For Quick Alerts
  ALLOW NOTIFICATIONS  
  For Daily Alerts

  ಅಪ್ಪು 'ಗಂಧದಗುಡಿ' ನೋಡುವ ಮುನ್ನ ಅಪ್ಪಾಜಿ 'ಗಂಧದಗುಡಿ' ಬಗ್ಗೆ ನೀವು ತಿಳಿಯಲೇಬೇಕು!

  |

  ಪುನೀತ್ ರಾಜ್‌ಕುಮಾರ್ ಕನಸಿನ ಸಿನಿಮಾ 'ಗಂಧದಗುಡಿ' ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. 49 ವರ್ಷಗಳ ಹಿಂದೆ ಡಾ. ರಾಜ್‌ಕುಮಾರ್ ನಟನೆಯ 'ಗಂಧದಗುಡಿ' ಸಿನಿಮಾ ತೆರೆಕಂಡು ಸೂಪರ್ ಹಿಟ್ ಆಗಿತ್ತು. ಚಿತ್ರದಲ್ಲಿ 'ಕಾಡು ಉಳಿಸಿ' ಅನ್ನೋ ಸಂದೇಶವನ್ನು ಅಣ್ಣಾವ್ರು ಸಾರಿ ಹೇಳಿದ್ದರು. ಅದೇ ಆಶಯದೊಂದಿಗೆ ಅಪ್ಪು ಮತ್ತೆ 'ಗಂಧದಗುಡಿ' ವೈಭವ ಸಾರಲು ಬರುತ್ತಿದ್ದಾರೆ.

  ಕಾಡಿನ ಬಗ್ಗೆ ಪ್ರೀತಿ ಹುಟ್ಟಿಸುವ ಅಪರೂಪದ ಸಿನಿಮಾ 'ಗಂಧದಗುಡಿ'. ಎಂ. ಪಿ ಶಂಕರ್ ನಿರ್ಮಾಣದ ಚಿತ್ರಕ್ಕೆ ವಿಜಯ್ ಆಕ್ಷನ್ ಕಟ್ ಹೇಳಿದ್ದರು. ಸ್ವತಃ ನಿರ್ಮಾಪಕರೇ ಕಥೆ ಬರೆದಿದ್ದರು. ಮಿನುಗು ತಾರೆ ಕಲ್ಪನಾ ನಾಯಕಿಯಾಗಿ ಮಿಂಚಿದ್ರೆ, ವಿಲನ್ ಆಗಿ ಸಾಹಸ ಸಿಂಹ ವಿಷ್ಣುವರ್ಧನ್ ನಟಿಸಿದ್ದರು. ನರಸಿಂಹ ರಾಜು, ಹೆಚ್. ಆರ್ ಶಾಸ್ತ್ರಿ, ಟೈಗರ್ ಪ್ರಭಾಕರ್, ಬಾಲಕೃಷ್ಣ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿತ್ತು. ಡಿ. ವಿ ರಾಜಾರಾಮ್ ಛಾಯಾಗ್ರಹಣ, ರಾಜನ್‌ ನಾಗೇಂದ್ರ ಸಂಗೀತ ಚಿತ್ರದ ಹೈಲೆಟ್ ಎನ್ನಿಸಿಕೊಂಡಿತ್ತು.

  'ಗಂಧದ ಗುಡಿ' ಡಾ.ರಾಜ್‌ಕುಮಾರ್‌ 150ನೇ ಸಿನಿಮಾ: ಈ ಚಿತ್ರಕ್ಕೆ ಸಿಕ್ಕಿದ್ದ ಸಂಭಾವನೆ ಎಷ್ಟು?'ಗಂಧದ ಗುಡಿ' ಡಾ.ರಾಜ್‌ಕುಮಾರ್‌ 150ನೇ ಸಿನಿಮಾ: ಈ ಚಿತ್ರಕ್ಕೆ ಸಿಕ್ಕಿದ್ದ ಸಂಭಾವನೆ ಎಷ್ಟು?

  ನಾಗರಹೊಳೆ ರಾಷ್ಟ್ರೀಯ ಅರಣ್ಯದಲ್ಲಿ ಖದೀಮರ ಅಟ್ಟಹಾಸ ಮಿತಿ ಮೀರಿರುತ್ತದೆ. ಗಂಧದ ಮರ, ಪ್ರಾಣಿ ಸಂಪತ್ತನ್ನು ಲೂಟಿ ಮಾಡುತ್ತಿರುತ್ತಾರೆ. ತಡೆಯಲು ಬಂದ ಅರಣ್ಯ ಇಲಾಖೆ ಅಧಿಕಾರಿಗಳನ್ನು ಕೊಂದು ಹಾಕುತ್ತಿರುತ್ತಾರೆ. ಅಂತಹ ಖದೀಮರನ್ನು ಮಟ್ಟ ಹಾಕಲು ಐಎಫ್‌ಎಸ್ ಅಧಿಕಾರಿ ಕುಮಾರ್ ಆಗಿ ಡಾ. ರಾಜ್‌ಕುಮಾರ್ ಹೋಗುತ್ತಾರೆ. ಕುಮಾರ್ ಹೇಗೆ ಖದೀಮರ ಹೆಡೆಮುರಿ ಕಟ್ಟಿ ಅರಣ್ಯವನ್ನು ರಕ್ಷಿಸುತ್ತಾರೆ ಎನ್ನುವುದು ಚಿತ್ರದ ಒನ್‌ಲೈನ್ ಸ್ಟೋರಿ. 'ಗಂಧದಗುಡಿ' ಚಿತ್ರದ ಹಲವು ಸ್ವಾರಸ್ಯಕರ ಸಂಗತಿಗಳ ಬಗ್ಗೆ ಮುಂದೆ ಓದಿ.

  ಭಾರತೀಯ ಚಿತ್ರರಂಗದಲ್ಲೇ ಮೊದಲ ಪ್ರಯತ್ನ

  ಭಾರತೀಯ ಚಿತ್ರರಂಗದಲ್ಲೇ ಮೊದಲ ಪ್ರಯತ್ನ

  ಅರಣ್ಯ ಸಂಪತ್ತು, ವನ್ಯಜೀವಿ ಸಂಪತ್ತನ್ನು ರಕ್ಷಿಸುವ ವಿಚಾರದ ಕುರಿತು ಭಾರತೀಯ ಚಿತ್ರರಂಗದಲ್ಲಿ ನಿರ್ಮಾಣದವಾದ ಮೊದಲ ಸಿನಿಮಾ 'ಗಂಧದಗುಡಿ'. 1979ರಲ್ಲಿ ಚಿತ್ರ ಹಿಂದಿಗೆ ರೀಮೆಕ್ ಆಗಿತ್ತು. ಚಿತ್ರದಲ್ಲಿ ಧರ್ಮೇಂದ್ರ ಹೀರೊ ಆಗಿ ನಟಿಸಿದ್ದರು. 'ಗಂಧದಗುಡಿ' ಚಿತ್ರದಿಂದ ಪ್ರೇರಣೆಗೊಂಡು ತೆಲುಗಿನಲ್ಲಿ ಎನ್‌ಟಿಆರ್‌ 'ಅಡವಿ ರಾಮುಡು' ಸಿನಿಮಾ ಮಾಡಿದ್ದರು. ಅಣ್ಣಾವ್ರ ಚಿತ್ರದ ಸಕ್ಸಸ್ ಅರಣ್ಯದ ಹಿನ್ನಲೆಯಲ್ಲಿ ಕಥೆ ಮಾಡಲು ಕೆ. ರಾಘವೇಂದ್ರ ರಾವು ಮತ್ತವರ ತಂಡವನ್ನು ಪ್ರೇರೇಪಿಸಿತ್ತು. ಈ ಸಿನಿಮಾ ತೆಲುಗು ಚಿತ್ರರಂಗದಲ್ಲಿ ಎಲ್ಲಾ ಹಳೇ ದಾಖಲೆಗಳನ್ನು ಮುರಿದು ಹೊಸ ದಾಖಲೆ ಬರೆದಿತ್ತು. 'ಚಂದನ ಕಾಡು' ಹೆಸರಿನಲ್ಲಿ ಅಣ್ಣಾವ್ರ 'ಗಂಧದಗುಡಿ' ಮಲಯಾಳಂಗೆ ಡಬ್ ಆಗಿತ್ತು.

  ಅಣ್ಣಾವ್ರ 150ನೇ ಚಿತ್ರ 25 ವಾರ ಪ್ರದರ್ಶನ

  ಅಣ್ಣಾವ್ರ 150ನೇ ಚಿತ್ರ 25 ವಾರ ಪ್ರದರ್ಶನ

  ಅಣ್ಣಾವ್ರ ಸಿನಿಕರಿಯರ್‌ನಲ್ಲೇ ದೊಡ್ಡ ಮೈಲಿಗಲ್ಲಾದ ಸಿನಿಮಾ 'ಗಂಧದಗುಡಿ'. ಸತತ 25 ವಾರಗಳ ಕಾಲ ಸಿನಿಮಾ ಪ್ರದರ್ಶನ ಕಂಡು ಯಶಸ್ವಿಯಾಗಿತ್ತು. ಅಂದ ಹಾಗೆ ಇದು ಡಾ. ರಾಜ್‌ಕುಮಾರ್ ನಟನೆಯ 150ನೇ ಸಿನಿಮಾ ಎನ್ನುವುದು ವಿಶೇಷ. ಚಿತ್ರದ ಹಾಡುಗಳೆಲ್ಲಾ ಸೂಪರ್ ಹಿಟ್ ಆಗಿತ್ತು. 'ನಾವಾಡುವ ನುಡಿಯೇ' ಹಾಡು ಇವತ್ತಿಗೂ ಹಚ್ಚ ಹಸುರಾಗಿದೆ. ಈ ಹಾಡನ್ನು ಹೊಸ ರೂಪದಲ್ಲಿ ಪುನೀತ್ ರಾಜ್‌ಕುಮಾರ್ 'ಗಂಧದಗುಡಿ' ಚಿತ್ರದಲ್ಲೂ ಬಳಸಿಕೊಳ್ಳಲಾಗಿದೆ.

  ಡಾ. ರಾಜ್- ಡಾ. ವಿಷ್ಣು ನಟಿಸಿದ್ದ ಚಿತ್ರ

  ಡಾ. ರಾಜ್- ಡಾ. ವಿಷ್ಣು ನಟಿಸಿದ್ದ ಚಿತ್ರ

  ಕನ್ನಡ ಚಿತ್ರರಂಗದ ದಿಗ್ಗಜರಾದ ಡಾ. ರಾಜ್‌ಕುಮಾರ್ ಹಾಗೂ ಸಾಹಸಸಿಂಹ ಡಾ. ವಿಷ್ಣುವರ್ಧನ್ ಒಟ್ಟಿಗೆ ನಟಿಸಿದ ಸಿನಿಮಾ ಇದು. 'ನಾಗರಹಾವು' ಸಿನಿಮಾ ಸಕ್ಸಸ್ ನಂತರ 'ಗಂಧದಗುಡಿ' ಚಿತ್ರದಲ್ಲಿ ಅಣ್ಣಾವ್ರ ಎದುರಾಳಿ ಪಾತ್ರದಲ್ಲಿ ನಟಿಸಿದ್ದರು. ಆದರೆ ಶೂಟಿಂಗ್ ಸೆಟ್‌ನಲ್ಲಿ ನಡೆದ ಅವಘಡದ ವಿವಾದ ಮಾತ್ರ ಕೊನೆಗೂ ಬಗೆ ಹರಿಯಲೇ ಇಲ್ಲ. ಡಾ. ರಾಜ್‌- ವಿಷ್ಣು ಈ ಬಗ್ಗೆ ಮಾತನಾಡಲೇ ಇಲ್ಲ. ಒಬ್ಬೊಬ್ಬರು ಒಂದೊಂದು ಹೇಳಿ ಏನೇನೋ ಅಪಪ್ರಚಾರ ಆಗಿತ್ತು. ಇದು ಇಬ್ಬರ ಅಭಿಮಾನಿಗಳ ನಡುವೆ ಸಂಘರ್ಷಕ್ಕೆ ಕಾರಣವಾಗಿತ್ತು. ಅಂದು ನಿಜಕ್ಕೂ ಏನ್ ಆಯ್ತು ಎನ್ನುವುದು ಭಾರತಿ ವಿಷ್ಣುವರ್ಧನ್ ಹೇಳಿದಂತೆ ಮೇಲಿರುವ ಆ ದೇವರಿಗೆ ಮಾತ್ರ ಗೊತ್ತು.

  'ಗಂಧದಗುಡಿ' ಸೀಕ್ವೆಲ್‌ನಲ್ಲಿ ಶಿವಣ್ಣ

  'ಗಂಧದಗುಡಿ' ಸೀಕ್ವೆಲ್‌ನಲ್ಲಿ ಶಿವಣ್ಣ

  ಇವತ್ತು ಭಾರತೀಯ ಚಿತ್ರರಂಗದಲ್ಲಿ ಸೀಕ್ವೆಲ್ ಸಿನಿಮಾಗಳ ಟ್ರೆಂಡ್ ನಡೀತಿದೆ. ಆದರೆ 90 ದಶಕದಲ್ಲೇ ನಿರ್ಮಾಪಕ ಎಂ. ಪಿ ಶಂಕರ್ 'ಗಂಧದಗುಡಿ' ಸೀಕ್ವೆಲ್ ಮಾಡಿದ್ದರು. ಅರಣ್ಯದ ಅಧಿಕಾರಿ ಕುಮಾರ್ ಮಗ ಶಂಕರ್ ಪಾತ್ರದಲ್ಲಿ ಅಣ್ಣಾವ್ರ ಮಗ ಶಿವರಾಜ್‌ಕುಮಾರ್ ನಟಿಸಿದ್ದರು. ಈ ಚಿತ್ರದಲ್ಲೂ ಅರಣ್ಯ ಸಂಪತ್ತನ್ನು ಉಳಿಸುವ ನಾಯಕ ಕಥೆಯನ್ನು ಹೇಳಲಾಗಿತ್ತು. ಹಲವು ವರ್ಷಗಳ ನಂತರ ನಾಗರಹೊಳೆ ರಾಷ್ಟ್ರೀಯ ಅರಣ್ಯದಲ್ಲಿ ಮತ್ತೊಂದು ಖದೀಮರ ತಂಡ ಅರಣ್ಯ ಸಂಪತ್ತನ್ನು ಕೊಳ್ಳೆ ಹೊಡೆಯುತ್ತರುತ್ತಾರೆ. ಅವರನ್ನು ಮಟ್ಟ ಹಾಕಲು ಡೆಹರಾಡೂನ್‌ನಲ್ಲಿ ತರಬೇತಿ ಪಡೆದು ಬಂದ ಶಂಕರ್ ಹೋಗುತ್ತಾರೆ. ಹಿಂದಿನ ಭಾಗದ ಕಥೆಯಲ್ಲಿ ಅಲ್ಲಲ್ಲಿ ನೆನಪಿಸುತ್ತಾ ಕಥೆಯನ್ನು ಮುಂದುವರೆಸಲಾಗಿತ್ತು. ಅಣ್ಣಾವ್ರು ಕೂಡ ಹಿಂದಿನ ಚಿತ್ರದ ಪಾತ್ರವನ್ನು ಮುಂದುವರೆಸಿ, ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

  English summary
  Interesting facts about Dr rajkumar Starrer 1973 Gandhadagudi Movie. It was the first Indian movie made on the concept of protection of forests and wildlife conservation. Know More.
  Thursday, October 27, 2022, 15:57
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X