twitter
    For Quick Alerts
    ALLOW NOTIFICATIONS  
    For Daily Alerts

    ಕಮಲಾ ಕುಮಾರಿ ಜಯಂತಿ ಆದ ಆಸಕ್ತಿಕರ ಪಯಣ

    |

    ಕಮಲಾ ಕುಮಾರಿ ಆಗಿದ್ದ ಪುಟ್ಟ ಬಾಲಕಿ ಜಯಂತಿ ಆಗಿ ಬದಲಾಗಿದ್ದು, ದಶಕಗಳ ಕಾಲ ತೆರೆಯ ಮೇಲೆ ರಾರಾಜಿಸಿದ್ದು ಸಾಮಾನ್ಯ ಕತೆಯಲ್ಲ. ಮಹಿಳೆಯರು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವುದೇ ಅಪರಾಧ ಎಂಬ ಭಾವವಿದ್ದು ಸಮಯದಲ್ಲಿ ತೆರೆಯ ಮೇಲೆ ಗ್ಲಾಮರಸ್ ಆಗಿ ಕಾಣಿಸಿಕೊಂಡ ಗಟ್ಟಿಗಿತ್ತಿ ಜಯಂತಿ.

    Recommended Video

    ರಾಜ್ ಕುಮಾರ್ ಜೊತೆಗೆ 45 ಚಿತ್ರಗಳಲ್ಲಿ ನಟಿಸಿ ದಾಖಲೆ ಬರೆದಿದ್ರು ಜಯಂತಿ

    ದಪ್ಪಗೆ ಗುಂಡಗೆ ಇದ್ದ ಅಮ್ಮನ ಮುದ್ದು ಮಗಳು ಜಯಂತಿಗೆ ನೃತ್ಯವೆಂದರೆ ಪಂಚಪ್ರಾಣ. ಅಮ್ಮನಿಗೂ ಮಗಳ ಆಸೆ ಪೂರೈಸುವ ಆಸೆ ಹಾಗಾಗಿ ಬಳ್ಳಾರಿಯಿಂದ ಚೆನ್ನೈಗೆ ಕರೆತಂದು ಅಲ್ಲಿ ನೃತ್ಯ ಶಾಲೆಯಲ್ಲಿ ಸೇರಿಸಿದರು. ಅಲ್ಲಿ ತಮಿಳಿನ ಖ್ಯಾತ ನಟಿ ಮನೋರಮಾ ಜಯಂತಿಯ ಕ್ಲಾಸ್‌ಮೇಟ್.

    ಜಯಂತಿಯವರ ನೃತ್ಯಗುರು ಸಿನಿಮಾಗಳಲ್ಲಿ ನಟನೆ, ನೃತ್ಯ ನಿರ್ದೇಶನ ಮಾಡುತ್ತಿದ್ದ ಕಾರಣ ಜಯಂತಿ ಆಗಾಗ್ಗೆ ಸ್ಟುಡಿಯೋಕ್ಕೆ ಹೋಗಿ ಶೂಟಿಂಗ್ ನೋಡುತ್ತಾ ನಿಲ್ಲುತ್ತಿದ್ದರಂತೆ. ಖ್ಯಾತ ನಟ ಎನ್‌ಟಿಆರ್ ತೊಡೆ ಮೇಲೆ ಕೂರಿಸಿಕೊಂಡು ಜಯಂತಿಯನ್ನು ಮುದ್ದು ಮಾಡುತ್ತಾ ನನ್ನೊಂದಿಗೆ ನಟಿಸುತ್ತೀಯ ಎಂದು ತಮಾಷೆ ಮಾಡುತ್ತಿದ್ದರು. ಅಷ್ಟು ಮುದ್ದಾಗಿದ್ದರು ಜಯಂತಿ. ಆಗೆಲ್ಲ 'ಅಯ್ಯೋ ಇಲ್ಲಪ್ಪ' ಎಂದೇ ಹೇಳುತ್ತಿದ್ದರು ಜಯಂತಿ.

    ನಿರ್ದೇಶಕ ವೈ.ಆರ್.ಸ್ವಾಮಿ ಕಣ್ಣಿಗೆ ಬಿದ್ದ ಜಯಂತಿ

    ನಿರ್ದೇಶಕ ವೈ.ಆರ್.ಸ್ವಾಮಿ ಕಣ್ಣಿಗೆ ಬಿದ್ದ ಜಯಂತಿ

    ಒಮ್ಮೆ ಹೀಗೆ ಚಿತ್ರೀಕರಣ ನೋಡುವಾಗಲೇ ನಿರ್ದೆಶಕ ವೈ.ಆರ್.ಸ್ವಾಮಿ ಅವರ ಕಣ್ಣಿಗೆ ಬಿದ್ದರು ಜಯಂತಿ. ವೈ.ಆರ್.ಸ್ವಾಮಿ ತಮ್ಮ 'ಜೇನುಗೂಡು' ಸಿನಿಮಾಕ್ಕಾಗಿ ಮೂರನೇ ನಾಯಕಿಯ ಹುಡುಕಾಟದಲ್ಲಿದ್ದರು. ಅವರಿಗೆ ಜಯಂತಿ ಕಣ್ಣಿಗೆ ಬಿದ್ದರಾದರೂ ಜಯಂತಿಯವರು ಪೋಷಕರು ಮಗಳು ಸಿನಿಮಾದಲ್ಲಿ ನಟಿಸಲು ಒಪ್ಪಿಕೊಳ್ಳಲಿಲ್ಲ. ಮೂರು ನಾಲ್ಕು ದಿನ ಅಲೆದಾಡಿ ಜಯಂತಿಯವರ ಅಮ್ಮನನ್ನು ಒಪ್ಪಿಸಿ ಜಯಂತಿ ತಮ್ಮ ಮೊದಲ ಸಿನಿಮಾದಲ್ಲಿ ನಟಿಸುವಂತೆ ಮಾಡಿದರು ವೈ.ಆರ್.ಸ್ವಾಮಿ.

    ಕಮಲಾ ಕುಮಾರಿ ಜಯಂತಿ ಆಗಿದ್ದು ಹೀಗೆ

    ಕಮಲಾ ಕುಮಾರಿ ಜಯಂತಿ ಆಗಿದ್ದು ಹೀಗೆ

    ಎರಡನೇ ಸಿನಿಮಾ ಚಂದವಳ್ಳಿಯ ತೋಟ ಟಿ.ವಿ.ಸಿಂಗ್ ಠಾಕೂರ್ ನಿರ್ದೇಶನ. ಈ ಸಿನಿಮಾದಲ್ಲಿ ಮುಖ್ಯ ನಾಯಕಿಯ ಪಾತ್ರ ಜಯಂತಿಯವರದ್ದು. ಕಮಲಾ ಕುಮಾರಿ ಹೆಸರು ಉದ್ದವಾಗುತ್ತದೆ ಅದನ್ನು ಕಮಲಾ ಎಂದು ಮಾಡೋಣ ಎಂದುಕೊಂಡರು. ಆದರೆ ಕಮಲಾ ಹೆಸರಿನಲ್ಲಿ ಚಿತ್ರರಂಗದ ಯಾರೂ ದೊಡ್ಡ ಯಶಸ್ಸುಗಳಿಸಿಲ್ಲ ಹಾಗಾಗಿ ಜಯಂತಿ ಎಂದು ಅವರೇ ಹೆಸರಿಟ್ಟರು. 'ಚಂದವಳ್ಳಿ ತೋಟ' ಸಿನಿಮಾಕ್ಕೆ ಪ್ರಶಸ್ತಿ ಸಹ ಬಂತು ಜಯಂತಿಗೆ. ಪ್ರಶಸ್ತಿ ನೀಡಿದ ಇಂದಿರಾ ಗಾಂಧಿ ಅವರಿಗೆ ಮುತ್ತನ್ನಿಟ್ಟು ಆಲಂಗಿಸಿಕೊಂಡಿದ್ದರಂತೆ.

    ದೊಡ್ಡ ಖ್ಯಾತಿ ತಂದುಕೊಟ್ಟ 'ಮಿಸ್ ಲೀಲಾವತಿ'

    ದೊಡ್ಡ ಖ್ಯಾತಿ ತಂದುಕೊಟ್ಟ 'ಮಿಸ್ ಲೀಲಾವತಿ'

    ಆ ನಂತರ ಜಯಂತಿ ನಟಿಸಿದ್ದು 'ಮಿಸ್ ಲೀಲಾವತಿ' ಸಿನಿಮಾದಲ್ಲಿ ಈ ಸಿನಿಮಾ ಆಗಿನ ಕಾಲಕ್ಕೆ ಬಹಳ ಬೋಲ್ಡ್ ಆದ ವಿಷಯ ವಸ್ತುವನ್ನು ಒಳಗೊಂಡಿತ್ತು. ಸಿನಿಮಾದಲ್ಲಿ ಸಖತ್ ಬೋಲ್ಡ್ ಆಗಿ ಜಯಂತಿ ನಟಿಸಿದ್ದರು. ಸಿನಿಮಾ ದೊಡ್ಡ ಹಿಟ್ ಆಗುವ ಜೊತೆಗೆ ಜಯಂತಿಯವರಿಗೆ ದೊಡ್ಡ ಖ್ಯಾತಿ ತಂದುಕೊಟ್ಟಿತು. ಸಿನಿಮಾದ ಬಳಿಕ ರಾಷ್ಟ್ರಮಟ್ಟದಲ್ಲಿ ಜಯಂತಿ ಖ್ಯಾತರಾದರು.

    ಹಲವು ಸ್ಟಾರ್ ನಟರೊಂದಿಗೆ ಸಿನಿಮಾ ಮಾಡಿದ ಜಯಂತಿ

    ಹಲವು ಸ್ಟಾರ್ ನಟರೊಂದಿಗೆ ಸಿನಿಮಾ ಮಾಡಿದ ಜಯಂತಿ

    ಎಲ್ಲ ಭಾಷೆಯ ಸ್ಟಾರ್ ನಟರೊಂದಿಗೆ ಜಯಂತಿ ಸಿನಿಮಾಗಳನ್ನು ಮಾಡಿದ್ದಾರೆ. ಡಾ.ರಾಜ್‌ಕುಮಾರ್ ಜೊತೆಗೆ ಅತಿ ಹೆಚ್ಚು ಸಿನಿಮಾ ಮಾಡಿರುವ ಖ್ಯಾತಿ ಜಯಂತಿ ಅವರದ್ದು. ರಾಜ್‌ ಕುಮಾರ್ ಮಾತ್ರವೇ ಅಲ್ಲದೆ ತೆಲುಗಿನ ಸ್ಟಾರ್ ನಟ ಎನ್‌ಟಿಆರ್, ತಮಿಳಿನ ಜೆಮಿನಿ ಗಣೇಶನ್, ಮಲಯಾಳಂ, ಹಿಂದಿಯಲ್ಲಿಯೂ ಸ್ಟಾರ್ ನಟರ ಸಿನಿಮಾಗಳಲ್ಲಿ ಜಯಂತಿ ನಟಿಸಿದ್ದರು. 1960 ರಿಂದ 1990ರ ವರೆಗೂ ಜಯಂತಿ ಸಿನಿಮಾರಂಗದಲ್ಲಿ ಉತ್ತುಂಗದಲ್ಲಿಯೇ ಇದ್ದರು. ಸಾಮಾನ್ಯ ಸಿನಿಮಾಗಳ ಜೊತೆಗೆ ಪ್ರಯೋಗಾತ್ಮಕ, ಗಂಭೀರ ಸಿನಿಮಾಗಳಲ್ಲಿಯೂ ಜಯಂತಿ ನಟಿಸಿದ್ದರು. ಬಾಲಚಂದರ್, ಪುಟ್ಟಣ ಕಣಗಾಲ್ ಅವರಂಥಹಾ ಸೂಕ್ಷ್ಮ ನಿರ್ದೇಶಕರುಗಳ ಮೆಚ್ಚಿನ ನಟಿಯಾಗಿದ್ದರು ಜಯಂತಿ.

    ಹಲವು ಭಾಷೆಗಳಲ್ಲಿ ನಟಿಸಿದ್ದಾರೆ

    ಹಲವು ಭಾಷೆಗಳಲ್ಲಿ ನಟಿಸಿದ್ದಾರೆ

    ಕನ್ನಡದಲ್ಲಿ 250ಕ್ಕೂ ಹೆಚ್ಚು ಸಿನಿಮಾಗಳು 100ಕ್ಕೂ ಹೆಚ್ಚು ತೆಲುಗು ಸಿನಿಮಾಗಳು, 50ಕ್ಕೂ ಹೆಚ್ಚು ತಮಿಳು ಸಿನಿಮಾಗಳು. 7 ಮಲಯಾಳಂ ಸಿನಿಮಾಗಳು, ಮರಾಠಿ, ಹಿಂದಿ ಸಿನಿಮಾಗಳಲ್ಲಿಯೂ ಜಯಂತಿ ನಟಿಸಿದ್ದಾರೆ. ಒಟ್ಟು ಸುಮಾರು 500 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿ ಜಯಂತಿ ನಟಿಸಿದ್ದಾರೆ. ಜಯಂತಿ ಅವರ ಅತ್ಯುತ್ತಮ ನಟನೆಗೆ ಆರು ಬಾರಿ ಕರ್ನಾಟಕ ರಾಜ್ಯ ಪ್ರಶಸ್ತಿ ಲಭಿಸಿದೆ. ಎರಡು ಬಾರಿ ಫಿಲಂ ಫೇರ್, ರಾಜ್‌ಕುಮಾರ್ ಪ್ರಶಸ್ತಿ, ಬಿ ಸರೋಜಾದೇವಿ ರಾಷ್ಟ್ರಪ್ರಶಸ್ತಿ ಸಹ ಅವರಿಗೆ ದೊರಕಿದೆ.

    English summary
    Kannada Actress Jayanthi Biography, Age, Family, Movies and Awards.
    Monday, July 26, 2021, 13:37
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X