Don't Miss!
- Sports
ಇಂಡಿಯನ್ ಓಪನ್ ಆಫ್ ಸರ್ಫಿಂಗ್ 3ನೇ ಆವೃತ್ತಿ: ಮಂಗಳೂರಿನಲ್ಲಿ ಇಂದಿನಿಂದ ಭಾರತದ ಅಗ್ರ ಸರ್ಫರ್ಗಳ ಸ್ಪರ್ಧೆ
- Finance
ಪಾಕಿಸ್ತಾನದಲ್ಲಿ ಪೆಟ್ರೋಲ್ ದರ 30 ರೂ. ಏರಿಕೆ: ಕಾರಣವೇನು?
- News
ನಿರೂಪಕಿ ಅಮ್ರೀನ್ ಕೊಂದ ಭಯೋತ್ಪಾದಕರ ಹತ್ಯೆ
- Automobiles
ಓಲಾಗೆ ಹೊಸ ಸಮಸ್ಯೆ: ನಡು ರಸ್ತೆಯಲ್ಲಿ ಮುಂಭಾಗದ ಚಕ್ರ ಮುರಿದು ಕೆಟ್ಟುನಿಂತ ಸ್ಕೂಟರ್
- Education
Tumkur District Court Recruitment 2022 : 51 ಜವಾನ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಜಿಯೋದ ಈ ಪ್ಲ್ಯಾನಿನಲ್ಲಿ ಸಿಗುತ್ತೆ ಜಬರ್ದಸ್ತ್ ಡೇಟಾ ಮತ್ತು ವ್ಯಾಲಿಡಿಟಿ!
- Lifestyle
ಬ್ಯೂಟಿ ಟಿಪ್ಸ್: ತ್ವಚೆಗೆ ಅರಿಶಿನ ಹಚ್ಚುವಾಗ ಈ ತಪ್ಪುಗಳನ್ನು ಎಂದಿಗೂ ಮಾಡಲೇಬೇಡಿ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹೇಳದ ಜೋಕಿಗೆ ಜೈಲುಪಾಲಾಗಿದ್ದ ಮುನಾವರ್, ಇಂದು ಮತ್ತೆ ಸ್ಟಾರ್! ಯಾರೀ ಮುನಾವರ್?
ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಬೆಂಗಳೂರಿನಲ್ಲಿ ಹಠಾತ್ತನೆ ಕಾಮಿಡಿ ಶೋ ಒಂದು ರದ್ದಾಯಿತು. ಶೋ ನಡೆದರೆ ಸ್ಥಳಕ್ಕೆ ನುಗ್ಗಿ ಹಲ್ಲೆ ಮಾಡುತ್ತೇವೆ ಎಂದು ಹಿಂದುಪರ ಸಂಘಟನೆಯೊಂದು ಎಚ್ಚರಿಕೆ ನೀಡಿತ್ತು. ಇದೇ ಕಾರಣಕ್ಕೆ ಕಾರ್ಯಕ್ರಮಕ್ಕೆ ನೀಡಿದ್ದ ಅನುಮತಿಯನ್ನು ಹಿಂಪಡೆಯಲಾಯಿತು.
ಕಾಮಿಡಿ ಶೋ ಅನ್ನು ಪುನೀತ್ ರಾಜ್‌ಕುಮಾರ್ ಸ್ಮರಣಾರ್ಥ ಏರ್ಪಾಡು ಮಾಡಲಾಗಿತ್ತು. ಶೋ ನಿಂದ ಒಟ್ಟಾಗುವ ಹಣವನ್ನು ಪುನೀತ್ ರಾಜ್‌ಕುಮಾರ್ ಹೆಸರಲ್ಲಿ ಸತ್ಕಾರ್ಯಕ್ಕೆ ಬಳಸುವು ಆಯೋಜಕರ ಯೋಜನೆಯಾಗಿತ್ತು. ಕಾರ್ಯಕ್ರಮ ರದ್ದಾಗುವ ಮುನ್ನ 600 ಟಿಕೆಟ್‌ಗಳು ಮಾರಾಟವಾಗಿದ್ದವು. ಆದರೆ ಪೂರ್ವಾಗ್ರಹ ಪೀಡಿತ ಗುಂಪೊಂದರ ಕಾರಣದಿಂದ ಸದುದ್ದೇಶದಿಂದ ಕೂಡಿದ ಕಾರ್ಯಕ್ರಮ ರದ್ದಾಯಿತು. ಆ ಕಾಮಿಡಿ ಶೋನಲ್ಲಿ ಮುನಾವರ್ ಫಾರುಕಿ ಮಾತನಾಡುವವರಿದ್ದರು. ನಗಿಸಲಿದ್ದರು. ಆದರೆ ತಮ್ಮ ಮೇಲಿನ ಪೂರ್ವಾಗ್ರಹದಿಂದ ಕಾರ್ಯಕ್ರಮ ರದ್ದಾಗಿದ್ದು ಕಂಡು ಅವರ ಹೃದಯ ಒಡೆದಿತ್ತು. ಇನ್ನು ಮುಂದೆ ನಾನು ಸ್ಟಾಂಡಪ್ ಕಾಮಿಡಿ ಮಾಡುವುದಿಲ್ಲವೆಂದು ಹೇಳಿದ ಫಾರುಕಿ ಎಲ್ಲರಿಗೂ ಧನ್ಯವಾದ ಅರ್ಪಿಸಿ, ಗುಡ್ ಬೈ ಹೇಳಿದ್ದರು. ತಾವು ಮಾಡಿಲ್ಲದ ಜೋಕಿಗೆ ಜೈಲು ಪಾಲಾದಾಗಲೂ ವಿಚಲಿತರಾಗದಿದ್ದ ಮುನಾವರ್, ಬೆಂಗಳೂರಿನಲ್ಲಿ ಅಪ್ಪು ಹೆಸರಲ್ಲಿ ನಡೆಯುತ್ತಿದ್ದ ಕಾರ್ಯಕ್ರಮ ರದ್ದಾದಾಗ ಕುಸಿದುಬಿಟ್ಟಿದ್ದರು.
ಮುನಾವರ್ ಫಾರುಕಿ ಕಾಮಿಡಿಯಿಂದ ದೂರ ಸರಿದಿದ್ದನ್ನು ಹಿಂದುಪರ ಸಂಘಟನೆ ಹಾಗೂ ಇತರರು ಸಂಭ್ರಮಿಸಿದರು. ಫಾರುಕಿಯ ಹಾಸ್ಯವನ್ನು ಇಷ್ಟಪಟ್ಟಿದ್ದವರು ಸಹ ಫಾರುಕಿಯ ಜೀವನ ಮುಗಿಯಿತೆಂದೇ ಭಾವಿಸಿದ್ದರು. ಆದರೆ ಈಗ ಫಾರುಕಿ ಮರಳಿ ಬಂದಿದ್ದಾರೆ.

ಮುನಾವರ್‌ನನ್ನು ಜೈಲಿಗೆ ತಳ್ಳಲಾಗಿತ್ತು
ಧರ್ಮದ ವಿರುದ್ಧ ಜೋಕ್ ಮಾಡಿದ್ದಾನೆ ಎಂದು ಆರೋಪಿಸಿ ಜೈಲಿಗೆ ತಳ್ಳಲ್ಪಟ್ಟಿದ್ದ, ಸಾಮಾಜಿಕ ಜಾಲತಾಣದಲ್ಲಿ ಸತತ ಟ್ರೋಲಿಂಗ್, ಬೆದರಿಕೆ ಎದುರಿಸಿದ್ದ ಮುನಾವರ್ ಫಾರುಕಿ, ಭಾನುವಾರ ಮುಂಬೈ ರಸ್ತೆಗಳಲ್ಲಿ ಐಶಾರಾಮಿ ಬಿಎಂಡಬ್ಲು ಕಾರಿನಲ್ಲಿ ಮೆರವಣಿಗೆ ಹೊರಟಿದ್ದರು, ಕೆಲವು ತಿಂಗಳ ಹಿಂದೆ ಜನರಿಂದ ದೂಷಣೆಗೆ ಒಳಗಾಗಿದ್ದ ಅದೇ ಫಾರುಕಿ ಹಿಂದೆ ಬೈಕುಗಳಲ್ಲಿ ಯುವಕರು ಜೈಘೋಷ ಹಾಕುತ್ತಾ ಹಿಂಬಾಲಿಸಿದರು.

ಗಮನ ಸೆಳೆದ ಮುನಾವರ್
ಸ್ಟಾಂಡಪ್ ಕಾಮಿಡಿಯಿಂದ ದೂರ ಸರಿದ ಮುನಾವರ್ ಫಾರುಕಿಗೆ ಅವಕಾಶ ಕೊಟ್ಟಿದ್ದು ಏಕ್ತಾ ಕಪೂರ್. ಆಲ್ಟ್ ಬಾಲಾಜಿಯಲ್ಲಿ ಪ್ರಸಾರವಾದ 'ಲಾಕ್ ಅಪ್' ಹೆಸರಿನ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದರು ಮುನಾವರ್ ಫಾರುಕಿ. ಮೂರು ತಿಂಗಳು ನಡೆದ ಈ ಶೋನಲ್ಲಿ ತಮ್ಮ ತಮ್ಮ ಹಾಸ್ಯಪ್ರಜ್ಞೆ, ಜಾಣ್ಮೆ, ಮಾನವೀಯ ಗುಣಗಳಿಂದ ಪ್ರೇಕ್ಷಕರನ್ನು ಸೆಳೆದು ದೊಡ್ಡ ಸಂಖ್ಯೆಯ ಮತಗಳನ್ನು ಪಡೆದು ವಿಜೇತರಾಗಿದ್ದಾರೆ ಮುನಾವರ್. ಆ ಮೂಲಕ ತಮ್ಮ ಮೇಲೆ ಹೊರಿಸಿದ್ದ ಆರೋಪದ ವಿರುದ್ಧ, ತಮಗೆ ಮಾಡಲಾಗಿದ್ದ ಚಾರಿತ್ರ್ಯ ಹರಣದ ವಿರುದ್ಧ ನೈತಿಕ ಜಯ ಸಾಧಿಸಿದ್ದಾರೆ.

ಮುನಾವರ್ ಹಿನ್ನೆಲೆ ಸಾಮಾನ್ಯದ್ದಲ್ಲ
ಮುನಾವರ್ ಫಾರುಕಿ ಯದ್ದು ಸಾಮಾನ್ಯದ ಹಿನ್ನೆಲೆಯಲ್ಲ. ಮೂಲತಃ ಗುಜರಾತ್‌ನ ಜುನಾಘಡದ ಮುನಾವರ್ ಫಾರುಕಿ ಧರ್ಮದ ಕಾರಣಕ್ಕೆ ಹೆತ್ತ ತಾಯಿಯನ್ನೇ ಕಳೆದುಕೊಂಡವರು. 2002 ರಲ್ಲಿ ನಡೆದ ಗುಜರಾತ್ ಹಿಂಸಾಚಾರದಲ್ಲಿ ಮುನಾವರ್ ತಾಯಿ ನಿಧನಹೊಂದಿದರು. ಆಗ ಅವರ ವಯಸ್ಸು ಇನ್ನೂ 16 ವರ್ಷ. ಅಷ್ಟೇನು ಸ್ಥೀತಿವಂತವಲ್ಲದ ಕುಟುಂಬದಲ್ಲಿ ಬೆಳೆದ ಮುನಾವರ್‌ಗೆ ಸದಾ ಭಿನ್ನವಾಗಿ ಏನಾದರೂ ಮಾಡುವ ತುಡಿತ ಅದೇ ಕಾರಣಕ್ಕೆ ಗ್ರಾಫಿಕ್ ಡಿಸೈನ್ ಕಲಿತರು, ನಂತರ ಅವರನ್ನು ಸೆಳೆದಿದ್ದು ಸ್ಟಾಂಡ್‌ಅಪ್ ಕಾಮಿಡಿ.

ಸಾಕ್ಷಿಯೇ ಇಲ್ಲದೆ ಬಂಧಿಸಲಾಗಿತ್ತು
ಮುನಾವರ್ ಫಾರುಕಿಯ ಸ್ಟಾಂಡಪ್ ಕಾಮಿಡಿಗೆ ಅವರದ್ದೇ ಆದ ಅಭಿಮಾನಿ ಬಳಗ ಇತ್ತು. ಮುನಾವರ್‌ರ ಶೋಗಳು ಹೌಸ್‌ಫುಲ್ ಆಗುತ್ತಿದ್ದವು. ಆದರೆ ಅದಕ್ಕೂ ಕಲ್ಲು ಹಾಕಲಾಯಿತು. 2021 ರ ಹೊಸ ವರ್ಷದಂದು ಮಧ್ಯಪ್ರದೇಶದ ಇಂದೋರ್‌ನ ಮುನ್ರೊ ಕೇಫ್‌ನಲ್ಲಿ ಶೋ ನಡೆಸುತ್ತಿದ್ದರು. ಅಲ್ಲಿಗೆ ಹಠಾತ್ತನೆ ನುಗ್ಗಿದ ಬಿಜೆಪಿ ಶಾಸಕ ಮಾಲಿನಿ ಗೌರ್ ಪುತ್ರ ಏಕಲವ್ಯ ಸಿಂಗ್ ಗೌರ್, ಮುನಾವರ್ ಹಿಂದು ಧರ್ಮದ ವಿರುದ್ಧ, ಅಮಿತ್ ಶಾ ವಿರುದ್ಧ ಜೋಕ್ ಮಾಡಿದ್ದಾನೆಂದು ಆರೋಪಿಸಿ ಗಲಾಟೆ ಆರಂಭಿಸಿದರು. ಮುನಾವರ್ ವಿರುದ್ಧ ಆಡಲಾದ ಆರೋಪಕ್ಕೆ ಸಾಕ್ಷ್ಯವೇ ಇರಲಿಲ್ಲ. ಮುನಾವರ್ ಮಾಡಿದ ಜೋಕ್ ಯಾವುದು ಎಂಬುದು ಸಹ ಗೊತ್ತಿರದೇ ಪೊಲೀಸರು ಮುನಾವರ್ ಅನ್ನು ಬಂಧಿಸಿ ಜೈಲಿಗಟ್ಟಿದರು. ಒಂದು ತಿಂಗಳ ಕಾಲ ಜೈಲಿನಲ್ಲಿದ್ದ ಮುನಾವರ್‌ಗೆ ಸುಪ್ರಿಂ ಕೋರ್ಟ್ ಜಾಮೀನು ನೀಡಿತು.

ಒಂದೇ ತಿಂಗಳಲ್ಲಿ 12 ಶೋ ರದ್ದು!
ಆಗ ದೊಡ್ಡ ಮಟ್ಟದ ಟ್ರೋಲಿಂಗ್ ಹಾಗೂ ಜೀವ ಬೆದರಿಕೆಗಳನ್ನು ಮುನಾವರ್ ಅನುಭವಿಸಿದ್ದರು. ಆ ಘಟನೆ ಬಳಿಕವೂ ಧೃತಿಗೆಡದೆ ಸ್ಟಾಂಡಪ್ ಕಾಮಿಡಿ ಮಾಡಲು ಮುಂದುವರೆಸಿದರು ಮುನಾವರ್. ಆದರೆ ಹಿಮದುಪರ ಸಂಘಟನೆಗಳು ಮುನಾವರ್ ಅನ್ನು ಹತ್ತಿಕ್ಕಲೆಂದು ನಿಶ್ಚಯಿಸಿ ದೇಶದ ಎಲ್ಲಿಯೇ ಅವರ ಶೋ ಆಯೋಜಿಸಿದರು ಬೆದರಿಕೆಯೊಡ್ಡಿ ಕಾರ್ಯಕ್ರಮ ರದ್ದಾಗುವಂತೆ ಮಾಡಿದರು. ಬೆಂಗಳೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೂ ಸೇರಿದಂತೆ ಕೇವಲ ಒಂದೇ ತಿಂಗಳಲ್ಲಿ ಮುನಾವರ್ ಅವರ 12 ಶೋಗಳು ರದ್ದಾಗಿದ್ದವು.

ಧೃತಿಗೆಡಲಿಲ್ಲ ಮುನಾವರ್ ಫಾರುಕಿ
ಆದರೂ ಧೃತಿಗೆಡದ ಮುನಾವರ್ ಫಾರುಕಿ ಸಿಕ್ಕ ಅವಕಾಶವನ್ನು ಬಳಸಿಕೊಂಡು ಮತ್ತೆ ಮೇಲೆದಿದ್ದಾರೆ. 'ಲಾಕ್ ಅಪ್' ರಿಯಾಲಿಟಿ ಶೋ ಮೂಲಕ ತಮ್ಮ ವ್ಯಕ್ತಿತ್ವದ ಪರಿಚಯವನ್ನು ಪ್ರೇಕ್ಷಕರಿಗೆ ಮಾಡಿಸಿದ್ದಾರೆ. 18 ಲಕ್ಷಕ್ಕೂ ಹೆಚ್ಚು ಮತಗಳನ್ನು ಗಳಿಸಿ ಜಯಶೀಲರಾಗಿದ್ದಾರೆ. 'ಲಾಕ್ ಅಪ್' ಶೋ ಗೆದ್ದ ಮುನಾವರ್‌ಗೆ ಇದೀಗ ಮತ್ತೊಂದು ರಿಯಾಲಿಟಿ ಶೋ ಅವಕಾಶ ದೊರತಿದೆ. ಅವರು 'ಖತರೋಂಕೆ ಖಿಲಾಡಿ' ರಿಯಾಲಿಟಿ ಶೋನಲ್ಲಿ ಭಾಗವಹಿಸಲಿದ್ದಾರೆ.