Don't Miss!
- Lifestyle
ಗರುಡ ಪುರಾಣ ಪ್ರಕಾರ ಈ 9 ಬಗೆಯ ವ್ಯಕ್ತಿಗಳ ಮನೆಯಲ್ಲಿ ಆಹಾರ ತಿನ್ನಲೇಬಾರದು
- Sports
ಟಿ20 ವಿಶ್ವಕಪ್ ಗೆದ್ದ ಶಫಾಲಿ ವರ್ಮಾ ಪಡೆಗೆ ಬಿಸಿಸಿಐ ಸನ್ಮಾನ: 5 ಕೋಟಿ ರುಪಾಯಿ ಬಹುಮಾನ
- News
ತಂಬಾಕು ನಿಯಂತ್ರಣಕ್ಕೆ ಮೈಸೂರು ಜಿಲ್ಲಾಧಿಕಾರಿ ತೆಗೆದುಕೊಂಡ ಕ್ರಮಗಳು, ಇಲ್ಲಿದೆ ವಿವರ
- Automobiles
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
2022 Sandalwood Roundup: ಈ ವರ್ಷ ಕನ್ನಡ ಚಿತ್ರರಂಗಕ್ಕೆ ಪರಿಚಿತವಾದ ಹೊಸ ಮುಖಗಳು
ಬಣ್ಣದಲೋಕಕ್ಕೆ ಪ್ರತಿದಿನ ಸಾಕಷ್ಟು ಜನ ಬರ್ತಿರ್ತಾರೆ, ಹೋಗ್ತಿರ್ತಾರೆ. ಕೆಲವರು ನಟ, ನಟಿಯರಾಗಿ ಬಣ್ಣ ಹಚ್ಚಿ ಅದೃಷ್ಟ ಪರೀಕ್ಷೆ ಮಾಡಿಕೊಳ್ಳುತ್ತಾರೆ. ಈ ವರ್ಷವೂ ಸಾಕಷ್ಟು ಹೊಸ ಪ್ರತಿಭೆಗಳು ಕನ್ನಡ ಪ್ರೇಕ್ಷಕರ ಮುಂದೆ ಬಂದಿದ್ದರು.
ಸ್ಟಾರ್ ನಟರ ಮಕ್ಕಳ ಜೊತೆಗೆ ಸಿನಿಮಾ ಹಿನ್ನಲೆ ಇಲ್ಲದವರು, ಕಿರುತೆರೆಯಲ್ಲಿ ಮಿಂಚಿದವರು ಈ ವರ್ಷ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಆದರೆ ಯಾರೊಬ್ಬರಿಗೂ ದೊಡ್ಡ ಸಕ್ಸಸ್ ಮಾತ್ರ ಸಿಕ್ಕಿಲ್ಲ. ಇದ್ದಿದ್ದರಲ್ಲಿ ಕೆಲವರು ಭರವಸೆ ಮೂಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಗೆದ್ದು ಬೀಗುವ ಸುಳಿವು ನೀಡಿದ್ದಾರೆ. ಸಿನಿಮಾ ಸಕ್ಸಸ್ ಸೂತ್ರ ಯಾರಿಗೂ ಗೊತ್ತಿಲ್ಲ. ಹಾಗಾಗಿ ಒಂದು ಸಿನಿಮಾ ಗೆಲ್ಲುವುದು ಅಷ್ಟು ಸುಲಭ ಅಲ್ಲ. ಹೊಸ ಪ್ರತಿಭೆಗಳು ಅಂದರೆ ಎಲ್ಲಾ ವಿಭಾಗದಲ್ಲೂ ಸಿನಿಮಾ ಉತ್ತಮವಾಗಿದ್ದರೆ ಮಾತ್ರ ಗೆಲುವು ಸಾಧ್ಯ.
'ದಿಕಾಶ್ಮೀರಿ
ಫೈಲ್ಸ್'ನಿಂದ
'ಕಾಂತಾರ'ವರೆಗೆ:
ಈ
ವರ್ಷ
ಡಾರ್ಕ್
ಹಾರ್ಸ್‌ಗಳಾಗಿ
ಹೊರಹೊಮ್ಮಿದ
ಸಿನಿಮಾಗಳಿವು
ಈ ವರ್ಷ 'KGF - 2', '777 ಚಾರ್ಲಿ', 'ವಿಕ್ರಾಂತ್ ರೋಣ', 'ಕಾಂತಾರ' ರೀತಿಯ ಸ್ಟಾರ್‌ಗಳ ಸಿನಿಮಾ ಆರ್ಭಟವೇ ಜೋರಾಗಿತ್ತು. ಹಾಗಾಗಿ ನಡುವೆ ಬಂದ ಹೋದ ಹೊಸಬರ ಸಿನಿಮಾಗಳು ಅಷ್ಟಾಗಿ ಸದ್ದು ಮಾಡಲಿಲ್ಲ.

'ಏಕ್ ಲವ್ ಯಾ' ಎಂದ ರಾಣಾ
ಜೋಗಿ ಪ್ರೇಮ್ ನಿರ್ದೇಶನದ 'ಏಕ್‌ಲವ್‌ಯಾ' ಸಿನಿಮಾ ವ್ಯಾಲಂಟೈನ್ಸ್ ಡೇ ಸ್ಪೆಷಲ್ ಆಗಿ ತೆರೆಗೆ ಬಂದಿತ್ತು. ಚಿತ್ರದಲ್ಲಿ ರಕ್ಷಿತಾ ಪ್ರೇಮ್ ಸಹೋದ ರಾಣಾ ಹಾಗೂ ರೀಷ್ಮಾ ನಾಣಯ್ಯ, ರಚಿತಾ ರಾಮ್ ಲೀಡ್ ರೋಲ್‌ಗಳಲ್ಲಿ ಮಿಂಚಿದ್ದರು. ಇದು ಹೀರೊ ಆಗಿ ರಾಣಾ ಚೊಚ್ಚಲ ಪ್ರಯತ್ನ. ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕರೂ ನಟನೆಯ ವಿಚಾರದಲ್ಲಿ ರಾಣಾ ಒಳ್ಳೆ ಅಂಕ ಗಿಟ್ಟಿಸಿಕೊಂಡಿದ್ದರು. ಇದೀಗ ಪ್ರೇಮ್ ಶಿಷ್ಯನ ಚಿತ್ರದಲ್ಲಿ ರಾಣಾ ನಟಿಸುತ್ತಿದ್ದಾರೆ.

ಸದ್ದು ಮಾಡಲಿಲ್ಲ ತ್ರಿ'ವಿಕ್ರಮ'
ನಟ ರವಿಚಂದ್ರನ್ ಕಿರಿಯ ಪುತ್ರ ವಿಕ್ರಂ ಈ ವರ್ಷ 'ತ್ರಿವಿಕ್ರಮ' ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಸಹನಾ ಮೂರ್ತಿ ನಿರ್ದೇಶನದ ಸಿನಿಮಾ ಪ್ರೇಕ್ಷಕರ ಮನಗೆಲ್ಲುವಲ್ಲಿ ವಿಫಲವಾಗಿತ್ತು. ಮೊದಲ ವಾರವೇ ಸಿನಿಮಾ ಪ್ರೇಕ್ಷಕರ ಬರ ಎದುರಿಸಿದ್ದು ಸುಳ್ಳಲ್ಲ. ಚಿತ್ರದಲ್ಲಿ ಆಕಾಂಕ್ಷ ಶರ್ಮಾ ನಾಯಕಿಯಾಗಿ ಮಿಂಚಿದ್ದರು. ರಾಮ್ಕೋ ಸೋಮಣ್ಣ ಸಿನಿಮಾ ನಿರ್ಮಾಣ ಮಾಡಿದ್ದರು.

ಝೈದ್ ಖಾನ್‌ಗೂ ನಿರಾಸೆ
ಶಾಸಕ ಜಮೀರ್ ಅಹಮದ್ ಪುತ್ರ ಝೈದ್ ಖಾನ್ ಕೂಡ ಹೀರೊ ಆಗಿ ಅದೃಷ್ಟ ಪರೀಕ್ಷೆ ಮಾಡಿಕೊಂಡಿದ್ದರು. ಜಯತೀರ್ಥ ನಿರ್ದೇಶನದ 'ಬನಾರಸ್' ಚಿತ್ರ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ತೆರೆಗಪ್ಪಳಿಸಿತ್ತು. ಚಿತ್ರದಲ್ಲಿ ಸೋನಲ್ ಮಂತೆರಿಯೋ ನಾಯಕಿಯಾಗಿ ಮಿಂಚಿದ್ದರು. ಕಾಶಿಯನ್ನು ಕೇಂದ್ರವಾಗಿಟ್ಟುಕೊಂಡು ಈ ಟೈಮ್ ಟ್ರಾವೆಲಿಂಗ್ ಕಥೆ ಹೇಳಲಾಗಿತ್ತು. ಝೈದ್ ಖಾನ್ ಮೊದಲ ಚಿತ್ರದಲ್ಲೇ ಅನುಭವಿ ನಟನ ರೀತಿ ನಟಿಸಿ ಮೆಚ್ಚುಗೆ ಗಳಿಸಿದ್ದರು. ಆದರೆ ಸಿನಿಮಾ ಮಾತ್ರ ಗೆಲ್ಲಲಿಲ್ಲ.

ಅಕ್ಷಿತ್ ಶಶಿಕುಮಾರ್ ಡೆಬ್ಯೂ
ಸುಪ್ರೀಂ ಹೀರೊ ಶಶಿಕುಮಾರ್ ಪುತ್ರ ಅಕ್ಷಿತ್ ಕೂಡ ಬಣ್ಣದಲೋಕಕ್ಕೆ ಕಾಲಿಟ್ಟರು. ಆದರೆ ಅಕ್ಷಿತ್ ನಟಿಸಿದ 'ಸೀತಾಯಣ' ಬಂದು ಹೋಗಿದ್ದು ಗೊತ್ತಾಗಲೇ ಇಲ್ಲ. ಈ ಸಿನಿಮಾ ಏಕಕಾಲಕ್ಕೆ ತೆಲುಗಿನಲ್ಲೂ ತೆರೆಗೆ ಬಂದಿತ್ತು. ಆದರೆ ಮೊದಲ ಸಿನಿಮಾ ಬಿಡುಗಡೆಗೂ ಮುನ್ನವೇ ಮತ್ತೆರಡು ಸಿನಿಮಾಗಳಿಗೆ ಅಕ್ಷಿತ್ ಗ್ರೀನ್ ಸಿಗ್ನಲ್ ಕೊಟ್ಟಿದ್ದರು.

ಶಿವನಾಗಿ ಬಂದ ಧೀರೇನ್
ಅಣ್ಣಾವ್ರ ಮೊಮ್ಮಗ ರಾಮ್‌ಕುಮಾರ್ ಪುತ್ರ ಧೀರೇನ್ ಅಂತೂ ಇಂತೂ ಈ ವರ್ಷ ಚಿತ್ರರಂಗಕ್ಕೆ ಕಾಲಿಟ್ಟರು. ಬಹಳ ಹಿಂದೆ ಸೆಟ್ಟೇರಿದ್ದ 'ಶಿವ 143' ಸಿನಿಮಾ ಆಗಸ್ಟ್ 26ಕ್ಕೆ ರಿಲೀಸ್ ಆಗಿತ್ತು. ರೊಮ್ಯಾಂಟಿಕ್ ಆಕ್ಷನ್ ಚಿತ್ರದಲ್ಲಿ ರಗಡ್ ಲುಕ್‌ನಲ್ಲಿ ಧೀರೇನ್ ಅಬ್ಬರಿಸಿದ್ದರು. ಮಾನ್ವಿತಾ ಜೊತೆ ಧೀರೇನ್ ಬೋಲ್ಡ್ ದೃಶ್ಯಗಳು ಹುಬ್ಬೇರಿಸಿತ್ತು. ಆದರೆ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಲಿಲ್ಲ.

ಬೆಳ್ಳಿತೆರೆಗೆ ಮೇಘಾ ಶೆಟ್ಟಿ ಎಂಟ್ರಿ
ಕಿರುತೆರೆಯ 'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಅನು ಸಿರಿಮನೆ ಆಗಿ ಮನೆ ಮಾತಾದ ನಟಿ ಮೇಘಾ ಶೆಟ್ಟಿ. ಈಗಾಗಲೇ ಕಿರಿತೆರೆಯಿಂದ ಸಾಕಷ್ಟು ನಟನಟಿಯರು ಬೆಳ್ಳಿತೆರೆಗೆ ಬಂದು ಸಕ್ಸಸ್ ಕಂಡಿದ್ದಾರೆ. ಮೇಘಾ ಶೆಟ್ಟಿ ನಾಯಕಿಯಾಗಿ ನಟಿಸಿದ ಮೊದಲ ಸಿನಿಮಾ 'ತ್ರಿಬಲ್ ರೈಡಿಂಗ್'. ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಜೋಡಿಯಾಗಿ ಮೇಘಾ ಮಿಂಚಿದರು. ಆದರೆ ಸಿನಿಮಾ ಗೆಲ್ಲಲಿಲ್ಲ. ಆದರೆ ಒಂದಷ್ಟು ಹೊಸ ಅವಕಾಶಗಳು ಆಕೆ ಸಿಕ್ಕಿದೆ.