For Quick Alerts
  ALLOW NOTIFICATIONS  
  For Daily Alerts

  ನಟ ಮಹೇಶ್ ಬಾಬು ನಿರಾಕರಿಸಿದ ಬಾಲಿವುಡ್ ಸಿನಿಮಾಗಳೆಷ್ಟು ಗೊತ್ತಾ? ಇಲ್ಲಿದೆ ಪಟ್ಟಿ

  |

  ಟಾಲಿವುಡ್ ಹಾಗೂ ಬಾಲಿವುಡ್‌ ಮಧ್ಯೆ ಸಣ್ಣ ಕೋಲ್ಡ್‌ವಾರ್ ಶುರುವಾಗಿದೆ. ಇತ್ತೀಚೆಗೆ ನಟ ಮಹೇಶ್ ಬಾಬು ಹೇಳಿಕೆಗೆ ಬಾಲಿವುಡ್‌ನ ಹಲವು ಮಂದಿ ಗರಂ ಆಗಿದ್ದರು. ಮತ್ತು ಕೆಲವರು ಬೆಂಬಲವನ್ನು ಸೂಚಿಸಿದ್ದರು. ಆದರೂ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ವಿವಾದವನ್ನೇ ಹುಟ್ಟಿಹಾಕಿದೆ.

  ಇತ್ತೀಚಿಗೆ ಬಾಲಿವುಡ್‌ ನಟ-ನಟಿಯರು ತಿರುಗಿ ನೋಡುವಂತೆ ದಕ್ಷಿಣ ಭಾರತದ ಸಿನಿಮಾಗಳು ಮಾಡಿವೆ. ಇದರಿಂದಾಗಿ ಬಾಲಿವುಡ್‌ನ ಸಿನಿಮಾಗಳೇ ಮಕಾಡೆ ಮಲಗುತ್ತಿವೆ. ಈ ವೇಳೆ ದಕ್ಷಿಣ ಭಾರತದ ಹಲವು ನಟ ನಟಿಯರಿಗೆ ಬಾಲಿವುಡ್ ಸಿನಿಮಾಗಳ ಆಫರ್‌ಗಳು ಬರುತ್ತಿವೆ. ಜೊತೆಗೆ ದಕ್ಷಿಣ ಭಾರತದ ಸಿನಿಮಾಗಳನ್ನು ಬಾಲಿವುಡ್‌ನಲ್ಲಿ ರಿಮೇಕ್ ಕೂಡ ಮಾಡಲಾಗುತ್ತಿದೆ. ಆ ಮಟ್ಟಿಗೆ ದಕ್ಷಿಣ ಭಾರತದ ಹವಾ ಕ್ರಿಯೇಟ್‌ ಆಗಿದೆ.

  'ಸರ್ಕಾರು ವಾರಿ ಪಾಟ' ಮೊದಲ ದಿನದ ಕಲೆಕ್ಷನ್ ಎಷ್ಟು? ಎಲ್ಲೆಲ್ಲಿ ಎಷ್ಟೆಷ್ಟು?'ಸರ್ಕಾರು ವಾರಿ ಪಾಟ' ಮೊದಲ ದಿನದ ಕಲೆಕ್ಷನ್ ಎಷ್ಟು? ಎಲ್ಲೆಲ್ಲಿ ಎಷ್ಟೆಷ್ಟು?

  ಈ ಮಧ್ಯೆ ಮಹೇಶ್ ಬಾಬು "ಬಾಲಿವುಡ್‌ ನನ್ನನ್ನು ಭರಿಸಲು ಸಾಧ್ಯವಿಲ್ಲ" ಎಂಬ ಹೇಳಿಕೆ ಬಾಲಿವುಡ್ ಮಂದಿಯ ಕೆಂಗಣ್ಣಿಗೆ ಗುರಿಯಾಗಿತ್ತು. ಇದು ಭಾರೀ ವಿವಾದವನ್ನೇ ಸೃಷ್ಟಿಸಿತ್ತು. ದಿನೇ ದಿನೆ ಮಹೇಶ್ ಬಾಬು ಹೇಳಿಕೆ ವಿವಾದ ಗೂಡಾಗುತ್ತಿದೆ. ಸದ್ಯ ಮಹೇಶ್‌ ಬಾಬು ಈ ರೀತಿ ಹೇಳಿಕೆ ನೀಡಲು ಕಾರಣವೂ ಇದೆ. ಈ ಹಿಂದೆ ಮಹೇಶ್ ಬಾಬುಗೆ ಸಾಕಷ್ಟು ಬಾಲಿವುಡ್ ಆಫರ್‌ಗಳು ಬಂದಿದ್ದವು. ಅವುಗಳನ್ನು ತಿರಸ್ಕರಿಸಿದ್ದರು. ಹೀಗಾಗಿ ಅದರ ಬಗ್ಗೆ ನೇರವಾಗಿಯೇ ಹೇಳಿಕೆ ನೀಡಿದ್ದರು.

  'ಎನಿಮಲ್' ಸಿನಿಮಾ ಆಫರ್ ತಿರಸ್ಕರಿಸಿದ್ದ ಮಹೇಶ್ ಬಾಬು

  'ಎನಿಮಲ್' ಸಿನಿಮಾ ಆಫರ್ ತಿರಸ್ಕರಿಸಿದ್ದ ಮಹೇಶ್ ಬಾಬು

  ಸಂದೀಪ್‌ ರೆಡ್ಡಿ ವಂಗಾ ನಿರ್ದೇಶಿಸುತ್ತಿರುವ ಚಿತ್ರ 'ಎನಿಮಲ್' ಚಿತ್ರದಲ್ಲಿನ ಪ್ರಮುಖ ಪಾತ್ರವನ್ನು ಮಹೇಶ್‌ ಬಾಬುಗೆ ನೀಡಲಾಗಿತ್ತು. ಆದರೆ ಆ ಪಾತ್ರವು ನನಗೆ ತುಂಬಾ ಭಾರ ಎಂಬ ಕಾರಣ ನೀಡಿ ಮಹೇಶ್ ಬಾಬು ಬಾಲಿವುಡ್ ಸಿನಿಮಾ 'ಎನಿಮಲ್ ಸಿನಿಮಾವನ್ನು ತಿರಸ್ಕರಿಸಿದ್ದರು. ಇದಾದ ಬಳಿಕ ಈ ಚಿತ್ರಕ್ಕೆ ರಣಬೀರ್ ಕಪೂರ್‌ಗೆ ಮಹೇಶ್ ಬಾಬು ನಿರ್ವಹಿಸಬೇಕಿದ್ದ ಪುಮುಖ ಪಾತ್ರವನ್ನು ನೀಡಲಾಯಿತು. ಈಗ ಇದೇ ಪಾತ್ರದಲ್ಲಿ ರಣ್‌ಬೀರ್ ಕಪೂರ್ ನಟಿಸುತ್ತಿದ್ದು, ನಾಯಕಿಯಾಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಳ್ಳಲಿದ್ದಾರೆ. 'ಎನಿಮಲ್' ಸಿನಿಮಾ 2023ರಲ್ಲಿ ಬಿಡುಗಡೆಯಾಗಲಿದೆ.

  ನಟ ಮಹೇಶ್‌ ಬಾಬು ಹೇಳಿಕೆ ಸರಿಯಾಗಿದೆ: ಕಾಂಟ್ರವರ್ಸಿ ಕ್ವೀನ್ ನಟಿ ಕಂಗನಾ!ನಟ ಮಹೇಶ್‌ ಬಾಬು ಹೇಳಿಕೆ ಸರಿಯಾಗಿದೆ: ಕಾಂಟ್ರವರ್ಸಿ ಕ್ವೀನ್ ನಟಿ ಕಂಗನಾ!

   'ಪುಷ್ಪ' ಸಿನಿಮಾ ಆಫರ್‌ ತಿರಸ್ಕರಿಸಿದ್ದ ಪ್ರಿನ್ಸ್‌

  'ಪುಷ್ಪ' ಸಿನಿಮಾ ಆಫರ್‌ ತಿರಸ್ಕರಿಸಿದ್ದ ಪ್ರಿನ್ಸ್‌

  ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯಿಸಿದ 'ಪುಷ್ಪ' ಸಿನಿಮಾ ವಿಶ್ವದಾದ್ಯಂತ ಬಾಕ್ಸಾಫೀಸ್ ಚಿಂದಿ ಮಾಡಿತ್ತು. ಈ ಸಿನಿಮಾದ ಆಫರ್‌ ಕೂಡ ಮೊದಲು ಮಹೇಶ್‌ ಬಾಬುಗೆ ನೀಡಲಾಗಿತ್ತು. ಆದರೆ, ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರಿಂದ ಈ ಸಿನಿಮಾಗೆ ಕಾಲ್‌ಶೀಟ್‌ ನೀಡಲು ಸಾಧ್ಯವಾಗಲಿಲ್ಲ. ಹೀಗಾಗಿ ಈ ಆಫರ್‌ ಕೂಡ ಮಹೇಶ್‌ ಬಾಬು ನಿರಾಕರಿಸಿದ್ದರು.

   ಹಿಟ್ ಮೂವಿಗಳನ್ನೇ ತಿರಸ್ಕರಿಸಿದ್ದ ಮಹೇಶ್ ಬಾಬು

  ಹಿಟ್ ಮೂವಿಗಳನ್ನೇ ತಿರಸ್ಕರಿಸಿದ್ದ ಮಹೇಶ್ ಬಾಬು

  2008 ರ ಬ್ಲಾಕ್ ಬಸ್ಟರ್ ಸಿನಿಮಾ 'ಗಜಿನಿ' ಯಲ್ಲಿ ಸಂಜಯ್ ಸಿಂಘಾನಿಯಾ ಪಾತ್ರದಲ್ಲಿ ಮಹೇಶ್ ಬಾಬು ಕಾಣಿಸಿಕೊಳ್ಳಬೇಕಿತ್ತಂತೆ. ನಿರ್ದೇಶಕ ಎ.ಆರ್ ಮುರುಗಾದಾಸ್, ಮಹೇಶ್ ಬಾಬು ಅವರನ್ನು ಇದೇ ವಿಚಾರವಾಗಿ ಸಂಪರ್ಕಿಸಿದ್ದರು. ಆದರೆ, ಈ ಆಫರ್‌ ಅನ್ನು ಕೂಡ ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ನಿರಾಕರಿಸಿದ್ದರು. ಹೀಗಾಗಿ ಈ ಪಾತ್ರ ಬಾಲಿವುಡ್‌ ನಟ ಆಮಿರ್ ಖಾನ್‌ ಪಾಲಾಯಿತು. ಈ ಸಿನಿಮಾ ಕೂಡ ಸಿನಿ ಪ್ರೇಕ್ಷಕರಿಂದ ಭಾರೀ ಪ್ರಶಂಸೆ ಪಡೆದುಕೊಂಡಿತು.

   ಕರಣ್‌ ಜೋಹರ್‌ ಆಫರ್‌ ತಿರಸ್ಕರಿಸಿದ್ದ ಪ್ರಿನ್ಸ್

  ಕರಣ್‌ ಜೋಹರ್‌ ಆಫರ್‌ ತಿರಸ್ಕರಿಸಿದ್ದ ಪ್ರಿನ್ಸ್

  ಕರಣ್‌ ಜೋಹರ್‌ ಇನ್ನೂ ಹೆಸರಿಡದ ಹಿಂದಿ ಚಿತ್ರದಲ್ಲೂ ಮಹೇಶ್ ಬಾಬುಗೆ ಪ್ರಮುಖ ಪಾತ್ರವನ್ನು ನೀಡಲಾಗಿತ್ತು. ಆದರೆ, ಮಹೇಶ್ ಬಾಬು ಈ ಸಿನಿಮಾದ ಆಫರ್‌ನ್ನು ಸಹ ಸ್ಪಷ್ಟವಾಗಿ ನಿರಾಕರಿಸಿದ್ದರು. ಹೀಗೆ ಬಾಲಿವುಡ್‌ನಿಂದ ಬಂದ ಹಲವು ಸಿನಿಮಾ ಆಫರ್‌ಗಳನ್ನು ಮಹೇಶ್ ಬಾಬು ತಿರಸ್ಕರಿಸಿದ್ದರು. ದೊಡ್ಡ ದೊಡ್ಡ ಸ್ಟಾರ್ ನಿರ್ದೇಶಕರು ಹಾಗೂ ನಿರ್ಮಾಪಕರ ಸಿನಿಮಾಗಳನ್ನೇ ನಟ ಮಹೇಶ್ ಬಾಬು ಒಲ್ಲೆ ಎಂದಿದ್ದಾರೆ. ಹೀಗಾಗಿ ತಮಗೆ "ಬಾಲಿವುಡ್‌ನಿಂದ ಹಲವು ಆಫರ್‌ಗಳು ಬಂದಿದ್ದವು. ಆದರೆ ಬಾಲಿವುಡ್‌ಗೆ ನನ್ನನ್ನು ಭರಿಸುವ ಶಕ್ತಿಯಿಲ್ಲ ಎಂಬ ಹೇಳಿಕೆ ನೀಡಿದ್ದರು. ಅಲ್ಲದೆ ನನಗೆ ತೆಲುಗು ಚಿತ್ರರಂಗದಿಂದ ಸಾಕಷ್ಟು ಹೆಸರು ಸಿಕ್ಕಿದೆ ನನ್ನ ಚಿತ್ರರಂಗ ಬಿಟ್ಟು ಬೇರೆ ಚಿತ್ರರಂಗಕ್ಕೆ ಹೋಗಲ್ಲ." ಎಂದಿದ್ದರು. ಆದರೆ, ಈ ಹೇಳಿಕೆ ಭಾರೀ ವಿವಾದ ಸೃಷ್ಟಿ ಮಾಡಿತ್ತು. ಬಳಿಕ ತಾವು ನೀಡಿದ್ದ ಹೇಳಿಕೆ ಮಹೇಶ್ ಬಾಬು ಸ್ಪಷ್ಟನೆ ನೀಡಿದ್ದರು. ನಾನು ಎಲ್ಲಾ ಭಾಷೆ ಹಾಗೂ ಎಲ್ಲಾ ಚಿತ್ರರಂಗವನ್ನು ಗೌರವಿಸುತ್ತೇನೆ ಎಂದಿದ್ದರು.

  English summary
  4 Bollywood movies that were rejected by Tollywood Actor Mahesh Babu. Here is the details.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  Desktop Bottom Promotion