Don't Miss!
- News
ರೈಲಿನಲ್ಲಿ ಹೋಗಿ ನಂದಿ ಬೆಟ್ಟ, ಆದಿಯೋಗಿ ಪ್ರತಿಮೆ, ಕೆಂಪೇಗೌಡ ಪ್ರತಿಮೆ ನೋಡಿ; ರೈಲ್ವೆಯಿಂದ ಪ್ರವಾಸ ಪ್ಯಾಕೇಜ್
- Sports
ಬಾರ್ಡರ್-ಗವಾಸ್ಕರ್ ಟ್ರೋಫಿ: ಭಾರತದತ್ತ ಪ್ರಯಾಣ ಆರಂಭಿಸಿದ ಆಸಿಸ್ ಆಟಗಾರರು
- Automobiles
ಟೊಯೊಟಾ ಇನೋವಾ ಹೈಕ್ರಾಸ್ ವಿತರಣೆ ಪ್ರಾರಂಭ: ಹೈಬ್ರಿಡ್ ರೂಪಾಂತರಕ್ಕೆ 1 ವರ್ಷ ಕಾಯಬೇಕು
- Lifestyle
February 2023 Horoscope : ಫೆಬ್ರವರಿ ತಿಂಗಳ ಭವಿಷ್ಯ: ಮೇಷ-ಮೀನದವರೆಗಿನ ರಾಶಿಗಳ ರಾಶಿಫಲ ಹೇಗಿದೆ?
- Technology
ಪೊಕೊ X5 ಪ್ರೊ ಲಾಂಚ್ಗೆ ಡೇಸ್ ಫಿಕ್ಸ್; ಭಾರೀ ಕುತೂಹಲ ಮೂಡಿಸಿದ ಫೀಚರ್ಸ್!
- Finance
Budget 2023: ರಾಷ್ಟ್ರಪತಿ ಭಾಷಣದೊಂದಿಗೆ ಜ.31ರಿಂದ ಬಜೆಟ್ ಅಧಿವೇಶನ ಆರಂಭ, ಈ ಮಾಹಿತಿ ತಿಳಿದಿರಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಈ ವರ್ಷ ಗೂಗಲ್‌ನಲ್ಲಿ ಅತಿ ಹೆಚ್ಚು ಸರ್ಚ್ ಆದ ಟಾಪ್ ಚಿತ್ರಗಳು
ದಕ್ಷಿಣ ಹಾಗೂ ಬಾಲಿವುಡ್‌ನಲ್ಲಿ ಈ ವರ್ಷ ತೆರೆಕಂಡ ಚಿತ್ರಗಳ ಸಂಖ್ಯೆ ಬಹಳ ಕಡಿಮೆ. ವರ್ಷದ ಆರಂಭದಲ್ಲಿ ಕೆಲವು ಸಿನಿಮಾಗಳು ಚಿತ್ರಮಂದಿರದಲ್ಲಿ ಬಿಡುಗಡೆಯಾದ್ರೆ, ಲಾಕ್‌ಡೌನ್‌ನಲ್ಲಿ ಕೆಲವು ಸಿನಿಮಾಗಳು ಒಟಿಟಿಯಲ್ಲಿ ರಿಲೀಸ್ ಆಗಿತ್ತು.
ಚಿತ್ರಮಂದಿರಗಳು ಬಂದ್ ಆಗಿದ್ದರು ನಿರೀಕ್ಷೆಯ ಸಿನಿಮಾಗಳ ಬಗ್ಗೆ ಸದಾ ಹುಡುಕಿದ್ದಾರೆ. ಚಿತ್ರದ ಅಪ್‌ಡೇಟ್‌ಗಾಗಿ ಗೂಗಲ್‌ನಲ್ಲಿ ಹೆಚ್ಚು ಸರ್ಚ್ ಮಾಡಿದ್ದಾರೆ. ಹಾಗಾದ್ರೆ, ಈ ವರ್ಷ ಗೂಗಲ್‌ನಲ್ಲಿ ಹೆಚ್ಚು ಹುಡುಕಲ್ಪಟ್ಟ ಚಿತ್ರ ಯಾವುದು ಇರಬಹುದು? ಲಾಕ್‌ಡೌನ್ ಆಗಿದ್ದರೂ ಯಾವ ಸಿನಿಮಾದ ಮೇಲೆ ಚಿತ್ರಪ್ರೇಮಿಗಳು ಹೆಚ್ಚು ಆಸಕ್ತಿ ಹೊಂದಿದ್ದರು ಎಂದು ಗೂಗಲ್ ಇಂಡಿಯಾ ಪಟ್ಟಿ ಬಿಡುಗಡೆ ಮಾಡಿದೆ. ಮುಂದೆ ಓದಿ...

10.ಗುಲಾಬೋ ಸಿತಾಬೋ
ಸೂಜಿತ್ ಸರ್ಕಾರ್ ನಿರ್ದೇಶನದಲ್ಲಿ ಮೂಡಿ ಬಂದಿದ್ದ 'ಗುಲಾಬೋ ಸಿತಾಬೋ' ಸಿನಿಮಾ ಈ ವರ್ಷ ಗೂಗಲ್‌ನಲ್ಲಿ ಅತಿ ಹೆಚ್ಚು ಸರ್ಚ್ ಆದ ಚಿತ್ರಗಳ ಪಟ್ಟಿಯಲ್ಲಿ ಹತ್ತನೇ ಸ್ಥಾನ ಪಡೆದುಕೊಂಡಿದೆ. ಅಮಿತಾಭ್ ಬಚ್ಚನ್, ಆಯುಷ್ಮಾನ್ ಖುರಾನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಜೂನ್ 12 ರಂದು ಅಮೇಜಾನ್ ಪ್ರೈಮನ್‌ನಲ್ಲಿ ಬಿಡುಗಡೆಯಾಗಿತ್ತು.
2020ರಲ್ಲಿ
ಗಮನ
ಸೆಳೆದ
ಬಾಲಿವುಡ್
ಮಹಿಳಾ
ಪ್ರಧಾನ
ಚಿತ್ರಗಳು

9.ಎಕ್ಸ್ಟ್ರಾಕ್ಷನ್
ಸ್ಯಾಮ್ ಹಾರ್ಗ್ರೇವ್ ನಿರ್ದೇಶನದ ಹಾಲಿವುಡ್ ಚಿತ್ರ ಎಕ್ಸ್ಟ್ರಾಕ್ಷನ್ ಈ ವರ್ಷ (ಭಾರತದಲ್ಲಿ) ಗೂಗಲ್‌ನಲ್ಲಿ ಹೆಚ್ಚು ಸರ್ಚ್ ಆದ ಚಿತ್ರಗಳ ಪೈಕಿ ಒಂಭತ್ತನೇ ಸ್ಥಾನದಲ್ಲಿದೆ. ಏಪ್ರಿಲ್ 24 ರಂದು ಬಿಡುಗಡೆಯಾಗಿತ್ತು.

8. ಭಾಗಿ-3
ಅಹ್ಮದ್ ಖಾನ್ ನಿರ್ದೇಶನದಲ್ಲಿ ತಯಾರಾಗಿದ್ದ ಭಾಗಿ 3 ಸಿನಿಮಾ 2020ರ ಗೂಗಲ್ ಸರ್ಚ್‌ನಲ್ಲಿ ಏಂಟನೇ ಸ್ಥಾನ ಪಡೆದಿದೆ. ಟೈಗರ್ ಶ್ರಾಫ್, ರಿತೇಶ್ ದೇಶ್‌ಮುಖ್, ಶ್ರದ್ಧಾ ಕಪೂರ್, ಅಂಕಿತಾ ನಟಿಸಿದ್ದರು. ಮಾರ್ಚ್ 6 ರಂದು ಬಿಡುಗಡೆಯಾಗಿತ್ತು.
2020ರಲ್ಲಿ
ಅತಿ
ಹೆಚ್ಚು
ಬಳಕೆಯಾದ
ಸಿನಿಮಾ
ಹ್ಯಾಷ್ಟ್ಯಾಗ್
ಯಾವುದು?

7. ಸಡಕ್-2
ಮಹೇಶ್ ಭಟ್ ನಿರ್ದೇಶನದ ಸಡಕ್ 2 ಸಿನಿಮಾ ಈ ವರ್ಷ ಭಾರಿ ವಿರೋಧ ಎದುರಿಸಿದೆ. ಸುಶಾಂತ್ ಸಿಂಗ್ ಸಾವಿನ ಹಿನ್ನೆಲೆ ನೆಪೋಟಿಸಂ ವಿಷಯಕ್ಕೆ ಸಂಬಂಧಿಸಿದಂತೆ ಮಹೇಶ್ ಭಟ್ ಕುಟುಂಬ ನೆಟ್ಟಿಗರಿಂದ ಟೀಕೆಗೆ ಗುರಿಯಾಗಿತ್ತು. ಇಂತಹ ಸಂದರ್ಭದಲ್ಲಿ ಸಡಕ್ 2 ಟ್ರೈಲರ್ ಬಿಡುಗಡೆಯಾಯಿತು. ಈ ಟ್ರೈಲರ್‌ಗೆ ಅತಿ ಹೆಚ್ಚು ಡಿಸ್‌ಲೈಕ್ಸ್ ಬಂದಿತ್ತು. ಈ ಕಾರಣದಿಂದಲೇ ಈ ಚಿತ್ರ ಹೆಚ್ಚು ಸದ್ದು ಮಾಡಿದೆ. ಗೂಗಲ್ ಸರ್ಚ್‌ನಲ್ಲಿ ಈ ಚಿತ್ರಕ್ಕೆ ಏಳನೇ ಸ್ಥಾನ.

6.ಅಕ್ಷಯ್ ಕುಮಾರ್ 'ಲಕ್ಷ್ಮಿ'
ಬಾಲಿವುಡ್ ನಟ ಅಕ್ಷಯ್ ಕುಮಾರ್ ನಟನೆಯ ಲಕ್ಷ್ಮಿ ಸಿನಿಮಾ ಕಳೆದ ತಿಂಗಳಷ್ಟೇ ತೆರೆಕಂಡಿದೆ. ತಮಿಳಿನ ಕಾಂಚನಾ 3 ಚಿತ್ರದ ರೀಮೇಕ್ ಆಗಿದ್ದ ಈ ಚಿತ್ರಕ್ಕೆ ಮೊದಲು ಲಕ್ಷ್ಮಿ ಬಾಂಬ್ ಎಂದು ಹೆಸರಿಡಲಾಗಿತ್ತು. ನಂತರ ಶೀರ್ಷಿಕೆಗೆ ವಿರೋಧ ವ್ಯಕ್ತವಾದ ಹಿನ್ನೆಲೆ ಲಕ್ಷ್ಮಿ ಎಂದು ಅಂತಿಮ ಮಾಡಲಾಯಿತು. ಈ ವಿಚಾರದಲ್ಲಿ ಈ ಸಿನಿಮಾ ಹೆಚ್ಚು ಸದ್ದು ಮಾಡಿತ್ತು. ಗೂಗಲ್ ಸರ್ಚ್‌ನಲ್ಲಿ ಈ ಚಿತ್ರಕ್ಕೆ ಆರನೇ ಸ್ಥಾನ.
2020
ಕನ್ನಡ
ಚಿತ್ರರಂಗ;
ಕೊರೊನಾ
ವರ್ಷದಲ್ಲಿ
ತೆರೆಕಂಡ
ಕನ್ನಡ
ಸಿನಿಮಾಗಳು

5. ಗುಂಜನ್ ಸಕ್ಸೇನಾ
ಭಾರತದ ಮೊದಲ ಮಹಿಳಾ ಯುದ್ಧ ವಿಮಾನ ಪೈಲೆಟ್ ಗುಂಜನ್ ಸಕ್ಸೇನಾ (ಕಾರ್ಗಿಲ್ ಹುಡುಗಿ) ಅವರ ಜೀವನ ಆಧರಿಸಿದ ಮಾಡಿದ ಚಿತ್ರ 'ಗುಂಜನ್ ಸಕ್ಸೇನಾ. ಜಾಹ್ನವಿ ಕಪೂರ್ ಈ ಪಾತ್ರದಲ್ಲಿ ನಟಿಸಿದ್ದರು. ಆನ್‌ಲೈನ್‌ನಲ್ಲಿ ತೆರೆಕಂಡಿದ್ದ ಈ ಚಿತ್ರ ಮೆಚ್ಚುಗೆ ಪಡೆದುಕೊಂಡಿತ್ತು. ಜಾಹ್ನವಿ ನಟನೆ ಸಹ ಗಮನ ಸೆಳೆದಿತ್ತು. ಗೂಗಲ್ ಸರ್ಚ್‌ನಲ್ಲಿ ಈ ಚಿತ್ರಕ್ಕೆ ಐದನೇ ಸ್ಥಾನ.

4.ಶಕುಂತಲಾ ದೇವಿ
'ಹ್ಯೂಮನ್ ಕಂಪ್ಯೂಟರ್' ಎಂದು ಖ್ಯಾತಿ ಗಳಿಸಿಕೊಂಡಿದ್ದ ಶಕುಂತಲಾ ದೇವಿ ಅವರ ಜೀವನ ಕಥೆಯನ್ನು ತೆರೆಗೆ ತರಲಾಗಿತ್ತು. ಶಕುಂತಲಾ ದೇವಿ ಪಾತ್ರದಲ್ಲಿ ವಿದ್ಯಾ ಬಾಲನ್ ನಟಿಸಿದ್ದರು. ಖ್ಯಾತ ಗಣಿತಶಾಸ್ತ್ರಜ್ಞೆ ಶಕುಂತಲಾ ಆಗಿ ವಿದ್ಯಾ ನಟನೆ ಅದ್ಭುತ ಎನಿಸಿಕೊಂಡಿತ್ತು. ಗೂಗಲ್ ಸರ್ಚ್‌ನಲ್ಲಿ ಈ ಚಿತ್ರಕ್ಕೆ ನಾಲ್ಕನೇ ಸ್ಥಾನ.

3.ತಾನ್ಹಾಜಿ
ಓಂ ರಾವತ್ ನಿರ್ದೇಶನದಲ್ಲಿ ತಯಾರಾಗಿದ್ದ ತಾನ್ಹಾಜಿ ಸಿನಿಮಾ ಗೂಗಲ್ ಸರ್ಚ್‌ನಲ್ಲಿ ಮೂರನೇ ಸ್ಥಾನದಲ್ಲಿದೆ. ಅಜಯ್ ದೇವಗನ್ ಮತ್ತು ಸೈಫ್ ಅಲಿ ಖಾನ್ ಈ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಜನವರಿಯಲ್ಲಿ ತೆರೆಕಂಡಿದ್ದ ಈ ಚಿತ್ರ ಒಳ್ಳೆಯ ಯಶಸ್ಸು ಕಂಡಿತ್ತು.

2.ಸೂರರೈ ಪೊಟ್ರು
2020ರಲ್ಲಿ ತೆರೆಕಂಡು ದೊಡ್ಡ ಮಟ್ಟದ ಸಕ್ಸಸ್ ಕಂಡ ಚಿತ್ರ ಸೂರರೈ ಪೊಟ್ರು. ತಮಿಳು ನಟ ಸೂರ್ಯ ಅಭಿನಯದ ಈ ಚಿತ್ರದ ಅಮೇಜಾನ್ ಪ್ರೈಂನಲ್ಲಿ ರಿಲೀಸ್ ಆಗಿತ್ತು. ಕ್ಯಾಪ್ಟನ್ ಗೋಪಿನಾಥ್ ಅವರ ಬಯೋಗ್ರಫಿ ಆಧರಿಸಿ ನಿರ್ಮಾಣವಾದ ಈ ಚಿತ್ರಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ಗೂಗಲ್‌ನಲ್ಲಿ ಹೆಚ್ಚು ಸರ್ಚ್ ಆದ ಚಿತ್ರಗಳ ಪಟ್ಟಿಯಲ್ಲಿ ಸೂರರೈ ಪೊಟ್ರುಗೆ ಎರಡನೇ ಸ್ಥಾನ.
Recommended Video

1. ದಿಲ್ ಬೇಚಾರಾ
ಗೂಗಲ್‌ನಲ್ಲಿ ಈ ವರ್ಷ ಹೆಚ್ಚು ಸರ್ಚ್ ಆದ ಸಿನಿಮಾ ದಿಲ್ ಬೇಚಾರಾ. ಸುಶಾಂತ್ ಸಿಂಗ್ ನಟನೆಯ ಕೊನೆ ಚಿತ್ರ. ಸುಶಾಂತ್ ಸಾವಿನ ಬಳಿಕ ಆನ್‌ಲೈನ್‌ನಲ್ಲಿ ಈ ಸಿನಿಮಾ ತೆರೆಕಂಡಿತ್ತು. ವರ್ಷಪೂರ್ತಿ ಸುಶಾಂತ್ ಸಾವಿನ ವಿಚಾರವೇ ಹೆಚ್ಚು ಚರ್ಚೆಯಲ್ಲಿದ್ದ ಕಾರಣ, ಅವರ ಕೊನೆಯ ಸಿನಿಮಾನೂ ಹೆಚ್ಚು ಸರ್ಚ್ ಆಗಿದೆ.