Don't Miss!
- Sports
ಗೆದ್ದ ಜಯ್ ಶಾ ಹಠ, ಪಾಕ್ಗೆ ಹಿನ್ನೆಡೆ; ತಟಸ್ಥ ಸ್ಥಳದಲ್ಲಿ 2023ರ ಏಷ್ಯಾಕಪ್ ಆಯೋಜಿಸಲು ನಿರ್ಧಾರ
- Lifestyle
Horoscope Today 5 Feb 2023: ಭಾನುವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ಗುಜರಾತ್ಗೆ ಬರಲಿದ್ದಾರೆ ಯುಎಸ್ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್
- Finance
ಅದಾನಿ ಸ್ಟಾಕ್ ಕುಸಿತ: 'ನಿಯಂತ್ರಕರು ಅವರ ಕೆಲಸ ಮಾಡುತ್ತಾರೆ', ಎಂದ ವಿತ್ತ ಸಚಿವೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಬಹುಬೇಡಿಕೆಯ ಟೊಯೊಟಾ ಹೈರೈಡರ್ ಎಸ್ಯುವಿ
- Technology
ಅಜ್ಜಿಗೆ ಆಪ್ಗಳ ಬಗ್ಗೆ ತಿಳಿಸಿಕೊಟ್ಟ ಯುವಕ; ವೈರಲ್ ಆಯ್ತು ವಿಡಿಯೋ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ವೀರಪ್ಪನ್‌ನಿಂದ ಬಿಡುಗಡೆಯ ನಂತರ ಆಶ್ಚರ್ಯಕ್ಕೆ ಕಾರಣವಾದ ರಾಜ್‌ಕುಮಾರ್ ಮಾತುಗಳು
ಡಾ.ರಾಜ್‌ಕುಮಾರ್ ಅವರನ್ನು 2000 ದ ಜುಲೈ ತಿಂಗಳ 30 ನೇ ತಾರೀಖಿನಂದು ಕಾಡುಗಳ್ಳ ವೀರಪ್ಪನ್ ಹೊತ್ತೊಯ್ದ.
Recommended Video
ಸುದ್ದಿ ಕಾಡ್ಗಿಚ್ಚಿನಂತೆ ಎಲ್ಲೆಡೆ ಹಬ್ಬಿತು, ರಾಜ್ಯದಲ್ಲಿ ಅಲ್ಲೋಲ-ಕಲ್ಲೋಲ. ಜನ ರೊಚ್ಚಿಗೆದ್ದುಬಿಟ್ಟಿದ್ದರು. ಆಕ್ರೋಶ ಭರತಿ ಅಭಿಮಾನಿಗಳನ್ನು, ಆತಂಕ ಭರಿತ ಸಿನಿ ಮಂದಿಯನ್ನು ಸಂಭಾಳಿಸುವುದು ಪೊಲೀಸರಿಗೆ ಹರಸಾಹಸ ಆಗಿಬಿಟ್ಟಿತ್ತು.
ಜನರ ಆಕ್ರೋಶ ಅದೇಕೋ ಏನೋ ತಮಿಳುನಾಡಿನ ಮೇಲೂ ತಿರುಗಿತ್ತು, ತಮಿಳುನಾಡಿನ ವಾಹನಗಳು ಬೆಂಕಿಗಾಹುತಿಯಾದವು. ವೀರಪ್ಪನ್ ಹಿಡಿದು ಕೊಂದು ರಾಜ್ ಅವರನ್ನು ಬಿಡಿಸಿಕೊಂಡು ಬರಲು ಕಾಡಿಗೆ ನುಗ್ಗಿಬಿಟ್ಟಿದ್ದರು ಅಭಿಮಾನಿಗಳು!
ಕೊನೆಗೂ
ಅಣ್ಣಾವ್ರು
ಕಾಣಿಸಲೇ
ಇಲ್ಲ:
ನಟ
ಸಂಚಾರಿ
ವಿಜಯ್
ಬಾಲ್ಯದ
ನೆನಪು
ಸತತ 108 ದಿನಗಳ ಕಾಲ ಅರಣ್ಯವಾಸಿಯಾಗಿದ್ದ ರಾಜ್‌ಕುಮಾರ್ ಅದೇ ನಿರ್ಮಲ ನಗುವಿನೊಂದಿಗೆ ರಾಜ್ಯಕ್ಕೆ ವಾಪಸ್ಸಾದರು. ರಾಜ್ಯಕ್ಕೆ ಬರುತ್ತಿದ್ದಂತೆ, ನೆಲಕ್ಕೆ ಹಣೆಯೊತ್ತಿ ಆಶೀರ್ವಾದ ಪಡೆದುಕೊಂಡರು. ಜನಗಳತ್ತ ಕೈ ಬೀಸಲಿಲ್ಲ, ಕೈ ಮುಗಿದರು ಆ ದೃಶ್ಯವನ್ನು ಬಹುಪಾಲು ಕನ್ನಡಿಗರು ಮರೆತಿಲ್ಲ.

ಹಲವರ ಆಶ್ಚರ್ಯಕ್ಕೆ ಕಾರಣವಾಗಿದ್ದ ರಾಜ್‌ಕುಮಾರ್ ಮಾತು
ಸೆರೆಯಿಂದ ಬಿಡುಗಡೆಯಾಗಿ ಬಂದ ದಿನದಂದೇ ರಾಜ್‌ಕುಮಾರ್ ಅವರು ವಿಧಾನಸೌಧದಲ್ಲಿ ಆಯೋಜಿತವಾಗಿದ್ದ ಸುದ್ದಿಗೋಷ್ಠಿಯಲ್ಲಿ ರಾಜ್‌ಕುಮಾರ್ ಅವರು ಆಡಿದ ಮಾತುಗಳು ಹಲವರ ಆಶ್ಚರ್ಯಕ್ಕೆ ಕಾರಣವಾಗಿತ್ತು, ಕೆಲವರು ಅಸಮಾಧಾನವನ್ನೂ ವ್ಯಕ್ತಪಡಿಸಿದ್ದರಾದರೂ ಆ ಅಸಮಾಧಾನದ ಹಿಂದೆ ರಾಜ್ ಕುಮಾರ್ ಅವರ ಮೇಲಿನ ಪ್ರೀತಿಯೇ ಕಾರಣವಾಗಿತ್ತು.

ವೀರಪ್ಪನ್ ಮೇಲೆ ಪ್ರೀತಿ ಪ್ರಕಟಿಸಿ ಆಶ್ಚರ್ಯ ಮೂಡಿಸಿದ ರಾಜ್
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ರಾಜ್‌ಕುಮಾರ್, ತಮ್ಮನ್ನು ಸತತ 108 ದಿನಗಳ ಕಾಲ ಇಚ್ಛೆಗೆ ವಿರುದ್ಧವಾಗಿ ಸೆರೆಯಲ್ಲಿರಿಸಿದ್ದ. ಅರಣ್ಯದಲ್ಲಿ ನಾನಾ ಕಷ್ಟಗಳನ್ನು ಅನುಭವಿಸುವಂತೆ ಮಾಡಿದ ಕಾಡುಗಳ್ಳನಾದ, ಕೊಲೆಯ ಆರೋಪಗಳನ್ನೂ ಹೊಂದಿದ್ದ ವೀರಪ್ಪನ್ ಅನ್ನು ಬಹುವಚನದಲ್ಲಿ ಸಂಭೋಧಿಸಿ ಮಾತನಾಡಿದ್ದರು. ಅಷ್ಟೇ ಅಲ್ಲ ಆತ ಒಳ್ಳೆಯ ಮನುಷ್ಯ ಎಂದಿದ್ದರು ರಾಜ್‌ಕುಮಾರ್. ಇದು ಅಲ್ಲಿ ನೆರದಿದ್ದವರಿಗೆ ಆಶ್ಚರ್ಯ ತಂದಿಟ್ಟಿತ್ತು.

ವೀರಪ್ಪನ್ ಅನ್ನು ಹಾಡಿಹೊಗಳಿದ ರಾಜ್‌ಕುಮಾರ್
'ವೀರಪ್ಪನ್ ಅವರು ಒಳ್ಳೆಯ ಮನುಷ್ಯರು, ಹೃದಯವಂತರು. ಏನೋ ಪೂರ್ವಜನ್ಮದ ಕರ್ಮ ಅವರು ಕಾಡಿನಲ್ಲಿರುವಂತೆ ಮಾಡಿದೆ. ಸುಮ್ಮನೆ ಹೇಳೋದಲ್ಲ, ಅವರು ನಮ್ಮನ್ನು ಬಹಳ ಚೆನ್ನಾಗಿ ನೋಡಿಕೊಂಡರು. ನಮ್ಮನ್ನು ವಾಪಸ್ಸು ಕಳುಹಿಸುವಾಗ ಅದೇನು ಪ್ರೀತಿ, ಅದೇನು ಮಮಕಾರ. ಶಾಲು ಹೊದೆಸಿ ಸನ್ಮಾನ ಮಾಡಿ ಕಳುಹಿಸಿಕೊಟ್ಟರು, ಪುಣ್ಯಾತ್ಮ. ನೋಡಿ, ಕನ್ನಡಿಗರು ಮತ್ತು ತಮಿಳರ ನಡುವೆ ಬಾಂಧವ್ಯ ಗಟ್ಟಯಾಗಬೇಕಾದರೆ ಪರಸ್ಪರ ಹೆಣ್ಣು ಕೊಡೋದು, ತರೋದು ಮಾಡಬೇಕು.' ಹೀಗೆ ಮುಂದುವರೆದಿತ್ತು ಅವರ ಮಾತು.

ತನ್ನನ್ನು ಕಾಡಿಸಿದವನನ್ನೂ ಗೌರವದಿಂದ ಕಂಡ ರಾಜ್
''ವೀರಪ್ಪನ್ ಭಾಳ ದೊಡ್ಡ ಮನುಷ್ಯ, ಭಾಳ ದೊಡ್ಡ ಮನುಷ್ಯ. ಪಾಪ, ಏನೋ ಅವರ ಗ್ರಹಚಾರ ಸರಿಯಿಲ್ಲ; ಕಾಡು ಸೇರಿಕೊಂಡಿದ್ದಾರೆ. ಸರಕಾರದ ಜತೆ ಏನೋ ಮನಸ್ತಾಪವಂತೆ. ಹಾಗಾಗಿ ನಮ್ಮನ್ನು ಕಾಡಿಗೆ ಕರೆದುಕೊಂಡು ಹೋಗಿದ್ರು. ಅದೂ ಒಂಥರಾ ಹೊಸ ಅನುಭವ ಬಿಡಿ. ಆದರೆ ಅಲ್ಲಿರೋವಷ್ಟು ಕಾಲ ನಮ್ಮನ್ನು ಬಹಳ ಚೆನ್ನಾಗಿ ನೋಡಿಕೊಂಡರು. ಬಹಳ ಸಾಹಸಿ ಮನುಷ್ಯ ನೋಡ್ರೀ ಅವರು. 108 ದಿನ ಕಳೆಯೋವಷ್ಟರಲ್ಲಿ ನಮಗೆ ರಾಮ, ರಾಮ ಅನ್ನೋ ಹಾಗಾಗಿತ್ತು. ಇನ್ನು ವರ್ಷಗಟ್ಟಲೆ ಆ ಕಾಡಿನಲ್ಲಿರೋ ಆ ಮನುಷ್ಯನ ಗುಂಡಿಗೆ ಮೆಚ್ಚಬೇಕಾದ್ದೆ'' ತಮ್ಮ ಜೀವಕ್ಕೆ ಕುತ್ತು ತಂದವನ ಬಗ್ಗೆ ಎಳ್ಳಷ್ಟೂ ದ್ವೇಷ, ಸಿಟ್ಟು ಇಲ್ಲದೆ ಮಾತನಾಡುತ್ತಾ ಸಾಗಿದ್ದರು ರಾಜ್‌ಕುಮಾರ್.

ರಾಜ್‌ಕುಮಾರ್ ಮುಗ್ಧತೆ ತೆರೆದಿಟ್ಟ ಅವರಾಡಿದ ಮಾತುಗಳು
ರಾಜ್ ಕುಮಾರ್ ಅವರ ಅಪಹರಣದಿಂದಾಗಿ ಕನ್ನಡ-ತಮಿಳರ ಮಧ್ಯೆ ಬಹುದೊಡ್ಡ ಕಂದಕವೇ ಸೃಷ್ಟಿಯಾಗಿಬಿಟ್ಟುತ್ತು. ವೀರಪ್ಪನ್ ಅಂತೂ ನರರಾಕ್ಷಸ ಎಂದು ಸಮಾಜದಲ್ಲಿ ಬಿಂಬಿತವಾಗಿತ್ತು, ಇಂಥಹಾ ಸಂದಿಗ್ಧ ಸಮಯದಲ್ಲಿ ವೀರಪ್ಪನ್ ಬಗ್ಗೆ ಅಷ್ಟು ಸೌಮ್ಯವಾಗಿ, ಸ್ವಲ್ಪವೂ ಆಕ್ರೋಶವಿಲ್ಲದೆ ರಾಜ್ ಆಡಿದ್ದ ಮಾತು ಕೆಲವರಿಗೆ ಅಪಥ್ಯ ಎನಿಸಿತ್ತು, ಆದರೆ ಅದು ರಾಜ್ ಅವರಲ್ಲಿನ ಮುಗ್ಧತೆಗೆ ಉದಾಹರಣೆಯಾಗಿತ್ತು.