For Quick Alerts
  ALLOW NOTIFICATIONS  
  For Daily Alerts

  ಲೂಸ್ ಮಾದ ಯೋಗಿ ಬಿಚ್ಚಿಟ್ಟ ಸಿನಿಮಾ ಪಯಣದ ಸಿಹಿ-ಕಹಿ ಕಥೆ

  |

  ಯೋಗೇಶ್ ಎಂಬ ಶಾಲಾ ಹುಡುಗ 'ಲೂಸ್ ಮಾದ ಯೋಗಿ' ಎಂಬ ಹೆಸರು ಪಡೆದುಕೊಂಡಿದ್ದು 'ದುನಿಯಾ' ಚಿತ್ರದ ಮೂಲಕ. 'ನಂದ ಲವ್ಸ್ ನಂದಿತಾ' ಚಿತ್ರದ ಮೂಲಕ ನಾಯಕ ನಟನಾಗಿಯೂ ಹೆಸರು ಪಡೆದ ಸಾಲು ಸಾಲು ಗೆಲವುಗಳ ಬಳಿಕ ಸೋಲಿನ ಆಘಾತಗಳಿಂದ ನೆಲಕಚ್ಚಿದವರು.

  ಬಾಲಿವುಡ್ ದಂತಕಥೆ ರಿಷಿ ಕಪೂರ್ ಇನ್ನಿಲ್ಲ | Rishi Kapoor

  ಅವರ ಅಭಿನಯದ 'ದುನಿಯಾ', 'ಅಂಬಾರಿ', 'ಸಿದ್ಲಿಂಗು', 'ಹುಡುಗರು', 'ಯಾರೇ ಕೂಗಾಡಲಿ', 'ಅಲೆಮಾರಿ' ಮುಂತಾದವು ಅವರೊಬ್ಬ ಪ್ರತಿಭಾವಂತ ಕಲಾವಿದರ ಸಾಲಿನಲ್ಲಿ ನಿಶ್ಚಿತವಾಗಿಯೂ ಇರಬಹುದಾದ ಹೆಸರು ಎಂಬುದನ್ನು ಸಾಬೀತುಪಡಿಸಿವೆ. ಆದರೆ ಯಶಸ್ಸಿನ ಉತ್ತುಂಗದಲ್ಲಿದ್ದ ಯೋಗಿ ಇದ್ದಕ್ಕಿದ್ದಂತೆ ವೈಫಲ್ಯಗಳನ್ನು ಎದುರಿಸಿದರು. ಹಾಗೆಯೇ ಚಿತ್ರರಂಗದಿಂದ ದೂರವಾದರು. ಈ ನಡುವೆ ಮದುವೆ, ಮಗು ಹೀಗೆ ಸಾಂಸಾರಿಕ ಬದುಕಿನ ಖುಷಿ ಅನುಭವಿಸಿದರು. ಆದರೆ ಯೋಗಿ ಅನುಭವಿಸಿದ ಖುಷಿ, ಕಷ್ಟ, ಅವಮಾನಗಳು ಎಂತಹವು? ಇದೆಲ್ಲವೂ ಹೊರ ಜಗತ್ತಿಗೆ ತಿಳಿಯಲೇ ಇಲ್ಲ.

  ಲೂಸ್ ಮಾದ ಯೋಗಿ- ಅದಿತಿ ಪ್ರಭುದೇವಗೆ ಇಷ್ಟು ವಯಸ್ಸಾಯ್ತಾ?ಲೂಸ್ ಮಾದ ಯೋಗಿ- ಅದಿತಿ ಪ್ರಭುದೇವಗೆ ಇಷ್ಟು ವಯಸ್ಸಾಯ್ತಾ?

  ತಮ್ಮ ಬದುಕಿನ ಪಯಣದ ಸಿಹಿ ಕಹಿ ಅನುಭವಗಳನ್ನು ಯೋಗಿ, ನಿರೂಪಿಕಿ ಅನುಶ್ರೀ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ತೆರೆದಿಟ್ಟಿದ್ದಾರೆ. ಅವರ ಮಾತುಗಳಲ್ಲಿ ಯೋಗಿ ಎದುರಿಸಿದ ನೋವು ಮನಕಲಕಿಸುತ್ತದೆ. ಯೋಗಿ ಬದುಕಲ್ಲಿ ಏನೇನಾಯ್ತು? ಅವರ ಮಾತುಗಳಲ್ಲೇ ಕೇಳಿ. (ಕೃಪೆ: ಅನುಶ್ರೀ ಆಂಕರ್ ಯೂಟ್ಯೂಬ್ ಚಾನೆಲ್).

  ನನ್ನದು ಹೋರಾಟದ ಹುಟ್ಟು!

  ನನ್ನದು ಹೋರಾಟದ ಹುಟ್ಟು!

  ನಾನು ಹುಟ್ಟಿದ್ದು ಜುಲೈ 6, 1990. ನಮ್ಮಮ್ಮ ನನಗೆ ತುಂಬಾ ನೆನಪಿಸುತ್ತಾರೆ. ನಾನು ಹುಟ್ಟುತ್ತೀನೋ ಇಲ್ಲವೋ ಎನ್ನುವುದೇ ಅವರಿಗೆ ಅನುಮಾನ ಆಗಿತ್ತಂತೆ. ಏಕೆಂದರೆ ಆಗ ವೈದ್ಯಕೀಯ ಪರಿಸ್ಥಿತಿ ಬಹಳ ಕೆಟ್ಟದಾಗಿತ್ತು. ನಮ್ಮಣ್ಣ ಹುಟ್ಟಿ ಆರು ವರ್ಷದ ಬಳಿಕ ನಾನು ಹುಟ್ಟಿದ್ದಂತೆ. ಹುಟ್ಟುವಾಗಲೇ ಹೋರಾಡಿಕೊಂಡು ಹುಟ್ಟಿದ್ದು ಎಂದು ಮನೆಯಲ್ಲಿ ಯಾವಾಗಲೂ ಹೇಳುತ್ತಾರೆ.

  ಮರೆಯಲಾಗದ ಗೆಳೆಯರು

  ಮರೆಯಲಾಗದ ಗೆಳೆಯರು

  ಎಲ್‌ಕೆಜಿಯಿಂದ ಓಡಿದ್ದು ಜೆಕೆವಿ ಎಂಬಲ್ಲಿ. ಐದನೇ ಕ್ಲಾಸಿಗೆ ನಿನ್ನ ಸಹವಾಸ ಸಾಕು. ನಮ್ಮ ಶಾಲೆಯಲ್ಲಿ ಇರಬೇಡ ಎಂದು ಅಲ್ಲಿಂದ ಓಡಿಸಿದರು. ನಂತರ ಎನ್‌ಇವಿಕೆ ಎಂಬ ಶಾಲೆ. ನನಗೆ ಸಿಕ್ಕಾಪಟ್ಟೆ ಫ್ರೆಂಡ್ಸ್ ಆದರು. ಸಾವಿರಾರು ಜನ ಮಧ್ಯದಲ್ಲಿ ಪರಿಚಯ ಆದವರು, ಆತ್ಮೀಯರಾದವರು ಅಮೇಲೆ ಬಿಟ್ಟು ಹೋದರು. ಆದರೆ ಈಗಲೂ ನನ್ನ ಜತೆ ಇರುವವರು ಐದು ಜನ ಫ್ರೆಂಡ್ಸ್. ಅವರನ್ನು ನಾನು ಬದುಕಿರುವವರೆಗೂ ಮರೆಯಲು ಸಾಧ್ಯವಿಲ್ಲ.

  'ದುನಿಯಾ' ಶುರುವಾಗಿದ್ದು

  'ದುನಿಯಾ' ಶುರುವಾಗಿದ್ದು

  ನನ್ನ ಸಿನಿಮಾ ಕೆರಿಯರ್ ಶುರುವಾಯ್ತ. ವಿಜಿ ನನ್ನ ಅಮ್ಮನ ತಮ್ಮ. ಅವನು ಸಿನಿಮಾಗಳಲ್ಲಿ ಆಕ್ಟಿಂಗ್ ಮಾಡುತ್ತಿದ್ದ. ನಾವು ಅವನನ್ನು ಕುಮಾರ ಎಂದು ಕರೆಯೋದು. ಕುಮಾರ ಒಂದು ದಿನ ನಮ್ಮ ಮನೆಗೆ ಸೂರಿ ಸರ್ ಜತೆ ಒಂದು ಕಥೆ ಇದೆ ಕೇಳಿ ಭಾವ (ನನ್ನ ತಂದೆಗೆ) ಎಂದ. ಸರಿ ಮಾಡೋಣ ಎಂದು ಅಪ್ಪ ಒಪ್ಪಿಕೊಂಡರು. ಆಗ ಸೂರಿ ಸರ್ ನನ್ನನ್ನು ಕರೆದು ಒಂದು ಕ್ಯಾರೆಕ್ಟರ್ ಇದೆ. ಮಾಡ್ತೀಯೇನೋ ಎಂದರು.

  ಲೂಸ್ ಮಾದ ಆಗಿದ್ದು...

  ಲೂಸ್ ಮಾದ ಆಗಿದ್ದು...

  ನನಗೆ ನಟನೆ ಗೊತ್ತಿಲ್ಲ. ಯಾವತ್ತೂ ಮಾಡಿದವನಲ್ಲ. ಡ್ಯಾನ್ಸ್ ಮಾಡಿ ಗೊತ್ತಿತ್ತು. ಆದರೂ ಒಪ್ಪಿಕೊಂಡೆ, ಧೈರ್ಯ ಮಾಡಿ. ಏನು ಮಾಡಬೇಕು, ಕ್ಯಾಮೆರಾ ಹೇಗೆ ಫೇಸ್ ಮಾಡಬೇಕು. ಲೈಟ್ ಹೇಗೆ ತಗೋಬೇಕು ಎನ್ನುವುದೇ ಗೊತ್ತಿರಲಿಲ್ಲ. ನಿನ್ನ ಪಾತ್ರದ ಹೆಸರು ಲೂಸ್ ಮಾದ ಎಂದರು. ಅದು ಕೇಳಿ, ಇದೇನಿದು ಈ ರೀತಿ ಹೆಸರು ಇದೆಯಲ್ಲ ಎಂದು ಯೋಚನೆ ಮಾಡಿದೆ. ಆದರೂ ಏನೋ ಅವಕಾಶ ಕೊಡುತ್ತಾರಲ್ಲ ಮಾಡೋಣ ಎಂದುಕೊಂಡೆ.

  ತಾಳಿ ಬಿಟ್ಟು ಬೇರೆಲ್ಲವೂ ಅಡ ಇರಿಸಿದ್ದೆವು

  ತಾಳಿ ಬಿಟ್ಟು ಬೇರೆಲ್ಲವೂ ಅಡ ಇರಿಸಿದ್ದೆವು

  ಆಗ ಡೈಲಿ ಶೂಟಿಂಗ್ ಹೋಗುತ್ತಿದ್ದೆ. 10ನೇ ತರಗತಿ ಪರೀಕ್ಷೆ ಬರೆದಿದ್ದರಿಂದ ಫ್ರೀ ಇದ್ದೆ. ಹೀಗಾಗಿ ಶೂಟಿಂಗ್ ನೋಡುತ್ತಿದ್ದೆ. ನನ್ನ ಶಾಟ್ ಇದ್ದಾಗ ಮಾಡಿಸುತ್ತಿದ್ದರು. ಸಿನಿಮಾ ಮಾಡುವಾಗ ಸಾಕಷ್ಟು ಕಷ್ಟಪಟ್ಟಿದ್ದೆವು. ನಮ್ಮ ತಾಯಿ ಹಾಕಿದ ತಾಳಿ ಬಿಟ್ಟು ಮನೆಯಲ್ಲಿದ್ದ ಎಲ್ಲ ಒಡವೆ ಅಡ ಇಟ್ಟು ಸಿನಿಮಾ ಮುಗಿಸಿದ್ದರು. ಸಿನಿಮಾ ಮುಗಿದ ಬಳಿಕ ಬಿಡುಗಡೆ ಮಾಡಬೇಕು. ಆಗ ಮಾರಾಟದ ಮಾತುಕತೆ ಆರಂಭವಾಗಿತ್ತು.

  ಕ್ಲೈಮ್ಯಾಕ್ಸ್ ಬದಲಿಸಿ ಎಂದರು

  ಕ್ಲೈಮ್ಯಾಕ್ಸ್ ಬದಲಿಸಿ ಎಂದರು

  ಒಬ್ಬ ಡಿಸ್ಟ್ರಿಬ್ಯೂಟರ್ ಸಿನಿಮಾ ನೋಡಿ, ಕ್ಲೈಮ್ಯಾಕ್ಸ್ ಚೇಂಜ್ ಮಾಡಿದರೆ ತಗೋತೀನಿ ಎಂದರು. ಆಗ ನಮ್ಮ ತಂದೆ, ಕಾಸೇ ಇಲ್ಲವಲ್ಲ. ಕ್ಲೈಮ್ಯಾಕ್ಸ್ ಬದಲಿಸೋದು ಹೇಗೆ ಎಂದು ಕೇಳಿದರು. ಆ ಸಮಯದಲ್ಲಿ ಮತ್ತೆ ಶೂಟಿಂಗ್ ಮಾಡಿದರೂ 2 ಲಕ್ಷ ಖರ್ಚಾಗುತ್ತಿತ್ತು. ಸೂರಿ ಸರ್ ನಮ್ಮ ತಂದೆಗೆ ಧೈರ್ಯ ಕೊಟ್ಟರು. ನಾವೇ ರಿಲೀಸ್ ಮಾಡೋಣ. ಜಯಣ್ಣ ಎಂಬ ಡಿಸ್ಟ್ರಿಬ್ಯೂಟರ್ ಇದ್ದಾರೆ. ಅವರೊಂದಿಗೆ ಮಾತನಾಡಿ ಅವರ ಮೂಲಕ ರಿಲೀಸ್ ಮಾಡಿಸೋಣ ಎಂದರು. ಅವರು ಒಪ್ಪಿಕೊಂಡರು. ಅವಾಗ ಅವರಿಗೂ ಹೊಸತು. ಹಾಗೆ ಸಿನಿಮಾ ರಿಲೀಸ್ ಆಯ್ತು.

  ಥಿಯೇಟರ್ ಮುಂದೆ ನನ್ನದೂ ಪೋಸ್ಟರ್

  ಥಿಯೇಟರ್ ಮುಂದೆ ನನ್ನದೂ ಪೋಸ್ಟರ್

  ನಾನು ಶಿವಣ್ಣ, ದರ್ಶನ್ಅಣ್ಣ ಸಿನಿಮಾ ಹೆಚ್ಚು ನೋಡುತ್ತಿದ್ದೆ. ನನ್ನದೇ ಒಂದು ಪೋಸ್ಟರ್ ಬಿತ್ತಲ್ಲ ಎಂದು ನನಗೆ. 16ನೇ ವಯಸ್ಸಿನಲ್ಲಿ ಥಿಯೇಟರ್ ಮುಂದೆ ಒಂದು ದೊಡ್ಡದೊಂದು ಪೋಸ್ಟರ್ ಬಿದ್ದಿತ್ತು. ಕನಸಲ್ಲೂ ಅದನ್ನು ನೆನೆಸಿಕೊಂಡವನಲ್ಲ. ಬೆಳಿಗ್ಗೆ ಎದ್ದು ಕ್ಯೂನಲ್ಲಿ ಫ್ರೆಂಡ್ಸ್ ಜತೆ ನಿಂತು ಟಿಕೆಟ್ ತಗೊಂಡು ಹೋದೆ. 10ನೇ ತರಗತಿ ಬರೆದ ಯೋಗೇಶ್ ಆಗಿ ಒಳಗೆ ಹೋದೆ. ಹೊರ ಬರುವಾಗ 'ಲೂಸ್ ಮಾದ ಎಂಬ ಹೊಸ ವಿಲನ್ ಎಂಟ್ರಿ ಕೊಟ್ಟ ಗುರು ಒಬ್ಬ ಭಯಂಕರ ನಟ ಆಚೆ ಬಂದ' ಎಂಬ ಮಾತು.

  ಅಂದು ಎಲ್ಲರ ಕಣ್ಣಲ್ಲೂ ನೀರು

  ಅಂದು ಎಲ್ಲರ ಕಣ್ಣಲ್ಲೂ ನೀರು

  ನನಗೆ ಅವತ್ತು ಮೊದಲು ಮಾತಾಡಿಸಲು ಹೋಗಿದ್ದು ಸೂರಿ ಸರ್. ಅವರನ್ನು ನೋಡುತ್ತಿದ್ದಂತೆ ನನಗೆ ಅಳು ಬಂತು. ಅವರು ಕೂಡ ಭಾವುಕರಾಗಿದ್ದರು. ಏಕೆಂದರೆ ಅವರ ಮೊದಲ ಸಿನಿಮಾ ಸೂಪರ್ ಹಿಟ್ ಎಂದು ಮೊದಲ ಶೋನಲ್ಲೇ ಅನೌನ್ಸ್ ಆಗಿತ್ತು. ಸುತ್ತಲೂ ನೋಡಿದಾಗ ಎಲ್ಲರ ಕಣ್ಣಲ್ಲೂ ನೀರಿದೆ... ತಂದೆಯನ್ನು ಮಾತನಾಡಿದೆ. ಜನ ನನ್ನನ್ನು ಹೊತ್ತುಕೊಂಡು ಆಚೆ ಬಂದರು. 'ಇವನೇ ಅಲ್ವೇನ್ರೋ, ಅಲ್ವಾ ಆ ಹುಡುಗ ಎಂದು ಕೂಗಿ ಹರ್ಷೋದ್ಗಾರ ಮಾಡಿದರು. ಮಜವಾದ ಜರ್ನಿ ಅದು. ಇಂದಿಗೂ ತುಂಬಾ ನೆನಪಿಸಿಕೊಳ್ಳುವುದು ಸೂರಿ ಸರ್ ಅವರನ್ನುಸ. ಏನೂ ಗೊತ್ತಿಲ್ಲದ ನನ್ನನ್ನು ಸಿನಿಮಾಕ್ಕೆ ತಂದರು. ಇಂದಿಗೆ 12 ವರ್ಷವಾದರೂ ನನ್ನನ್ನು ಜನರು ಕರೆಯುವುದು ಲೂಸ್ ಮಾದ ಎಂದು. ಅಂತಹ ಪಾತ್ರವನ್ನು ನನ್ನ ಕೈಯಲ್ಲಿ ಮಾಡಿಸಿದ್ದಾರೆ. ನಾನು ಬದುಕಿರುವರೆಗೂ ಅವರನ್ನು ನೆನಪಲ್ಲಿ ಇಟ್ಟುಕೊಳ್ಳುತ್ತೇನೆ.

  ಸಂಸ್ಕೃತ ಟೀಚರ್ ಕೈಯಲ್ಲಿ ಸಿಕ್ಕಿಬಿದ್ದಿದ್ದು

  ಸಂಸ್ಕೃತ ಟೀಚರ್ ಕೈಯಲ್ಲಿ ಸಿಕ್ಕಿಬಿದ್ದಿದ್ದು

  ಇದಾದ ಬಳಿಕ ಕಾಲೇಜಿಗೆ ಹೋಗಬೇಕಲ್ಲ. ಅಡ್ಮಿಷನ್ ಆಗಿದ್ದೆ. ಆಗಲೇ ಬೈಕ್ ಇತ್ತು ಬೇರೆ. ಮೊದಲ ತರಗತಿ ಅಟೆಂಡ್ ಆದೆ. ಯಾರು ಕೂರ್ತಾರೆ ಎಂದು ಬೇಜಾರಾಗಿ ಹೊರಗೆ ಇಳಿದು ಬರುತ್ತಿದ್ದೆ. ಆಗ ಒಬ್ಬ ಲೇಡಿ, 'ಎಲ್ಲಿ ಹೋಗುತ್ತಿದ್ದೀಯಾ?' ಎಂದು ಕೇಳಿದರು. ನಾನು ಠಕ್ಕನೆ ಸುಳ್ಳು ಹೇಳ್ತೀನಿ. 'ಸಂಸ್ಕೃತ ಕ್ಲಾಸ್‌ಗೆ ಹೋಗುತ್ತಿದ್ದೇನೆ' ಎಂದೆ. 'ಯಾವ ಕ್ಲಾಸ್' ಎಂದು ಕೇಳಿದರು. 'ಫಸ್ಟ್ ಪಿಯು ಕಾಮರ್ಸ್' ಎಂದರೆ, 'ಹೌದಾ ಬಾ' ಎಂದು ಕರೆದುಕೊಂಡು ಹೋದರು. ಯಾವ ಕ್ಲಾಸಿಂದ ಆಚೆ ಬಂದೆನೋ ಆ ಕ್ಲಾಸಿಗೆ ಕರೆದುಕೊಂಡರು ಹೋದರು. ಬಹುಶಃ ಅಲ್ಲಿ ವಿಚಾರಿಸುತ್ತಾರೆ ಎಂದುಕೊಂಡೆ. 'ಹೋಗಿ ಕೂತ್ಕೋ' ಎಂದರು. ನನಗೆ ಆಗಲೇ ಗೊತ್ತಾಗಿದ್ದು ಅವರೇ ಸಂಸ್ಕೃತ ಟೀಚರ್ ಎಂದು.

  ಕಾಲೇಜ್ ಲೈಫಿಗೆ ನಮಸ್ಕಾರ

  ಕಾಲೇಜ್ ಲೈಫಿಗೆ ನಮಸ್ಕಾರ

  ಅವತ್ತೇ ಲಾಸ್ಟ್ ಕಾಲೇಜಿಗೆ ಹೋಗಿದ್ದು ಮತ್ತೆ ಹೋಗಿಲ್ಲ. ಒಂದು ವಾರದಿಂದ ಕಾಲೇಜಿಗೆ ಹೋಗಿರಲಿಲ್ಲ. ಅಪ್ಪ ಕೇಳಿದರು, ಹೋಗೊಲ್ಲವಾ ಎಂದು. 'ಹೋಗೊಲ್ಲ' ಎಂದರು. 'ಏನು ಮಾಡ್ತೀಯಾ' ಎಂದರು. 'ಸಿನಿಮಾ ಮಾಡ್ತೀನಿ' ಎಂದೆ. ಅಪ್ಪ ಅಡ್ವೋಕೇಟ್. ಓದಿರೋರು ಸಾಮಾನ್ಯವಾಗಿ ಒಂದು ಡಿಗ್ರಿ ಮಾಡು. ಯಾವುದಕ್ಕಾದರೂ ಹೆಲ್ಪ್ ಆಗುತ್ತೆ ಎನ್ನುತ್ತಾರೆ. ನಮ್ಮ ಅಪ್ಪ ಏನೂ ಹೇಳಲಿಲ್ಲ. ಅಮ್ಮ, 'ಮಾಡಿದ್ದೊಂದು ಚಿಕ್ಕ ಕ್ಯಾರೆಕ್ಟರ್ ನಿನಗ್ಯಾರು ಸಿನಿಮಾ ಕೊಡ್ತಾರೆ' ಎಂದರು. ಫ್ರೆಂಡ್ಸ್ ಮಾತ್ರ ಸಿನಿಮಾ ಮಾಡು ಬಿಡಬೇಡ ಎಂದರು.

  ನಂದ ಲವ್ಸ್ ನಂದಿತಾ ಸಿನಿಮಾ

  ನಂದ ಲವ್ಸ್ ನಂದಿತಾ ಸಿನಿಮಾ

  ಒಂದು ವಾರದ ಬಳಿಕ ಅಜಯ್ ಕುಮಾರ್ ತಂದೆಗೆ ಫೋನ್ ಮಾಡಿ, ಮಗನಿಗೆ ಸಿನಿಮಾ ಮಾಡಬೇಕೆಂದಿದ್ದೇವೆ ಎಂದರು. 'ನನ್ನ ಮಗ ನಿಮ್ಮ ಸಿನಿಮಾಕ್ಕೆ ಹೀರೋ ಆಗಿ ಆಕ್ಟ್ ಮಾಡ್ತಾನೆ ಎಂದು ನಿಮಗೆ ಅನಿಸಿದರೆ ಮಾತ್ರ ಮಾಡಿಸಿ. ಇಲ್ಲದಿದ್ದರೆ ಮಾಡಬೇಡಿ' ಎಂದು ತಂದೆ ಹೇಳಿದರು. ಒಳ್ಳೆಯ ಹೀರೋ ಆಗೋ ಲಕ್ಷಣ ಇವೆ ಎಂದು ಅವರು ಸಿನಿಮಾ ಶುರು ಮಾಡಿದರು. ಮೊದಲನೇ ಸಿನಿಮಾಕ್ಕೆ ಸಿಕ್ಕಿದ್ದು ಐದು ಲಕ್ಷ ರೂ. ಈಗಲೂ ಅದು ದೊಡ್ಡ ಪೇಮೆಂಟ್. ಅಲ್ಲಿಂದ ಶುರುವಾಯ್ತು ನನ್ನ ಸಂಪಾದನೆ.

  ಸಿನಿಮಾ ಬಿಡುಗಡೆ ಮುನ್ನ ಡಿಸ್ಟ್ರಿಬ್ಯೂಟರ್ ಮಾತುಕತೆ ಇರುತ್ತಲ್ಲ, ಅಲ್ಲೂ ನಡೆಯಿತು. ಒಂದು ಸಿನಿಮಾ ವಿಲನ್ ಆಗಿ ಮಾಡಿದವನಿಗೆ ಹೀರೋ ಆಗಿ ಮಾಡಿದರೆ ಯಾವನ್ರೀ ನೋಡ್ತಾನೆ? 20 ನಿಮಿಷ ಯಾವುದಾದರೂ ಪಾತ್ರ ಮಾಡಿದರೆ ಓಕೆ. ನೋಡ್ರೀ ಹೇಗಿದ್ದಾನೆ. ಅವನ ಕೂದಲು ನೋಡಿ, ಹೇಗೆ ಬಡಕಲು ಇದ್ದಾನೆ. ಯಾರ್ರೀ ಎರಡೂವರೆ ಗಂಟೆ ನೋಡಿ ಡೈಜೆಸ್ಟ್ ಮಾಡಿಕೊಳ್ಳುತ್ತಾರೆ ಎಂದು ಅನೇಕರು ಕೇಳಿದರು.

  (ಮುಂದುವರಿಯುತ್ತದೆ)

  English summary
  Loose Mada Yogi (Yogesh) who faced ups and downs in his cinema career has shared his bitter and good experience.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X