Don't Miss!
- News
ಸಿದ್ದರಾಮೋತ್ಸವಕ್ಕೆ ಹಣ, ಹೆಂಡ ನೀಡಿ ಜನ ಸೇರಿಸಿದ್ದಾರೆ: ಮಂಗಳೂರಿನಲ್ಲಿ ಕಟೀಲ್ ಕಿಡಿ!
- Automobiles
ಎಡಿಎಎಸ್ ಸೌಲಭ್ಯ ಹೊಂದಿರುವ ಹೊಸ ಹ್ಯುಂಡೈ ಟ್ಯೂಸಾನ್ ಎಸ್ಯುವಿ ಭಾರತದಲ್ಲಿ ಬಿಡುಗಡೆ
- Finance
ರಕ್ಷಾ ಬಂಧನ 2022: ಸಹೋದರಿಗೆ ಚಿನ್ನ ಉಡುಗೊರೆ ನೀಡುವುದು ಉತ್ತಮವೇ?
- Sports
ಆತನ ಅಲಭ್ಯತೆ ಏಷ್ಯಾಕಪ್ನಲ್ಲಿ ಭಾರತಕ್ಕೆ ದೊಡ್ಡ ಪೆಟ್ಟು ಎಂದ ಪಾಕ್ ಮಾಜಿ ಕ್ರಿಕೆಟಿಗ!
- Technology
ಕೈ ಗೆಟಕುವ ಬೆಲೆಯ ಈ ಗ್ಯಾಜೆಟ್ಸ್ಗಳನ್ನು ರಕ್ಷಾ ಬಂಧನಕ್ಕೆ ಗಿಫ್ಟ್ ಆಗಿ ನೀಡಬಹುದು!
- Lifestyle
ಮಂಕಿಪಾಕ್ಸ್: ಗುಣಮುಖರಾಗಿ ವಾರ ಕಳೆದರೂ ವೀರ್ಯದಲ್ಲಿರುತ್ತೆ ಮಂಕಿವೈರಸ್!
- Travel
ಭಾರತದಲ್ಲಿಯ 10 ಪ್ರಸಿದ್ದ ಹನುಮಂತ ದೇವರ ದೇವಾಲಯಗಳು
- Education
CAT 2022 Preparation Tips : ಕ್ಯಾಟ್ ಪರೀಕ್ಷೆಗೆ ಸಿದ್ಧತೆ ನಡೆಸಲು ಸಲಹೆಗಳು ಇಲ್ಲಿವೆ
ಈ ವರ್ಷ ಅತಿ ಹೆಚ್ಚು ಲಾಭ ಮಾಡಿದ ಸಿನಿಮಾ ಯಾವುದು? 'RRR', 'ಕೆಜಿಎಫ್ 2' ಅಲ್ಲ!
ಈ ವರ್ಷ ಬಾಕ್ಸ್ ಆಫೀಸ್ ಅನ್ನು ಕೊಳ್ಳೆ ಹೊಡೆದ ಸಿನಿಮಾಗಳ್ಯಾವುವು ಎಂದರೆ 'ಕೆಜಿಎಫ್ 2', 'RRR', 'ಪುಷ್ಪ', 'ವಿಕ್ರಂ', 'ಭೂಲ್ ಭುಲಯ್ಯ 2', 'ಗಂಗೂಬಾಯಿ ಕಾಠಿಯಾವಾಡಿ' ಹೀಗೆ ಪಟ್ಟಿ ನೀಡುತ್ತಾರೆ. ಇದು ನಿಜವೂ ಹೌದು. ಆದರೆ ಅತಿ ಹೆಚ್ಚು ಲಾಭ ಮಾಡಿದ ಭಾರತೀಯ ಸಿನಿಮಾ ಯಾವುದೆಂದರೆ? ಮೇಲಿನ ಯಾವ ಸಿನಿಮಾ ಸಹ ಅಲ್ಲ!
ಹೌದು, 'RRR', 'ಪುಷ್ಪ' ಸಿನಿಮಾಗಳು ಸಾವಿರಾರು ಕೋಟಿ ರುಪಾಯಿ ಹಣವನ್ನು ಗಳಿಸಿರಬಹುದು ಆದರೆ ಅತಿ ಹೆಚ್ಚು ಲಾಭ ಮಾಡಿದ ಸಿನಿಮಾ ಖಂಡಿತ ಇವಲ್ಲ. ಈ ಎರಡು ಸಿನಿಮಾಗಳು ಮಾತ್ರವಲ್ಲ, ಬಾಕ್ಸ್ ಆಫೀಸ್ ದೋಚಿದ ಸಿನಿಮಾಗಳ ಪಟ್ಟಿಯಲ್ಲಿರುವ 'ವಿಕ್ರಂ', 'ಪುಷ್ಪ', 'ಭೂಲ್ ಭುಲಯ್ಯ 2' ಸಾವಿರಾರು ಕೋಟಿ ಕಲೆಕ್ಷನ್ ಮಾಡಿದ 'RRR' ಸಿನಿಮಾ ಸಹ ಈ ಪಟ್ಟಿಯಲ್ಲಿಲ್ಲ.
2022
ರಲ್ಲಿ
ಅತಿ
ಹೆಚ್ಚು
ಹಣ
ಗಳಿಸಿದ
ಟಾಪ್
ಹತ್ತು
ಸಿನಿಮಾಗಳಿವು
ಲೆಕ್ಕಾಚಾರ ಸರಳ, ಹಲವು ಸಿನಿಮಾಗಳು ಈ ವರ್ಷ ನೂರು ಕೋಟಿ ಕ್ಲಬ್ ದಾಟಿವೆ. 'RRR', 'ಕೆಜಿಎಫ್ 2' ಸಿನಿಮಾಗಳು ಸಾವಿರ ಕೋಟಿಗೂ ಹೆಚ್ಚು ಗಳಿಕೆ ಮಾಡಿವೆ. ಆದರೆ ಈ ಮೊತ್ತ ಸಿನಿಮಾದ ಒಟ್ಟು ಗಳಿಕೆಯಷ್ಟೆ. ಸಿನಿಮಾದ ಲಾಭವಲ್ಲ. ಸಿನಿಮಾಕ್ಕೆ ಹಾಕಿರುವ ಬಂಡವಾಳವನ್ನು ಗಳಿಕೆಯಾದ ಹಣದಿಂದ ತೆಗೆದರೆ ಉಳಿಯುವುದೆಷ್ಟು ಎಂಬುದು ಲಾಭ ಎನಿಸಿಕೊಳ್ಳುತ್ತದೆ. ಅಥವಾ ಹಾಕಿರುವ ಬಂಡವಾಳಕ್ಕಿಂತಲೂ ಎಷ್ಟು ಪಟ್ಟು ಹೆಚ್ಚು ಹಣ ಗಳಿಕೆ ಮಾಡಿದೆ ಎಂಬುದು ಆ ಸಿನಿಮಾದ ಹೆಚ್ಚುಗಾರಿಕೆಯನ್ನು ತೋರುತ್ತದೆ. ಈ ಲೆಕ್ಕಾಚಾರದ ಪ್ರಕಾರ ಈ ವರ್ಷ ಅತಿ ಹೆಚ್ಚು ಲಾಭ ಗಳಿಸಿದ ಭಾರತೀಯ ಸಿನಿಮಾಗಳ ಟಾಪ್ 5 ಪಟ್ಟಿ ಇಲ್ಲಿದೆ ನೋಡಿ. ಅಂದಹಾಗೆ ಈ ಪಟ್ಟಿಯಲ್ಲಿ ಎರಡು ಕನ್ನಡ ಸಿನಿಮಾಗಳಿರುವುದು ನಮ್ಮ ಹೆಮ್ಮೆ.

ಐದನೇ ಸ್ಥಾನದಲ್ಲಿ ಗುಜರಾತಿ ಸಿನಿಮಾ
ಅತಿ ಹೆಚ್ಚು ಲಾಭ ಗಳಿಸಿದ ಸಿನಿಮಾಗಳ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ ಗುಜರಾತಿ ಸಿನಿಮಾ 'ಕೇವಟ್ ಲಾಲ್ ಪರಿವಾರ್' ಇದೆ. ಹಾಸ್ಯಮಯ ಕೌಟುಂಬಿಕ ಸಿನಿಮಾ ಆಗಿರುವ ಇದರ ಬಜೆಟ್ ಕೇವಲ 3 ರಿಂದ ನಾಲ್ಕು ಕೋಟಿಯಷ್ಟೆ ಆದರೆ ಗಳಿಸಿದ್ದು 20 ಕೋಟಿ. ಅಲ್ಲಿಗೆ ಈ ಸಿನಿಮಾದ ಲಾಭ 500% ಗೂ ಹೆಚ್ಚು. ಗುಜರಾತಿನ ಈ ಸಣ್ಣ ಸಿನಿಮಾ, ಬಾಲಿವುಡ್‌ನ ದೊಡ್ಡ ದೊಡ್ಡ ಸಿನಿಮಾಗಳನ್ನು ಲಾಭಾಂಶದ ವಿಚಾರದಲ್ಲಿ ಹಿಂದಿಕ್ಕಿಬಿಟ್ಟಿದೆ.
ಆರು
ತಿಂಗಳಲ್ಲಿ
ಭಾರತೀಯ
ಚಿತ್ರರಂಗ
ಗಳಿಸಿದ್ದೆಷ್ಟು
ಸಾವಿರ
ಕೋಟಿ?
ಯಾವ
ಭಾಷೆಯದ್ದು
ಹೆಚ್ಚು
ಪಾಲು?

ನಾಲ್ಕನೇ ಸ್ಥಾನದಲ್ಲಿ ಕನ್ನಡದ ಸಿನಿಮಾ
ನಾಲ್ಕನೇ ಸ್ಥಾನದಲ್ಲಿ ಕನ್ನಡದ ಸಿನಿಮಾ '777 ಚಾರ್ಲಿ' ಇದೆ. ರಕ್ಷಿತ್ ಶೆಟ್ಟಿ ನಟಿಸಿ, ನಿರ್ಮಾಣ ಮಾಡಿದ್ದ ಈ ಸಿನಿಮಾದ ಬಜೆಟ್ 20 ಕೋಟಿ ಅಷ್ಟೆ ಆದರೆ ಗಳಿಸಿದ್ದು 100 ಕೋಟಿಗೂ ಹೆಚ್ಚು. ಅಲ್ಲಿಗೆ ಈ ಸಿನಿಮಾದ ಒಟ್ಟು ಲಾಭ 520% ಹೆಚ್ಚು. ಅತ್ಯಂತ ಕಡಿಮೆ ಬಜೆಟ್ ಹೂಡಿದ್ದರೂ ದೊಡ್ಡ ಮೊತ್ತದ ಲಾಭವನ್ನು ಈ ಸಿನಿಮಾ ಮಾಡಿತು. ಹಾಗಾಗಿ ಈ ಸಿನಿಮಾ ಅತಿ ಹೆಚ್ಚು ಲಾಭ ಗಳಿಸಿದ ಸಿನಿಮಾಗಳ ಪಟ್ಟಿಯಲ್ಲಿದೆ. ರಕ್ಷಿತ್ ಶೆಟ್ಟಿ ತಾವೊಬ್ಬ ಒಳ್ಳೆಯ ನಿರ್ದೇಶಕ, ನಟ ಎನಿಸಿಕೊಳ್ಳುವ ಜೊತೆಗೆ ಬುದ್ಧಿವಂತ ನಿರ್ಮಾಪಕ ಎಂಬುದನ್ನು ಸಹ ಈ ಸಿನಿಮಾದ ಮೂಲಕ ಸಾಬೀತು ಮಾಡಿದರು.

ಮೂರನೇ ಸ್ಥಾನದಲ್ಲಿ ಮಲಯಾಳಂ ಸಿನಿಮಾ
ಮೂರನೇ ಸ್ಥಾನದಲ್ಲಿ ಸಣ್ಣ ಮಲಯಾಳಂ ಸಿನಿಮಾ ಇದೆ. ಮೋಹನ್‌ಲಾಲ್ ಪುತ್ರ ನಾಯಕನಾಗಿ ನಟಿಸಿರುವ 'ಹೃದಯಂ' ಸಿನಿಮಾ ಅತ್ಯಂತ ಕಡಿಮೆ ಬಜೆಟ್‌ನಲ್ಲಿ ನಿರ್ಮಾಣಗೊಂಡಿತ್ತು. ಈ ಸಿನಿಮಾದ ಬಜೆಟ್ ಕೇವಲ 7 ಕೋಟಿ ಆದರೆ ಈ ಸಿನಿಮಾ ಗಳಿಸಿದ್ದು 54 ಕೋಟಿ. ಅಲ್ಲಿಗೆ ಬಂಡವಾಳದ ಮೇಲೆ ಬಂದ ಲಾಭ 770%. ಗಳಿಕೆ ಕೇವಲ 54 ಕೋಟಿಯಾದರೂ 100 ಕೋಟಿಗೂ ಹೆಚ್ಚು ಗಳಿಸಿದ ಸಿನಿಮಾ '777 ಚಾರ್ಲಿ'ಗಿಂತಲೂ ಮೇಲೆ ಮೂರನೇ ಸ್ಥಾನದಲ್ಲಿದೆ.

ನಂಬರ್ 2 ಸ್ಥಾನದಲ್ಲಿ 'ಕೆಜಿಎಫ್ 2'
ಈ ವರ್ಷ ಭಾರತೀಯ ಸಿನಿಮಾ ರಂಗದಲ್ಲಿ ಉದಯಿಸಿದ ಹಲವು ದಾಖಲೆಗಳಲ್ಲಿ 'ಕೆಜಿಎಫ್ 2' ಹೆಸರು ಇದ್ದೇ ಇದೆ. ಅಂತೆಯೇ ಅತಿ ಹೆಚ್ಚು ಲಾಭ ಮಾಡಿದ ಸಿನಿಮಾಗಳ ಪಟ್ಟಿಯಲ್ಲಿಯೂ 'ಕೆಜಿಎಫ್ 2' ಇದೆ. 100 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾದ 'ಕೆಜಿಎಫ್ 2' ಸಿನಿಮಾ. ಬಾಕ್ಸ್ ಆಫೀಸ್‌ನಲ್ಲಿ ಗಳಿಸಿದ್ದು ಬರೋಬ್ಬರಿ 1250 ಕೋಟಿ. ಅಲ್ಲಿಗೆ ಈ ಸಿನಿಮಾದ ಲಾಭಾಂಶ 1250% ಆಗಿದೆ. ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಹಾಗೂ ಹೆಚ್ಚು ಲಾಭ ಗಳಿಸಿದ ಸಿನಿಮಾ ಎರಡೂ ಪಟ್ಟಿಯಲ್ಲಿ ಸ್ಥಾನಪಡೆದಿದೆ 'ಕೆಜಿಎಫ್ 2'.

ಮೊದಲ ಸ್ಥಾನದಲ್ಲಿ 'ದಿ ಕಾಶ್ಮೀರ್ ಫೈಲ್ಸ್'
ಮೊದಲ ಸ್ಥಾನದಲ್ಲಿ ಅಚ್ಚರಿಯ ರೀತಿಯಲ್ಲಿ 'ದಿ ಕಾಶ್ಮೀರ್ ಫೈಲ್ಸ್' ಹಿಂದಿ ಸಿನಿಮಾ ಇದೆ. ಕೇವಲ 20 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾದ ಈ ಸಿನಿಮಾದ ಒಟ್ಟು ಗಳಿಕೆ 340 ಕೋಟಿ. ಅಲ್ಲಿಗೆ ಬಂಡವಾಳದ ಆಧಾರದ ಮೇಲೆ ಈ ಸಿನಿಮಾ ಮಾಡಿರುವ ಲಾಭ 1700% ಆಗುತ್ತದೆ. ಭಾರತದ ಇನ್ಯಾವ ಸಿನಿಮಾ ಸಹ ಇಷ್ಟು ದೊಡ್ಡ ಪ್ರಮಾಣದ ಲಾಭವನ್ನು ಮಾಡಿಲ್ಲ. ಸ್ವತಃ ಮೋದಿಯವರೇ ಈ ಸಿನಿಮಾಕ್ಕೆ ಪರೋಕ್ಷ ಪ್ರಚಾರ ಮಾಡಿದ್ದರು, ಹಾಗೂ ಬಿಜೆಪಿ, ಆರ್‌ಎಸ್‌ಎಸ್‌ನ ಕೃಪೆಯೂ ಇದ್ದ ಕಾರಣ ಸಿನಿಮಾ ದೊಡ್ಡ ಹಿಟ್ ಆಯಿತು. ಒಟ್ಟಾರೆಯಾಗಿ ಹೇಳುವುದಾದರೆ 1000 ಕೋಟಿ ಬಂಡವಾಳ ತೊಡಗಿಸಿ 1100 ಕೋಟಿ ಮಾಡುವುದು ಹೆಚ್ಚುಗಾರಿಕೆ ಅಲ್ಲ. ಕೇವಲ 10 ಕೋಟಿ ಹಾಕಿ ನೂರು ಕೋಟಿ ಮಾಡುವುದು ನಿಜವಾದ ಬ್ಲಾಕ್ ಬಸ್ಟರ್ ಹಿಟ್. ಇಂಥಹಾ ಬ್ಲಾಕ್ ಬಸ್ಟರ್ ಸಿನಿಮಾಗಳ ಪಟ್ಟಿಯೇ ಇದು.