Don't Miss!
- News
ಫೆಬ್ರವರಿ 2023ರ ಮಾಸಭವಿಷ್ಯ: ಸಂಕ್ರಮಣದ ನಂತರದ ಫೆಬ್ರವರಿ ತಿಂಗಳಿನಲ್ಲಿ ಯಾವೆಲ್ಲ ರಾಶಿಗಳಿಗೆ ಶುಭವಾಗಲಿದೆ?
- Sports
ಆಕ್ಯುಪ್ರೆಶರ್ ಚಿಕಿತ್ಸೆ ಪಡೆಯುತ್ತಿರುವ ಚಿತ್ರವನ್ನು ಹಂಚಿಕೊಂಡ ಶ್ರೇಯಸ್ ಅಯ್ಯರ್
- Technology
ಅತಿ ಕಡಿಮೆ ಬೆಲೆಯಲ್ಲಿ ಹೊಸ ಸ್ಮಾರ್ಟ್ವಾಚ್ ಪರಿಚಯಿಸಿದ ಫೈರ್ಬೋಲ್ಟ್ !
- Lifestyle
ನಿಮ್ಮ ಗಂಡ 'ಅಮ್ಮನ ಮಗ'ವಾಗಿರುವುದರಿಂದ ತುಂಬಾನೇ ಸಮಸ್ಯೆ ಆಗುತ್ತಿದೆಯೇ?
- Finance
ಆಧಾರ್ ಕಾರ್ಡ್ ಸುರಕ್ಷತೆಗಾಗಿ ಯುಐಡಿಎಐ ನೂತನ ನಿಯಮ ತಿಳಿಯಿರಿ!
- Automobiles
ಕೈಗೆಟುಕುವ ಬೆಲೆಯಲ್ಲಿ ಮತ್ತೊಂದು ಎಸ್ಯುವಿ ಬಿಡುಗಡೆಗೊಳಿಸಲು ಸಜ್ಜಾದ ಮಾರುತಿ ಸುಜುಕಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ರಾಜಕೀಯ ಆಧಾರಿತ ಟಾಪ್ ಕನ್ನಡದ ಸಿನಿಮಾಗಳ ಪಟ್ಟಿ, ನಿಮಗೆ ಯಾವುದಿಷ್ಟ?
ರಾಜಕೀಯ ಸುತ್ತ ಕಥೆ ಆಧರಿಸಿ ಸಿನಿಮಾ ಮಾಡುವುದು ಪರಭಾಷೆಗಳಲ್ಲಿ ಟ್ರೆಂಡ್ ಆಗಿದೆ. ಇತ್ತೀಚಿನ ವರ್ಷಗಳಲ್ಲಿ ಸ್ಯಾಂಡಲ್‌ವುಡ್ ಪೊಲಿಟಿಕಲ್ ಥ್ರಿಲ್ಲರ್ ಸಿನಿಮಾದಿಂದ ಸ್ವಲ್ಪ ಅಂತರ ಕಾಯ್ದುಕೊಂಡಿದೆ. ಕರ್ನಾಟಕದ ಪ್ರಭಾವಿ ರಾಜಕಾರಣಿಗಳ ಛಾಯೆ ಬಿಂಬಿಸುವುದು ಬಿಟ್ಟರೆ, ವ್ಯವಸ್ಥೆಯನ್ನು ಸುತ್ತ, ರಾಜಕೀಯ ಭವಿಷ್ಯ ಆಧರಿಸಿ ಸಿನಿಮಾ ಮಾಡುವ ಪ್ರಯತ್ನ ಕಾಣ್ತಿಲ್ಲ.
ಹಾಗ್ನೋಡಿದ್ರೆ, ಈ ಹಿಂದೆ ಕನ್ನಡದಲ್ಲಿ ಹತ್ತ ಹಲವು ಸಿನಿಮಾಗಳು ರಾಜಕೀಯದ ಸುತ್ತ ಬಂದಿದೆ. ಅಂದಿನ ರಾಜಕಾರಣ, ವ್ಯವಸ್ಥೆ, ರಾಜಕೀಯ ಅಂದ್ರೆ ಏನು ಎನ್ನುವ ಅಂಶಗಳನ್ನೇ ಕಥೆಯನ್ನಾಧರಿಸಿ ಸಿನಿಮಾಗಳು ತೆರೆಗೆ ಬಂದಿದ್ದವು. ಅದರಲ್ಲಿ ಬಹುತೇಕ ಚಿತ್ರಗಳು ಯಶಸ್ಸು ಕಂಡಿದೆ. ಪ್ರಸ್ತುತ, ಕರ್ನಾಟಕ ರಾಜಕಾರಣದ ಬೆಳವಣಿಗೆ ಗಮನಿಸಿದರೆ ಪೊಲಿಟಿಕಲ್ ಥ್ರಿಲ್ಲರ್ ಸಿನಿಮಾ ಆಗಲಿ ಎಂಬ ಅಭಿಪ್ರಾಯ ಮತ್ತೆ ಎದ್ದಿದೆ. ಈ ಹಿನ್ನೆಲೆ ಕನ್ನಡದ ಕೆಲವು ಟಾಪ್ ಸಿನಿಮಾಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ. ಇವುಗಳಲ್ಲಿ ನಿಮಗೆ ಯಾವುದು ಹೆಚ್ಚು ಇಷ್ಟ ಆಗಿತ್ತು ಎಂದು ಕಾಮೆಂಟ್ ಮಾಡಿ ತಿಳಿಸಬಹುದು. ಮುಂದೆ ಓದಿ....
ರಾಜ್ಕುಮಾರ್
ಅನ್ನು
ರಾಜಕೀಯಕ್ಕೆ
ತರಲು
ದೇವೇಗೌಡರು
ಮಾಡಿದ್ದ
ಪ್ರಯತ್ನ
ಸಾಮಾನ್ಯದ್ದಲ್ಲ

ಅಂಬರೀಶ್ 'ಚಕ್ರವ್ಯೂಹ'
ಕನ್ನಡದಲ್ಲಿ ರಾಜಕೀಯ ಕುರಿತಾದ ಸಿನಿಮಾ ಎಂದಾಕ್ಷಣ ಅಂಬರೀಶ್ ಅಭಿನಯದ 'ಚಕ್ರವ್ಯೂಹ' ಸಿನಿಮಾ ಮೊದಲು ನೆನಪಾಗುತ್ತದೆ. ರಾಜಕಾರಣಿಗಳ ಸಂಚಿಗೆ ದಕ್ಷ ಪೊಲೀಸ್ ಆಫೀಸರ್ ಬಲಿಯಾಗುವ ಕಥೆ. ಕೊನೆಯಲ್ಲಿ ಅದೇ ರಾಜಕಾರಣ ಬಳಸಿಕೊಂಡು ಆ ರಾಜಕಾರಣಿಗಳನ್ನು ನಾಯಕನಟ ಕೊಲ್ಲುವುದು ಕಥಾ ಸಾರಾಂಶ. ಸಿನಿಮಾ ಮುಗಿಯುವ ವೇಳೆ ಇದೊಂದು ಪೊಲಿಟಿಕಲ್ ಥ್ರಿಲ್ಲರ್ ಎಂಬ ಭಾವನೆ ಕೊಡುತ್ತದೆ. ವಿ ಸೋಮಶೇಖರ್ ಈ ಸಿನಿಮಾ ನಿರ್ದೇಶಿಸಿದ್ದರು.

ಆಕ್ಸಿಡೆಂಟ್
ಶಂಕರ್ ನಾಗ್ ನಿರ್ದೇಶನದಲ್ಲಿ ಬಂದಿದ್ದ ಚಿತ್ರ 'ಆಕ್ಸಿಡೆಂಟ್'. ಪತ್ರಕರ್ತನ ಪಾತ್ರದಲ್ಲಿ ಶಂಕರ್ ನಾಗ್, ರಾಜಕಾರಣಿ ಪಾತ್ರದಲ್ಲಿ ಅನಂತ್ ನಾಗ್ ನಟಿಸಿದ್ದರು. ಪ್ರಭಾವಿ ರಾಜಕಾರಣಿಯ ಮಗ ಪುಟ್‌ಪಾತ್ ಮೇಲೆ ಮಲಗಿದ್ದವರ ಮೇಲೆ ಕಾರು ಹತ್ತಿಸಿ ಹತ್ಯೆ ಮಾಡ್ತಾನೆ. ಮಗನನ್ನು ಬಚಾವ್ ಮಾಡಲು ಆ ಪ್ರಭಾವಿ ರಾಜಕಾರಣಿ ಏನೆಲ್ಲಾ ಮಾಡ್ತಾನೆ, ನೊಂದವರಿಗೆ ನ್ಯಾಯ ಸಿಗುತ್ತಾ ಎನ್ನುವುದು ಸಿನಿಮಾ. 1984ರಲ್ಲಿ ಬಂದಿದ್ದ ಈ ಸಿನಿಮಾ ಬಹಳ ಪ್ರಭಾವ ಬೀರಿತ್ತು.
'ಪ್ರಜಾಕೀಯ'ಕ್ಕೆ
ಸೆಲೆಬ್ರಿಟಿ
ಗೆಳೆಯರ
ನೆರವು
ಕೇಳಿಲ್ಲ,
ಕೇಳಲ್ಲ:
ಉಪೇಂದ್ರ

ಗೋಲಿಬಾರ್
ದೇವರಾಜ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದ 'ಗೋಲಿಬಾರ್' ಸಿನಿಮಾವನ್ನು ಇಲ್ಲಿ ನೆನಪು ಮಾಡಿಕೊಳ್ಳಬಹುದು. ನೈಜ ಘಟನೆಗಳನ್ನು ಆಧರಿಸಿ ಈ ಚಿತ್ರ ತಯಾರಿಸಲಾಗಿತ್ತು. ಅರುಂಧತಿ ನಾಗ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ರಾಜಕೀಯ ಮತ್ತು ಪೊಲೀಸ್ ಇಲಾಖೆಯ ಸುತ್ತ ಈ ಸಿನಿಮಾ ಬಂದಿತ್ತು. ಶಿವಮಣಿ ನಿರ್ದೇಶಿಸಿದ್ದರು.

ರಾಜಕೀಯ
'ಗೋಲಿಬಾರ್' ಸಿನಿಮಾದ ಯಶಸ್ಸಿನ ನಂತರ ದೇವರಾಜ್ ಮತ್ತು ನಿರ್ದೇಶಕ ಶಿವಮಣಿ ಕಾಂಬಿನೇಷನ್‌ನಲ್ಲಿ ಬಂದ ಮತ್ತೊಂದು ಚಿತ್ರ 'ರಾಜಕೀಯ'. ಮಂಡ್ಯದಲ್ಲಿ ವಕೀಲರೊಬ್ಬರ ಕೊಲೆಯಾಗಿತ್ತು. ಅದೇ ಸಮಯದಲ್ಲಿ ಬಂದ ಸಿನಿಮಾ 'ರಾಜಕೀಯ'. ಲಾಯರ್ ಕೊಲೆಯ ಸುತ್ತ ಈ ಸಿನಿಮಾ ತಯಾರಾಗಿತ್ತು.

ಆಪರೇಷನ್ ಅಂತ
ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದಲ್ಲಿ ಬಂದ ಚಿತ್ರ 'ಆಪರೇಷನ್ ಅಂತ'. ಇದು 'ಅಂತ' ಸಿನಿಮಾದ ಮುಂದುವರಿದ ಭಾಗ. ಅಂಬರೀಶ್ ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದರು. 1995ರಲ್ಲಿ ಬಂದ ಈ ಚಿತ್ರವೂ ರಾಜಕೀಯದ ಸುತ್ತವೇ ಕಥೆ ಹೊಂದಿತ್ತು.

ಸುದೀಪ್ 'ಕಿಚ್ಚ'
2003ರಲ್ಲಿ ಬಂದ ಸಿನಿಮಾ 'ಕಿಚ್ಚ'. ಈ ಚಿತ್ರದಲ್ಲಿ ಸುದೀಪ್ ಪೊಲಿಟಿಶಿಯನ್ ಆಗಿ ನಟಿಸಿದ್ದರು. ಕಾರ್ಪೊರೇಟರ್, ಎಂಎಲ್‌ಎ, ಮಿನಿಸ್ಟರ್ ಹೀಗೆ ಹಂತ ಹಂತವಾಗಿ ಬೆಳೆದ ಅಕ್ರಮವಾಗಿ ಹಣ ಮಾಡುವ ಭ್ರಷ್ಟ ರಾಜಕಾರಣಿ ಮಾತ್ರ ನಿರ್ವಹಿಸಿದ್ದರು.

ಸೂಪರ್
ರಾಜಕೀಯ ಮತ್ತು ರಾಜಕಾರಣಿಗಳನ್ನು ಜನರು ಬೈಯ್ದುಕೊಳ್ಳುವುದು ಸಾಮಾನ್ಯ. ಆ ಸಾಮಾನ್ಯ ಸಂಗತಿಗಳೆಲ್ಲವೂ 'ಸೂಪರ್' ಚಿತ್ರದಲ್ಲಿ ಕಂಡಿತು. ರಿಯಲ್ ಸ್ಟಾರ್ ಉಪೇಂದ್ರ ನಟಿಸಿ, ನಿರ್ದೇಶಿಸಿದ 'ಸೂಪರ್' ಸಿನಿಮಾ ರಾಜಕೀಯಕ್ಕೆ ಹಿಡಿದ ಕನ್ನಡಿಯಂತಿತ್ತು.

ಎಲೆಕ್ಷನ್
ಚುನಾವಣೆ ಸಮಯದಲ್ಲಿ ಎಲೆಕ್ಷನ್ ಅಧಿಕಾರಿ ಎಷ್ಟು ಪ್ರಮುಖ ಎನ್ನುವ ಅಂಶವನ್ನು ಕಥೆಯನ್ನಾಗಿಸಿ ಮಾಡಿದ ಚಿತ್ರ 'ಎಲೆಕ್ಷನ್'. ಚುನಾವಣೆ ಅಧಿಕಾರಿ ಮನಸ್ಸು ಮಾಡಿದ್ರೆ ಎಲೆಕ್ಷನ್ ಪ್ರಾಮಾಣಿಕವಾಗಿ ನಡೆಸಬಹುದು ಎಂದು ತೋರಿಸಿದ ಚಿತ್ರ.

ಹಂಬಲ್ ಪೊಲಿಟಿಶಿಯನ್ ನೊಗರಾಜ್
ಜನಸಾಮಾನ್ಯರ ನಂಬಿಕೆಗಳ ಜೊತೆ ಆಟವಾಡು ರಾಜಕಾರಣಿಯೊಬ್ಬನ ಪಾತ್ರವನ್ನು ಆಧರಿಸಿ ಮಾಡಿದ ಚಿತ್ರ 'ಹಂಬಲ್ ಪೊಲಿಟಿಶಿಯನ್ ನೊಗರಾಜ್'. ಈ ಸಿನಿಮಾದಲ್ಲಿ ದಾನೀಶ್ ಸೇಟ್ ನಟಿಸಿದ್ದರು. ಹಾಸ್ಯಾಸ್ಪದವಾಗಿ ಬಂದಿದ್ದ ಈ ಚಿತ್ರ ಯಶಸ್ಸು ಸಹ ಕಂಡಿತ್ತು.