For Quick Alerts
  ALLOW NOTIFICATIONS  
  For Daily Alerts

  ರಾಜ್ಯದಲ್ಲಿ 1 ಕೋಟಿ ಟಿಕೆಟ್ ಮಾರಾಟವಾದ ಮೊದಲ ಕನ್ನಡ ಸಿನಿಮಾ 'ಕಾಂತಾರ'ನಾ?

  |

  ಕರ್ನಾಟಕದಲ್ಲಿ 'ಕಾಂತಾರ' ಹೊಸ ಇತಿಹಾಸ ಸೃಷ್ಟಿಸಿದೆ. ಕನ್ನಡ ಚಿತ್ರರಂಗದಲ್ಲಿ ಈವರೆಗೆ ಮತ್ಯಾವುದೇ ಕನ್ನಡ ಸಿನಿಮಾ ಮಾಡದ ದಾಖಲೆಗಳನ್ನು ರಿಷಬ್ ಶೆಟ್ಟಿ ಸಿನಿಮಾ ತನ್ನ ಒಡಲಿಗೆ ಹಾಕಿಕೊಳ್ಳುತ್ತಿದೆ. ಕರ್ನಾಟಕದಲ್ಲಿ 1 ಕೋಟಿ ಟಿಕೆಟ್ ಮಾರಾಟವಾಗಿ ಮತ್ತೊಂದು ದಾಖಲೆ ನಿರ್ಮಾಣವಾಗಿದೆ. ಕಳೆದೆರಡು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಇದೇ ಸುದ್ದಿ ಭಾರೀ ಚರ್ಚೆ ಹುಟ್ಟಾಕ್ಕಿದೆ.

  ಪ್ರಪಂಚದಾದ್ಯಂತ 'ಕಾಂತಾರ' ಸಿನಿಮಾ ದರ್ಬಾರು ಜೋರಾಗಿದೆ. ಇದರಲ್ಲಿ ಎರಡನೇ ಮಾತೇಯಿಲ್ಲ. ಮೀಡಿಯಂ ಬಜೆಟ್ ಸಿನಿಮಾವೊಂದು ದೊಡ್ಡ ದೊಡ್ಡ ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಮೀರಿಸಿ ಮುನ್ನುಗ್ಗುತ್ತಿದೆ. 'KGF ಚಾಪ್ಟರ್- 1', 'ಪುಷ್ಪ' ಸಿನಿಮಾಗಳನ್ನು 'ಕಾಂತಾರ' ಹಿಂದಿಕ್ಕಿದೆ. ಇದೆಲ್ಲದರ ನಡುವೆ ಕರ್ನಾಟಕದಲ್ಲಿ 1 ಕೋಟಿ ಟಿಕೆಟ್ ಮಾರಾಟವಾದ ಮೊದಲ ಸಿನಿಮಾ 'ಕಾಂತಾರ'ನಾ ಎನ್ನುವ ಚರ್ಚೆ ಈಗ ಮುನ್ನಲೆಗೆ ಬಂದಿದೆ. 88 ವರ್ಷಗಳ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಸಾವಿರಾರು ಸಿನಿಮಾಗಳು ಬಂದು ಹೋಗಿವೆ. ಅಸಂಖ್ಯಾತ ಪ್ರೇಕ್ಷಕರನ್ನು ರಂಜಿಸಿವೆ.

  ದಾವಣಗೆರೆಯಲ್ಲಿ ಡಾ.ರಾಜ್‌ ಕನ್ನಡ ಕಹಳೆ: ಅಜ್ಜಿ ನೋಡಲು ವಾಪಸ್ ಬಂದಿದ್ದ ಅಣ್ಣಾವ್ರು!ದಾವಣಗೆರೆಯಲ್ಲಿ ಡಾ.ರಾಜ್‌ ಕನ್ನಡ ಕಹಳೆ: ಅಜ್ಜಿ ನೋಡಲು ವಾಪಸ್ ಬಂದಿದ್ದ ಅಣ್ಣಾವ್ರು!

  'ಕಾಂತಾರ' ಚಿತ್ರಕ್ಕಿಂತಲೂ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾಗಳು ಕನ್ನಡ ಚಿತ್ರರಂಗದಲ್ಲಿ ಇದೆ ಎನ್ನುವುದು ಕೆಲವರ ವಾದ. ಇದನ್ನು ಸಾಕ್ಷಿ ಸಮೇತ ಹೇಳುವವರು ಇದ್ದಾರೆ. 'ಕಾಂತಾರ' ಸಿನಿಮಾ ಸಾಧನೆ ಬಗ್ಗೆ ಯಾರು ಚಕಾರ ಎತ್ತುತ್ತಿಲ್ಲ. ಬದಲಿಗೆ ಇದಕ್ಕಿಂತಲೂ ದೊಡ್ಡದಾಗಿ ಸದ್ದು ಮಾಡಿದ ಕನ್ನಡ ಸಿನಿಮಾಗಳು ಇವೆ ಎನ್ನುವ ಆರೋಗ್ಯಕರ ಚರ್ಚೆ ನಡೀತಿದೆ.

  ವರ್ಷಗಳ ಕಾಲ ಅಣ್ಣಾವ್ರ ಸಿನಿಮಾ ಪ್ರದರ್ಶನ

  ವರ್ಷಗಳ ಕಾಲ ಅಣ್ಣಾವ್ರ ಸಿನಿಮಾ ಪ್ರದರ್ಶನ

  ಕನ್ನಡ ಸಿನಿಮಾಗಳು 100 ಕೋಟಿ ಕ್ಲಬ್ ಸೇರುತ್ತಿರುವುದು ಇತ್ತೀಚೆಗೆ ಹೊಸದು ಇರಬಹುದು. ಆದರೆ ಇದಕ್ಕಿಂತಲೂ ದೊಡ್ಡಮಟ್ಟದಲ್ಲಿ ಥಿಯೇಟರ್‌ಗಳಲ್ಲಿ ಕಲೆಕ್ಷನ್ ಮಾಡಿದ ಸಿನಿಮಾಗಳು ಇವೆ. ಸಾವಿರಗಳಲ್ಲಿ ನಿರ್ಮಾಣವಾಗುತ್ತಿದ್ದ ಸಿನಿಮಾಗಳ ಲಕ್ಷಗಳಲ್ಲಿ ಕಲೆಕ್ಷನ್ ಮಾಡುತ್ತಿದ್ದವು. ಇವತ್ತಿನ ಕಾಲಕ್ಕೆ ಅದು ಕೋಟಿಗಳ ಲೆಕ್ಕಕ್ಕೆ ಬರುತ್ತದೆ. ಅಣ್ಣಾವ್ರ 'ಬಂಗಾರದ ಮನುಷ್ಯ' ಸಿನಿಮಾ ಸತತ 2 ವರ್ಷ ಪ್ರದರ್ಶನ ಕಂಡಿತ್ತು. ಅಂದರೆ ಆ ಚಿತ್ರದ ಎಷ್ಟು ಟಿಕೆಟ್‌ಗಳು ಮಾರಾಟವಾಗಿರಬಹುದು ಲೆಕ್ಕ ಹಾಕಿ. ಅಂದು ಟೆಂಟ್‌ಗಳಲ್ಲಿ ಸಿನಿಮಾ ಪ್ರದರ್ಶನವಾಗುತ್ತಿತ್ತು. ಅಲ್ಲಿ ಮಾರಾಟವಾಗುತ್ತಿದ್ದ ಟಿಕೆಟ್‌ಗಳ ಸಂಖ್ಯೆ ಲೆಕ್ಕ ಇಟ್ಟಿರುವವರು ಯಾರು? 'ಹುಲಿಯ ಹಾಲಿ ಮೇವು', 'ಗಂಧದ ಗುಡಿ', 'ಶಂಕರ್‌ಗುರು' ಸಿನಿಮಾಗಳ ಟಿಕೆಟ್ ಎಷ್ಟು ಮಾರಾಟ ಆಗಿತ್ತು ಎನ್ನುವುದರ ಲೆಕ್ಕವೇ ಇಲ್ಲ.

  ಓಂ, ಯಜಮಾನ, ಮುಂಗಾರು ಮಳೆ, ಜೋಗಿ

  ಓಂ, ಯಜಮಾನ, ಮುಂಗಾರು ಮಳೆ, ಜೋಗಿ

  ಕನ್ನಡ ಆಲ್‌ಟೈಮ್‌ ಹಿಟ್ ಸಿನಿಮಾಗಳ ಲಿಸ್ಟ್ ತೆಗೆದುಕೊಂಡರೂ 1 ಕೋಟಿ ಟಿಕೆಟ್ ಮಾರಾಟವಾಗಿರುವ ಚಿತ್ರಗಳು ಸಿಗುತ್ತವೆ. ಇಂದು ಜನಸಂಖ್ಯೆ ಕೂಡ ಜಾಸ್ತಿ ಆಗಿದೆ. 'ಕಾಂತಾರ' ಕನ್ನಡ ಮಾತ್ರವಲ್ಲದೇ ಬೇರೆ ಭಾಷೆಗಳಲ್ಲೂ ಕರ್ನಾಟಕದಲ್ಲಿ ಬಿಡುಗಡೆಯಾಗಿದೆ. ಇನ್ನು ದಶಕಗಳ ಹಿಂದೆ ಜನರಿಗೆ ಸಿನಿಮಾ ಬಿಟ್ಟರೆ ಬೇರೆ ಮನರಂಜನೆ ಮಾಧ್ಯಮ ಇರಲಿಲ್ಲ. ಟಿವಿ, ಮೊಬೈಟ್, ಓಟಿಟಿ ಬರುವುದಕ್ಕೂ ಮುನ್ನ ಜನ ಹೆಚ್ಚು ಥಿಯೇಟರ್‌ಗೆ ಬಂದು ಸಿನಿಮಾ ನೋಡುತ್ತಿದ್ದರು. ಡಾ. ರಾಜ್, ವಿಷ್ಣುವರ್ಧನ್, ಅಂಬರೀಶ್ ಸಿನಿಮಾಗಳನ್ನು 10 ಬಾರಿ 15 ಬಾರಿ ನೋಡಿದವರಿಗೆ ಲೆಕ್ಕವಿಲ್ಲ. ಶಿವರಾಜ್‌ಕುಮಾರ್ ನಟನೆಯ 'ಓಂ' ಹಾಗೂ 'ಜೋಗಿ' ಸಿನಿಮಾಗಳು ಸೃಷ್ಟಿಸಿದ ಸಂಚಲನ ಎಂಥದ್ದು ಎನ್ನುವುದು ಗೊತ್ತೇಯಿದೆ. 'ಓಂ' ಸಿನಿಮಾ ಸಾಕಷ್ಟು ಬಾರಿ ರೀ ರಿಲೀಸ್ ಆಗಿದೆ. ದಾದಾ ನಟನೆಯ 'ಯಜಮಾನ', 'ನಾಗರಹಾವು' ಗಣೇಶ್ ನಟನೆಯ 'ಮುಂಗಾರು ಮಳೆ' ಚಿತ್ರಗಳ ಟಿಕೆಟ್‌ಗಳು 1 ಕೋಟಿಗಿಂತ ಹೆಚ್ಚು ಮಾರಾಟವಾಗಿರುವ ಸಾಧ್ಯತೆಯಿದೆ.

  ಅಪರೂಪದ ದಾಖಲೆ ಬರೆದ 'ಕಾಂತಾರ'

  ಅಪರೂಪದ ದಾಖಲೆ ಬರೆದ 'ಕಾಂತಾರ'

  ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಈಗಾಗಳೇ 10ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ಮಾಣ ಮಾಡಿದೆ. ಅದರಲ್ಲೂ KGF -2 ಸಿನಿಮಾ 1250 ಕೋಟಿ ರೂ. ಕಲೆಕ್ಷನ್ ಮಾಡಿದ ಎಲ್ಲರ ಹುಬ್ಬೇರಿಸಿತ್ತು. ಆದರೆ ಹೊಂಬಾಳೆ ಸಂಸ್ಥೆ ಈವರೆಗೆ ನಿರ್ಮಿಸಿರುವ ಸಿನಿಮಾಗಳಲ್ಲಿ ಕರ್ನಾಟಕದಲ್ಲಿ ಅತ್ಯಂತ ಹೆಚ್ಚು ಸಿನಿಮಾ ಎನ್ನುವ ಹೆಗ್ಗಳಿಕೆಗೆ 'ಕಾಂತಾರ' ಪಾತ್ರವಾಗಿದೆ. ಇದನ್ನು ಸ್ವತಃ ಹೊಂಬಾಳೆ ಸಂಸ್ಥೆಯೇ ಘೋಷಣೆ ಮಾಡಿದೆ.

  'ಕಾಂತಾರ' ಮೊದಲ ಸಿನಿಮಾ ಅಲ್ಲ?

  'ಕಾಂತಾರ' ಮೊದಲ ಸಿನಿಮಾ ಅಲ್ಲ?

  ಇತ್ತೀಚೆಗೆ ಸಿಂಗಲ್‌ಸ್ಕ್ರೀನ್ ಥಿಯೇಟರ್‌ಗಳ ಜೊತೆಗೆ ಮಲ್ಟಿಫ್ಲೆಕ್ಸ್‌ಗಳ ಟ್ರೆಂಡ್ ನಡೀತಿದೆ. ಬುಕ್‌ಮೈ ಶೋ ರೀತಿಯ ಟಿಕೆಟ್ ಖರೀದಿ ಮಾಡುವ ವೆಬ್‌ಸೈಟ್‌ಗಳು ಇವೆ. ಹಾಗಾಗಿ ಮಾರಾಟವಾಗುವ ಟಿಕೆಟ್‌ಗಳ ಲೆಕ್ಕ ಸಿಗುತ್ತಿರಬಹುದು. ಅದು ಸುದ್ದಿ ಕೂಡ ಆಗುತ್ತಿರಬಹುದು. 'KGF ಚಾಪ್ಟರ್‌ 1' ಸಿನಿಮಾ 75 ಲಕ್ಷ, 'KGF ಚಾಪ್ಟರ್‌ 2' ಸಿನಿಮಾ 72 ಲಕ್ಷ, 'ರಾಜಕುಮಾರ' ಚಿತ್ರದ 65 ಲಕ್ಷ ಟಿಕೆಟ್ ಕರ್ನಾಟಕದಲ್ಲಿ ಮಾರಾಟವಾಗಿತ್ತು ಎಂದು ಸುದ್ದಿಯಾಗಿತ್ತು. ಅದನ್ನೆಲ್ಲಾ ಮೀರಿ ಈಗ 'ಕಾಂತಾರ' ಚಿತ್ರದ 1 ಕೋಟಿ ಟಿಕೆಟ್ ಬಿಕರಿಯಾಗಿದೆ. ಹಾಗಾಗಿ ಇದು ದಾಖಲೆ ಇರಬಹುದು. ಆದರೆ ಈ ದಾಖಲೆ ಬರೆದ ಮೊದಲ ಸಿನಿಮಾ ಇದೇ ಎಂದು ಹೇಳುವುದು ಕಷ್ಟ. ಎಷ್ಟು ಜನ ಸಿನಿಮಾ ನೋಡಿದ್ದಾರೆ ಎನ್ನುವ ಲೆಕ್ಕ ತೆಗೆದುಕೊಂಡರೂ ಹಿಂದೆ ಕೆಲ ಸಿನಿಮಾಗಳನ್ನು ಟಿಕೆಟ್ ಇಲ್ಲದೇ ಪ್ರೇಕ್ಷಕರು ನಿಂತು ನೋಡಿದ ಉದಾಹರಣೆಯೂ ಇದೆ.

  English summary
  Is Rishab Shetty Starrer Kantara the first film to sell 1 Crore tickets in Karnataka. Medium Budget Kantara movie Creating records at the Box office While also winning the Hearts of the Audiences. Know More.
  Friday, November 11, 2022, 14:07
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X