Just In
Don't Miss!
- Sports
ಜೋ ರೂಟ್ ದ್ವಿಶತಕ, ಶ್ರೀಲಂಕಾ ವಿರುದ್ಧ ಇಂಗ್ಲೆಂಡ್ಗೆ 7 ವಿಕೆಟ್ ಗೆಲುವು
- News
ಭಾರತದ ಗಡಿಯಲ್ಲಿ ಚೀನಾ ಹಳ್ಳಿ: ಇದು ಬಾಹ್ಯಕಾಶದ ಚಿತ್ರ ತೆರೆದಿಟ್ಟ ಸತ್ಯ!
- Education
KSMHA Recruitment 2021: 15 ಅಧ್ಯಕ್ಷರು ಮತ್ತು ಸದಸ್ಯರು ಹುದ್ದೆಗಳಿಗೆ ಅರ್ಜಿ ಆಹ್ವಾನ
- Lifestyle
ಬಂಜೆತನಕ್ಕೆ ಕಾರಣವಾಗುವ ಥೈರಾಯ್ಡ್ ಲಕ್ಷಣಗಳು
- Automobiles
25 ಪೈಸೆ ಹೆಚ್ಚಳದೊಂದಿಗೆ ಸಾರ್ವಕಾಲಿಕ ಏರಿಕೆ ಕಂಡ ಪೆಟ್ರೋಲ್ ಬೆಲೆ
- Finance
ಮೈಂಡ್ ಟ್ರೀ ಕಂಪೆನಿ ನಿವ್ವಳ ಲಾಭ 66% ಹೆಚ್ಚಳ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
2020ರಲ್ಲಿ ಹೆಚ್ಚು ಹುಡುಕಲ್ಪಟ್ಟ 10 ನಟಿಯರು: ಸನ್ನಿ ಲಿಯೋನ್‌ಗೆ ಎಷ್ಟನೇ ಸ್ಥಾನ?
ವರ್ಷ 2020 ಮುಗಿಯುತ್ತಾ ಬಂತು. ಈ ವರ್ಷ ಅತ್ಯಂತ ದುರದೃಷ್ಟದ ವರ್ಷವೆಂದೇ ಪರಿಗಣಿಸಲಾಗುತ್ತಿದೆ. ಅದರಲ್ಲಿಯೂ ಸಿನಿಮಾ ಉದ್ಯಮಕ್ಕಂತೂ ಭಾರಿ ದುರಾದೃಷ್ಟದ ವರ್ಷವೇ ಇದು.
ಈ ವರ್ಷದಲ್ಲಿ ಹಲವಾರು ಸೆಲೆಬ್ರಿಟಿಗಳು ಜನರ ಗಮನ ಸೆಳೆದಿದ್ದರು. ಹಲವು ಕಾರಣಗಳಿಗಾಗಿ ಈ ನಟ-ನಟಿಯರು ಜನರ ಆಸಕ್ತಿ ಕೆರಳಿಸಿದ್ದರು.
Yahoo 2020: ಅತಿ ಹೆಚ್ಚು ಹುಡುಕಲ್ಪಟ್ಟ ಸೆಲೆಬ್ರಿಟಿ ನಟ ಯಾರು?
ಈ ವರ್ಷ ಅಂತರ್ಜಾಲದಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ಟಾಪ್ 10 ನಟಿಯರ ಪಟ್ಟಿ ಇಲ್ಲಿದೆ ನೋಡಿ. ವಿಶ್ವದ ಮೂರನೇ ಬೃಹತ್ ಸರ್ಚ್ ಎಂಜಿನ್ ಆದ ಯಾಹೂ ನಲ್ಲಿ ಬಳಕೆದಾರರು ಹುಡುಕಿರುವ ಟಾಪ್ 10 ನಾಯಕಿಯರ ಪಟ್ಟಿಯಲ್ಲಿ ಅದು ಬಿಡುಗಡೆ ಮಾಡಿದ್ದು, ಪಟ್ಟಿಯಲ್ಲಿ ಸನ್ನಿ ಲಿಯೋನ್ ಹೆಸರೂ ಸಹ ಇದೆ.

ಹತ್ತನೇ ಸ್ಥಾನದಲ್ಲಿ ಸಾರಾ ಅಲಿ ಖಾನ್
ಅತಿ ಹೆಚ್ಚು ಹುಡುಕಾಟ ನಡೆಸಿದ ನಟಿಯರಲ್ಲಿ ಹತ್ತನೇ ಸ್ಥಾನದಲ್ಲಿದ್ದಾರೆ ನಟಿ ಸಾರಾ ಅಲಿ ಖಾನ್. ಡ್ರಗ್ಸ್ ಪ್ರಕರಣದಲ್ಲಿ ವಿಚಾರಣೆಗೆ ಒಳಪಟ್ಟ ಈ ನಟಿ. ಸುಶಾಂತ್ ಸಿಂಗ್‌ನ ಮಾಜಿ ಪ್ರೇಯಸಿ ಸಹ ಆಗಿದ್ದರು. ಹಾಗಾಗಿ ಜನ ಹೆಚ್ಚು ಹುಡುಕಾಡಿದ್ದಾರೆ.

ಕರೀನಾ ಕಪೂರ್ ಗೆ ಒಂಬತ್ತನೇ ಸ್ಥಾನ
ನಟಿ ಕರೀನಾ ಕಪೂರ್ ಏನು ಮಾಡಿದರೂ ಸುದ್ದಿಯೇ. ಬಾಲಿವುಡ್‌ನ ಟಾಪ್ ಸೆಲೆಬ್ರಿಟಿಗಳಲ್ಲಿ ಒಬ್ಬರು ಕರೀನಾ. ಅವರ ಬಗ್ಗೆ ಸಹಜವಾಗಿಯೇ ಕುತೂಹಲ ಹೆಚ್ಚು. ಎರಡನೇ ಮಗುವಿನ ಬರುವಿಕೆ ಕಾಯುತ್ತಿರುವ ಕರೀನಾ ಬಗ್ಗೆ ಜನ ಹೆಚ್ಚು ಹುಡುಕಿದ್ದಾರೆ.

ಎಂಟನೇ ಸ್ಥಾನದಲ್ಲಿ ಕನ್ನಿಕಾ ಕಪೂರ್
ಈ ಗಾಯಕಿ , ಆಲ್ಬಂಗಳಲ್ಲಿ ನಟಿಸಿರುವ ಕನ್ನಿಕಾ ಕಪೂರ್ ಇದೇ ವರ್ಷದ ಮಾರ್ಚ್-ಏಪ್ರಿಲ್ ತಿಂಗಳಲ್ಲಿ ಭಾರಿ ಸುದ್ದಿಯಲ್ಲಿದ್ದರು. ಕೊರೊನಾ ವೈರಸ್ ಬಂದಿದ್ದರೂ ಅದನ್ನು ಬಚ್ಚಿಟ್ಟು ಪಾರ್ಟಿಗಳನ್ನು ಅಟೆಂಡ್ ಮಾಡಿದ್ದಾರೆ ಎಂಬ ಆರೋಪ ಅವರ ಮೇಲಿತ್ತು. ಅವರ ವಿರುದ್ಧ ಎಫ್‌ಐಆರ್ ಸಹ ಆಗಿತ್ತು. ಕನ್ನಿಕಾ ಕಪೂರ್ ಇಂದಾಗಿ ವಸುಂಧರಾ ರಾಜೆ, ದುಶ್ಯಂತ್ ಸಿಂಗ್, ಸಚಿವ ಜೈಪಾಲ್ ಸಿಂಗ್ ಸೇರಿ ಅನೇಕ ರಾಜಕಾರಣಿಗಳು ಸಹ ಐಸೋಲೇಶನ್‌ನಲ್ಲಿ ಇರುವಂತಾಯಿತು.

ನೇಹಾ ಕಕ್ಕರ್ ಗೆ ಏಳನೇ ಸ್ಥಾನ
ಅತಿ ಹೆಚ್ಚು ಹುಡುಕಲ್ಪಟ್ಟ ಸೆಲೆಬ್ರಿಟಿಗಳಲ್ಲಿ ನೇಹಾ ಕಕ್ಕರ್‌ಗೆ ಏಳನೇ ಸ್ಥಾನ. ಈ ಗಾಯಕಿ ಕಮ್ ಆಲ್ಬಂ ನಟಿ ನೇಹಾ ಕಕ್ಕರ್, ಬ್ರೇಕ್ ಅಪ್ ಬಗ್ಗೆ ಬಹಳ ಭಾವನಾತ್ಮಕವಾಗಿ ಪೋಸ್ಟ್ ಹಾಕಿದ್ದಲ್ಲದೆ, ವಿಡಿಯೋದಲ್ಲಿ ಕಣ್ಣೀರು ಸಹ ಹಾಕಿದ್ದರು. ಜೊತೆಗೆ ಆಕೆ ಅನುಭವಿಸಿದ್ದ ಖಿನ್ನತೆ, ಆತ್ಮಹತ್ಯೆ ಯೋಚನೆಗಳ ಬಗ್ಗೆ ಮಾತನಾಡಿದ್ದರು. ಅಕ್ಟೋಬರ್ 24 ರಂದು ಗಾಯಕ ರೋಹನ್ ಪ್ರೀತ್ ಸಿಂಗ್ ಜೊತೆ ವಿವಾಹವಾದರು. ಆಗಲೂ ಸುದ್ದಿಯಲ್ಲಿದ್ದರು ನೇಹಾ.

ಆರನೇ ಸ್ಥಾನದಲ್ಲಿ ನಟಿ ಕತ್ರೀನಾ ಕೈಫ್
ಕತ್ರೀನಾ ಕೈಫ್ ಸುದ್ದಿಯಲ್ಲಿರಲಿಲ್ಲವಾದರೂ, ಕೊರೊನಾ ಸಮಯದಲ್ಲಿ ತಮ್ಮ ಸಾಮಾಜಿಕ ಜಾಲತಾಣದಿಂದಾಗಿ ಆಕೆ ಗಮನ ಸೆಳೆದಿದ್ದರು. ವ್ಯಾಯಾಮ, ಅಡುಗೆ, ನೃತ್ಯ ಹೀಗೆ ಹಲವು ಕಾರ್ಯಗಳನ್ನು ಮಾಡಿ ಅದರ ವಿಡಿಯೋ, ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದರು ಕತ್ರೀನಾ ಕೈಫ್.

ಪ್ರಿಯಾಂಕಾ ಚೋಪ್ರಾ ಐದನೇ ಸ್ಥಾನದಲ್ಲಿ
ನಟಿ ಪ್ರಿಯಾಂಕಾ ಗೆ ಸುದ್ದಿಯಲ್ಲಿರುವುದು ಹೇಗೆ ಎಂಬುದು ಗೊತ್ತು. ಈ ವರ್ಷ ಅವರು 'ಅನ್‌ಫಿನಿಶ್ಡ್' ಹೆಸರಿನ ಆತ್ಮಚರಿತ್ರೆ ಬರೆದರು. 'ಬ್ಲ್ಯಾಕ್ ಲೈವ್ಸ್ ಮ್ಯಾಟರ್' ಚಳವಳಿಗೆ ಬೆಂಬಲ ವ್ಯಕ್ತಪಡಿಸಿದ್ದರು. ಹಾಲಿವುಡ್, ಬಾಲಿವುಡ್‌ನಲ್ಲಿಯೂ ಸಕ್ರಿಯರಾಗಿದ್ದರು ಪ್ರಿಯಾಂಕಾ. ಹಾಗಾಗಿ ಅವರ ಬಗ್ಗೆ ಹುಡುಕಾಟ ತುಸು ಹೆಚ್ಚಿಗೇ ಇತ್ತು.

ಸನ್ನಿ ಲಿಯೋನಿಗೆ ನಾಲ್ಕನೇ ಸ್ಥಾನ
ನಟಿ, ಮಾಜಿ ಪಾರ್ನ್ ಸ್ಟಾರ್ ಸನ್ನಿ ಲಿಯೋನಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲಿ ಕೆಲವು ವರ್ಷಗಳಿಂದ ಅವರು ಸ್ಥಾನ ಕಳೆದುಕೊಂಡಿದ್ದೇ ಇಲ್ಲ. ಅವರ ಮಾದಕ ಚಿತ್ರ, ವಿಡಿಯೋಗಳಿಗಾಗಿ ಅಂತರ್ಜಾಲದಲ್ಲಿ ಹುಡುಕಾಟ ನಡೆಯುತ್ತಲೇ ಇರುತ್ತದೆ. ಕೊರೊನಾ ಪ್ರಾರಂಭದಲ್ಲಿ ದೇಶ ಬಿಟ್ಟು ಹೋಗಿ ಅಮೆರಿಕದಲ್ಲಿ ನೆಲೆಸಿದ್ದ ಸನ್ನಿ, ಇದೀಗ ಭಾರತಕ್ಕೆ ವಾಪಸ್ ಆಗಿದ್ದಾರೆ.

ದೀಪಿಕಾ ಪಡುಕೋಣೆ ಗೆ ಮೂರನೇ ಸ್ಥಾನ
ನಟಿ ದೀಪಿಕಾ ಪಡುಕೋಣೆ ಈ ವರ್ಷ ಕೆಟ್ಟ ಕಾರಣಗಳಿಂದ ಸುದ್ದಿಯಲ್ಲಿದ್ದರು. ಡ್ರಗ್ಸ್ ಪ್ರಕರಣದಲ್ಲಿ ಅವರ ಹೆಸರು ಕೇಳಿಬಂದು, ವಿಚಾರಣೆ ಎದುರಿಸಿದರು. ಸುಶಾಂತ್ ಸಿಂಗ್ ಸಾವು 'ಖಿನ್ನತೆ' ಇಂದ ಆಗಿದೆ ಎಂದು ಜನಾಭಿಪ್ರಾಯ ಬಿತ್ತಲು ಯತ್ನಿಸಿದರು ಎಂಬ ಆರೋಪವೂ ದೀಪಿಕಾ ಮೇಲೆ ಬಂತು. ಜೊತೆಗೆ ಅವರು ಕೆಲವು ಬಿಗ್‌ಬಜೆಟ್ ಸಿನಿಮಾಗಳ ಕಾರಣಕ್ಕೂ ಸುದ್ದಿಯಲ್ಲಿದ್ದರು.

ಎರಡನೇ ಸ್ಥಾನದಲ್ಲಿ ನಟಿ ಕಂಗನಾ ರಣೌತ್
ಸುಶಾಂತ್ ಸಿಂಗ್ ಸಾವು ಸಂಭವಿಸಿದಾಗಿನಿಂದಲೂ ಸುದ್ದಿಯಲ್ಲಿರುವ ನಟಿ ಕಂಗನಾ ರಣೌತ್. ಸುಶಾಂತ್ ಸಾವು ಕೊಲೆ ಎಂದು ವಾದ ಆರಂಭಿಸಿ. ಮಹೇಶ್ ಭಟ್, ಕರಣ್ ಜೋಹರ್, ದೀಪಿಕಾ ಪಡುಕೋಣೆ, ರಣ್ಬೀರ್ ಕಪೂರ್, ಆಲಿಯಾ ಭಟ್, ತಾಪ್ಸಿ ಪನ್ನು, ಊರ್ಮಿಳಾ ಮತೋಡ್ಕರ್ ಹೀಗೆ ಹಲವಾರು ನಟ-ನಟಿಯರ ವಿರುದ್ಧ ಸತತ ಹೇಳಿಕೆಗಳನ್ನು ನೀಡಿದರು ಕಂಗನಾ. ಕೊನೆಗೆ ಮಹಾರಾಷ್ಟ್ರ ಸರ್ಕಾರವನ್ನು ಎದುರುಹಾಕಿಕೊಂಡರು, ತಮ್ಮ ಕಚೇರಿಯನ್ನು ಕಳೆದುಕೊಂಡರು. ಮುಂಬೈ ಅನ್ನು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿ ಭಾರಿ ವಿರೋಧ ಎದುರಿಸಿದರು. ದ್ವೇಷ ಪೂರಿತ ಟ್ವೀಟ್‌ಗಳನ್ನು ಮಾಡಿ ಎಫ್‌ಐಆರ್ ಗೆ ಗುರಿಯಾದರು. ಅನೇಕ ಕಾರಣಗಳಿಂದಾಗಿ ಕಂಗನಾ ಸುದ್ದಿಯಲ್ಲಿದ್ದರು ಈ ವರ್ಷ.

ಮೊದಲನೇ ಸ್ಥಾನ ನಟಿ ರಿಯಾ ಚಕ್ರವರ್ತಿ
ನಟಿ ರಿಯಾ ಚಕ್ರವರ್ತಿ ಸುಶಾಂತ್ ಸಾವಿನ ಕಾರಣಕ್ಕೆ ಸುದ್ದಿಗೆ ಬಂದವರು. ಸುಶಾಂತ್ ಸಾವಿಗೆ ರಿಯಾ ಚಕ್ರವರ್ತಿ ಕಾರಣ ಎಂದು ಆರೋಪಿಸಲಾಗಿತ್ತು. ಆಕೆಯ ವಿರುದ್ಧ ಎಫ್‌ಐಆರ್ ಸಹ ದಾಖಲಾಯಿತು. ಆಕೆಯ ಬಗ್ಗೆ ದೇಶದಾದ್ಯಂತ ಪರ-ವಿರೋಧ ಚರ್ಚೆಗಳು ನಡೆದವು. ಆಕೆ ಹಾಗೂ ಮಹೇಶ್ ಭಟ್ ನಡುವಿನ ಸಂಬಂಧದ ಚರ್ಚೆಯಾಯಿತು. ಹಲವು ಫೊಟೊ-ವಿಡಿಯೋಗಳು ಹರಿದಾಡಿದವು. ಕೊನೆಗೆ ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಒಂದು ತಿಂಗಳು ಜೈಲಿನಲ್ಲಿದ್ದು, ಕೆಲವು ದಿನಗಳ ಹಿಂದೆ ಜಾಮೀನಿನ ಮೇಲೆ ಬಿಡುಗಡೆ ಆಗಿದ್ದಾರೆ ರಿಯಾ ಚಕ್ರವರ್ತಿ. ಈಕೆಯ ಬಗ್ಗೆ ಈ ವರ್ಷ ಅತಿ ಹೆಚ್ಚು ಮಂದಿ ಯಾಹೂ ಸರ್ಚ್ ಇಂಜಿನ್‌ನಲ್ಲಿ ಹುಡುಕಾಟ ನಡೆಸಿದ್ದಾರೆ.