twitter
    For Quick Alerts
    ALLOW NOTIFICATIONS  
    For Daily Alerts

    ಭಾರತೀಯ ಚಿತ್ರರಂಗದ ಸುವರ್ಣ ಯುಗದ ಆರಂಭ

    |

    ಭಾರತೀಯ ಚಿತ್ರರಂಗ 1930ರ ನಂತರ ವೇಗ ಪಡೆದುಕೊಂಡಿತು. ಆದರೆ ಸಿನಿಮಾದ ಸುವರ್ಣ ಯುಗ ಆರಂಭವಾಗಿದ್ದು 1940ರ ನಂತರ. 1945ರಿಂದ 1960 ಭಾರತೀಯ ಸಿನಿಮಾದ ಸುವರ್ಣಯುಗ ಎಂದು ಗುರುತಿಸಲಾಗುತ್ತದೆ. ಭಾರತ ಸಿನಿಮಾರಂಗ ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿದ್ದು, ಭಾರತದ ದೊಡ್ಡ ಉದ್ಯಮವಾಗಿ ಬೆಳೆದಿದ್ದು ಇದೇ ಕಾಲದಲ್ಲಿ.

    1939ರಲ್ಲಿ ಆರಂಭವಾದ ಎರಡನೇ ವಿಶ್ವ ಯುದ್ಧ 1945ಕ್ಕೆ ಮುಗಿಯಿತು. ಎರಡನೇ ವಿಶ್ವಯುದ್ಧದ ಬಳಿಕ ದೇಶಗಳ ನಡುವೆ ಪರಸ್ಪರ ಸ್ನೇಹ, ಪ್ರೀತಿ, ಕಲೆ-ಸಂಸ್ಕೃತಿಯ ವಿನಿಮಯ ಹೆಚ್ಚಾಯಿತು. ಆಗಷ್ಟೆ ಆರಂಭವಾಗಿದ್ದ ವಿಶ್ವಸಂಸ್ಥೆ ಸಹ ಇದಕ್ಕೆ ಕಾರಣ. ಇದೇ ಅವಧಿಯಲ್ಲಿ ವಿಶ್ವದ ಹಲವು ದೇಶಗಳಲ್ಲಿ ಸಿನಿಮಾಗಳು ನಿರ್ಮಾಣ ಆರಂಭವಾದವು. ಅದಾಗಲೇ ಸಿನಿಮಾ ನಿರ್ಮಾಣ ಆರಂಭಿಸಿದ್ದ ದೇಶಗಳು ಇನ್ನಷ್ಟು ಪರಿಣಾಮಕಾರಿಯಾಗಿ ಸಿನಿಮಾ ಮೂಲಕ ಕತೆ ಹೇಳಲು ಆರಂಭಿಸಿದವು. ಒಂದು ದೇಶದಿಂದ ಮತ್ತೊಂದು ದೇಶದ ಸಿನಿ ಕರ್ಮಿಗಳು ತಂತ್ರಜ್ಞಾನ, ಸ್ಪೂರ್ತಿಗಳನ್ನು ಪಡೆದು ತಮ್ಮ ನೆಲದ ಕತೆಗಳನ್ನು ಸಿನಿಮಾ ಮೂಲಕ ಹೇಳಲು ಆರಂಭಿಸಿದರು.

    ಭಾರತದಲ್ಲಿ ಸ್ವಾತಂತ್ರ್ಯದ ನಂತರ ಸಿನಿಮಾಗಳು ಸಾಮಾನ್ಯ ವ್ಯಕ್ತಿಯನ್ನು ನಾಯಕನನ್ನಾಗಿ ಬಿಂಬಿಸಲು ಆರಂಭ ಮಾಡಿದವು. ಬಡತನ, ಜಾತೀಯತೆ, ಸ್ತ್ರೀ ಸಬಲೀಕರಣ, ತ್ಯಾಗ, ದೇಶಭಕ್ತಿ, ಕಾರ್ಮಿಕರ ಕಷ್ಟಗಳು ಇನ್ನೂ ಹಲವು ವಿಷಯಗಳು ಸಿನಿಮಾಗಳಲ್ಲಿ ಕತೆಗಳಾದವು. ಆಗಿನ ಸಮಯದ ಹಲವು ಸಿನಿಮಾಗಳ ನಾಯಕ ಪಾತ್ರ ಭಾರತದ ಸಾಮಾನ್ಯ ವ್ಯಕ್ತಿಯೇ ಆಗಿರುತ್ತಿದ್ದ. ಭಾರತೀಯ ಸಿನಿಮಾಗಳು ಪೌರಾಣಿಕ ಕತೆಗಳಿಂದ ಸಮಾಜಿಕ ಕತೆಗಳತ್ತ ಹೊರಳಿಕೊಂಡವು.

    ಹಲವು ಖ್ಯಾತ ನಟರು ನಟನೆ ಆರಂಭಿಸಿದರು

    ಹಲವು ಖ್ಯಾತ ನಟರು ನಟನೆ ಆರಂಭಿಸಿದರು

    ಭಾರತೀಯ ಸಿನಿಮಾ ಎಂದೂ ಮರೆಯಲಾಗದ ರಾಜ್ ಕಪೂರ್, ದಿಲೀಪ್ ಕುಮಾರ್, ನರ್ಗೀಸ್, ಎಂಜಿಆರ್, ಡಾ.ರಾಜ್‌ಕುಮಾರ್, ಉದಯ್‌ಕುಮಾರ್, (1942ರಲ್ಲಿ 'ಭಕ್ತ ಪ್ರಹಲ್ಲಾದ' ಸಿನಿಮಾದಲ್ಲಿ ಬಾಲನಟನಾಗಿ ಅಣ್ಣಾವ್ರು ನಟಸಿದ್ದರು) ತೆಲುಗಿನ ಎನ್‌ಟಿಆರ್, ಎಎನ್‌ಆರ್, ಪಂಡರೀಬಾಯಿ, ಇನ್ನೂ ಕೆಲವು ಮಹಾನ್ ಕಲಾವಿದರು ಚಿತ್ರರಂಗಕ್ಕೆ ಪರಿಚವಾಗಿದ್ದು 1940ರ ದಶಕದಲ್ಲಿಯೇ. ಗುರುದತ್, ಮೆಹಬೂಬ್ ಖಾನ್, ವಿಜ್ ಕುಮಾರ್ ಇನ್ನೂ ಹಲವಾರು ಖ್ಯಾತ ನಿರ್ದೇಶಕರು ಸಹ ಅದೇ ದಶಕದಲ್ಲಿ ಭಾರತೀಯ ಸಿನಿಮಾಕ್ಕೆ ಬಂದರು.

    ಲತಾ ಮಂಗೇಶ್ಕರ್, ಕಿಶೋರ್ ಕುಮಾರ್ ಘಂಟಸಾಲ

    ಲತಾ ಮಂಗೇಶ್ಕರ್, ಕಿಶೋರ್ ಕುಮಾರ್ ಘಂಟಸಾಲ

    ಸಂಗೀತದ ವಿಷಯದಲ್ಲಿ ಭಾರತೀಯ ಸಿನಿಮಾಗಳು ಶ್ರೀಮಂತವಾದ ಕಾಲವು ಸಹ ಇದೆ. ಕಿಶೋರ್ ಕುಮಾರ್, ಮೊಹಮ್ಮದ್ ರಫಿ, ಲತಾ ಮಂಗೇಶ್ಕರ್ ಅವರುಗಳು 1940ರ ದಶಕದಲ್ಲಿ ಸಿನಿಮಾಗಳಲ್ಲಿ ಹಾಡಲು ಆರಂಭಿಸಿದರು. ಕಿಶೋರ್ ಕುಮಾರ್, ಮೊಹಮ್ಮದ್ ರಫಿ ನಟರಾಗಿಯೂ ನಟಿಸಿ ಖ್ಯಾತರಾದರು. ಭಾರತೀಯ ಸಿನಿಮಾಕ್ಕೆ ಸಂಗೀತದ ಗಟ್ಟಿ ಬಂಧ ಏರ್ಪಟ್ಟಿದ್ದು ಇದೇ ಕಾಲದಲ್ಲಿಯೇ. ದಕ್ಷಿಣದಲ್ಲಿ ಘಂಟಸಾಲ ಮೊದಲ ಸಿನಿಮಾ ಹಾಡು ಹಾಡಿದ್ದು 1947ರಲ್ಲಿ.

    'ಮದರ್ ಇಂಡಿಯಾ' ಸಿನಿಮಾ ಆಸ್ಕರ್‌ಗೆ ನಾಮಿನೇಟ್

    'ಮದರ್ ಇಂಡಿಯಾ' ಸಿನಿಮಾ ಆಸ್ಕರ್‌ಗೆ ನಾಮಿನೇಟ್

    1950ರ ಬಳಿಕವಂತೂ ಭಾರತೀಯ ಸಿನಿಮಾ ವಿಶ್ವಮಟ್ಟದಲ್ಲಿ ಹೆಸರಾಗಿ ಹೋಯಿತು. ಅಷ್ಟೇ ಅಲ್ಲದೆ ಸಿನಿಮಾವು ಭಾರತದಲ್ಲಿ ದೊಡ್ಡ ಉದ್ಯಮವಾಗಿ ರೂಪುಗೊಂಡಿದ್ದು ಸಹ ಇದೇ ಕಾಲದಲ್ಲಿ. 1955 ರಲ್ಲಿ ಬಿಡುಗಡೆ ಆದ 'ಮದರ್ ಇಂಡಿಯಾ' ಸಿನಿಮಾ ಆಸ್ಕರ್‌ಗೆ ನಾಮಿನೇಟ್ ಆಗಿ ಕೇವಲ ಒಂದು ಮತದಿಂದ ಪ್ರಶಸ್ತಿಯಿಂದ ವಿಫಲವಾಯಿತು. ಭಾರತೀಯ ಸಿನಿಮಾ ಕ್ಲಾಸಿಕ್‌ಗಳೆಂದು ಕರೆಯಲಾಗುವ, 'ಆವಾರ', 'ಪ್ಯಾಸಾ', 'ಶ್ರೀ 420', 'ಅಂದಾಜ್', ಇನ್ನೂ ಹಲವು ಸಿನಿಮಾಗಳು 1950ರ ದಶಕದಲ್ಲಿ ತಯಾರಾದವು. ರಾಜ್ ಕಪೂರ್ ಎಂಬ ಮಾಂತ್ರಿಕ ನಟ, ಜನರನ್ನು ಸೂಜಿಗಲ್ಲಿನಂತೆ ಸೆಳೆಯಲು ಆರಂಭಿಸಿದರು. ತಮ್ಮ ಸಿನಿಮಾಗಳಿಂದ ವಿಶ್ವದ ಗಮನ ಸೆಳೆದ ನಿರ್ದೇಶಕ ಸತ್ಯಜಿತ್ ರೇ ತಮ್ಮ ಮೊದಲ ಸಿನಿಮಾ ಮಾಡಿದ್ದು 1955ರಲ್ಲಿ.

    ಹಲವು ಸ್ಟುಡಿಯೋಗಳು ನಿರ್ಮಾಣವಾದವು

    ಹಲವು ಸ್ಟುಡಿಯೋಗಳು ನಿರ್ಮಾಣವಾದವು

    ಆರ್‌.ಕೆ.ಸ್ಟುಡಿಯೋ, ಸೆಂಟ್ರಲ್ ಸ್ಟುಡಿಯೋ, ಪ್ರಭಾತ್ ಫಿಲಂ ಕಂಪೆನಿ, ಎವಿಎಂ ಸ್ಟುಡಿಯೋ, ಜೆಮಿನಿ ಸ್ಟುಡಿಯೊ, ಪಕ್ಷಿರಾಜ್ ಸ್ಟುಡಿಯೊ, ಕೊಲ್ಕತ್ತದಲ್ಲಿ ಇಂಡಸ್ ಸ್ಟುಡಿಯೋ ಒಂದು ಸ್ಟುಡಿಯೋ ಹೀಗೆ ಹಲವು ಕಡೆ ಸ್ಟುಡಿಯೋಗಳು ಆರಂಭವಾದವು. ಹಿಂದಿ ಸಿನಿಮಾಗಳಿಗೆ ಮುಂಬೈ ಕೇಂದ್ರ ಸ್ಥಾನವಾದರೆ ದಕ್ಷಿಣದಲ್ಲಿ ಮದ್ರಾಸು ಕೇಂದ್ರ ಸ್ಥಾನವಾಗಿತ್ತು. ಕೊಲ್ಕತ್ತ, ಅಸ್ಸಾಂನಲ್ಲಿಯೂ ಸಿನಿಮಾ ನಿರ್ಮಾಣ ಚೆನ್ನಾಗಿಯೇ ನಡೆಯುತ್ತಿತ್ತು. ದಕ್ಷಿಣದಲ್ಲಿ ತೆಲುಗು, ಕನ್ನಡ, ಮಲಯಾಳಂ ಸಿನಿಮಾಗಳು ಮದ್ರಾಸಿನಲ್ಲಿಯೇ ಚಿತ್ರೀಕರಣ ಆಗುತ್ತಿದ್ದವು.

    ದಕ್ಷಿಣದಲ್ಲಿಯೂ ಸಿನಿಮಾಗಳ ನಿರ್ಮಾಣ ಬಹಳ ಹೆಚ್ಚಾಯ್ತು

    ದಕ್ಷಿಣದಲ್ಲಿಯೂ ಸಿನಿಮಾಗಳ ನಿರ್ಮಾಣ ಬಹಳ ಹೆಚ್ಚಾಯ್ತು

    ಇತ್ತ ದಕ್ಷಿಣದಲ್ಲಿಯೂ ತಮಿಳು, ತೆಲುಗು, ಕನ್ನಡ, ಮಲಯಾಳಂ ಸಿನಿಮಾಗಳು ಬಹುಬೇಗವಾಗಿಯೇ ಬೆಳೆಯುತ್ತಿದ್ದವು. ಆಗಿನ ಮದ್ರಾಸ್‌ ನಗರದಲ್ಲಿಯೇ ಪ್ರಮುಖ ಸ್ಟುಡಿಯೋಗಳು ಇದ್ದ ಕಾರಣ ದಕ್ಷಿಣ ಭಾರತದ ಬಹುತೇಕ ಸಿನಿಮಾಗಳು ಮದ್ರಾಸ್‌ನಲ್ಲಿಯೇ ಚಿತ್ರೀಕರಣ ಆಗುತ್ತಿದ್ದವು. ದಕ್ಷಿಣ ಭಾರತದಲ್ಲಿಯೂ ಸಹ ಸಿನಿಮಾಗಳು ಪೌರಾಣಿಕ ಕತೆಗಳಿಂದ ಸಾಮಾಜಿಕ, ರಾಜಕೀಯ ಕತೆಗಳತ್ತ ನಿಧಾನಕ್ಕೆ ಹೊರಳಿಕೊಂಡವು. ಎಂಜಿಆರ್, ಜೆಮಿನಿ ಗಣೇಶನ್, ಡಾ.ರಾಜ್‌ಕುಮಾರ್, ಎನ್‌ಟಿಆರ್, ಪಂಡರೀಬಾರಿ, ಸಾವಿತ್ರಿ ಇನ್ನೂ ಹಲವು ನಟ-ನಟಿಯರು ಸಿನಿಮಾಗಳಲ್ಲಿ ಕಾಣಿಸಿಕೊಂಡು ಖ್ಯಾತ ನಟಿಯರಾಗಿ ಬಹುಬೇಗ ಬೆಳೆದರು. ಜನರನ್ನು ಸೆಳೆದು ಸಿನಿಮಾಗಳನ್ನು ಜನಪ್ರಿಯಗೊಳಿಸಿದರು.

    English summary
    Indian Cinema History Part 10: Indian Cinema's golden era started from 1940. After the Independence Indian cinema changed completely.
    Wednesday, July 28, 2021, 19:22
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X