Don't Miss!
- Sports
U-19 ಮಹಿಳಾ ಟಿ20 ವಿಶ್ವಕಪ್ ಗೆದ್ದ ಭಾರತ ಮಹಿಳಾ ತಂಡಕ್ಕೆ ಬಹುಮಾನ ಘೋಷಿಸಿದ ಜಯ್ ಶಾ
- Lifestyle
ಫೆಬ್ರವರಿಯಲ್ಲಿದೆ ಈ 3 ಗ್ರಹಗಳ ಸಂಚಾರ: ಈ 4 ರಾಶಿಯವರಿಗೆ ಮಂಗಳಕರ
- News
Breaking: ಸಹಾಯಕ ಸಬ್ ಇನ್ಸ್ಪೆಕ್ಟರ್ ಗುಂಡಿನ ದಾಳಿ: ಆಸ್ಪತ್ರೆಯಲ್ಲಿ ಓಡಿಶಾ ಆರೋಗ್ಯ ಸಚಿವ ಸಾವು
- Finance
ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿದ ಬ್ಯಾಂಕ್ ಯೂನಿಯನ್ಸ್: ಜ.31ಕ್ಕೆ ಮಹತ್ವದ ಸಭೆ
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮಾಲಾಶ್ರೀ ಅಭಿನಯದ ಈ ಚಿತ್ರ ಕಂಡು ಬೆಚ್ಚಿಬಿದ್ದಿತ್ತು ತೆಲುಗು ಚಿತ್ರರಂಗ
ತೆಲುಗು ಚಿತ್ರರಂಗವೆಂದರೆ ಅದ್ಧೂರಿ ವೆಚ್ಚದ ಸಿನಿಮಾಗಳ ಲೋಕ. ಇಲ್ಲಿ ಹೊಡೆದಾಟ, ಸಾಹಸ, ಅತಿರಂಜನೀಯ ಸನ್ನಿವೇಶಗಳು ಸರ್ವೇ ಸಾಮಾನ್ಯ. ಸಾಹಸ ಸನ್ನಿವೇಶಗಳಿಗೆ ಲಕ್ಷಗಟ್ಟಲೆ ವೆಚ್ಚ ವ್ಯಯಿಸುವುದು ಇಲ್ಲಿ ಸಹಜ. ಆಕ್ಷನ್ ದೃಶ್ಯಗಳಲ್ಲಿ ಅಪರೂಪದ ಮತ್ತು ಮೈನವಿರೇಳಿಸುವ ಸ್ಟಂಟ್‌ಗಳನ್ನು ಮಾಡುವುದರಲ್ಲಿ ಸದಾ ಮುಂದು.
Recommended Video
ಆದರೆ ಈ ಚಿತ್ರರಂಗ ಕೂಡ ಕನ್ನಡದ ಒಂದು ಚಿತ್ರ ಕಂಡು ಅಚ್ಚರಿಪಟ್ಟುಕೊಂಡಿತ್ತು. ಅದು ಮಾಲಾಶ್ರೀ ಅಭಿನಯದ 'ದುರ್ಗಿ' ಚಿತ್ರ. ರೌಡಿಸಂ, ಹೋರಾಟದ ಕಥೆ ತೆಲುಗಿನ ಸಿನಿಮಾಗಳಿಗೆ ಸೂಕ್ತವಾಗಿತ್ತು. ಆದರೆ ಅದನ್ನು ನಟಿ ಮಾಲಾಶ್ರೀ ತಮ್ಮದಾಗಿಸಿಕೊಂಡಿದ್ದರು. ಒಂದು ಕಾಲದಲ್ಲಿ ಪ್ರೇಮಕಥೆಯ ಸಿನಿಮಾಗಳಿಂದ ಜನರ ಮನಸು ಗೆದ್ದಿದ್ದ ಮಾಲಾಶ್ರೀ, ತಾವು ಆಕ್ಷನ್ ಪ್ರಧಾನ ಪಾತ್ರಗಳನ್ನೂ ನಿಭಾಯಿಸಬಲ್ಲೆ ಎಂಬುದನ್ನು ಸಾಬೀತುಪಡಿಸಿದ್ದರು. ಅಷ್ಟೇ ಅಲ್ಲ, ತಮ್ಮ ಹೆಸರಿನ ಮೂಲಕವೇ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತರುವಷ್ಟು ಸಾಮರ್ಥ್ಯ ಹೊಂದಿದ್ದ ಕೆಲವೇ ನಾಯಕಿಯರಲ್ಲಿ ಒಬ್ಬರು. ಮುಂದೆ ಓದಿ...
ರಶ್ಮಿಕಾ
ಮಂದಣ್ಣ
ಬಗ್ಗೆ
ನಟಿ
ಮಾಲಾಶ್ರೀ
ಮೆಚ್ಚುಗೆ

ಮಾಲಾಶ್ರೀ ಆಕ್ಷನ್ ಕ್ವೀನ್!
ಕೆಲವು ವರ್ಷಗಳ ವಿರಾಮದ ಬಳಿಕ ಮಾಲಾಶ್ರೀ ನಟಿಸಿದ್ದ 'ದುರ್ಗಿ' 2004ರಲ್ಲಿ ತೆರೆಕಂಡಿತ್ತು. ತಂಗಿಯನ್ನು ಕೊಂದ ರಾಜಕಾರಣಿಗಳ ವಿರುದ್ಧ ಸೇಡು ತೀರಿಸಿಕೊಳ್ಳುವ ಮಹಿಳಾ ರೌಡಿಯಾಗಿ ಮಾಲಾಶ್ರೀ ಕಾಣಿಸಿಕೊಂಡಿದ್ದರು. ಚಿತ್ರದ ಆರಂಭದಲ್ಲಿನ ಹೊಡೆದಾಟದ ದೃಶ್ಯವೇ ಮೈನವಿರೇಳಿಸುವಂತಿತ್ತು.

ರೋಮಾಂಚನಕಾರಿ ಸಾಹಸ
ಮಾಲಾಶ್ರೀ ಅವರ ಇಂಟ್ರೊಡಕ್ಷನ್ ಸಾಹಸ ದೃಶ್ಯದ ಮೂಲಕ ಆಗಿತ್ತು. ಬಸ್ ನಿಲ್ದಾಣದಲ್ಲಿ ನಡೆಯುವ ಹೊಡೆದಾಟದ ಆ ಸನ್ನಿವೇಶವೇ ತೆಲುಗಿನ ಸಿನಿಮಾ ಮಂದಿಯನ್ನು ಬೆಚ್ಚಿಬೀಳಿಸಿತ್ತು. ಅಷ್ಟು ರೋಮಾಂಚನಕಾರಿ ಸಾಹಸ ದೃಶ್ಯವನ್ನು ಥ್ರಿಲ್ಲರ್ ಮಂಜು ಸಂಯೋಜಿಸಿದ್ದರು.
'ಯಾರೆ
ನೀನು
ಚೆಲುವೆ'
ಸಿನಿಮಾಕ್ಕೆ
ಮೊದಲ
ಆಯ್ಕೆ
ರವಿಚಂದ್ರನ್
ಅಲ್ಲ,
ಈ
ನಟ

ತೆಲುಗಿಗೆ ರೀಮೇಕ್
ಈ ಚಿತ್ರ ಬಾಕ್ಸಾಫೀಸ್‌ನಲ್ಲಿ ದೊಡ್ಡ ಯಶಸ್ಸು ಕಂಡಿತ್ತು. ಮಾಲಾಶ್ರೀ ಹೆಸರಿನಿಂದಲೇ ಚಿತ್ರಮಂದಿರಕ್ಕೆ ಬಂದಿದ್ದವರು, ಅವರ ಸಾಹಸ ದೃಶ್ಯಗಳನ್ನು ಕಂಡು ಮೆಚ್ಚಿಕೊಂಡಿದ್ದರು. ಇದು ತಮ್ಮ ನೆಲದ ಚಿತ್ರಗಳಿಗೆ ಹೊಂದಿಕೊಳ್ಳುತ್ತದೆ ಎಂದು ತೆಲುಗಿನ ನಿರ್ಮಾಪಕರು ರೀಮೇಕ್ ಹಕ್ಕುಗಳನ್ನು ಪಡೆದುಕೊಂಡಿದ್ದರು.

'ನರಸಿಂಹುಡು' ಚಿತ್ರ
ವಿಶೇಷವೆಂದರೆ ಇಲ್ಲಿ ಮಾಲಾಶ್ರೀ ನಟಿಸಿದ್ದ ಪಾತ್ರವನ್ನು ತೆಲುಗಿನಲ್ಲಿ ಜೂ. ಎನ್‌ಟಿಆರ್ ಅಭಿನಯಿಸಿದ್ದು. ಲೇಡಿ ರೌಡಿಯಾಗಿದ್ದ ಪಾತ್ರವನ್ನು ತೆಲುಗಿನಲ್ಲಿ ಹೀರೋ ವಿಜೃಂಭಣೆಗೆ ಬದಲಿಸಲಾಗಿತ್ತು. 'ನರಸಿಂಹುಡು' ಹೆಸರಿನ ಈ ಚಿತ್ರ ಅಲ್ಲಿ ಸೋತು ಹೋಗಿತ್ತು. ಮಾಲಾಶ್ರೀ ಲೇಡಿ ರೌಡಿಯ ಪಾತ್ರಕ್ಕೆ ನೀಡಿದ್ದ ಖದರ್, ಜೂ. ಎನ್‌ಟಿಆರ್ ಅವರಿಂದ ಸಾಧ್ಯವಾಗಿರಲಿಲ್ಲ.

ರವಿಶಂಕರ್ ನಿರ್ದೇಶನ
'ಕೆಂಪೇಗೌಡ' ಚಿತ್ರದಲ್ಲಿ ಖಳನಾಯಕ ಆರ್ಮುಗಂ ಆಗಿ ಹೆಸರು ಗಳಿಸಿದವರು ನಟ ಪಿ. ರವಿಶಂಕರ್. ಕಂಚಿನ ಕಂಠದ ರವಿಶಂಕರ್ ನಟರಾಗಿ, ಕಂಠದಾನ ಕಲಾವಿದರಾಗಿ ಗುರುತಿಸಿಕೊಂಡಿದ್ದರು. ರವಿಶಂಕರ್ ನಿರ್ದೇಶಕರೂ ಆಗಿದ್ದರು ಎಂಬ ಸಂಗತಿ ಅನೇಕರಿಗೆ ತಿಳಿದಿಲ್ಲ.
ವಿಷ್ಣುದಾದಾ
ಅಭಿನಯಕ್ಕೆ
ಬೆಕ್ಕಸ
ಬೆರಗಾಗಿದ್ದರು
ಹಿಂದಿಯ
ದಿಗ್ಗಜ
ನಟರು

ರವಿಶಂಕರ್ ನಿರ್ದೇಶನ ಏಕೈಕ ಚಿತ್ರ
ತೆಲುಗು ಮೂಲದ ರವಿಶಂಕರ್ ಮೊಟ್ಟ ಮೊದಲ ಬಾರಿಗೆ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದು ಇದೇ 'ದುರ್ಗಿ' ಚಿತ್ರದ ಮೂಲಕ. ಹಾಗೂ ಅವರು ನಿರ್ದೇಶಿಸಿದ್ದು ಇದೊಂದೇ ಚಿತ್ರವನ್ನು. ಈ ಚಿತ್ರದ ಕಥೆ ಕೂಡ ಅವರದ್ದೇ. ಈ ಚಿತ್ರಕ್ಕೆ 'ಕೋಟಿ' ನಿರ್ಮಾಪಕ ರಾಮು ಬಂಡವಾಳ ಹೂಡಿದ್ದರು.

ರವಿಶಂಕರ್‌ಗೆ ಹಿಂಬಡ್ತಿ!
ಆದರೆ ಖೇದಕರ ಸಂಗತಿಯೆಂದರೆ ಈ ಚಿತ್ರವನ್ನು ತೆಲುಗಿಗೆ ರೀಮೇಕ್ ಮಾಡಿದ್ದಾಗ ಅವರಿಗೆ ನಿರ್ದೇಶನದ ಅವಕಾಶ ಸಿಗಲಿಲ್ಲ. ಜೂ. ಎನ್‌ಟಿಆರ್, ಅಮಿಶಾ ಪಟೇಲ್ ಮತ್ತು ಸಮೀರಾ ರೆಡ್ಡಿ ನಟಿಸಿದ್ದ ಈ ಚಿತ್ರವನ್ನು ಬಿ. ಗೋಪಾಲ್ ನಿರ್ದೇಶಿಸಿದ್ದರು. ಅದರ ಮೂಲ ನಿರ್ದೇಶಕ ರವಿಶಂಕರ್ ಅವರಿಗೆ ಸಹಾಯಕ ನಿರ್ದೇಶಕರನ್ನಾಗಿ ಹಿಂಬಡ್ತಿ ನೀಡಲಾಗಿತ್ತು. ಇದರ ಬಗ್ಗೆ ಒಮ್ಮೆ ಅವರು ಬೇಸರದಿಂದ ಹೇಳಿಕೊಂಡಿದ್ದರು.

ನಿರ್ಮಾಪಕರ ಆತ್ಮಹತ್ಯೆ ಯತ್ನ
ಕನ್ನಡದಲ್ಲಿ ನಾಯಕಿಯೇ 'ಹೀರೋ' ಆಗಿದ್ದ ಚಿತ್ರವು ತೆಲುಗಿನಲ್ಲಿ ಇಬ್ಬರು ನಾಯಕಿಯರನ್ನು ಒಳಗೊಂಡ ನಾಯಕನ ಪಾತ್ರ ಸೃಷ್ಟಿಸಲಾಗಿತ್ತು. ಕನ್ನಡದ ಯಶಸ್ಸನ್ನು ಗಮನಿಸಿ ಮತ್ತಷ್ಟು ಅದ್ಧೂರಿ ವೆಚ್ಚದಲ್ಲಿ ನಿರ್ಮಿಸಿದ್ದ 'ನರಸಿಂಹುಡು' ಫ್ಲಾಪ್ ಆಗಿತ್ತು. ಇದರಿಂದ ಮೊದಲ ಚಿತ್ರದಲ್ಲಿಯೇ ತೀವ್ರ ನಷ್ಟ ಅನುಭವಿಸಿದ್ದ ನಿರ್ಮಾಪಕ ಸಿ. ವೆಂಕಟ್ ರಾವ್ (ಟಿಡಿಪಿ ಶಾಸಕರೂ ಆಗಿದ್ದರು) ಕೆರೆಗೆ ಹಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು.

ಬೇರೆ ಭಾಷೆಗಳಿಗೆ ಡಬ್
ಕನ್ನಡದ 'ದುರ್ಗಿ' ಚಿತ್ರ ಹಿಂದಿಗೆ 'ಮೈ ಹೂಂ ದುರ್ಗಾ' ಮತ್ತು ಮಲಯಾಳಂಗೆ 'ಭಸ್ಮಾಸುರನ್' ಎಂಬ ಹೆಸರಿನಲ್ಲಿ ಡಬ್ ಆಗಿತ್ತು. ಬಹುತಾರಾಗಣದ ಈ ಚಿತ್ರಕ್ಕೆ ಹಂಸಲೇಖ ಸಂಗೀತ ನೀಡಿದ್ದರು. ಕನ್ನಡದಲ್ಲಿ ನಾಯಕಿ ಮುಖ್ಯಪಾತ್ರದಲ್ಲಿ ನಟಿಸಿದ್ದ ಚಿತ್ರದ ತೆಲುಗಿನ ರೀಮೇಕ್‌ನಲ್ಲಿ ಹೀರೋ ನಟಿಸಿದ್ದು ಚಿತ್ರರಂಗದ ವಿಶೇಷಗಳಲ್ಲಿ ಒಂದು.