twitter
    For Quick Alerts
    ALLOW NOTIFICATIONS  
    For Daily Alerts

    ಮಹಿಳಾ ದಿನಾಚರಣೆ ವಿಶೇಷ: ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕಿಯರು!

    |

    ಇತ್ತೀಚಿನ ದಿನಗಳಲ್ಲಿ ಯಾವುದೇ ಕ್ಷೇತ್ರದಲ್ಲಿ ಮಹಿಳೆಯರು ಪುರುಷರಿಗಿಂತ ಕಡಿಮೆಯಿಲ್ಲ. ಜೀವನದ ಪ್ರತಿಯೊಂದು ಅಂಶಗಳಲ್ಲೂ ತಮ್ಮನ್ನು ತಾವು ಸಾಬೀತುಪಡಿಸಿದ್ದಾರೆ ಮತ್ತು ಅವರ ಸಾಧನೆಗಳ ಬಗ್ಗೆ ಜಗತ್ತನ್ನು ಹೆಮ್ಮೆಪಡುವಂತೆ ಮಾಡಿದ್ದಾರೆ.

    ಸ್ಯಾಂಡಲ್‌ವುಡ್‌ನಲ್ಲಿ ಪುರುಷರಿಗಿಂತ ಮಹಿಳೆಯಗೆ ಕಡಿಮೆ ಪ್ರಾಮುಖ್ಯತೆ ಇತ್ತು. ಈಗ ಸಮಯ ಬದಲಾಗಿದೆ. ಸಿನಿ ಇಂಡಸ್ಟ್ರಿಯ ಪ್ರತಿಯೊಂದು ವಿಭಾಗದಲ್ಲೂ ಮಹಿಳೆಯರು ತೊಡಗಿಕೊಂಡಿದ್ದಾರೆ. ಬರವಣಿಗೆ, ನಿರ್ಮಾಣ, ನಿರ್ದೇಶನದಲ್ಲೂ ಯಶಸ್ಸು ಸಾಧಿಸಿದ್ದಾರೆ. ಅಂತಾರಾಷ್ಟ್ರೀಯ ಮಹಿಳೆ ದಿನಾಚರಣೆಯ ಪ್ರಯುಕ್ತ ಕನ್ನಡದ ಖ್ಯಾತ ಮಹಿಳಾ ನಿರ್ದೇಶಕಿಯರ ಬಗ್ಗೆ ಒಂದು ನೋಟ.

    ವಿಶೇಷ: ಮಹಿಳೆಯರು ಯಾವಾಗಲೂ ಸಮಾಜದ ಶಕ್ತಿ

    ಪ್ರೇಮಾ ಕಾರಂತ್

    ಪ್ರೇಮಾ ಕಾರಂತ್

    ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಮೊದಲ ಮಹಿಳಾ ನಿರ್ದೇಶಕಿ ಪ್ರೇಮ ಕಾರಂತ್ ಅವರನ್ನು ಸ್ಮರಿಸಿಕೊಳ್ಳಲೇಬೇಕು. 1983ರಲ್ಲಿ 'ಫಣಿಯಮ್ಮ' ಎಂಬ ಚಿತ್ರವನ್ನು ಮೊದಲ ಬಾರಿಗೆ ನಿರ್ದೇಶಿಸಿದ್ದರು. ಅದಕ್ಕೂ ಮುಂಚೆ ನಾಟಕಗಳನ್ನು ನಿರ್ದೇಶಿಸುತ್ತಿದ್ದರು. ಕಲಾ ನಿರ್ದೇಶಕಿಯಾಗಿ ಕೆಲಸ ಮಾಡ್ತಿದ್ದರು.

    ಕವಿತಾ ಲಂಕೇಶ್

    ಕವಿತಾ ಲಂಕೇಶ್

    ಕನ್ನಡದ ಮತ್ತೊಬ್ಬ ಮಹಿಳಾ ನಿರ್ದೇಶಕಿ ಕವಿತಾ ಲಂಕೇಶ್. 1999ರಲ್ಲಿ 'ದೇವಿರಾ' ಎಂಬ ಚಿತ್ರ ನಿರ್ದೇಶಿಸುವ ಮೂಲಕ ಚಿತ್ರರಂಗ ಪ್ರವೇಶಿಸಿದರು. ಮೊದಲ ಸಿನಿಮಾದಲ್ಲೇ ರಾಜ್ಯ ಪ್ರಶಸ್ತಿ, ರಾಷ್ಟ್ರ ಪ್ರಶಸ್ತಿ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿ ಪಡೆದುಕೊಂಡರು. ನಂತರ ಬಿಂಬಿ, ಅಲೆಮಾರಿ, ಪ್ರೀತಿ ಪ್ರೇಮ ಪ್ರಣಯ, ತನನಂ ತನನಂ, ಅವ್ವ, ಕ್ರೇಜಿಲೋಕ ಅಂತಹ ಸಿನಿಮಾಗಳನ್ನು ನಿರ್ದೇಶಿಸಿದ್ದರು.

    ವಿಜಯಲಕ್ಷ್ಮಿ ಸಿಂಗ್

    ವಿಜಯಲಕ್ಷ್ಮಿ ಸಿಂಗ್

    ಕನ್ನಡದ ಖ್ಯಾತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರ ಸಹೋದರಿ ವಿಜಯಲಕ್ಷ್ಮಿ ಸಿಂಗ್. ನಟಿಯಾಗಿ ಸಿನಿಪ್ರಪಂಚ ಪ್ರವೇಶಿಸಿದ ವಿಜಯಲಕ್ಷ್ಮಿ ಸಿಂಗ್ ನಂತರ ನಿರ್ದೇಶನದಲ್ಲೂ ಸೈ ಎನಿಸಿಕೊಂಡರು. ವಿಷ್ಣುವರ್ಧನ್ ನಟನೆಯ 'ಈ ಬಂಧನ' ಚಿತ್ರ ಹಾಗೂ ''ಸ್ವೀಟಿ ನನ್ನ ಜೋಡಿ'' ಚಿತ್ರಗಳಿಗೆ ವಿಜಯಲಕ್ಷ್ಮಿ ಸಿಂಗ್ ನಿರ್ದೇಶಕಿಯಾಗಿದ್ದರು.

    ಸುಮನಾ ಕಿತ್ತೂರ್

    ಸುಮನಾ ಕಿತ್ತೂರ್

    'ಆ ದಿನಗಳು' ಚಿತ್ರ ನಿರ್ದೇಶಿಸುವ ಮೂಲಕ ಕನ್ನಡ ಇಂಡಸ್ಟ್ರಿಯಲ್ಲಿ ಹೊಸ ಅಧ್ಯಾಯ ಬರೆದ ನಿರ್ದೇಶಕಿ ಸುಮನಾ ಕಿತ್ತೂರ್. ನಂತರ ಸ್ಲಂ ಬಾಲ, ಎದೆಗಾರಿಕೆ, ಕಿರಗೂರಿನ ಗಯ್ಯಾಳಿಗಳು ಅಂತಹ ಹಿಟ್ ಚಿತ್ರಗಳಿಗೆ ಸುಮನಾ ಕಿತ್ತೂರ್ ಆಕ್ಷನ್ ಕಟ್ ಹೇಳಿದ್ದರು.

    ರೂಪಾ ಅಯ್ಯರ್

    ರೂಪಾ ಅಯ್ಯರ್

    ನಟಿ, ನೃತ್ಯ ಸಂಯೋಜಕಿ, ಮಾಡೆಲ್ ಹಾಗೂ ನಿರ್ದೇಶನದಲ್ಲೂ ರೂಪಾ ಅಯ್ಯರ್ ಗಮನ ಸೆಳೆದಿದ್ದಾರೆ. 2013ರಲ್ಲಿ ತೆರೆಕಂಡ 'ಚಂದ್ರ' ಚಿತ್ರವನ್ನು ರೂಪಾ ಅಯ್ಯರ್ ನಿರ್ದೇಶಿಸಿದ್ದರು. 'ದಿ ಕವರ್ ಪೇಜ್' ಎಂಬ ಸಿನಿಮಾ ಸಹ ರೂಪಾ ಅಯ್ಯರ್ ಡೈರೆಕ್ಟ್ ಮಾಡಿದ್ದಾರೆ.

    ಪ್ರಿಯಾ ಬೆಳ್ಳಿಯಪ್ಪ

    ಪ್ರಿಯಾ ಬೆಳ್ಳಿಯಪ್ಪ

    ಕನ್ನಡ ಚಿತ್ರರಂಗದ ಪ್ರಮುಖ ನಿರ್ದೇಶಕಿಯರ ಪೈಕಿ ಪ್ರಿಯಾ ಬೆಳ್ಳಿಯಪ್ಪ ಸಹ ಒಬ್ಬರು. 2015ರಲ್ಲಿ ತೆರೆಕಂಡ 'ರಿಂಗ್ ರೋಡ್' ಚಿತ್ರವನ್ನು ಇವರು ನಿರ್ದೇಶಿಸಿದ್ದಾರೆ.

    ರೂಪಾ ರಾವ್

    ರೂಪಾ ರಾವ್

    ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಮಹಿಳೆ ನಿರ್ದೇಶಕಿ ರೂಪಾ ರಾವ್. 2019 ರಲ್ಲಿ ತೆರೆಕಂಡ 'ಗಂಟುಮೂಟೆ' ಚಿತ್ರವನ್ನು ನಿರ್ದೇಶನ ಮತ್ತು ನಿರ್ಮಾಣ ಮಾಡಿದ್ದಾರೆ.

    English summary
    International women's day 2021: here is the top female directors of the kannada film industry.
    Monday, March 8, 2021, 19:16
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X