For Quick Alerts
  ALLOW NOTIFICATIONS  
  For Daily Alerts

  ರಾಧೆ ಶ್ಯಾಮ್, ವಲಿಮೈ ಚಿತ್ರದ ರಿಲೀಸ್ ದಿನಾಂಕ ಫಿಕ್ಸ್!

  |

  ಜನವರಿ ಮೊದಲ ವಾರದಲ್ಲಿ ದೇಶದಾದ್ಯಂತ ಕೊರೊನಾ ಪ್ರಕರಣಗಳು ಹೆಚ್ಚಾದ ಕಾರಣ ಹಲವು ಬಿಗ್‌ ಬಜೆಟ್ ಸಿನಿಮಾಗಳು ಬಿಡುಗಡೆ ದಿನಾಂಕ ಮುಂದೂಡಿಕೊಂಡಿದ್ದವು. ಆದರೆ ಈಗ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಕಂಡು ಬರುತ್ತಿದ್ದಂತೆ ಮತ್ತೆ ಸಿನಿಮಾಗಳು ಬಿಡುಗಡೆ ಆಗಲು ಸಜ್ಜಾಗುತ್ತಿವೆ.

  ಸಾಲು ಸಾಲು ಸಿನಿಮಾಗೂ ರಿಲೀಸ್ ದಿನಾಂಕವನ್ನು ಪ್ರಕಟ ಮಾಡುತ್ತಿವೆ. RRR ಚಿತ್ರದ ಬಳಿಕ ನಾ ಮುಂದು ತಾ ಮುಂದು, ಅಂತ ತೆಲುಗು ಮತ್ತು ತಮಿಳು ಸಿನಿಮಾಗಳು ರಿಲೀಸ್ ದಿನಾಂಕವನ್ನು ಪ್ರಕಟ ಮಾಡಿವೆ. ಈ ಸಾಲಿಗೆ ಪ್ರಭಾಸ್ ಮತ್ತು ಅಜಿತ್ ಕೂಡ ಸೇರಿಕೊಂಡಿದ್ದಾರೆ.

  ಭಾರತೀಯ ಸಿನಿಮಾರಂಗದಲ್ಲಿ ರಾಧೆ ಶ್ಯಾಮ್ ಮತ್ತು ಅಜಿತ್ ಅಭಿನಯದ ವಲಿಮೈ ಸಿನಿಮಾಗಳು ಸಾಕಷ್ಟು ನಿರೀಕ್ಷೆಯನ್ನು ಹುಟ್ಟು ಹಾಕಿರುವ ಸಿನಿಮಾಗಳು. ಎಲ್ಲವೂ ಅಂದುಕೊಂಡ ಹಾಗೆ ಆಗಿದ್ದರೆ, ಈ ಚಿತ್ರಗಳು ಜನವರಿಯಲ್ಲೇ ತೆರೆಗೆ ಬರಬೇಕಿತ್ತು. ಈಗ ಮತ್ತೆ ಹೊಸ ರಿಲೀಸ್ ದಿನಾಂಕವನ್ನು ಪ್ರಕಟ ಮಾಡಿವೆ.

  ಮಾರ್ಚ್ 11ಕ್ಕೆ ರಾಧೆ ಶ್ಯಾಮ್ ರಿಲೀಸ್!

  ಪ್ರಭಾಸ್ ಅಭಿನಯದ 'ರಾಧೆ ಶ್ಯಾಮ್' ನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರಗಳಲ್ಲಿ ಒಂದು. ಮೊದಲು ಈ ಚಿತ್ರ ಜನವರಿ 14ರಂದು ಚಿತ್ರ ರಿಲೀಸ್ ದಿನಾಂಕ ಫಿಕ್ಸ್ ಮಾಡಿ. ಆದರೆ ಕೊರೊನಾ ಪ್ರಕರಣಗಳು ಹೆಚ್ಚಾದ ಕಾರಣ ಚಿತ್ರದ ರಿಲೀಸ್ ಮುಂದೂಡಲಾಯಿತು. ಚಿತ್ರ ತಂಡದಿಂದ ಈಗ ಸಿಹಿ ಸುದ್ದಿ ಬಂದಿದೆ. ಹೊಸ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದಾರೆ. ಪ್ರಭಾಸ್ ಮತ್ತು ಪೂಜಾ ಹೆಗ್ಡೆ ಅಭಿನಯದ 'ರಾಧೆ ಶ್ಯಾಮ್' ಮಾರ್ಚ್ 11, 2022 ರಂದು ಥಿಯೇಟರ್‌ಗಳಿಗೆ ಬರಲಿದೆ. ಪ್ರಭಾಸ್ ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದು, "11.03.22. ರಂದು ನಾನು ನಿಮ್ಮನ್ನು ನೋಡುತ್ತೇನೆ." ಎಂದು ಬರೆದುಕೊಂಡಿದ್ದಾರೆ.

  ಅಜಿತ್ 'ವಲಿಮೈ' ಫೆಬ್ರವರಿ 24ಕ್ಕೆ!

  ತಮಿಳು ನಟ ಅಜಿತ್ ಕುಮಾರ್ ಅವರ ಬಹುನಿರೀಕ್ಷಿತ ಚಿತ್ರ 'ವಲಿಮೈ'. ಈ ಚಿತ್ರ ಕುಡ ಜನವರಿಯಲ್ಲೇ ರಿಲೀಸ್ ಆಗ್ಬೇಕಿತ್ತು. ಆದರೆ ಕೊರೊನಾದಿಂದಾಗಿ ಈ ಚಿತ್ರ ಕೂಡ ಪೋಸ್ಟ್‌ ಪೋನ್ ಆಯ್ತು. ಈಗ ಚಿತ್ರದ ಹೊರ ರಿಲೀಸ್ ದಿನಾಂಕ ಪ್ರಕಟ ಆಗಿದೆ. ಫೆಬ್ರವರಿ 24 ರಂದು ಬೆಳ್ಳಿ ಪರದೆಯ ಮೇಲೆ ಚಿತ್ರ ಬರಲಿದೆ. ಚಿತ್ರದ ಹೊಸ ಪೋಸ್ಟರ್ ಕೂಡ ಬಿಡುಗಡೆ ಮಾಡಲಾಗಿದೆ. ಪೋಸ್ಟರ್‌ನಲ್ಲಿ ತಮಿಳು ಸ್ಟಾರ್ ಅಜಿತ್ ಭಿನ್ನ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸುದ್ದಿಯನ್ನು ನಿರ್ಮಾಪಕ ಬೋನಿಕಪೂರ್ ಹಂಚಿಕೊಂಡಿದ್ದಾರೆ.

  ಪವನ್ ಕಲ್ಯಾಣ್ ಜೊತೆಗೆ ಅಜಿತ್ ವಾರ್?

  ಪವನ್ ಕಲ್ಯಾಣ್ ಜೊತೆಗೆ ಅಜಿತ್ ವಾರ್?

  ಪವನ್ ಕಲ್ಯಾಣ್ ನಟನೆಯ 'ಭೀಮ್ಲಾ ನಾಯಕ್' ಸಿನಿಮಾ ಎರಡು ಬಿಡುಗಡೆ ದಿನಾಂಕವನ್ನು ಪ್ರಕಟಿಸಿದೆ. 'ಭೀಮ್ಲಾ ನಾಯಕ್' ಸಿನಿಮಾ ಫೆಬ್ರವರಿ 25 ಮತ್ತು ಏಪ್ರಿಲ್ 1ನ್ನು ಬಿಡುಗಡೆ ದಿನಾಂಕವಾಗಿ ಘೋಷಿಸಿದೆ. ರಾಣಾ ದಗ್ಗುಬಾಟಿ ಹಾಗೂ ಪವನ್ ಕಲ್ಯಾಣ್ ಮೊದಲ ಬಾರಿಗೆ ಒಟ್ಟಿಗೆ ನಟಿಸಿರುವ ಈ ಸಿನಿಮಾ ಮಲಯಾಳಂನ 'ಅಯ್ಯಪ್ಪನುಂ ಕೋಶಿಯುಂ' ಸಿನಿಮಾದ ರೀಮೇಕ್ ಆಗಿದೆ. ಹಾಗೇನಾದರು ಈ ಚಿತ್ರ ಫೆಬ್ರವರಿ 25ಕ್ಕೆ ರಿಲೀಸ್ ಆದರೆ ಅಜಿತ್ 'ವಲಿಮೈ' ಜೊತೆಗೆ ಬಾಕ್ಸಾಫೀಸ್ ವಾರ್‌ಗೆ ಇಳಿಯ ಬೇಕಾಗುತ್ತಾರೆ. ಈ ಹಿಂದೆ ಈ ಸಿನಿಮಾವನ್ನು ಜನವರಿ 12 ರಂದು ಸಂಕ್ರಾಂತಿ ಸಮಯಕ್ಕೆ ಬಿಡುಗಡೆ ಮಾಡಲು ಯೋಜಿಸಲಾಗಿತ್ತು.

  ತಲೆನೋವು ಬೇಡವೆಂದು 'ಮೇ'ಗೆ ಹೊದ ಮಹೇಶ್ ಬಾಬು!

  ತಲೆನೋವು ಬೇಡವೆಂದು 'ಮೇ'ಗೆ ಹೊದ ಮಹೇಶ್ ಬಾಬು!

  ಸದ್ಯ ಸಾಕಷ್ಟು ಸಿನಿಮಾಗಳು ರಿಲೀಸ್‌ಗೆ ರೆಡಿ ಇರುವ ಕಾರಣಕ್ಕೆ, ಹೆಚ್ಚು ಕಡಿಮೆ ಮೇ ತಿಂಗಳ ವರೆಗೂ ಬಹುತೇಕ ದಿನಾಂಕಗಳು ಬುಕ್ ಆಗಿವೆ. ಹಾಗಾಗಿ ಇದೆಲ್ಲವನ್ನೂ ದಾಟಿಕೊಂಡು ನಟ ಮಹೇಶ್‌ ಬಾಬು ಮುಂದೆ ಹೋಗಿದ್ದಾರೆ. ಮಹೇಶ್ ಬಾಬು ನಟನೆಯ 'ಸರ್ಕಾರು ವಾರಿ ಪಾಠ' ಸಿನಿಮಾವು ಮೇ 12 ರಂದು ತೆರೆಗೆ ಬರಲಿದೆ. ಕೀರ್ತಿ ಸುರೇಶ್ ನಾಯಕಿಯಾಗಿ ನಟಿಸಿರುವ ಈ ಸಿನಿಮಾ ಸಹ ಫೆಬ್ರವರಿಯಲ್ಲಿ ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆ ಆಗಲಿತ್ತು. ಆದರೆ 'ಆರ್‌ಆರ್‌ಆರ್‌' ಸಿನಿಮಾಕ್ಕೆ ದಾರಿ ಮಾಡಿಕೊಡಲೆಂದು ಸಿನಿಮಾ ಬಿಡುಗಡೆಯನ್ನು ಮುಂದೂಡಲಾಯ್ತು. ಆದರೆ ಕೊರೊನಾ ಕಾರಣಕ್ಕೆ 'ಆರ್‌ಆರ್‌ಆರ್‌' ಸಿನಿಮಾದ ಬಿಡುಗಡೆಯೇ ಮುಂದೂಡಲ್ಪಟ್ಟಿತು. ಈಗ ಈ ಸಿನಿಮಾವು ಮೇ 12ರಂದು ತೆರೆಗೆ ಬರಲಿದೆ.

  English summary
  Radhe Shyam And Valimai Gets New Release Date
  Wednesday, February 2, 2022, 15:00
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X