For Quick Alerts
  ALLOW NOTIFICATIONS  
  For Daily Alerts

  ಮಹಾತ್ಮ ಗಾಂಧಿ ಕುರಿತು ನೋಡಬೇಕಾದ ಸಿನಿಮಾಗಳು

  |

  ಭಾರತೀಯ ಇತಿಹಾಸದ ಅತ್ಯಂತ ಪ್ರಭಾವಿ ಮತ್ತು ಸ್ಪೂರ್ತಿದಾಯಕ ವ್ಯಕ್ತಿಗಳಲ್ಲಿ ಒಬ್ಬರು ಮಹಾತ್ಮ ಗಾಂಧಿ. ಶಾಂತಿಯಿಂದ ಮಾತ್ರ ಸ್ವಾತಂತ್ರ್ಯ ಸಾಧ್ಯ ಎಂದು ಹೋರಾಡಿದವರಲ್ಲಿ ಗಾಂಧಿ ಮುಂಚೂಣಿಯಲ್ಲಿದ್ದರು. ಮೋಹನದಾಸ ಕರಮಚಂದ ಗಾಂಧಿ ಅವರ ಜನ್ಮದಿನವನ್ನು ಅಕ್ಟೋಬರ್ 2 ರಂದು ಆಚರಿಸಲಾಗುತ್ತದೆ. ಈ ವಿಶೇಷ ದಿನವು ಗಾಂಧಿಯವರು ಬ್ರಿಟಿಷರಿಂದ ಸ್ವಾತಂತ್ರ್ಯಕ್ಕಾಗಿ ಮಾಡಿದ ಹೋರಾಟ ಮತ್ತು ಅವರ ಅಹಿಂಸೆಯ ಸಿದ್ಧಾಂತವನ್ನು ನೆನಪಿಸುತ್ತದೆ.

  ಭಾರತಕ್ಕೆ ಸ್ವಾತಂತ್ರ್ಯ ಘೋಷಿಸಿದ ಕೆಲವೇ ತಿಂಗಳಲ್ಲಿ ಗಾಂಧಿ ಹತ್ಯೆಯಾಯಿತು. ಮಹಾತ್ಮ ಅಗಲಿ 73 ವರ್ಷಗಳು ಕಳೆದಿವೆ. ಇಂದಿಗೂ ಅವರ ಆದರ್ಶಗಳು, ಸತ್ಯ-ಅಹಿಂಸೆಯ ಬೋಧನೆ, ಜೀವನ ಆಚರಣೆ ಗಾಂಧಿಯನ್ನು ಅಜರಾಮರವಾಗಿಸಿವೆ. ಅನೇಕ ಪುಸ್ತಕಗಳು, ಇತಿಹಾಸಕಾರರು ಮಹಾತ್ಮನ ಚರಿತ್ರೆಯನ್ನು ಮುಂದಿನ ಪೀಳಿಗೆಗೆ ದಾಟಿಸುತ್ತಲೇ ಬಂದಿವೆ. ಈ ಕಾರ್ಯವನ್ನು ಸಿನಿಮಾಗಳೂ ಸಹ ಮಾಡಿವೆ.

  ಮಹಾತ್ಮಾ ಗಾಂಧಿ ಬಗ್ಗೆ ಕಂಗನಾ ರನೌತ್ ಟ್ವೀಟ್: ಚರ್ಚೆ ಆರಂಭಮಹಾತ್ಮಾ ಗಾಂಧಿ ಬಗ್ಗೆ ಕಂಗನಾ ರನೌತ್ ಟ್ವೀಟ್: ಚರ್ಚೆ ಆರಂಭ

  ಭಾರತೀಯ ಬೆಳ್ಳಿತೆರೆಯ ಮೇಲೆ ಮಹಾತ್ಮ ಗಾಂಧಿ ಕುರಿತಾದ ಅನೇಕ ಚಿತ್ರಗಳು ಮೂಡಿ ಬಂದಿವೆ. ಅದರಲ್ಲಿ ಕೆಲವು ಚಿತ್ರಗಳು ಅಕ್ಷರಶಃ ಗಾಂಧಿಯನ್ನೇ ನೋಡಿದಂತೆ ಅನುಭವ ಕೊಡುತ್ತದೆ. ಗಾಂಧಿ ಜಯಂತಿ ವಿಶೇಷವಾಗಿ ನೀವು ನೋಡಬಹುದಾದ ಟಾಪ್ ಸಿನಿಮಾಗಳ ವಿವರ ಇಲ್ಲಿದೆ. ಮುಂದೆ ಓದಿ...

  'ಗಾಂಧಿ' ಸಿನಿಮಾ

  'ಗಾಂಧಿ' ಸಿನಿಮಾ

  ಮಹಾತ್ಮಾ ಗಾಂಧಿ ಕುರಿತಾದ ಸಿನಿಮಾಗಳ ಪಟ್ಟಿಯಲ್ಲಿ ಎಲ್ಲದಕ್ಕೂ ಮೊದಲು ಬರುವ ಹೆಸರು, ರಿಚರ್ಡ್ ಅಟೆನ್‌ಬರೋ ನಿರ್ದೇಶಿಸಿ ಬೆನ್ ಕಿಂಗ್ಸಿ ಲೀ ಗಾಂಧಿಯಾಗಿ ಅಭಿನಯಿಸಿದ್ದ 'ಗಾಂಧಿ' ಸಿನಿಮಾ. 1982 ರಲ್ಲಿ ಬಿಡುಗಡೆ ಆದ ಈ ಸಿನಿಮಾವನ್ನು ಮೀರಿಸುವ ಮತ್ತೊಂದು ಗಾಂಧಿ ಕುರಿತಾದ ಸಿನಿಮಾ ಬಂದಿಲ್ಲವೆಂದೇ ಹೇಳಲಾಗುತ್ತದೆ.

  ನೈನ್ ಹವರ್ಸ್ ಟು ರಾಮಾ

  ನೈನ್ ಹವರ್ಸ್ ಟು ರಾಮಾ

  ಮಾರ್ಕ್ ರೋಬ್‌ಸನ್ 1963ರಲ್ಲಿ ನಿರ್ದೇಶಿಸಿದ ಸಿನಿಮಾ ನೈನ್ ಹವರ್ಸ್ ಟು ರಾಮಾ. ಗಾಂಧಿ ಹತ್ಯೆ ಆಗುವ ಕೊನೆಯ ಒಂಬತ್ತು ಗಂಟೆ ಬಗ್ಗೆ ಸಿನಿಮಾದಲ್ಲಿ ವಿವರಗಳಿವೆ. ಸಿನಿಮಾ ಬಹುತೇಕ ನಾಥೂರಾಮ್ ಗೋಡ್ಸೆ ಸುತ್ತಲೇ ಇದೆ. ಸಿನಿಮಾದಲ್ಲಿ ಎಲ್ಲಾ ಪಾತ್ರಗಳಲ್ಲೂ ವಿದೇಶಿಗರೇ ನಟಿಸಿದ್ದಾರೆ. ಒಬ್ಬ ಭಾರತೀಯ ನಟನೂ ಇಲ್ಲ.

  ಗಾಂಧಿ ಮೈ ಫಾದರ್

  ಗಾಂಧಿ ಮೈ ಫಾದರ್

  ಗಾಂಧಿ ಕುರಿತಾಗಿ ಭಾರತದಲ್ಲಿ ವಸ್ತುನಿಷ್ಠವಾಗಿ ತಯಾರಾಗಿರುವ ಸಿನಿಮಾಗಳಲ್ಲಿ ಒಂದು 'ಗಾಂಧಿ ಮೈ ಫಾದರ್'. ಈ ಸಿನಿಮಾ ಗಾಂಧಿಯ 'ಮಹಾತ್ಮ'ತನಕ್ಕಿಂತಲೂ ಹೆಚ್ಚಾಗಿ ತಂದೆಯಾಗಿ ಅವರ ವರ್ತನೆ ಹಾಗೂ ತಂದೆಯಾಗಿ ಅವರ ನಿರ್ಧಾರಗಳು ಹಾಗೂ ಸಮಾಜದ ಬಗ್ಗೆ ಅವರ ದೃಷ್ಟಿಕೋನವನ್ನು ಪಕ್ಕ-ಪಕ್ಕದಲ್ಲಿಟ್ಟು ಗಾಂಧಿಯ ಆದರ್ಶಗಳನ್ನು ನಿಕಷಕ್ಕೆ ಒಳಪಡಿಸುತ್ತದೆ. ಗಾಂಧಿಯ ಮಗನಾಗಿ ಅಕ್ಷಯ್ ಖನ್ನಾ ಅದ್ಭುತ ಅಭಿನಯ ನೀಡಿದ್ದಾರೆ.

  ಮೇಕಿಂಗ್ ಆಫ್ ಮಹಾತ್ಮಾ

  ಮೇಕಿಂಗ್ ಆಫ್ ಮಹಾತ್ಮಾ

  ಶ್ಯಾಂ ಬೆನಗಲ್ ನಿರ್ದೇಶಿಸಿರುವ 'ಮೇಕಿಂಗ್ ಆಫ್ ಮಹಾತ್ಮಾ' ಸಿನಿಮಾ, ಮಹಾತ್ಮಾ ಗಾಂಧಿ ದಕ್ಷಿಣ ಆಫ್ರಿಕಾದಲ್ಲಿ ಕಳೆದ ದಿನಗಳ ಬಗ್ಗೆ ಬೆಳಕು ಚೆಲ್ಲುತ್ತದೆ. ದಕ್ಷಿಣ ಆಫ್ರಿಕಾದಲ್ಲಿ ಗಾಂಧಿ ಹೇಗೆ ಅಹಿಂಸಾವಾದಿಯಾಗಿ ರೂಪುಗೊಳ್ಳುತ್ತಾ ಸಾಗಿದರು ಎಂಬುದು ಸಿನಿಮಾದಲ್ಲಿ ಚರ್ಚಿತವಾಗಿದೆ. ಇದು ಫಾತಿಮಾ ನಾಯರ್ ಅವರ ಪುಸ್ತಕ ಆಧರಿಸಿದ ಸಿನಿಮಾ.

  ಲಗೆ ರಹೋ ಮುನ್ನಾ ಭಾಯಿ

  ಲಗೆ ರಹೋ ಮುನ್ನಾ ಭಾಯಿ

  ಗಾಂಧಿಯನ್ನು ಹೊಸತಲೆಮಾರಿಗೆ ಅವರದ್ದೇ ರೀತಿಯಲ್ಲಿ ಪರಿಚಯಿಸಿದ ಚಿತ್ರ 'ಲಗೆ ರಹೋ ಮುನ್ನಾ ಭಾಯಿ'. ಇದೊಂದು ಹಾಸ್ಯಮಯ ಸಿನಿಮಾ ಆದರೂ ಸಹ ಗಾಂಧಿ ತತ್ವಕ್ಕೆ ಊನಬಾರದಂತೆ ಹುಷಾರಿನಿಂದ ಶಕ್ತವಾಗಿ ಹೇಳುವ ಪ್ರಯತ್ನ ಸಿನಿಮಾದಲ್ಲಿದೆ. ಪ್ರಕಾಂಡ ಗಾಂಧಿವಾದಿಗಳಿಂದ ಈ ಸಿನಿಮಾ ಸಾಕಷ್ಟು ಟೀಕೆಗೆ ಗುರಿಯಾಯಿತು, ಆದರೆ ಈ ಸಿನಿಮಾ ಸಮಾಜದ ಮೇಲೆ ಬೀರಿದ ಪರಿಣಾಮ ಗಮನಾರ್ಹದ್ದಾಗಿತ್ತು.

  ಹೇ ರಾಮ್

  ಹೇ ರಾಮ್

  ಕಮಲ್‌ ಹಾಸನ್ ನಿರ್ದೇಶಿಸಿ ನಟಿಸಿದ್ದ 'ಹೇ ರಾಮ್' ಸಿನಿಮಾ, ಪೂರ್ಣವಾಗಿ ಗಾಂಧಿ ಕುರಿತಾದ ಸಿನಿಮಾ ಅಲ್ಲದೇ ಇದ್ದರೂ ಸಹ ವಿಭಜನೆ, ಗಾಂಧಿ ಹತ್ಯೆ ಈ ವಿಷಯಗಳು ಅವುಗಳ ಜನರ ಮೇಲೆ ಬೀರಿದ ಪರಿಣಾಮಗಳನ್ನು ತೋರಿಸುವ ಪ್ರಯತ್ನ ಸಿನಿಮಾದಲ್ಲಾಗಿದೆ. ಕಮಲ್ ಹಾಸನ್ ಅವರ ಪ್ರಯೋಗಶೀಲತೆಗೆ ಈ ಸಿನಿಮಾ ಒಳ್ಳೆಯ ಉದಾಹರಣೆ, ಸಿನಿಮಾದಲ್ಲಿ ಶಾರುಖ್ ಖಾನ್ ಸಹ ನಟಿಸಿದ್ದಾರೆ.

  ಕಾಸರವಳ್ಳಿಯ 'ಕೂರ್ಮಾವತಾರ'

  ಕಾಸರವಳ್ಳಿಯ 'ಕೂರ್ಮಾವತಾರ'

  ಗಿರೀಶ್ ಕಾಸರವಳ್ಳಿ ನಿರ್ದೇಶಿಸಿದ್ದ ಪ್ರಶಸ್ತಿ ವಿಜೇತ ಸಿನಿಮಾ ಕೂರ್ಮಾವತಾರ ಗಾಂಧಿ ತತ್ವದ ಆಧಾರದ ಮೇಲೆಯೇ ಇದೆ. ಗಾಂಧಿ ಪಾತ್ರಧಾರಿ ಹಾಗೂ ಗಾಂಧಿ ಆದರ್ಶಗಳ ನಡುವಿನ ತಾಕಲಾಟ ಸಿನಿಮಾದ ವಸ್ತು. ಕನ್ನಡದಲ್ಲಿ ಗಾಂಧಿ ಕುರಿತಾಗಿ ಬಂದಿರುವ ಉತ್ತಮ ಸಿನಿಮಾ ಇದು.

  English summary
  Top Movies to Watch On Mahatma gandhi's Birthday Special.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X