For Quick Alerts
  ALLOW NOTIFICATIONS  
  For Daily Alerts

  ಬಸ್ಸಲ್ಲಿ ಟಿಕೆಟ್ ಇಲ್ದೆ ಓಡಾಡ್ತಿದ್ದ ರಾಮಕೃಷ್ಣ.. ತಪ್ಪಿಸಿಕೊಳ್ಳಲು ಕಂಡೆಕ್ಟರ್ ಶಿವಾಜಿ ಹೇಳಿದ್ದ ಟೆಕ್ನಿಕ್ ಏನು?

  |

  ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ಕಲಾವಿದ ರಾಮಕೃಷ್ಣ. ಪುಟ್ಟಣ್ಣ ಕಣಗಾಲ್ ಗರಡಿಯಲ್ಲಿ ಪಳಗಿದ ರಾಮಕೃಷ್ಣ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಕನ್ನಡ ಸಿನಿರಸಿಕರ ಮನಗೆದ್ದಿದ್ದರು. ಡಾ. ರಾಜ್‌ಕುಮಾರ್ ಜೊತೆಗೂ ನಟಿಸಿ ಸೈ ಎನ್ನಿಸಿಕೊಂಡಿದ್ದರು.

  ನಿರ್ದೇಶಕ ರಘುರಾಮ್ ನಡೆಸಿಕೊಡುವ 'ನೂರೊಂದು ನೆನೆಪು' ಯೂಟ್ಯೂಬ್ ಸಂದರ್ಶನದಲ್ಲಿ ಹಿರಿಯ ನಟ ರಾಮಕೃಷ್ಣ ತಮ್ಮ ಸಿನಿಜರ್ನಿಯನ್ನು ಮೆಲುಕು ಹಾಕಿದ್ದಾರೆ. ಈ ವೇಳೆ ತಮ್ಮ ಚಿತ್ರರಂಗದ ಆರಂಭದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ರಂಗಭೂಮಿಯ ನಂಟು, ಚಿತ್ರರಂಗದಲ್ಲಿ ಎಂಟ್ರಿ ಆಗಿದ್ದು ಹೇಗೆ ಎನ್ನುವುದನ್ನೆಲ್ಲಾ ವಿವರಿಸಿದ್ದಾರೆ. ಸೂಪರ್ ಸ್ಟಾರ್ ರಜಿನಿಕಾಂತ್ ಚಿತ್ರರಂಗಕ್ಕೆ ಬರುವುದಕ್ಕು ಮುನ್ನ ಬಿಟಿಎಸ್ ಬಸ್ ಕಂಡೆಕ್ಟರ್ ಆಗಿದ್ದರು. ಆಗ ಟಿಕೆಟ್ ತೆಗೆದುಕೊಳ್ಳದೇ ಬಸ್‌ನಲ್ಲಿ ಓಡಾಡುತ್ತಿದ್ದ ವಿಚಾರವನ್ನು ರಾಮಕೃಷ್ಣ ಹಂಚಿಕೊಂಡಿದ್ದಾರೆ.

  ದಾದಾ ಪಕ್ಕದಲ್ಲಿ ಇದ್ದಾಗಲೇ ಅಣ್ಣಾವ್ರ ಮೇಲೆ ಚಪ್ಪಲಿ ಬಿದ್ದಿತ್ತು.. ಮುಂದೇನಾಗಿತ್ತು?ದಾದಾ ಪಕ್ಕದಲ್ಲಿ ಇದ್ದಾಗಲೇ ಅಣ್ಣಾವ್ರ ಮೇಲೆ ಚಪ್ಪಲಿ ಬಿದ್ದಿತ್ತು.. ಮುಂದೇನಾಗಿತ್ತು?

  ಹನುಮಂತ ನಗರದಲ್ಲಿ ನಿರ್ದೇಶಕ ಎಂ ಎಂ ಪ್ರಸಾದ್ ಅವರ ಕಛೇರಿಯಲ್ಲಿ ಸಹಾಯಕರಾಗಿ ಒಂದಷ್ಟು ದಿನ ಕೆಲಸ ಮಾಡ್ತಿದ್ದರು. ಆಗ ಬಸ್ ಕಂಡೆಕ್ಟರ್ ಆಗಿದ್ದ ಶಿವಾಜಿ ರಾವ್ ಗಾಯಕ್‌ವಾಡ್ ಅಲಿಯಾಸ್ ರಜಿನಿಕಾಂತ್ ಜೊತೆಗಿನ ಒಡನಾಟದ ಬಗ್ಗೆ ರಾಮಕೃಷ್ಣ ಹೇಳಿಕೊಂಡಿದ್ದಾರೆ.

  ಹನುಮಂತನಗರದಲ್ಲಿ ಒಂದು ತರಕಾರಿ ಅಂಗಡಿ ಇತ್ತು. ಆ ಅಂಗಡಿಗೆ ಬಹಳ ಹೆಣ್ಣುಮಕ್ಕಳು ಬರುತ್ತಿದ್ದರು. ಅವರನ್ನು ನೋಡೊಕೆ ಅದೇ ಬೀದಿಯಲ್ಲಿ ವಾಸವಾಗಿದ್ದ ಶಿವಾಜಿ ಕೂಡ ಬರ್ತಿದ್ದ. ಶಿವಾಜಿ ಕಂಡೆಕ್ಟರ್ ಆಗಿದ್ದ ಬಸ್‌ನಲ್ಲಿ ಕೆಲವೊಮ್ಮೆ ನಾನು ಓಡಾಡಿದ್ದೀನಿ. ಆಗ ನನಗೆ ಅವರು ರಜಿನಿಕಾಂತ್ ಅಲ್ಲ. ಶಿವಾಜಿ ಅಂತ ಹೆಸರು. ಕಂಡೆಕ್ಟರ್ ಆಗಿದ್ದರು. ನನ್ನ ಹತ್ರ ಬಸ್‌ನಲ್ಲಿ ಓಡಾಡಲು ದುಡ್ಡು ಇರುತ್ತಿರಲಿಲ್ಲ.

  ನಾನು ಕಳ್ಳತನದಲ್ಲಿ ಬಸ್‌ನಲ್ಲಿ ಗಾಂಧಿನಗರಕ್ಕೆ ಹೋಗಬೇಕಿತ್ತು. ಡಾ. ರಾಜ್‌ಕುಮಾರ್ ಅವರನ್ನು ನೋಡಬೇಕು ಎಂದರೆ ಗಾಂಧಿನಗರಕ್ಕೆ ಹೋಗಬೇಕಿತ್ತು. ಆಗ ಶಿವಾಜಿ ಬಸ್‌ನಲ್ಲಿ ಓಡಾಡುತ್ತಿದ್ದೆ. ಅವನಿಗೂ ಗೊತ್ತು. ನನ್ನನ್ನು ನೋಡಿದರೆ ದುಡ್ಡು ಕೇಳುತ್ತಿರಲಿಲ್ಲ. ಹನುಮಂತನಗರದ ಕಡೆಯಿಂದ ಬರ್ತಾನೆ ಇವನು ಒಬ್ಬ ಅಂತ. ಕೊನೆಗೆ ಒಂದು ದಿನ ಅವನಿಂದ ಬೈಸಿಕೊಂಡಿದ್ದೆ. "ನೋಡೊ ನೀನು ಹೀಗೆ ಕೂತ್ಕೊಳ್ಳೊಕೆ ಆಗೊಲ್ಲ, ಇನ್ಸ್‌ಪೆಕ್ಟರ್ ಬಂದರೆ ಹಿಡ್ಕೊತ್ತಾರೆ. ರೈಟ್ ಎಂದಾಗ ಬಸ್ ಹತ್ಕೋ, ಬಸ್ ನಿಂತ ತಕ್ಷಣ ಇಳಿದುಬಿಡು" ಎಂದು ಟೆಕ್ನಿಕ್ ಹೇಳಿಕೊಟ್ಟಿದ್ದ".

  Ramakrishna Remembers Rajinikanth Technique to Travel in Bus Without Ticket in his latest Interview

  ನನಗೆ ಶಿವಾಜಿನ ನೋಡಿದ್ರೆ ಅಚ್ಚರಿ ಆಗುತ್ತಿತ್ತು. ಉದ್ದನೆಯ ಮೀಸೆ, ಕೂದಲನ್ನು ಬಹಳ ಚೆನ್ನಾಗಿ ಬಾಚುತ್ತಿದ್ದ. ಕಪ್ಪಗೆ ಇದ್ದರೂ ಟೈಟ್‌ ಫಿಟ್ ಪ್ಯಾಂಡ್, ಬೆಲ್‌ಬಾಟಂ. ಎಲ್ಲರ ಜೊತೆಗೂ ಸ್ಟೈಲ್ ಆಗಿ ಮಾತನಾಡುತ್ತಿದ್ದ. ಕನ್ನಡದವರ ಜೊತೆ ಕನ್ನಡದವರ ಕನ್ನಡ, ತಮಿಳರ ಜೊತೆ ತಮಿಳು, ತೆಲುಗರ ತೆಲುಗು ಮಾತನಾಡುತ್ತಿದ್ದ. ಅವನು ಮಾತನಾಡುವುದನ್ನು ಕೇಳಲು ನಾವೆಲ್ಲಾ ಕಾಯುತ್ತಿದ್ದೆವು. ಏನೋ ವಿಶೇಷವಾಗಿ ಮಾತನಾಡಿ ಟಿಕೆಟ್ ಕೊಡುತ್ತಿದ್ದ. ಹಾಗಾಗಿ ಅವನನ್ನು ನೋಡುವುದ ಖುಷಿ ನನಗೆ. ಇಷ್ಟು ಚೆನ್ನಾಗಿ ಮಾತನಾಡುತ್ತಾನೆ. ಇಂತಹ ಕಲೆ ನಮ್ಮತ್ರ ಇಲ್ಲ ಎನಿಸುತ್ತಿತ್ತು. ಆದರೆ ದುಡ್ಡಿನ ತಾಪತ್ರಯದಿಂದ ಹೆಚ್ಚು ಅವನನ್ನು ನೋಡಲು ಆಗುತ್ತಿರಲಿಲ್ಲ"

  "ನನಗೆ ಏನಿದ್ದರೂ, ಅವನು ಹೇಳಿದಂತೆ ರೈಟ್ ಎಂದಾಗ ಬಸ್ ಹತ್ತಿಕೊಳ್ಳುವುದು. ಬಸ್ ನಿಂತ ತಕ್ಷಣ ಇಳಿದುಕೊಳ್ಳುವುದು ಇದರ ಮೇಲೆ ಗಮನ ಇರುತ್ತಿತ್ತು. ಕೆಲವೊಮ್ಮೆ ಹನುಮಂತ ನಗರದಿಂದ ಗಾಂಧಿನಗರಕ್ಕೆ ನಡೆದುಕೊಂಡು ಹೋಗಿಬಿಡುತ್ತಿದ್ದೆ. ಒಮ್ಮೆ ಅಡ್ಯಾರ್ ಇನ್ಸಿಟ್ಯೂಟ್‌ನಲ್ಲಿ ಪಾಸ್ ಆದವರ ಲಿಸ್ಟ್ ಬಂದಿತ್ತು. ಅದರಲ್ಲಿ ರಜಿನಿಕಾಂತ್ ಫೋಟೊ ಕೂಡ ಇತ್ತು. ಅದನ್ನು ನಿರ್ದೇಶಕರಿಗೆ ತೋರಿಸಿದ್ದೆ. ಹೌದಲ್ಲ ಕಂಡೆಕ್ಟರ್ ಆಗಿದ್ದವನು ಇನ್ಸಿಟ್ಯೂಟ್‌ಗೆ ಹೋಗಿದ್ದಾನೆ ಅಂತ ಗೊತ್ತಾಯ್ತು. ಒಂದು ದಿನ ಅಶೋಕ್, ರವಿ, ಶಿವಾಜಿ ನಮ್ಮ ಆಫೀಸಿಗೆ ಬಂದಿದ್ದರು. ನನ್ನನ್ನು ನೋಡಿ ನಿನ್ನನ್ನು ಎಲ್ಲೋ ನೋಡಿದ್ದೀನಿ ಅಂದ. ನಿಮ್ಮ ಬಸ್‌ನಲ್ಲಿ ನಾನು ಓಡಾಡ್ತಿದ್ದೆ ಎಂದೆ. ನಿಮ್ಮನ್ನು ನೋಡಿದಾಗಲೇ ಕಲಾವಿದರು ಆಗಬಹುದು ಎಂದು ನಾನು ಆಗ ಅಂದುಕೊಂಡಿದ್ದೆ ಎಂದು ಹೇಳಿದ್ದೆ. ಶಿವಾಜಿ ಕೂಡ ಕಾನ್ಫಿಡೆಂಡ್ ಇರಬೇಕು. ಕಾನ್ಫಿಡೆಂಡ್ ಇದ್ದರೆ ಏನಾದರೂ ಆಗುತ್ತದೆ ಎಂದು ಹೇಳಿ ಹೋಗಿದ್ದ" ಎಂದು ಆ ಘಟನೆಗಳನ್ನು ರಾಮಕೃಷ್ಣ ವಿವರಿಸಿದ್ದಾರೆ.

  English summary
  Ramakrishna Remembers Rajinikanth Technique to Travel in Bus Without Ticket in his latest Interview. veteran actor recalls the old days when he Come To Film Industry. know more.
  Friday, January 13, 2023, 15:22
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X