Don't Miss!
- Sports
ಗೆದ್ದ ಜಯ್ ಶಾ ಹಠ, ಪಾಕ್ಗೆ ಹಿನ್ನೆಡೆ; ತಟಸ್ಥ ಸ್ಥಳದಲ್ಲಿ 2023ರ ಏಷ್ಯಾಕಪ್ ಆಯೋಜಿಸಲು ನಿರ್ಧಾರ
- Lifestyle
Horoscope Today 5 Feb 2023: ಭಾನುವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ಗುಜರಾತ್ಗೆ ಬರಲಿದ್ದಾರೆ ಯುಎಸ್ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್
- Finance
ಅದಾನಿ ಸ್ಟಾಕ್ ಕುಸಿತ: 'ನಿಯಂತ್ರಕರು ಅವರ ಕೆಲಸ ಮಾಡುತ್ತಾರೆ', ಎಂದ ವಿತ್ತ ಸಚಿವೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಬಹುಬೇಡಿಕೆಯ ಟೊಯೊಟಾ ಹೈರೈಡರ್ ಎಸ್ಯುವಿ
- Technology
ಅಜ್ಜಿಗೆ ಆಪ್ಗಳ ಬಗ್ಗೆ ತಿಳಿಸಿಕೊಟ್ಟ ಯುವಕ; ವೈರಲ್ ಆಯ್ತು ವಿಡಿಯೋ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Happy Birthday Kajol: ಅಜಯ್ ದೇವಗನ್ ಜೊತೆ ಪ್ರೀತಿಯಲ್ಲಿ ಬಿದ್ದಿದ್ದೇಗೆ ನಟಿ ಕಾಜೋಲ್?
ಬಾಲಿವುಡ್ ಖ್ಯಾತ ನಟಿ ಕಾಜೋಲ್ ದೇವಗನ್ ಗೆ ಇಂದು (ಆಗಸ್ಟ್ 5) ಹುಟ್ಟುಹಬ್ಬದ ಸಂಭ್ರಮ. 47ನೇ ವಸಂತಕ್ಕೆ ಕಾಲಿಟ್ಟಿರುವ ನಟಿ ಕಾಜೋಲ್ ಗೆ ಶುಭಾಶಯಗಳ ಸುರಿಮಳೆಯೇ ಹರಿದುಬರುತ್ತಿದೆ. 90 ದಶದಲ್ಲಿ ಬಾಲಿವುಡ್ ಎನ್ನುವ ಬಣ್ಣದ ಜಗತ್ತಿನಲ್ಲಿ ಮಿಂಚುಹರಿಸಿದ್ದ ಕಾಜೋಲ್ ಚಿತ್ರಪ್ರಿಯರ ಹಾಟ್ ಫೇವರಿಟ್ ಆಗಿದ್ದರು. ಸದಾ ನಗುತ್ತಾ, ಪಟಪಟ ಮಾತನಾಡುವ ಸುಂದರಿ ಕಾಜೋಲ್ ಫಿದಾ ಆಗದವರಿಲ್ಲ.
ಕಾಜೋಲ್ ಜೊತೆ ನಟಿಸಲು ಸ್ಟಾರ್ ನಟರು ಸಹ ಕಾಯುತ್ತಿದ್ದರು. ಕಾಜೋಲ್ ಮತ್ತು ಶಾರುಖ್ ಅವರದ್ದು ಅದ್ಭುತ ಆನ್ ಸ್ಕ್ರೀನ್ ಜೋಡಿ. ಬೇಡಿಕೆಯ ನಟಿಯಾಗಿ ಬೆಳೆದು, ಅಭಿಮಾನಿಗಳನ್ನು ರಂಜಿಸುತ್ತಿದ್ದಾಗಲೇ ಕಾಜೋಲ್ ಮತ್ತೋರ್ವ ಖ್ಯಾತ ನಟ ಅಜಯ್ ದೇವಗನ್ ಜೊತೆ ಪ್ರೀತಿಯಲ್ಲಿ ಬಿದ್ದರು. ಆ ಪ್ರೀತಿ ಕೊನೆಗೆ ಇಬ್ಬರನ್ನು ಪತಿ-ಪತ್ನಿಯಾಗಿ ಮಾಡಿತು. ಇದೀಗ ಈ ಜೋಡಿ ಬಾಲಿವುಡ್ ನ ಸುಂದರ ಜೋಡಿಗಳಲ್ಲಿ ಒಂದಾಗಿದೆ. ಅಂದಹಾಗೆ ಇಬ್ಬರ ಪ್ರೀತಿ ಪ್ರಾರಂಭವಾಗಿದ್ದು ಹೇಗೆ? ಯಾವಾಗ? ಇಲ್ಲಿದೆ ಇಬ್ಬರ ಇಟ್ರೆಸ್ಟಿಂಗ್ ಪ್ರೇಮ ಕಥೆ...

1995ರಲ್ಲಿ ಇಬ್ಬರ ಪರಿಚಯ
ಕಾಜೋಲ್ ಮತ್ತು ಅಜಯ್ ದೇವಗನ್ ಇಬ್ಬರು ಒಬ್ಬರಿಗೊಬ್ಬರು ಪರಿಚಯವಾಗಿದ್ದು 1995ರಲ್ಲಿ. 'ಹಲ್ ಚಲ್' ಸಿನಿಮಾ ಸೆಟ್ ನಲ್ಲಿ ಇಬ್ಬರು ಮೊದಲು ಮುಖಾಮುಖಿಯಾದರು. ಈ ಸಿನಿಮಾಗೆ ಮೊದಲು ದಿವ್ಯಾ ಭಾರತಿ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ ದಿವ್ಯಾ ಭಾರತಿ ಹಠಾತ್ ನಿಧನನಿಂದ ಖಾಲಿಯಾಗಿದ್ದ ಆ ಜಾಗಕ್ಕೆ ಕಾಜೋಲ್ ಆಯ್ಕೆಯಾಗಿದ್ದರು. ಕೊನೆಯ ಕ್ಷಣದಲ್ಲಿ ಕಾಜೋಲ್ ಅವರನ್ನು ಆಯ್ಕೆ ಮಾಡಿತ್ತು ಸಿನಿಮಾತಂಡ. ಈ ಆಯ್ಕೆ ಕಾಜೋಲ್ ಜೀವನದಲ್ಲಿ ದೊಡ್ಡ ಬದಲಾವಣೆಗೆ ಕಾರಣವಾಯಿತು.

ಮೊದಲ ಭೇಟಿಯ ಬಗ್ಗೆ ಕಾಜೋಲ್ ಹೇಳಿದ್ದೇನು?
ಕಳೆದ ವರ್ಷ (2020) ಸಾಮಾಜಿಕ ಜಾಲತಾಣದಲ್ಲಿ ಕಾಜೋಲ್, ಅಜಯ್ ದೇವಗನ್ ಅವರನ್ನು ಮೊದಲು ಭೇಟಿಯಾದ ಬಗ್ಗೆ ವಿವರಿಸಿದ್ದರು. ''ನಾವಿಬ್ಬರು (ಅಜಯ್ ದೇವ್ಗನ್ ಮತ್ತು ಕಾಜೋಲ್) ಭೇಟಿ ಆಗಿದ್ದು 25 ವರ್ಷಗಳ ಹಿಂದೆ. ಅದು 'ಹಲ್ ಚಲ್' ಚಿತ್ರದ ಸೆಟ್ ನಲ್ಲಿ. ನಾನು ಶಾಟ್ ಗೆ ರೆಡಿ ಆಗಿದ್ದೆ. ಆಗ ''ಹೀರೋ ಎಲ್ಲಿ?'' ಕೇಳಿದೆ. ಮೂಲೆಯಲ್ಲಿ ಕೂತಿದ್ದ ಅಜಯ್ ದೇವ್ಗನ್ ಕಡೆ ಯಾರೋ ಬೆಟ್ಟು ಮಾಡಿ ತೋರಿಸಿದರು. ಅದಕ್ಕೂ 10 ನಿಮಿಷಗಳ ಹಿಂದೆಯಷ್ಟೇ ನಾನು ಅಜಯ್ ದೇವ್ಗನ್ ಬಗ್ಗೆ ಬೈಕೊಂಡಿದ್ದೆ. ಸೆಟ್ ನಲ್ಲಿ ಬೆಳೆದ ಒಡನಾಟದಿಂದ ನಾವಿಬ್ಬರು ಫ್ರೆಂಡ್ಸ್ ಆದ್ವಿ'' ಎಂದಿದ್ದರು.

ಅಜಯ್ ಬಗ್ಗೆ ಉತ್ತಮ ಅಭಿಪ್ರಾಯ ಇರಲಿಲ್ಲ- ಕಾಜೋಲ್
ಕಾಜೋಲ್ ತುಂಬಾ ತಮಾಷೆಯ ಮತ್ತು ಹೆಚ್ಚು ಮಾತನಾಡುವ ನಟಿ. ಆದರೆ ಅಜಯ್ ದೇವಗನ್ ಅಷ್ಟೆ ಸೈಲೆಂಟ್. ಕಾಜೋಲ್ ಗೆ, ಅಜಯ್ ದೇವಗನ್ ಬಗ್ಗೆ ಒಳ್ಳೆಯ ಅಭಿಪ್ರಾಯವಿರಲಿಲ್ಲವಂತೆ. ಈ ಬಗ್ಗೆ ಸಂದರ್ಶವೊಂದರಲ್ಲಿ ಮಾತನಾಡಿರುವ ಕಾಜೋಲ್, 'ನನಗೆ ಅಜಯ್ ಬಗ್ಗೆ ಉತ್ತಮವಾದ ಅಭಿಪ್ರಾಯವಿರಲಿಲ್ಲ. ಮೂಲೆಯಲ್ಲಿ ಕುಳಿತು ಯಾವಾಗಲು ಸಿಗರೇಟು ಸೇದುತ್ತಿದ್ದರು' ಎಂದು ಹೇಳಿದ್ದರು.

4 ವರ್ಷಗಳ ಪ್ರೀತಿ
ಈ ಸಿನಿಮಾ ಬಳಿಕ ಇಬ್ಬರು ಸ್ನೇಹಿತರಾದರು. ಚಿತ್ರೀಕರಣ ವೇಳೆ ಇಬ್ಬರು ಹೆಚ್ಚಾಗಿ ಸಂಬಂಧಗಳ ಸಮಸ್ಯೆ ಬಗ್ಗೆ ಮಾತನಾಡುತ್ತಿದ್ದೆವು ಎಂದು ಕಾಜೋಲ್ ಹೇಳಿದ್ದರು. ಅಲ್ಲಿಂದ ಪ್ರಾರಂಭವಾದ ಇಬ್ಬರ ಸ್ನೇಹ ಬಳಿಕ ಪ್ರೀತಿಗೆ ತಿರುಗೆ 4 ವರ್ಷಗಳು ಇಬ್ಬರು ಪರಸ್ಪರ ಪ್ರೀತಿಸಿ, ಬಳಿಕ ಮನೆಯವರ ಒಪ್ಪಿಗೆ ಮೇರೆಗೆ ಇಬ್ಬರು ಹಸೆಮಣೆ ಏರಿದರು.

ಬಾಯ್ ಫ್ರೆಂಡ್ ಬಗ್ಗೆ ಕಂಪ್ಲೇಂಟ್ ಹೇಳಿದ್ದ ಕಾಜೋಲ್
''ನಾನು ಇನ್ನೊಬ್ಬರ ಜೊತೆ ಡೇಟ್ ಮಾಡುತ್ತಿದೆ. ಅಜಯ್ ದೇವ್ಗನ್ ಕೂಡ ಬೇರೆಯೊಬ್ಬರ ಜೊತೆಗೆ ಡೇಟಿಂಗ್ ನಲ್ಲಿದ್ದರು. ನನ್ನ ಅಂದಿನ ಬಾಯ್ ಫ್ರೆಂಡ್ ಬಗ್ಗೆ ಅಜಯ್ ದೇವ್ಗನ್ ಬಳಿ ನಾನು ಕಂಪ್ಲೇಂಟ್ ಹೇಳಿದ್ದೂ ಇದೆ.! ಹೀಗಿರುವಾಗಲೇ, ನಾನು ಬ್ರೇಕಪ್ ಮಾಡಿಕೊಂಡೆ. ಅಜಯ್ ದೇವ್ಗನ್ ಕೂಡ ಬ್ರೇಕಪ್ ಮಾಡಿಕೊಂಡರು. ಅಸಲಿಗೆ, ನಾವಿಬ್ಬರು ಒಬ್ಬರಿಗೊಬ್ಬರು ಪ್ರಪೋಸ್ ಮಾಡಲೇ ಇಲ್ಲ. ನಾವಿಬ್ಬರು (ಕಾಜೋಲ್-ಅಜಯ್ ದೇವಗನ್) ಒಟ್ಟಿಗೆ ಇರಬೇಕು ಅನ್ನೋದು ಅರ್ಥ ಆಗಿತ್ತು'' ಎಂದು ಒಮ್ಮೆ ಸಾಮಾಜಿಕ ಜಾಲತಾಣದಲ್ಲಿ ತನ್ನ ಪ್ರೀತಿ ಬಗ್ಗೆ ಬಹಿರಂಗ ಪಡಿಸಿದ್ದರು.

ಕಾರಿನಲ್ಲಿ ಇಬ್ಬರ ಪ್ರೀತಿ
''ನಮ್ಮಿಬ್ಬರ ಅರಿವಿಗೆ ಬರುವ ಮುನ್ನ ಕೈಕೈ ಹಿಡಿದುಕೊಂಡು ಓಡಾಡಿದ್ದಕ್ಕಿಂತ ಜಾಸ್ತಿಯೇ ನಡೆದು ಹೋಗಿತ್ತು. ಹಲವು ಬಾರಿ ನಾವಿಬ್ಬರು ಡಿನ್ನರ್ ಗೆಂದು ಹೊರಗೆ ಹೋಗಿದ್ವಿ. ಅಜಯ್ ದೇವ್ಗನ್ ಜುಹುನಲ್ಲಿದ್ದರು. ನಾನು ಸೌತ್ ಬಾಂಬೆಯಲ್ಲಿದ್ದೆ. ಹೀಗಾಗಿ, ನಾವಿಬ್ಬರು ಬಹುತೇಕ ಪ್ರೀತಿ ಮಾಡಿದ್ದು ಕಾರ್ ನಲ್ಲಿ.!'' ಎಂದು ಕಾಜೋಲ್ ಹೇಳಿದ್ದರು.

1999ರಲ್ಲಿ ಮದುವೆ
''ನಾಲ್ಕು ವರ್ಷಗಳ ಕಾಲ ನಾವು ಡೇಟಿಂಗ್ ಮಾಡಿದ್ವಿ. ಆಮೇಲೆ ಮದುವೆ ಆಗಲು ನಿರ್ಧಾರಿಸಿದ್ವಿ. ಅಜಯ್ ದೇವ್ಗನ್ ಮನೆಯಲ್ಲಿ ಒಪ್ಪಿಗೆ ಸಿಕ್ತು. ಆದ್ರೆ, ನಮ್ಮ ಮನೆಯಲ್ಲಿ ನನ್ನ ತಂದೆ ನನ್ನೊಂದಿಗೆ ನಾಲ್ಕು ದಿನ ಮಾತನಾಡಲಿಲ್ಲ. ವೃತ್ತಿ ಜೀವನದ ಬಗ್ಗೆ ಫೋಕಸ್ ಮಾಡುವಂತೆ ಹೇಳಿದ್ದರು. ಆದ್ರೆ, ನಾನು ಮದುವೆ ಆಗಲು ನಿರ್ಧಾರ ಮಾಡಿದ್ದೆ. ಕೊನೆಗೆ ಅಪ್ಪ ಒಪ್ಪಿಕೊಂಡರು'' ಎಂದು ವಿವರಿಸಿದ್ದರು.

ಮ್ಯಾರೇಜ್ ಸ್ಟೋರಿ
ಅಜಯ್ ದೇವಗನ್ ಅವರಿಗೆ ಅದ್ದೂರಿಯಾಗಿ ಮದುವೆಯಾಗಲು ಇಷ್ಟವಿರಲಿಲ್ಲ. ಹಾಗಾಗಿ ತಮ್ಮ ಮನೆಯ ಟೆರೇಸ್ ಮೇಲೆ ಮದುವೆಯಾಗಲು ನಿರ್ಧರಿಸಿ ಅಲ್ಲೇ ಹಸೆಮಣೆ ಏರಿದರು. ಮರಾಠಿ ಮತ್ತು ಪಂಜಾಬಿ ಸಂಪ್ರದಾಯತಂದೆ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸರಳವಾಗಿ ನಡೆದ ಮದುವೆ ಸಮಾರಂಭದಲ್ಲಿ ಕುಟುಂಬದವರು ಮಾತ್ರ ಭಾಗಿಯಾಗಿದ್ದರು.

ಲಾಂಗ್ ಹನಿಮೂನ್
''ನನಗೆ ಲಾಂಗ್ ಹನಿಮೂನ್ ಬೇಕಾಗಿತ್ತು. ಹೀಗಾಗಿ ಸಿಡ್ನಿಗೆ ಹೋದ್ವಿ. ಅಲ್ಲಿಂದ ಹವಾಯಿ, ಲಾಸ್ ಏಂಜಲೀಸ್... ಐದು ವಾರ ಕಳೆಯುತ್ತಿದ್ದ ಹಾಗೆ ಅಜಯ್ ದೇವಗನ್ ಅನಾರೋಗ್ಯಕ್ಕೀಡಾದರು. ''ಬೇಬಿ.. ಮನೆಗೆ ಹೋಗಲು ಫ್ಲೈಟ್ ಬುಕ್ ಮಾಡು'' ಎಂದು ಕೇಳಿದರು. ಅಸಲಿಗೆ, ಆಗ ನಾವು ಈಜಿಪ್ಟ್ ಗೆ ಹೋಗಬೇಕಿತ್ತು. ಆದ್ರೆ, ಮನೆಗೆ ವಾಪಸ್ ಆದ್ವಿ'' ಎಂದು ಹನಿಮೂನ್ ಬಗ್ಗೆ ಬಹಿರಂಗ ಪಡಿಸಿದ್ದರು.

2 ಬಾರಿ ಗರ್ಭಪಾತ
''ಮಕ್ಕಳ ಬಗ್ಗೆ ಪ್ಲಾನಿಂಗ್ ಶುರು ಮಾಡಿದ್ವಿ. 'ಕಭಿ ಕುಷಿ ಕಭಿ ಘಮ್' ಚಿತ್ರದ ವೇಳೆ ನಾನು ಗರ್ಭಿಣಿ ಆಗಿದ್ದೆ. ದುರಾದೃಷ್ಟವಶಾತ್ ನನಗೆ ಗರ್ಭಪಾತ ಆಯಿತು. ಆಗ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಆದ್ರೆ, ನಾನು ಖುಷಿ ಆಗಿರಲಿಲ್ಲ. ಗರ್ಭಪಾತದಿಂದಾಗಿ ನಾನು ಆಸ್ಪತ್ರೆಯಲ್ಲಿ ದಾಖಲಾಗಿದ್ದೆ. ಬಳಿಕ ಮತ್ತೊಂದು ಬಾರಿಯೂ ನನಗೆ ಗರ್ಭಪಾತ ಆಯ್ತು. ಆನಂತರ ನಿಸಾ ಮತ್ತು ಯುಗ್ ಜನಿಸಿದರು. ನಮ್ಮ ಫ್ಯಾಮಿಲಿ ಕಂಪ್ಲೀಟ್ ಆಯ್ತು'' ಎಂದು ವಿವರಿಸಿದ್ದರು. ಇಬ್ಬರೂ ಸಂತೋಷದ ಜೀವನ ನಡೆಸುತ್ತಿದ್ದಾರೆ. ಚಿತ್ರರಂಗದಲ್ಲೂ ಇಬ್ಬರೂ ಸಕ್ರೀಯರಾಗಿದ್ದಾರೆ.