For Quick Alerts
  ALLOW NOTIFICATIONS  
  For Daily Alerts

  ತೆಲುಗಿನ ಈ ಯಶಸ್ವಿ ನಟನ ದುರಂತ ಬದುಕಿನ ಪ್ರಕರಣ ನೆನಪಿಸಿದ ಸುಶಾಂತ್ ಸಿಂಗ್ ಆತ್ಮಹತ್ಯೆ

  By Avani Malnad
  |

  ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಒಬ್ಬ ಪ್ರತಿಭಾವಂತ ನಟನ ದುರಂತ ಅಂತ್ಯಕ್ಕೆ ಸಾಕ್ಷಿ. ಈ ಸಾವು ತೆಲುಗಿನ ಪ್ರತಿಭಾನ್ವಿತ ನಟ ಉದಯ್ ಕಿರಣ್ ಅವರನ್ನು ನೆನಪಿಸುತ್ತದೆ. ಉದಯ್ ಕಿರಣ್ ಕೂಡ ಹೀಗೆಯೇ ತಮ್ಮ ಬದುಕನ್ನು ತಾವೇ ಅಂತ್ಯಗೊಳಿಸಿದ್ದರು. 2014ರ ಜನವರಿ 5ರಂದು ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಆಗ ಅವರ ವಯಸ್ಸು ಸುಶಾಂತ್ ಅವರಷ್ಟೇ ಆಗಿತ್ತು. ಅಂದರೆ 34 ವರ್ಷ.

  ಹಸುಗಳಿಗೆ ಮೇವು ಕತ್ತರಿಸಿದ ದರ್ಶನ್ | Darshan busy in farm House

  ದಕ್ಷಿಣ ಭಾರತದ ಅನೇಕರಿಗೆ ಉದಯ್ ಕಿರಣ್ ಹೆಸರು ಮತ್ತು ಸಿನಿಮಾಗಳ ಬಗ್ಗೆ ತಿಳಿದಿದೆ. ಸುಶಾಂತ್ ಅವರ ದುರಂತಮಯ ಅಂತ್ಯ ಹೆಚ್ಚಿನವರಿಗೆ ಉದಯ್ ಕಿರಣ್ ಅವರ ನೆನಪು ತಂದಿದೆ. ಇಬ್ಬರೂ ಸಾಯುವಾಗ ಇನ್ನೂ ಚಿಕ್ಕ ವಯಸ್ಸು. ಇಬ್ಬರೂ ಹಸನ್ಮುಖಿ ವ್ಯಕ್ತಿತ್ವದ ಪ್ರತಿಭೆಗಳು. ಇಬ್ಬರೂ ತಮ್ಮ ತಮ್ಮ ಉದ್ಯಮಗಳಲ್ಲಿ ಹೊರಗಿನವರೇ. ಅವರಿಗೆ ಉದ್ಯಮದಲ್ಲಿ ಕುಟುಂಬಗಳ ಬೆಂಬಲವಿರಲಿಲ್ಲ. ಅಷ್ಟೇ ಅಲ್ಲ, ಇವರಿಬ್ಬರೂ ದೀರ್ಘ ಕಾಲದಿಂದ ಖಿನ್ನತೆಗೆ ಒಳಗಾಗಿದ್ದರು ಎಂದು ವರದಿಯಾಗಿತ್ತು. ಮುಂದೆ ಓದಿ...

  ಮೊದಲ ಚಿತ್ರವೇ ಹಿಟ್

  ಮೊದಲ ಚಿತ್ರವೇ ಹಿಟ್

  ಉದಯ್ ಕಿರಣ್, ಆರಂಭದಲ್ಲಿಯೇ ಯಶಸ್ಸು ಕಂಡ ನಟ. 2000ರಲ್ಲಿ ತೆರೆಕಂಡ 'ಚಿತ್ರಂ' ಮೂಲಕ ಅವರು ಸಿನಿಮಾ ರಂಗ ಪ್ರವೇಶಿಸಿದರು. ಕಾಲೇಜು ಓದುವ ಯುವತಿ ಗರ್ಭಿಣಿಯಾಗುವ ಕಥೆ ವಿವಾದ ಸೃಷ್ಟಿಸಿತ್ತು. ಆದರೆ ಈ ಚಿತ್ರ ಭರ್ಜರಿ ಹಿಟ್ ಆಗಿತ್ತು. ಇದೇ ಸಿನಿಮಾ ಕನ್ನಡದಲ್ಲಿ ನಾಗೇಂದ್ರ ಪ್ರಸಾದ್ ಮತ್ತು ರೇಖಾ ನಟಿಸಿದ್ದ 'ಚಿತ್ರ' ಎಂಬ ಹೆಸರಲ್ಲಿ ರೀಮೇಕ್ ಆಗಿತ್ತು.

  ಹ್ಯಾಟ್ರಿಕ್ ಹೀರೋ

  ಹ್ಯಾಟ್ರಿಕ್ ಹೀರೋ

  2001ರಲ್ಲಿ ಬಿಡುಗಡೆಯಾದ 'ನುವ್ವು ನೇನು' ಮತ್ತು 'ಮನಸಂತಾ ನುವ್ವೆ' ಚಿತ್ರಗಳು ಕೂಡ ಭಾರಿ ಯಶಸ್ಸು ಕಂಡು ಉದಯ್ ಕಿರಣ್‌ಗೆ ಸ್ಟಾರ್‌ಗಿರಿ ತಂದುಕೊಟ್ಟವು. ತೆಲುಗಿನಲ್ಲಿ ಸ್ಟಾರ್ ನಟರ ಪ್ರಭಾವದ ನಡುವೆ ಹೊಸ ಮುಖ ಯಶಸ್ಸು ಗಳಿಸಿ ಅಚ್ಚರಿ ಮೂಡಿಸಿದ್ದರು. ಈ ಎಲ್ಲ ಸಿನಿಮಾಗಳೂ ಬೇರೆ ಬೇರೆ ಭಾಷೆಗಳಿಗೆ ರೀಮೇಕ್ ಆದವು. ಉದಯ್ ಕಿರಣ್‌ಗೆ 'ಹ್ಯಾಟ್ರಿಕ್ ಹೀರೋ' ಎಂಬ ಬಿರುದು ಕೂಡ ಸಿಕ್ಕಿತ್ತು.

  ಚಿರು ಮಗಳ ಮದುವೆಯ ಆಫರ್

  ಚಿರು ಮಗಳ ಮದುವೆಯ ಆಫರ್

  2003ರಲ್ಲಿ ಉದಯ್ ಕಿರಣ್‌ಗೆ ಅಚ್ಚರಿಯ ಸಂಗತಿಯೊಂದು ಎದುರಾಗಿತ್ತು. ತಮ್ಮ ಬಾಲ್ಯದ ಹೀರೋ ಮೆಗಾಸ್ಟಾರ್ ಚಿರಂಜೀವಿ ಮಗಳು ಸುಶ್ಮಿತಾ ಜತೆ ಮದುವೆಯ ಆಫರ್ ನೀಡಿದ್ದರು. ಚಿರಂಜೀವಿ ಮತ್ತು ಇತರೆ ದೊಡ್ಡ ಸ್ಟಾರ್‌ಗಳ ಬೆಂಬಲದಿಂದ ಉದಯ್ ಕಿರಣ್ ಕೂಡ ಬಹುದೊಡ್ಡ ಸ್ಟಾರ್ ಆಗಿ ಹೊರಹೊಮ್ಮಲಿದ್ದಾರೆ ಎನ್ನಲಾಗಿತ್ತು.

  ಇಂದಿಗೂ ನಿಗೂಢ

  ಇಂದಿಗೂ ನಿಗೂಢ

  ಆದರೆ ಮುಂದೆ ಏನಾಯ್ತೋ, ಇಬ್ಬರ ನಡುವಿನ ನಿಶ್ಚಿತಾರ್ಥ ಮುರಿದುಬಿತ್ತು ಎಂಬ ಆಘಾತಕಾರಿ ಸುದ್ದಿ ಹೊರಬಂದಿತು. ಮದುವೆ ನಿಂತಿದ್ದು ಏಕೆ ಎನ್ನುವುದು ಇಂದಿಗೂ ನಿಗೂಢವಾಗಿಯೇ ಉಳಿದಿದೆ. ಅಂದಿನಿಂದ ಇಂದಿನವರೆಗೂ ಉದಯ್ ಕಿರಣ್ ಸಾವು ಹಾಗೂ ಮುರಿದು ಬಿದ್ದ ಮದುವೆ ಕುರಿತು ರೂಮರ್‌ಗಳು ಹರಿದಾಡುತ್ತಲೇ ಇವೆ.

  ಸಾಲು ಸಾಲು ಸೋಲುಗಳು

  ಸಾಲು ಸಾಲು ಸೋಲುಗಳು

  ಈ ಘಟನೆ ಬಳಿಕ ಉದಯ್ ಕಿರಣ್ ಸಿನಿಮಾಗಳು ನೆಲಕಚ್ಚತೊಡಗಿದವು. ಸಿನಿಮಾಗಳು ಕೈಗೆ ಸಿಕ್ಕರೂ ಅವರಿಗೆ ಹಿಟ್ ಸಿಗಲಿಲ್ಲ. ತಮಿಳಿನಲ್ಲಿಯೂ ಅದೃಷ್ಟ ಪರೀಕ್ಷಿಸಿ ಸೋತರು. 2012ರ ಅಕ್ಟೋಬರ್ 24ರಂದು ವಿಶಿತಾ ಎಂಬುವವರ ಜತೆ ಉದಯ್ ಕಿರಣ್ ಮದುವೆಯಾಯಿತು. ಆರ್ಥಿಕ ಸಂಕಷ್ಟಕ್ಕೂ ಸಿಲುಕಿದ್ದ ಉದಯ್, ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ.

  ಆತ್ಮಹತ್ಯೆಗೆ ಶರಣು

  ಆತ್ಮಹತ್ಯೆಗೆ ಶರಣು

  2014ರ ಜನವರಿ 6ರಂದು ಅವರು ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡರು. ಆ ಸಂದರ್ಭದಲ್ಲಿ ಪತ್ನಿ ಮನೆಯಲ್ಲಿ ಇರಲಿಲ್ಲ ಎನ್ನಲಾಗಿತ್ತು. ಅವರು ಮದಲಸಾ ಶರ್ಮಾ ಜತೆ ನಟಿಸಿದ್ದ ಕೊನೆಯ ಚಿತ್ರ 'ಚಿತ್ರಂ ಚೆಪ್ಪಿನಾ ಕಥಾ' ಕೊನೆಗೂ ಬಿಡುಗಡೆಯ ಭಾಗ್ಯ ಕಾಣಲಿಲ್ಲ.

  ಚಿರಂಜೀವಿ ವಿರುದ್ಧ ಆರೋಪ

  ಚಿರಂಜೀವಿ ವಿರುದ್ಧ ಆರೋಪ

  ಉದಯ್ ಕಿರಣ್ ಅವರ ವೃತ್ತಿ ಜೀವನದ ಸೋಲು ಮತ್ತು ವೈಯಕ್ತಿಕ ಬದುಕಿನ ಹತಾಶೆಗೆ ಚಿರಂಜೀವಿ ಕಾರಣ ಎಂಬ ಆರೋಪ ಕೇಳಿಬಂದಿತ್ತು. ಸುಶಾಂತ್ ಸಿಂಗ್ ಆತ್ಮಹತ್ಯೆಯ ಹಿನ್ನೆಲೆಯಲ್ಲಿ ಚರ್ಚೆಯಾಗುತ್ತಿರುವ ಸ್ವಜನಪಕ್ಷಪಾತವೇ ಉದಯ್ ಕಿರಣ್ ಸಾವಿಗೂ ಕಾರಣವಾಗಿತ್ತು ಎಂಬ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಚಿರಂಜೀವಿ ವಿರುದ್ಧ ಬಂದಿದ್ದ ಆರೋಪಗಳನ್ನು ಉದಯ್ ಕಿರಣ್ ಸಹೋದರಿ ಶ್ರೀದೇವಿ ನಿರಾಕರಿಸಿದ್ದರು. ಮದುವೆ ಮುರಿದುಬಿದ್ದಾಗ ಚಿರಂಜೀವಿ ಸಂತೈಸಿದ್ದರು. ಉದಯ್‌ಗೆ ಮಾರ್ಗದರ್ಶನ ಮಾಡಿದ್ದರು. ಆತನ ಸಂಕಷ್ಟದ ಸಂದರ್ಭದಲ್ಲಿ ಮಾನಸಿಕವಾಗಿ ಬೆಂಬಲ ನೀಡಿದ್ದರು ಎಂದು ಅವರು ಹೇಳಿದ್ದರು.

  ನಿಶಿತಾ ಜತೆ ಮಾತನಾಡಿಯೇ ಇಲ್ಲ

  ನಿಶಿತಾ ಜತೆ ಮಾತನಾಡಿಯೇ ಇಲ್ಲ

  ನಾನು ಉದಯ್ ಮತ್ತು ನಿಶಿತಾ ಅವರನ್ನು ಭೇಟಿ ಮಾಡಿದ್ದು ಅವರ ಮದುವೆ ಸಮಯದಲ್ಲಿಯೇ. ಬಳಿಕ ಮಸ್ಕತ್‌ಗೆ ತೆರಳಿದ್ದೆ. ಕರೆ ಮಾಡಿದಾಗಲೆಲ್ಲಾ ಉದಯ್ ಸಂತೋಷವಾಗಿದ್ದೇನೆ ಎನ್ನುತ್ತಿದ್ದ. ಆದರೆ ವಿಶಿತಾ ಜತೆ ಮಾತನಾಡುವ ಅವಕಾಶವೇ ಸಿಕ್ಕಿರಲಿಲ್ಲ. ಆಕೆ ಮನೆಯಲ್ಲಿ ಇಲ್ಲ ಎಂದು ಹೇಳುತ್ತಿದ್ದ. ನನಗೆ ಅನುಮಾನ ಬಂದಿತ್ತು. ಉದಯ್ ಸಾವಿನ ಬಳಿಕ ಇದುವರೆಗೂ ವಿಶಿತಾ ನಮ್ಮ ಜತೆಗೆ ಸಂಪರ್ಕದಲ್ಲಿಲ್ಲ. ಏನಾಯಿತು ಎಂದು ವಿವರಣೆ ಕೂಡ ನೀಡಿಲ್ಲ. ಇದರಲ್ಲಿ ಅನುಮಾನ ಪಡುವಂಥದ್ದು ಏನೂ ಆಗಿದೆ ಎಂದು ಶ್ರೀದೇವಿ ಹೇಳಿದ್ದರು.

  English summary
  Sushant Singh Rajput's death has created much debate in bollywood and other industries. People remembering the suicide case of popular Telugu actor Uday Kiran.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more
  X