Don't Miss!
- Technology
ಇನ್ಮುಂದೆ ನಿಮ್ಮ ಕೆಮ್ಮು ಮತ್ತು ಗೊರಕೆಗಳನ್ನು ಕೂಡ ಟ್ರ್ಯಾಕ್ ಮಾಡಲು ಗೂಗಲ್ ಪ್ಲಾನ್!
- Automobiles
ಭಾರತದಲ್ಲಿ ಬಿಡುಗಡೆಗೆ ಸಿದ್ದವಾಗಿರುವ ಬಹುನೀರಿಕ್ಷಿತ ಕಾರು ಮಾದರಿಗಳಿವು!
- Sports
RCB vs RR: ಕ್ವಾಲಿಫೈಯರ್ ಪಂದ್ಯದಲ್ಲಿ ಆರ್ಸಿಬಿ ಹೀನಾಯ ಸೋಲಿಗೆ ಈ 6 ಆಟಗಾರರೇ ಕಾರಣ!
- News
ಪಂಕ್ಚರ್ ಅಂಗಡಿ ಅನಕ್ಷರಸ್ಥನಿಂದ ವರ್ಷಕ್ಕೆ 7 ಕೋಟಿ ಸಂಪಾದನೆ
- Lifestyle
Today Rashi Bhavishya: ಶನಿವಾರದ ದಿನ ಭವಿಷ್ಯ: ಈ ರಾಶಿಯ ವ್ಯಾಪಾರಿಗಳಿಗೆ ಅದೃಷ್ಟದ ದಿನ
- Finance
ಕಾರು, ಬೈಕು ಖರೀದಿಗೆ ಮುನ್ನ ಗಮನಿಸಿ, ಜೂನ್ 1ರಿಂದ ವಿಮೆ ಮೊತ್ತ ಏರಿಕೆ
- Education
KCET 2022 Syllabus : 2022ರ ಸಿಇಟಿ ಪರೀಕ್ಷೆಯ ಪಠ್ಯಕ್ರಮ ರಿಲೀಸ್
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ವಿಶ್ವದ ಅತಿ ಹೆಚ್ಚು ಬಜೆಟ್‌ನ ಟಾಪ್ ಐದು ಸಿನಿಮಾಗಳ್ಯಾವುವು? ಹೂಡಲಾದ ಬಜೆಟ್ ಎಷ್ಟು?
ಈಗೆಲ್ಲ ದೊಡ್ಡ ಬಜೆಟ್ ಸಿನಿಮಾಗಳದ್ದೇ ಕಾರು-ಬಾರು. ಸಿನಿಮಾ ಮೇಲೆ ನೂರು ಕೋಟಿ ಬಜೆಟ್ ಹೂಡುವುದು ಬಾಲಿವುಡ್‌ನ ಕೆಲವು ನಿರ್ಮಾಣ ಸಂಸ್ಥೆಗಳಿಗಷ್ಟೆ ಸಾಧ್ಯವಾಗಿತ್ತು, ಆದರೆ ಈಗ ನೂರು ಕೋಟಿ ಬಜೆಟ್ ಎನ್ನುವುದು ಸಾಮಾನ್ಯದರಲ್ಲಿ ಅತಿ ಸಾಮಾನ್ಯ.
ಭಾರತದಲ್ಲಿ ಅಂತೂ ಪೈಪೋಟಿಯ ಮೇಲೆ ದೊಡ್ಡ ಬಜೆಟ್‌ನ ಸಿನಿಮಾಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಬಾಲಿವುಡ್ ಮೇಲೆ ಪೈಪೋಟಿಗೆ ಬಿದ್ದಿರುವ ದಕ್ಷಿಣ ಭಾರತ ಚಿತ್ರರಂಗದವರಂತೂ ಒಂದರ ಹಿಂದೊಂದರಂತೆ ಬಹುಕೋಟಿ ಬಜೆಟ್‌ನ ಸಿನಿಮಾಗಳನ್ನು ತೆರೆಗೆ ತರುತ್ತಿದ್ದಾರೆ.
ಪ್ರಭಾಸ್ ನಟಿಸುತ್ತಿರುವ 'ಆದಿಪುರುಷ್' ಸಿನಿಮಾ ಭಾರತದ ಅತಿ ದೊಡ್ಡ ಬಜೆಟ್ ಸಿನಿಮಾ ಆಗಿರಲಿದೆ ಎನ್ನಲಾಗುತ್ತಿದೆ. ದೊಡ್ಡ ಬಜೆಟ್‌ನ ಸಿನಿಮಾಗಳನ್ನು ಮಾಡುವಲ್ಲಿ ವಿಶ್ವಮಟ್ಟದಲ್ಲಿ ಭಾರತದ ಸ್ಥಾನ ಎಲ್ಲಿದೆ. ಅತಿ ಹೆಚ್ಚು ಬಜೆಟ್‌ನ ವಿಶ್ವದ ಐದು ಸಿನಿಮಾಗಳ್ಯಾವುವು ಇಲ್ಲಿದೆ ಪಟ್ಟಿ.

ಐದನೇ ಸ್ಥಾನದಲ್ಲಿವೆ ಎರಡು ಸಿನಿಮಾಗಳು
ಅತಿ ಹೆಚ್ಚು ಬಜೆಟ್‌ನ ಟಾಪ್ ಐದರ ಪಟ್ಟಿಯಲ್ಲಿ ಎರಡು ಸಿನಿಮಾಗಳಿವೆ. 2017 ರಲ್ಲಿ ಬಿಡುಗಡೆ ಆದ 'ಜಸ್ಟಿಸ್ ಲೀಗ್' ಹಾಗೂ 2007 ರಲ್ಲಿ ಬಿಡುಗಡೆ ಆದ 'ಪೈರೇಟ್ಸ್ ಆಫ್ ದಿ ಕೆರೆಬಿಯನ್; ಅಟ್ ದಿ ವರ್ಲ್ಡ್ ಎಂಡ್' ಎರಡೂ ಸಿನಿಮಾಕ್ಕೆ 2322 ಕೋಟಿ ರುಪಾಯಿಗೂ ಹೆಚ್ಚು ಬಜೆಟ್ ಹೂಡಲಾಗಿತ್ತು.

ನಾಲ್ಕನೇ ಸ್ಥಾನದಲ್ಲಿ 'ಅವೇಂಜರ್ಸ್'
ನಾಲ್ಕನೇ ಸ್ಥಾನದಲ್ಲಿ ಮಾರ್ವೆಲ್‌ನ 'ಅವೇಂಜರ್ಸ್; ಇನ್‌ಫಿನಿಟಿ ವಾರ್' ಸಿನಿಮಾಕ್ಕೆ 2517 ಕೋಟಿ ಬಂಡವಾಳ ಹೂಡಲಾಗಿದೆ. 2018 ರಲ್ಲಿ ಬಿಡುಗಡೆ ಆದ ಈ ಸಿನಿಮಾದಲ್ಲಿ ಹಲವು ದೊಡ್ಡ ಸ್ಟಾರ್‌ಗಳು ಒಟ್ಟಿಗೆ ನಟಿಸಿದ್ದರು. ಭಾರಿ ಪ್ರಮಾಣದ ಸಿಜಿಐ, ಗ್ರಾಫಿಕ್ಸ್‌ಗಳನ್ನು ಬಳಸಲಾಗಿತ್ತು. ಸಿನಿಮಾ ಕಲೆಕ್ಷನ್ ಸಹ ಅದ್ಭುತವಾಗಿಯೇ ಆಗಿತ್ತು.

ಮೂರನೇ ಸ್ಥಾನದಲ್ಲಿ ಮತ್ತೆ 'ಅವೇಂಜರ್ಸ್'
ಮೂರನೇ ಸ್ಥಾನದಲ್ಲಿ ಮತ್ತೆ 'ಅವೇಂಜರ್ಸ್' ಸರಣಿಯ ಸಿನಿಮಾನೇ ಇದೆ. ಮಾರ್ವೆಲ್ ಸಂಸ್ಥೆಯು ಭಾರಿ ದೊಡ್ಡ ಬಜೆಟ್‌ನ ಸಿನಿಮಾಗಳನ್ನು ಮಾಡುವುದಕ್ಕೆ ಹೆಸರುವಾಸಿ. ವಿಶ್ವದ ಮೂರನೇ ಅತಿ ದೊಡ್ಡ ಬಜೆಟ್‌ನ ಸಿನಿಮಾ ಮಾರ್ವೆಲ್‌ನ 'ಅವೇಂಜರ್ಸ್: ಎಂಡ್ ಗೇಮ್' ಈ ಸಿನಿಮಾದಲ್ಲಿಯೂ ಭಾರಿ ದೊಡ್ಡ ತಾರಾಗಣ ಹಾಗೂ ಗ್ರಾಫಿಕ್ಸ್ ಬಳಸಲಾಗಿತ್ತು. 2019 ರಲ್ಲಿ ಬಿಡುಗಡೆ ಆದ ಈ ಸಿನಿಮಾಕ್ಕೆ ಬರೊಬ್ಬರಿ 2754 ಕೋಟಿ ರುಪಾಯಿ ಖರ್ಚು ಮಾಡಲಾಗಿದೆ.

ಎರಡನೇ ಸ್ಥಾನದಲ್ಲೂ 'ಅವೇಂಜರ್ಸ್'
'ಅವೇಂಜರ್ಸ್' ಸಿನಿಮಾ ಸರಣಿ ವಿಶ್ವದ ದೊಡ್ಡ ಬಜೆಟ್‌ನ ಹಾಗೂ ಅತಿ ಜನಪ್ರಿಯ ಸಿನಿಮಾ ಸರಣಿ. ಈ ಸರಣಿಯ 'ಏಜ್ ಆಫ್ ಅಲ್ಟ್ರಾನ್' ಸಿನಿಮಾ ವಿಶ್ವದ ಎರಡನೇ ಅತಿ ದೊಡ್ಡ ಬಜೆಟ್‌ನ ಸಿನಿಮಾ. ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹೆಚ್ಚೇನು ಗಳಿಸಲಿಲ್ಲ, ಸಿನಿಮಾದ ಬಗ್ಗೆ ಅಷ್ಟೊಳ್ಳೆ ಮಾತುಗಳು ಸಹ ಕೇಳಿ ಬರಲಿಲ್ಲ. ಆದರೆ ಈ ಸಿನಿಮಾಕ್ಕೆ ಖರ್ಚು ಮಾಡಿದ್ದು 2824 ಕೋಟಿ ರುಪಾಯಿ.

ಮೊದಲ ಸ್ಥಾನದಲ್ಲಿ ಯಾವ ಸಿನಿಮಾ
ಮೊದಲ ಸ್ಥಾನದಲ್ಲಿ ಇರುವ ದೊಡ್ಡ ಬಜೆಟ್‌ನ ಸಿನಿಮಾ 2011 ರಲ್ಲಿಯೇ ಬಿಡುಗಡೆ ಆದ 'ಪೈರೆಟ್ಸ್ ಆಫ್ ಕೆರೆಬಿಯನ್; ಆನ್ ಸ್ಟ್ರೇಂಜರ್ಸ್ ಟೈಡ್' ಸಿನಿಮಾ. ಜಾನಿ ಡೆಪ್ ನಟಿಸಿರುವ ಈ ಸಿನಿಮಾದಲ್ಲಿ ಅದ್ಭುತ ಲೊಕೇಶನ್, ಸಿಜಿಐ, ಗ್ರಾಫಿಕ್ಸ್ ಅತ್ಯದ್ಭುತ ಆಕ್ಷನ್ ದೃಶ್ಯಗಳೆಲ್ಲವೂ ಇವೆ. ಈ ಸಿನಿಮಾಕ್ಕೆ 2011 ರಲ್ಲಿಯೇ ಸುಮಾರು 3000 ಕೋಟಿ ರುಪಾಯಿ ಖರ್ಚು ಮಾಡಲಾಗಿತ್ತು. ಹಣದುಬ್ಬರದ ಲೆಕ್ಕಾಚಾರ ತೆಗೆದುಕೊಂಡರೆ ಪ್ರಸ್ತುತ ಸಮಯದಲ್ಲಿ ಈ ಸಿನಿಮಾದ ಒಟ್ಟು ಬಂಡವಾಳ 6000 ಕೋಟಿಗಳಾಗುತ್ತವೆ.