For Quick Alerts
  ALLOW NOTIFICATIONS  
  For Daily Alerts

  ಈ ವರ್ಷ ಅತಿ ಹೆಚ್ಚು ಟ್ರೋಲ್ ಆದ ಸಿನಿಮಾಗಳು ಯಾವುವು ಗೊತ್ತೆ!?

  |

  ಒಟ್ಟಾರೆ ಚಿತ್ರರಂಗಕ್ಕೆ ಈ ವರ್ಷ ಲಾಭದಾಯಕ ವರ್ಷವಲ್ಲ. ಬಿಡುಗಡೆ ಆಗಿದ್ದು ಬಹಳ ಕಡಿಮೆ ಸಿನಿಮಾಗಳು, ಹಣ ಮಾಡಿದ್ದು ಇನ್ನೂ ಕಡಿಮೆ ಸಿನಿಮಾಗಳು, ಜನಮೆಚ್ಚುಗೆ ಪಡೆದ ಸಿನಿಮಾಗಳು ಇನ್ನೂ ಕಡಿಮೆ.

  ಕೆಲವೇ ಸಿನಿಮಾಗಳು ಜನರ ಮೆಚ್ಚುಗೆ ಪಡೆದವು, ಬಾಲಿವುಡ್‌ನಲ್ಲಂತೂ ಹಿಟ್ ಎನಿಸಿಕೊಂಡ ಸಿನಿಮಾಗಳು ಅತ್ಯಂತ ಕಡಿಮೆ. ಒಟಿಟಿಗಳಲ್ಲಿ ಬಿಡುಗಡೆಯಾದ ಕೆಲವು ಸಿನಿಮಾಗಳು ಸಹ ಜನರನ್ನು ಸೆಳೆಯಲು ವಿಫಲವಾದವು.

  2020ರಲ್ಲಿ ಯ್ಯೂಟ್ಯೂಬ್‌ನ ಟಾಪ್ ಹಾಡು ಯಾವುದು?2020ರಲ್ಲಿ ಯ್ಯೂಟ್ಯೂಬ್‌ನ ಟಾಪ್ ಹಾಡು ಯಾವುದು?

  ಈ ವರ್ಷ ಹಲವು ಬಾಲಿವುಡ್ ಸಿನಿಮಾಗಳು ಜನರಿಂದ ಟ್ರೋಲ್‌ಗೆ ಒಳಗಾದವು. ಸುಶಾಂತ್ ಸಿಂಗ್ ಸಾವಿನ ನಂತರ ಎದ್ದ ನೆಪೊಟಿಸಂ (ಸ್ವಜನಪಕ್ಷಪಾತ) ಚರ್ಚೆಯ ನಂತರವಂತೂ ಬಹುತೇಕ ಸಿನಿಮಾಗಳನ್ನು ನೆಟ್ಟಿಗರು ಟ್ರೋಲ್ ಮಾಡಿದರು. ಈ ವರ್ಷ ಅತಿಯಾಗಿ ಟ್ರೋಲ್ ಆದ ಸಿನಿಮಾಗಳ ಪಟ್ಟಿ ಇಲ್ಲಿದೆ.

  ಮಹೇಶ್ ಬಾಬು ಟು ಶ್ರೀಮುರಳಿ: 2020ರಲ್ಲಿ ಘೋಷಣೆಯಾದ ಬಿಗ್ಗೆಸ್ಟ್ ಸಿನಿಮಾಗಳುಮಹೇಶ್ ಬಾಬು ಟು ಶ್ರೀಮುರಳಿ: 2020ರಲ್ಲಿ ಘೋಷಣೆಯಾದ ಬಿಗ್ಗೆಸ್ಟ್ ಸಿನಿಮಾಗಳು

  ಅತಿ ಹೆಚ್ಚು ಟ್ರೋಲ್ ಆದ ಸಿನಿಮಾ ಸಡಕ್ 2

  ಅತಿ ಹೆಚ್ಚು ಟ್ರೋಲ್ ಆದ ಸಿನಿಮಾ ಸಡಕ್ 2

  ಈ ವರ್ಷ ಅತಿ ಹೆಚ್ಚು ಟ್ರೋಲ್‌ಗೆ ಒಳಗಾದ ಜನರಿಂದ ಮೂದಲಿಕೆಗೆ ಒಳಗಾದ ಸಿನಿಮಾ ಆಲಿಯಾ ಭಟ್, ಆದಿತ್ಯಾ ರಾಯ್ ಕಪೂರ್, ಸಂಜಯ್ ದತ್ ನಟನೆಯ ಸಡಕ್ 2. ನೆಪೊಟಿಸಮ್ ಚರ್ಚೆ ನಡೆಯುತ್ತಿರುವಾಗಲೇ ಡಿಸ್ನಿ ಹಾಟ್‌ಸ್ಟಾರ್‌ ನಲ್ಲಿ ಈ ಸಿನಿಮಾ ಬಿಡುಗಡೆ ಆಗಿತ್ತು, ಈ ಸಿನಿಮಾವನ್ನು ವಿಪರೀತವಾಗಿ ಟ್ರೋಲ್ ಮಾಡಲಾಯಿತು. ಈ ಸಿನಿಮಾದ ಟ್ರೇಲರ್ ಅನ್ನು ಅತಿ ಹೆಚ್ಚು ಡಿಸ್‌ಲೈಕ್ ಸಹ ಮಾಡಲಾಯಿತು.

  ಗುಂಜನ್ ಸಕ್ಸೇನಾ; ದಿ ಕಾರ್ಗಿಲ್ ಗರ್ಲ್

  ಗುಂಜನ್ ಸಕ್ಸೇನಾ; ದಿ ಕಾರ್ಗಿಲ್ ಗರ್ಲ್

  ಶ್ರೀದೇವಿ ಪುತ್ರಿ ಜಾನ್ಹವಿ ನಟಿಸಿದ್ದ ಗುಂಜನ್ ಸಕ್ಸೇನಾ ಸಿನಿಮಾವನ್ನು ಸಹ ಅತಿಯಾಗಿ ಟ್ರೋಲ್ ಮಾಡಲಾಯಿತು. ಇದಕ್ಕೆ ಸಹ ನೆಪೊಟಿಸಮ್ ಕಾರಣವಾಗಿತ್ತು. ಜೊತೆಗೆ ನಿಜ ಘಟನೆಗಳನ್ನು ತಿರುಚಿದ್ದಾರೆ ಎಂತಲೂ,ಭಾರತೀಯ ವಾಯುಸೇನೆಯ ಕೆಲವು ಅಧಿಕಾರಿಗಳನ್ನು ಕೆಟ್ಟದಾಗಿ ಬಿಂಬಿಸಲಾಗಿದೆ ಎಂಬ ಅಂಶವೂ ಟ್ರೋಲ್ ಮಾಡಲು ಕಾರಣವಾಗಿ ಒದಗಿಬಂತು.

  2020: ನೆಟ್‌ಫ್ಲಿಕ್ಸ್‌ನಲ್ಲಿ ಭಾರತೀಯರು ಹೆಚ್ಚು ನೋಡಿದ ಸಿನಿಮಾಗಳಿವು2020: ನೆಟ್‌ಫ್ಲಿಕ್ಸ್‌ನಲ್ಲಿ ಭಾರತೀಯರು ಹೆಚ್ಚು ನೋಡಿದ ಸಿನಿಮಾಗಳಿವು

  ಟ್ರೋಲ್ ಗೆ ಓಳಗಾದ 'ಲವ್ ಆಜ್ ಕಲ್'

  ಟ್ರೋಲ್ ಗೆ ಓಳಗಾದ 'ಲವ್ ಆಜ್ ಕಲ್'

  ಸೈಫ್ ಅಲಿ ಖಾನ್ ಮಗಳು ಸಾರಾ ಅಲಿ ಖಾನ್, ಆದಿತ್ಯ ರಾಯ್ ಕಪೂರ್ ಒಟ್ಟಿಗೆ ನಟಿಸಿದ್ದ ಸಿನಿಮಾ 'ಲವ್ ಆಜ್ ಕಲ್' ಸಹ ವಿಪರೀತವಾಗಿ ಟ್ರೋಲ್‌ ಗೆ ಒಳಗಾಯಿತು. ಕೊರೊನಾ ಗೆ ಮೊದಲು ಬಿಡುಗಡೆ ಆಗಿದ್ದ ಈ ಸಿನಿಮಾ ಚಿತ್ರಮಂದಿರಗಳಿಂದ ಬಹುಬೇಗ ಜಾಗ ಖಾಲಿ ಮಾಡಿತು, ಪೇಲವ ಕತೆ ಹಾಗೂ ಸಾರಾ ಅಲಿ ಖಾನ್ ನಟನೆಯನ್ನು ಜನ ಟ್ರೋಲ್ ಮಾಡಿದರು.

  ಅಕ್ಷಯ್ ಕುಮಾರ್ ನಟನೆಯ 'ಲಕ್ಷ್ಮಿ'

  ಅಕ್ಷಯ್ ಕುಮಾರ್ ನಟನೆಯ 'ಲಕ್ಷ್ಮಿ'

  ಅಕ್ಷಯ್ ಕುಮಾರ್ ನಟನೆಯ ಲಕ್ಷ್ಮಿ ಸಿನಿಮಾ ಸಹ ಟ್ರೋಲ್ ಗೆ ಗುರಿಯಾಯಿತು. ಮೊದಲಿಗೆ ಸಿನಿಮಾದ ಹೆಸರಿನ ಬಗ್ಗೆ ತಕರಾರು ಎತ್ತಲಾಯಿತು, ನಂತರ ಚಿತ್ರತಂಡವು ಲಕ್ಷ್ಮಿ ಬಾಂಬ್ ಎಂದಿದ್ದ ಹೆಸರನ್ನು ಲಕ್ಷ್ಮಿ ಎಂದು ಬದಲಾಯಿಸಿದರು. ನಂತರ ಸಿನಿಮಾವು ಲವ್ ಜಿಹಾದ್‌ ಗೆ ಪ್ರೇರೇಪಣೆ ನೀಡುತ್ತದೆ ಎಂದು ಜರಿಯಲಾಯಿತು. ಸಿನಿಮಾ ಬಿಡುಗಡೆ ಆದ ನಂತರ, ಕಳಪೆ ಗ್ರಾಫಿಕ್ಸ್‌ ಬಗ್ಗೆ ಹಾಗೂ ಅಕ್ಷಯ್ ನಟನೆಯ ಬಗ್ಗೆ ನೆಟ್ಟಿಗರು ಟ್ರೋಲ್ ಮಾಡಿದರು. ಆದರೆ ಒಟಿಟಿಯಲ್ಲಿ ಈ ವರ್ಷ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಹಿಂದಿ ಸಿನಿಮಾ ಎಂಬ ದಾಖಲೆ ಬರೆಯಿತು ಲಕ್ಷ್ಮಿ. ದಿಲ್ ಬೇಚಾರಾ ದಾಖಲೆಯನ್ನು ಅಳಿಸಿ ಹಾಕಿತು ಲಕ್ಷ್ಮಿ.

  English summary
  Here is the list of most trolled movies of Bollywood in the year 2020. Sadak 2 is the most trolled movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X