Don't Miss!
- News
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪತ್ರ ನಕಲಿ ಎಂದ ಸಿದ್ದರಾಮಯ್ಯ.! ಆ ಪತ್ರದಲ್ಲಿ ಏನಿದೆ.?
- Sports
IND-W vs SA-W T20 Tri-series Final: ಭಾರತ ವನಿತೆಯರ ವಿರುದ್ಧ ದಕ್ಷಿಣ ಆಫ್ರಿಕಾಗೆ ಜಯ
- Lifestyle
ಮಗುವಿಗೆ ತುಂಬಾ ಜ್ವರ ಇದ್ದಾಗ ಏನು ಮಾಡಬೇಕು?
- Finance
6 ತಿಂಗಳಲ್ಲಿ 2ನೇ ಬಾರಿಗೆ ಉದ್ಯೋಗಿಗಳನ್ನು ವಜಾಗೊಳಿಸಿದ Byju's: ಈ ಬಾರಿ ಎಷ್ಟು ನೌಕರರು?
- Automobiles
ಭಾರತದಲ್ಲಿ ಮಾರುತಿ ಜಿಮ್ನಿ ಎಸ್ಯುವಿಗೆ ಭಾರೀ ಡಿಮ್ಯಾಂಡ್: ಪ್ರತಿಸ್ಪರ್ಧಿಗಳಿಗೆ ಹೆಚ್ಚಿದ ಆತಂಕ
- Technology
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಈ ಹಳ್ಳಿಯ ಪ್ರತಿ ಮನೆಯಲ್ಲೂ ಯೂಟ್ಯೂಬರ್‌ಗಳು: ಜೀವನ ನಡೆಯುವುದೇ ವಿಡಿಯೋಗಳಿಂದ!
ಇದು ಶಿಕ್ಷಕರೇ ತುಂಬಿರುವ ಹಳ್ಳಿ, ಇದು ಸೈನಿಕರೇ ತುಂಬಿರುವ ಊರು ಎಂದೆಲ್ಲ ಕೇಳಿರುತ್ತೀರಿ, ಆನ್‌ಲೈನ್‌ನಲ್ಲಿ ದೋಖಾ ಮಾಡುವವರೇ ತುಂಬಿರುವ ಹಳ್ಳಿ ಎಂಬುದನ್ನೂ ಕೇಳಿರುತ್ತೀರಿ ಇಲ್ಲೊಂದು ಯೂಟ್ಯೂಬರ್‌ಗಳೇ ತುಂಬಿರುವ ಹಳ್ಳಿ ಇದೆ!
ಚತ್ತಿಸ್‌ಘಡದ ರಾಯ್‌ಪುರ ಜಿಲ್ಲೆಯ ತುಳ್ಸಿ ಎಂಬ ಸಣ್ಣ ಹಳ್ಳಿಯಲ್ಲಿ ಇರುವುದು ಸುಮಾರು 3000 ಮಂದಿ. ಇದರಲ್ಲಿ 1000 ಕ್ಕೂ ಹೆಚ್ಚು ಜನ ಯೂಟ್ಯೂಬರ್‌ಗಳು!
ಯೂಟ್ಯೂಬ್
ನಂ.1
ಟ್ರೆಂಡಿಂಗ್ನಲ್ಲಿ
ಅಮೀರ್
'ಸೀಕ್ರೆಟ್
ಸೂಪರ್ಸ್ಟಾರ್'
ಟ್ರೈಲರ್
ಹೌದು, ಈ ಸಣ್ಣ ಹಳ್ಳಿಯ ಬಹುತೇಕ ಯುವಕರು ಈಗ ಯೂಟ್ಯೂಬರ್‌ಗಳಾಗಿದ್ದಾರೆ. ಪ್ರತಿನಿತ್ಯ ಊರಿನ ಹಲವು ಕಡೆಗಳಲ್ಲಿ ಯೂಟ್ಯೂಬ್ ವಿಡಿಯೋ ಚಿತ್ರೀಕರಣ ನಡೆಯುತ್ತಿರುತ್ತದೆ. ಊರಿನವರೇ ಚಿತ್ರೀಕರಿಸಿ, ನಟಿಸಿ, ಎಡಿಟಿಂಗ್ ಮಾಡಿ ಅಪ್‌ಲೋಡ್ ಮಾಡುತ್ತಾರೆ. ಎಷ್ಟೋ ಮಂದಿಯ ಜೀವನ ನಡೆಯುತ್ತಿರುವುದೇ ಯೂಟ್ಯೂಬ್ ವಿಡಿಯೋಗಳಿಂದ!

ಹಲವು ಯೂಟ್ಯೂಬ್ ಚಾನೆಲ್‌ಗಳಿವೆ
ತುಳ್ಸಿ ಗ್ರಾಮಸ್ಥರ ಸುಮಾರು 3000 ಯೂಟ್ಯೂಬ್ ಚಾನೆಲ್‌ಗಳಿವೆ. ಒಬ್ಬೊಬ್ಬರು ಹತ್ತು ಚಾನೆಲ್ ನಡೆಸುತ್ತಿರುವವರೂ ಇದ್ದಾರೆ. ಊರಿನಲ್ಲಿ ಪ್ರತಿದಿನವೂ ಶೂಟಿಂಗ್ ನಡೆಯುತ್ತಿರುತ್ತದೆ. ಗ್ರಾಮದ ಹಲವರ ಮನೆಗಳಲ್ಲಿ ಗ್ರೀನ್ ಸ್ಕ್ರೀನ್‌ಗಳಿವೆ. ರಿಂಗ್ ಲೈಟ್‌ಗಳು, ಒಳ್ಳೆಯ ಕ್ಯಾಮೆರಾಗಳು, ಎಡಿಟಿಂಗ್ ರೂಂಗಳಿವೆ. ಯೂಟ್ಯೂಬ್ ವಿಡಿಯೋ ನಿರ್ಮಾಣಕ್ಕೆ ಬೇಕಾದ ಹಲವು ವ್ಯವಸ್ಥೆಗಳನ್ನು ಈ ಊರಿನ ಜನ ಹೊಂದಿದ್ದಾರೆ.

ಮೊದಲು ಆರಂಭಿಸಿದ್ದು ಆ ಇಬ್ಬರು
ತುಳ್ಸಿ ಊರಿನ ಜಯೇಂದ್ರ ಶರ್ಮಾ ಹಾಗೂ ಜೈ ವರ್ಮಾ ಎಂಬ ಇಬ್ಬರು ಗೆಳೆಯರು ಮೊದಲಿಗೆ ಯೂಟ್ಯೂಬ್ ವಿಡಿಯೋ ನಿರ್ಮಾಣವನ್ನು ಆರಂಭಿಸಿದರು. ಎಂ.ಎಸ್‌ಸಿ ಮುಗಿಸಿ ಕಾಲೇಜೊಂದರಲ್ಲಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಜೈ ವರ್ಮಾ ಯೂಟ್ಯೂಬ್ ಚಾನೆಲ್ ಪ್ರಾರಂಭಿಸಲು 12 ಸಾವಿರ ಸಂಬಳ ಬರುತ್ತಿದ್ದ ತಮ್ಮ ಉದ್ಯೋಗ ಬಿಟ್ಟರು ಈಗ ಯೂಟ್ಯೂಬ್‌ನಿಂದ ಪ್ರತಿತಿಂಗಳು ಕನಿಷ್ಟ 35000 ಸಾವಿರ ಹಣ ಗಳಿಸುತ್ತಿದ್ದಾರೆ.
ಇನ್ನು ಜಯೇಂದ್ರ ಶರ್ಮಾ ಎಸ್‌ಬಿಐನಲ್ಲಿ ನೆಟ್‌ವರ್ಕಿಂಗ್ ಉದ್ಯೋಗ ಮಾಡುತ್ತಿದ್ದರು ಅವರೂ ಸಹ ವಿಡಿಯೋಗಳನ್ನು ನಿರ್ಮಿಸಲೆಂದು ಉದ್ಯೋಗ ತ್ಯಜಿಸಿದರು. ಈವರೆಗೆ ಯೂಟ್ಯೂಬ್‌ಗಾಗಿ ಸುಮಾರು 250 ವಿಡಿಯೋಗಳನ್ನು ಇವರು ಮಾಡಿದ್ದಾರೆ. ದೊಡ್ಡ ಮೊತ್ತದ ಹಣವನ್ನೂ ಸಂಪಾದಿಸಿದ್ದಾರೆ.

ಹಲವು ಮಹಿಳಾ ಯೂಟ್ಯೂಬರ್‌ಗಳು
ಈ ಊರಿನಲ್ಲಿ ಹಲವು ಯುವತಿಯರು ಸಹ ತಮ್ಮದೇ ಯೂಟ್ಯೂಬ್ ಚಾನೆಲ್ ಪ್ರಾರಂಭಿಸಿದ್ದಾರೆ. ಅಡುಗೆ ವಿಡಿಯೋಗಳು, ಸಂಸ್ಕೃತಿಯ ವಿಡಿಯೋಗಳು, ವ್ಲಾಗ್‌ಗಳು, ಎಜುಕೇಶನಲ್ ವಿಡಿಯೋಗಳು ಹಲವು ರೀತಿಯ ವಿಡಿಯೋಗಳನ್ನು ಈ ಊರಿನ ಮಹಿಳೆಯರು ಪ್ರಾರಂಭಿಸಿದ್ದಾರೆ. ಪಿಂಕಿ ಎನ್ನುವ ಯುವತಿ ಒಬ್ಬರೇ ಸುಮಾರು 40 ಯೂಟ್ಯೂಬ್ ಚಾನೆಲ್‌ಗಳನ್ನು ಹೊಂದಿದ್ದಾರೆ. ಮನೆಯಲ್ಲಿದ್ದುಕೊಂಡೆ ಹಲವು ಯುವತಿಯರು ಯೂಟ್ಯೂಬ್ ಮೂಲಕ ದೊಡ್ಡ ಮೊತ್ತ ಗಳಿಸುತ್ತಿದ್ದಾರೆ ಎಂಬುದು ಪಿಂಕಿಯವರ ಮಾತು.

ಊರಿನ ಜನ ಒಳ್ಳೆಯ ನಟರು
ಊರಿನ ಯುವಕರು, ಹಿರಿಯರು ಬಹಳ ಚೆನ್ನಾಗಿ ನಟಿಸುತ್ತಾರೆ ಎಂದಿರುವ ಯೂಟ್ಯೂಬರ್ ಒಬ್ಬರು. ಊರಿನಲ್ಲಿ ರಾಮ್‌ಲೀಲಾ ಸೇರಿದಂತೆ ಹಲವು ನಾಟಕಗಳಲ್ಲಿ ನಟಿಸುವ ಅನುಭವಿ ನಟರಿದ್ದಾರೆ ಅವರೆಲ್ಲ ಈಗ ವಿವಿಧ ಯೂಟ್ಯೂಬ್ ಚಾನೆಲ್‌ಗಳಲ್ಲಿ ನಟಿಸುತ್ತಿದ್ದಾರಂತೆ. ಈ ಊರಿನ ಬಹುಪಾಲು ವಿಡಿಯೋಗಳು ಕಾಮಿಡಿ ಕಂಟೆಂಟ್ ಅನ್ನೇ ಒದಗಿಸುತ್ತಿವೆ. ಇದಕ್ಕಾಗಿ ಚಿತ್ರಕತೆ ಬರೆಯುವವರು ಸಹ ಇದ್ದಾರಂತೆ! ಊರಿನ ಬಹುಪಾಲು ಯೂಟ್ಯೂಬ್ ವಿಡಿಯೋಗಳು ಒಂದು ಲಕ್ಷಕ್ಕೂ ಹೆಚ್ಚು ಸಬ್‌ಸ್ಕ್ರೈಬರ್‌ಗಳನ್ನು ಹೊಂದಿದ್ದಾವೆ. ಈ ಊರಿನ ಹಲವು ಕುಟುಂಬಗಳ ಜೀವನ ನಿರ್ವಹಣೆ ನಡೆಯುತ್ತಿರುವುದೇ ಯೂಟ್ಯೂಬ್‌ನಿಂದ ಬರುವ ಆದಾಯದಿಂದ.