸೆಳೆದಿದೆ? ಮುಂದೆ ಓದಿ...

    'ಬೆಲ್ ಬಾಟಮ್' ಚಿತ್ರದಲ್ಲಿ ಇಂದಿರಾ ಗಾಂಧಿ

    'ಬೆಲ್ ಬಾಟಮ್' ಚಿತ್ರದಲ್ಲಿ ಇಂದಿರಾ ಗಾಂಧಿ

    ಅಕ್ಷಯ್ ಕುಮಾರ್ ನಟನೆಯ ಬೆಲ್ ಬಾಟಮ್ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ಈ ಟ್ರೈಲರ್‌ನಲ್ಲಿ ಇಂದಿರಾ ಗಾಂಧಿ ಪಾತ್ರ ಬಹಳ ಪ್ರಮುಖವಾಗಿ ಗಮನ ಸೆಳೆದಿದೆ. 1984ರಲ್ಲಿ ನಡೆದ ವಿಮಾನ ಅಪಹರಣ ನೈಜ ಘಟನೆಯ ಸುತ್ತ ಚಿತ್ರಕಥೆ ಮಾಡಿದ್ದು, ಭಾರತೀಯ ಸ್ಪೈ ಏಜೆಂಟ್ ಪಾತ್ರದಲ್ಲಿ ಅಕ್ಷಯ್ ಕುಮಾರ್ ನಟಿಸಿದ್ದಾರೆ. ಅಂದಿನ ಭಾರತದ ಪ್ರಧಾನಮಂತ್ರಿ ಇಂದಿರಾ ಗಾಂಧಿ ಪಾತ್ರದಲ್ಲಿ ಲಾರಾ ದತ್ತಾ ಅಭಿನಯಿಸಿದ್ದು, ಅದ್ಭುತವಾದ ಮೇಕ್ ಓವರ್ ಮೂಲಕ ಗಮನ ಸೆಳೆದಿದ್ದಾರೆ. ಟ್ರೈಲರ್‌ನಲ್ಲಿ ಇಂದಿರಾ ಪಾತ್ರಧಾರಿಯನ್ನು ನೋಡಿದ್ರೆ ಒಂದು ಕ್ಷಣ ವಾಹ್ ಎನ್ನುವಂತಿದೆ. ಥೇಟ್ ಇಂದಿರಾ ಗಾಂಧಿಯ ಪ್ರತಿರೂಪ ಇದ್ದಂತಿದೆ. ಸಿನಿಮಾ ಬಿಡುಗಡೆಗೆ ಮುಂಚೆಯೇ ಲಾರಾ ದತ್ತಾ ಡೆಡಿಕೇಷನ್‌ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

    'ಭುಜ್' ಚಿತ್ರದಲ್ಲೂ ಇಂದಿರಾ ಪಾತ್ರ

    'ಭುಜ್' ಚಿತ್ರದಲ್ಲೂ ಇಂದಿರಾ ಪಾತ್ರ

    1971ರಲ್ಲಿ ನಡೆದ ನೈಜ ಘಟನೆ ಆಧರಿಸಿ ಮಾಡಿರುವ ಸಿನಿಮಾ ಭುಜ್: ದಿ ಫ್ರೈಡ್ ಆಫ್ ಇಂಡಿಯಾ. ಈ ಚಿತ್ರದಲ್ಲಿಯೂ ಇಂದಿರಾ ಗಾಂಧಿ ಪಾತ್ರ ಇದೆ. ಸಿನಿಮಾದಲ್ಲಿ ಇಂದಿರಾ ಪಾತ್ರ ಮಾಡಿರುವವರ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ. ಆದರೆ, ಟ್ರೈಲರ್‌ನಲ್ಲಿ ಮಹಿಳಾ ಪ್ರಧಾನಿಯ ಛಾಯೆ ಗಮನ ಸೆಳೆದಿದೆ.

    ಕಂಗನಾ ರಣಾವತ್ 'ಎಮರ್ಜೆನ್ಸಿ'

    ಕಂಗನಾ ರಣಾವತ್ 'ಎಮರ್ಜೆನ್ಸಿ'

    ಇಂದಿರಾ ಗಾಂಧಿ ಜೀವನ ಆಧರಿಸಿ ಸಿನಿಮಾ ಮಾಡುವುದಾಗಿ ಕಂಗನಾ ರಣಾವತ್ ಘೋಷಿಸಿದ್ದಾರೆ. ಚಿತ್ರಕ್ಕೆ ಎಮರ್ಜೆನ್ಸಿ ಎಂದು ಹೆಸರಿಟ್ಟಿದ್ದು, ಪೂರ್ವ ತಯಾರಿ ಆರಂಭಿಸಿದ್ದಾರೆ. ಇಂದಿರಾ ಪಾತ್ರಕ್ಕಾಗಿ ಕಂಗನಾ ಈಗಿನಿಂದಲೇ ಮೇಕ್ ಓವರ್ ಮಾಡಿಕೊಳ್ಳುತ್ತಿದ್ದು, ಖುದ್ದು ತಾವೇ ನಿರ್ದೇಶಿಸಲಿದ್ದಾರೆ. ಇಂದಿರಾ ಪಾತ್ರದಲ್ಲಿ ನಟಿಸಬೇಕು ಎನ್ನುವುದು ಕಂಗನಾಗೆ ಬಹಳ ವರ್ಷಗಳ ಆಸೆಯಂತೆ. ಈಗ ಆ ಅವಕಾಶ ಸಿಕ್ಕಿದ್ದು, ಲುಕ್ ಟೆಸ್ಟ್ ವೇಳೆ ಫೋಟೋ ಹಂಚಿಕೊಂಡಿದ್ದರು.

    'ಕೆಜಿಎಫ್' ರಮಿಕಾ ಸೇನ್

    'ಕೆಜಿಎಫ್' ರಮಿಕಾ ಸೇನ್

    ಕೆಜಿಎಫ್ ಸಿನಿಮಾದಲ್ಲಿ ಇಂದಿರಾ ಗಾಂಧಿ ಅವರನ್ನು ಹೋಲುವ ಪಾತ್ರ ಇದೆ. ಪ್ರಶಾಂತ್ ನೀಲ್ ಬರೆದಿರುವ ಕತೆ 1970ರ ಕಾಲಘಟ್ಟದಲ್ಲಿ ನಡೆದಿದೆ. ಚಿತ್ರದಲ್ಲಿ ಮಹಿಳಾ ಪ್ರಧಾನ ಮಂತ್ರಿಯ ಪಾತ್ರವೂ ಇದೆ. ಆದರೆ ಆ ಪಾತ್ರದ ಹೆಸರು ರಮಿಕಾ ಸೇನ್. ಪ್ರಧಾನಿಯಾಗಿ ಬಾಲಿವುಡ್ ನಟಿ ರವೀನಾ ಟಂಡನ್ ಅಭಿನಯಿಸಿದ್ದಾರೆ. ಆದರೆ, ಈ ಪಾತ್ರ ಇಂದಿರಾ ಗಾಂಧಿಯಿಂದ ಸ್ಫೂರ್ತಿ ಪಡೆದುಕೊಂಡಿರುವುದು ಎಂದು ಸುಲಭವಾಗಿ ಹೇಳಬಹುದು.

    ಇಂದು ಸರ್ಕಾರ್

    ಇಂದು ಸರ್ಕಾರ್

    2017ರಲ್ಲಿ 'ಇಂದು ಸರ್ಕಾರ್' ಎಂಬ ಸಿನಿಮಾ ಬಂತು. ಮಧುರ್ ಭಂಡಾರ್ಕರ್ ಈ ಸಿನಿಮಾ ನಿರ್ದೇಶಿಸಿದ್ದರು. 1975-1977ರವರೆಗೂ ಜಾರಿಯಲ್ಲಿದ್ದ ತುರ್ತು ಪರಿಸ್ಥಿತಿ ಆಧರಿಸಿ ಕಥೆ ಮಾಡಲಾಗಿತ್ತು. ಸುಪ್ರಿಯಾ ವಿನೋದ್ ಈ ಚಿತ್ರದಲ್ಲಿ ಇಂದಿರಾ ಗಾಂಧಿ ಪಾತ್ರ ಮಾಡಿದ್ದರು.

    1975ರಲ್ಲಿ ರಿಲೀಸ್ ಆಗಿದ್ದ 'ಆಂಧಿ'

    1975ರಲ್ಲಿ ರಿಲೀಸ್ ಆಗಿದ್ದ 'ಆಂಧಿ'

    'ಆಂಧಿ' ಸಿನಿಮಾ 1975ರಲ್ಲಿ ತೆರೆಕಂಡಿತ್ತು. ಈ ಚಿತ್ರವನ್ನು ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರಿಗೆ ನೀಡಿದ ಟ್ರಿಬ್ಯೂಟ್ ಎಂದು ಪರಿಗಣಿಸಲಾಗಿದೆ. ಇಂದಿರಾ ಗಾಂಧಿ ಅವರ ವೈಯಕ್ತಿಕ ಜೀವನ ಹಾಗೂ ರಾಜಕೀಯ ಜೀವನದ ಸುತ್ತ ಸಿನಿಮಾ ಮಾಡಲಾಗಿತ್ತು. ಇಂದಿರಾ ಗಾಂಧಿ ಪ್ರಧಾನಿಯಾಗಿದ್ದರಿಂದ ಈ ಚಿತ್ರಕ್ಕೆ ನಿರ್ಬಂಧ ಹೇರಲಾಗಿತ್ತು. ನಂತರ ಮುಂದಿನ ಚುನಾವಣೆಯಲ್ಲಿ ಇಂದಿರಾ ಗಾಂಧಿ ಸೋಲು ಕಂಡರು. ನಿರ್ಬಂಧ ಹಿಂಪಡೆಯಲಾಯಿತು.

    English summary
    These movies revolve around the indian first women Prime minister Indira gandhi.
    Thursday, August 5, 2021, 16:05
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X