For Quick Alerts
  ALLOW NOTIFICATIONS  
  For Daily Alerts

  ತೆರೆಮೇಲೆ ಮೊದಲು 'ಕಿಸ್' ದೃಶ್ಯ ಮಾಡಿದ ನಟಿಯ ರೋಚಕ ಕಥೆ

  |

  ಸಿನಿಮಾ ಪ್ರಾರಂಭದ ದಿನದಲ್ಲಿ ಮಡಿವಂತಿಕೆ, ಸಂಪ್ರದಾಯ, ಆಚಾರ-ವಿಚಾರ, ಜಾತಿ ವ್ಯವಸ್ಥೆ ಇದೆಲ್ಲವೂ ಬಹಳ ಪ್ರಮುಖವಾಗಿತ್ತು. ಇದಕ್ಕೆ ಹೆಚ್ಚು ಒತ್ತು ನೀಡಿ ಸಿನಿಮಾ ನಿರ್ಮಿಸಲಾಗುತ್ತಿತ್ತು. ಜನರ ನಂಬಿಕೆಗಳಿಗೆ ಯಾವುದೇ ಧಕ್ಕೆ ಬಾರದಂತೆ ಸಿನಿಮಾ ಮಾಡಲಾಗುತ್ತಿತ್ತು. ಇಂತಹ ಸಂದರ್ಭದಲ್ಲಿ ಕಿಸ್ಸಿಂಗ್ ದೃಶ್ಯ ಕಷ್ಟಸಾಧ್ಯ.

  ಆದರೆ, ಕಟ್ಟುಪಾಡು, ಮಡಿವಂತಿಕೆ, ಸಂಪ್ರದಾಯಗಳನ್ನು ಮೀರಿ ತೆರೆಮೇಲೆ ಮೊದಲ ಸಲ ನಾಯಕ ನಟನ ಜೊತೆ ಚುಂಬಿಸಿ ಸಂಚಲನ ಸೃಷ್ಟಿಸಿದ್ದರು ದೇವಿಕಾ ರಾಣಿ. ಆ ಕಿಸ್ಸಿಂಗ್ ದೃಶ್ಯ ಭಾರತೀಯ ಸಿನಿಮಾ ಇತಿಹಾಸದ ಮೊದಲ ಲಿಪ್ ಲಾಕ್ ಎಂಬ ಖ್ಯಾತಿ ಉಳಿಸಿಕೊಂಡಿದೆ.

  ಈ ಲಿಪ್ ಲಾಕ್ ಮಾಡಿದ ದೇವಿಕಾ ರಾಣಿ ಕುರಿತು ಒಂದು ವಿಶೇಷ ವರದಿ ಇಲ್ಲಿದೆ. ಮುಂದೆ ಓದಿ....

  ಮೊದಲ ನಾಯಕಿ ನಟಿ

  ಮೊದಲ ನಾಯಕಿ ನಟಿ

  ದೇವಿಕಾ ರಾಣಿ ಭಾರತದ ಮೊದಲ ನಾಯಕಿ ನಟಿ ಎಂದು ಕರೆಸಿಕೊಳ್ಳುತ್ತಾರೆ. ಬಾಲಿವುಡ್ ಇತಿಹಾಸದಲ್ಲಿ ದೇವಿಕಾ ರಾಣಿಗೆ ವಿಶೇಷ ಸ್ಥಾನ ನೀಡಲಾಗಿದೆ. ಕೇವಲ ಹತ್ತು ವರ್ಷ ಮಾತ್ರ ಇಂಡಸ್ಟ್ರಿಯಲ್ಲಿದ್ದರೂ, ಅದ್ಭುತವಾದ ನಟನೆ, ಸಿನಿಮಾ ನಿರ್ಮಾಣ ಹೀಗೆ ಚಿತ್ರರಂಗದಲ್ಲಿ ಹೆಸರು ಗಳಿಸಿದವರು. 1930 ರಿಂದ 40 ಕಾಲಘಟ್ಟದಲ್ಲಿ ದೇವಿಕಾ ರಾಣಿ ಯಶಸ್ವಿ ನಟಿಯಾಗಿದ್ದರು.

  ಮೊದಲ ಲೇಡಿ ಸೂಪರ್ ಸ್ಟಾರ್ ವೈಜಯಂತಿಮಾಲಾ ಸಿನಿ ಜೀವನದ ರೋಚಕ ಕಥೆಮೊದಲ ಲೇಡಿ ಸೂಪರ್ ಸ್ಟಾರ್ ವೈಜಯಂತಿಮಾಲಾ ಸಿನಿ ಜೀವನದ ರೋಚಕ ಕಥೆ

  ವೈವಾಹಿಕ ಜೀವನದ ಬಳಿಕ ಹೊಸ ಬದುಕು ಆರಂಭ

  ವೈವಾಹಿಕ ಜೀವನದ ಬಳಿಕ ಹೊಸ ಬದುಕು ಆರಂಭ

  ಸಿನಿಮಾ ಮೇಕರ್ ಹಿಮಾಂಶು ರೈ ಅವರ ಜೊತೆ ಮದುವೆಯಾಗಿದ್ದ ದೇವಿಕಾ ರಾಣಿ ನಂತರ ಪತಿಯ ಜೊತೆ ಸಿನಿಮಾ ಕೆಲಸಗಳಲ್ಲು ಭಾಗಿಯಾದರು. ಹಿಮಾಂಶು ರೈ ಅವರ ಸೈಲೆಂಟ್ ಸಿನಿಮಾಗಳಲ್ಲಿ ಕಾಸ್ಟ್ಯೂಮ್ ಡಿಸೈನ್, ಆರ್ಟ್ ಡೈರೆಕ್ಷನ್ ವಿಭಾಗದಲ್ಲಿ ದೇವಿಕಾ ಕೆಲಸ ಮಾಡುತ್ತಿದ್ದರು. ಬಳಿಕ, ಜರ್ಮನಿಗೆ ಹೋದ ಇಬ್ಬರು ಸಿನಿಮಾ ಮೇಕಿಂಗ್ ಬಗ್ಗೆ ತರಬೇತಿ ಪಡೆದು ಬಂದರು.

  'ಕರ್ಮ' ಸಿನಿಮಾಗೆ ಚಾಲನೆ

  'ಕರ್ಮ' ಸಿನಿಮಾಗೆ ಚಾಲನೆ

  ಸಿನಿಮಾ ಮೇಕಿಂಗ್ ಗಾಗಿ ಜರ್ಮನಿಗೆ ಹೋಗಿದ್ದ ಇಬ್ಬರು ತರಬೇತಿ ಪಡೆದು ಬಂದರು. ಅಲ್ಲಿಂದ ಬಂದ ಬಳಿಕ ಹಿಮಾಂಶು ರೈ, 'ಕರ್ಮ' (1933) ಎಂಬ ಸಿನಿಮಾ ಆರಂಭಿಸಿದರು. ಅದರಲ್ಲಿ ಅವರೆ ನಾಯಕ, ದೇವಿಕಾ ನಾಯಕಿಯಾಗಿ ನಟಿಸಿದರು. ಈ ಸಿನಿಮಾ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಸಿದ್ಧವಾಗಿತ್ತು. ಇಂಗ್ಲೆಂಡ್ ನಲ್ಲಿ ಸಿನಿಮಾ ಪ್ರದರ್ಶನ ಕಂಡಿತ್ತು.

  ತಾತಗುಣಿ ಎಸ್ಟೇಟ್ ಆಸ್ತಿ ಸರಕಾರದ ಅಧೀನಕ್ಕೆ ಕೋರ್ಟ್ ಅಸ್ತು

  ಮೊದಲ ಕಿಸ್ಸಿಂಗ್ ದೃಶ್ಯ

  ಮೊದಲ ಕಿಸ್ಸಿಂಗ್ ದೃಶ್ಯ

  'ಕರ್ಮ' ಸಿನಿಮಾ ಬರುವುದಕ್ಕೂ ಮೊದಲು ಕಿಸ್ ಎನ್ನುವ ಕಾನ್ಸೆಪ್ಟ್ ಇತ್ತು. ಅದರೆ, ಲಿಪ್ ಲಾಕ್ ಮಾಡುವ ಸಂಸ್ಕೃತಿ ಇರಲಿಲ್ಲ. ಆದರೆ, ಕರ್ಮ ಸಿನಿಮಾದಲ್ಲಿ ಮೊದಲ ಸಲ ಲಿಪ್ ಲಾಕ್ ದೃಶ್ಯ ಮಾಡಲಾಯಿತು. ಗಂಡ-ಹೆಂಡತಿಯೇ ಈ ಸಿನಿಮಾದಲ್ಲಿ ನಟಿಸಿದ್ದ ಕಾರಣ ಈ ಲಿಪ್ ಲಾಕ್ ಮೂಡಿಬರಲು ಕಾರಣವಾಯಿತು ಎಂದು ಹೇಳಲಾಗಿದೆ. ಇಂದಿಗೂ ಭಾರತೀಯ ಸಿನಿಮಾದ ಮೊದಲ ಲಿಪ್ ಲಾಕ್ ಎಂದು ಹುಡುಕಿದರೇ, 'ಕರ್ಮ' ಸಿನಿಮಾದಲ್ಲಿನ ದೇವಿಕಾ ರಾಣಿ ಮತ್ತು ಹಿಮಾಂಶು ನಡುವಿನ ದೃಶ್ಯವೇ ಬರುತ್ತೆ.

  ಎರಡನೇ ಮದುವೆ ಆದ ದೇವಿಕಾ

  ಎರಡನೇ ಮದುವೆ ಆದ ದೇವಿಕಾ

  ಬಾಂಬೆ ಟಾಕೀಸ್ ಎಂಬ ನಿರ್ಮಾಣ ಸಂಸ್ಥೆ ಆರಂಭಿಸಿದ ಹಿಮಾಂಶು ರೈ, ನಾಲ್ಕೈದು ವರ್ಷದಲ್ಲಿ ಹಲವು ಸಿನಿಮಾ ಮಾಡಿದರು. ಇದರಲ್ಲಿ ಹಲವು ಸಿನಿಮಾಗೆ ದೇವಿಕಾ ರಾಣಿ ನಾಯಕಿಯಾಗಿದ್ದರು. 1940ರಲ್ಲಿ ಹಿಮಾಂಶು ರೈ ನಿಧನರಾದರು. ನಂತರ ರಷ್ಯಾ ಮೂಲದ ಜನಪ್ರಿಯ ಕಲಾವಿದ ಸ್ವೆಟೊಸ್ಲಾವ್ ರೋರಿಚ್ ಅವರೊಂದಿಗೆ ಎರಡನೇ ವಿವಾಹವಾದರು. ಬಳಿಕ ಮುಂಬೈನಿಂದ ಬೆಂಗಳೂರಿಗೆ ಶಿಫ್ಟ್ ಆದರು. 400 ಎಕೆರೆಯ ರೋರಿಚ್ ಎಸ್ಟೇಟ್ ನಲ್ಲಿ ವಾಸವಾದರು.

  ಸ್ಟಾರ್ ನಟರನ್ನ ಬದಿಗಿಟ್ಟು ಚಿತ್ರರಂಗ ಆಳಿದ 'ಡ್ಯಾನ್ಸರ್' ಪದ್ಮಿನಿಸ್ಟಾರ್ ನಟರನ್ನ ಬದಿಗಿಟ್ಟು ಚಿತ್ರರಂಗ ಆಳಿದ 'ಡ್ಯಾನ್ಸರ್' ಪದ್ಮಿನಿ

  lovely and gifted little lady

  lovely and gifted little lady

  ಹಿಮಾಂಶು ರೈ ನಿಧನದ ನಂತರವೂ ದೇವಿಕಾ ರಾಣಿ ಬಾಂಬೆ ಟಾಕೀಸ್ ಸಿನಿಮಾ ನಿರ್ಮಾಣ ಸಂಸ್ಥೆ ಮುಂದುವರಿಸಿದರು. ಅಶೋಕ್ ಕುಮಾರ್, ದಿಲೀಪ್ ಕುಮಾರ್, ರಾಜ್ ಕಪೂರ್, ಮಧುಬಾಲ, ಮುಮ್ತಾಜ್ ಅಂತವರಿಗೆ ಬಾಂಬೆ ಟಾಕೀಸ್ ಸ್ಟುಡಿಯೋ ಪರಿಚಯ ಮಾಡಿ, ಭವಿಷ್ಯದ ಕಲಾವಿದರನ್ನಾಗಿಸಿದ ಖ್ಯಾತಿ ಹೊಂದಿದೆ. ಸರೋಜಿನಿ ನಾಯ್ಡು ಅವರು ದೇವಿಕಾ ರಾಣಿಯನ್ನು 'lovely and gifted little lady' ಎಂದು ಕರೆದಿದ್ದರು.

  ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ಮೊದಲ ನಟಿ

  ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ಮೊದಲ ನಟಿ

  ಜವಾನಿ ಕಿ ಹವಾ, ಜೀವನ್ ನಯಾ, ಸಾವಿತ್ರಿ, ಜೀವನ್ ಪ್ರಭಾತ್, ದುರ್ಗಾ, ವಚನ್, ನಿರ್ಮಲ, ಇಜ್ಜತ್ ಅಂತಹ ಸಿನಿಮಾಗಳಲ್ಲಿ ನಟಿಸಿದ್ದ ದೇವಿಕಾ ರಾಣಿಗೆ ಚಿತ್ರರಂಗದ ಅತ್ಯುನ್ನತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಲಭಿಸಿತ್ತು. ಈ ಪ್ರಶಸ್ತಿ ಪಡೆದ ಮೊದಲ ನಟಿ ಎಂಬ ಹೆಗ್ಗಳಿಕೆಗೆ ದೇವಿಕಾ ರಾಣಿ ಪಾತ್ರರಾಗಿದ್ದರು.

  ರಾಜಮಂಡ್ರಿಯ ಲಲಿತಾ ರಾಣಿ, ಜಯಪ್ರದ ಆಗಿ ಮಿಂಚಿದ ಅಪರೂಪದ ಕತೆ!ರಾಜಮಂಡ್ರಿಯ ಲಲಿತಾ ರಾಣಿ, ಜಯಪ್ರದ ಆಗಿ ಮಿಂಚಿದ ಅಪರೂಪದ ಕತೆ!

  ನಜಮ್ ಮತ್ತು ದೇವಿಕಾ ಸಂಬಂಧ

  ನಜಮ್ ಮತ್ತು ದೇವಿಕಾ ಸಂಬಂಧ

  'ಜೀವನ್ ನಯ್ಯಾ' ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದ ನಜಮ್ ಹಲ್ ಹಸಮ್ ನಟನೊಂದಿಗೆ ದೇವಿಕಾ ರಾಣಿಗೆ ಸಂಬಂಧ ಇತ್ತಂತೆ. ಈ ವಿಚಾರ ತಿಳಿದ ಹಿಮಾಂಶು ರೈ ಕೋಪಗೊಂಡಿದ್ದರಂತೆ. ಬಳಿಕ ನಜಮ್ ಗೆ 'ಜೀವನ್ ನಯ್ಯಾ' ಕೋಕ್ ಕೊಟ್ಟ ಹಿಮಾಂಶು, ಅಶೋಕ್ ಕುಮಾರ್ ಅವರನ್ನ ಕರೆತಂದರಂತೆ. ಈ ಘಟನೆ ಆದ ಬಳಿಕ ನಜಮ್ ಮತ್ತು ದೇವಿಕಾ ಸಂಬಂಧ ಮುರಿದು ಬಿತ್ತು ಎಂಬ ಮಾತುಗಳು ಇಂಡಸ್ಟ್ರಿಯಲ್ಲಿದೆ.

  English summary
  Indian first heroine Devika Rani creates the history in indian film industry. she is the first actress done kissing scene on screen.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X