Don't Miss!
- News
ಬಿಬಿಎಂಪಿಯಿಂದ ಫೆಬ್ರುವರಿ. 2 ರಿಂದ 5 ರವರೆಗೆ 'ಖಾತಾ ಮೇಳ' ಆಯೋಜನೆ
- Lifestyle
ಈ ಚಿಕ್ಕ ಬದಲಾವಣೆ ಮಾಡಿದರೆ ಸಾಕು ತೂಕ ಕಡಿಮೆಯಾಗುವುದು
- Sports
ಟೆಸ್ಟ್ ಕ್ರಿಕೆಟ್ನಲ್ಲಿ ಈತನಿಗೆ ಅವಕಾಶ ಸಿಕ್ಕರೆ ಶತಕ, ದ್ವಿಶತಕ ಬಾರಿಸುತ್ತಾನೆ; ಸುರೇಶ್ ರೈನಾ
- Technology
WhatsApp: ವಾಟ್ಸಾಪ್ ಮ್ಯಾಕ್ಒಎಸ್ MacOS ಆ್ಯಪ್ ಬಿಡುಗಡೆ! ಇದನ್ನು ಬಳಸುವುದು ಹೇಗೆ?
- Finance
Budget 2023: ಹಲ್ವಾ ಸಮಾರಂಭ ಎಂದರೇನು, ಪ್ರಾಮುಖ್ಯತೆಯೇನು?
- Automobiles
ಬೊಲೆರೊ ನಿಯೋ ಲಿಮಿಟೆಡ್ ಎಡಿಷನ್ ಕುರಿತ ಟಾಪ್ ವಿಷಯಗಳಿವು
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ದಿ ಕಾಶ್ಮೀರ್ ಫೈಲ್ಸ್' ಕಳಪೆ ಸಿನಿಮಾ ಎಂದ ಇಸ್ರೇಲಿ ನಿರ್ದೇಶಕ ಯಾರು? ಹಿನ್ನೆಲೆ ಏನು?
ಕಾಶ್ಮೀರ ಪಂಡಿತರ ಮೇಲಾದ ಹಿಂಸೆಯ ಕುರಿತಾದ ಕತೆ ಹೊಂದಿರುವ ಇತ್ತೀಚಿನ ಸಿನಿಮಾ 'ದಿ ಕಾಶ್ಮೀರ್ ಫೈಲ್ಸ್' ಮತ್ತೆ ಸುದ್ದಿಯಲ್ಲಿ. ಸಿನಿಮಾದ ಬಗ್ಗೆ ಗೋವಾ ಸಿನಿಮೋತ್ಸವದಲ್ಲಿ ಇರಾನಿ ನಿರ್ದೇಶಕ ಆಡಿರುವ ಮಾತುಗಳ ಬಗ್ಗೆ ಚರ್ಚೆ ನಡೆಯುತ್ತಿವೆ.
'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ಬಿಡುಗಡೆ ಆದಾಗಿನಿಂದಲೂ ಇದೊಂದು ಪ್ರೊಪಾಗಾಂಡ ಸಿನಿಮಾ ಎಂದೇ ಹೇಳಲಾಗುತ್ತಿತ್ತು. ಈ ಸಿನಿಮಾ, ಅನ್ಯ ಕೋಮಿನ ಬಗ್ಗೆ ದ್ವೇಷ ಮೂಡಿಸುತ್ತಿದೆ. ಹಿಂಸೆಗೆ ಪ್ರಚೋದನೆ ನೀಡುತ್ತಿದೆ ಎಂಬ ವಾದ ಕೇಳಿ ಬಂದಿತ್ತು. ಆದರೆ ಈ ಸಿನಿಮಾವನ್ನು ದೊಡ್ಡ ಪ್ರಮಾಣದಲ್ಲಿ ಜನ ನೋಡಿ ಬಾಕ್ಸ್ ಆಫೀಸ್‌ನಲ್ಲಿ ಕೋಟಿಗಟ್ಟಲೆ ಲಾಭವನ್ನೂ ಮಾಡಿತು. ಸಿನಿಮಾಕ್ಕೆ ಪ್ರಧಾನಿ ಮೋದಿ, ಬಿಜೆಪಿ ಹಾಗೂ ಆರ್‌ಎಸ್‌ಎಸ್ ಭರಪೂರ ಪ್ರಚಾರವನ್ನೂ ಒದಗಿಸಿದರು.
ಇದೀಗ ಗೋವಾ ಸಿನಿಮೋತ್ಸವದ ಮುಕ್ತಾಯ ಸಮಾರಂಭದಲ್ಲಿ ಈ ಸಿನಿಮಾದ ಬಗ್ಗೆ ಸಿನಿಮೋತ್ಸವದ ಜ್ಯೂರಿ ಸಮಿತಿಯ ಮುಖ್ಯಸ್ಥ, ಇರಾನಿ ಸಿನಿಮಾ ನಿರ್ದೇಶಕ ನದಾವ್ ಲಪಿದ್, 'ದಿ ಕಾಶ್ಮೀರ್ ಫೈಲ್ಸ್' ಅಸಹ್ಯಕರ, ಪ್ರೊಪಗಾಂಡ ಸಿನಿಮಾ ಎಂದು ವೇದಿಕೆಯ ಮೇಲೆ ಹೇಳಿದ್ದರು. ಆ ಸಿನಿಮಾವನ್ನು ಹೊರತುಪಡಿಸಿ ಇನ್ನುಳಿದ ಹದಿನೈದು ಸಿನಿಮಾಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದರು. ಈ ವಿಷಯ ದೊಡ್ಡದಾಗಿ ಚರ್ಚೆಗೆ ಕಾರಣವಾಗಿದ್ದು, ಈ ನದಾವ್ ಲಪಿದ್ ಯಾರೆಂಬ ಬಗ್ಗೆ ಸಹ ಕುತೂಹಲ ಮೂಡಿದೆ.

ನದಾವ್ ಲಪಿದ್ ಯಾರು? ಹಿನ್ನೆಲೆ ಏನು?
ನದಾವ್ ಲಪಿದ್, ಇಸ್ರೇಲಿನ ಸಿನಿಮಾ ನಿರ್ದೇಶಕ. ಇವರು ಜನಿಸಿದ್ದು ಇಸ್ರೇಲಿನ ರಾಜಧಾನಿ ತೆಲ್ ಅವೀವ್‌ನಲ್ಲಿ. ಜೆರುಸುಲೆಮ್‌ನಲ್ಲಿ ಸಿನಿಮಾ ಹಾಗೂ ಟಿವಿ ವಿಷಯವಾಗಿ ಪದವಿ ಪಡೆದಿರುವ ನದಾವ್ ತತ್ವಶಾಸ್ತ್ರದಲ್ಲಿಯೂ ಪದವಿ ಪಡೆದಿದ್ದಾರೆ. ಉತ್ತಮ ಸಿನಿಮಾಕರ್ಮಿ ಎಂದು ಹೆಸರುಗಳಿಸಿರುವ ನದಾವ್ ಲಪಿದ್, 2015 ರಲ್ಲಿ ಲೆಕಾರ್ನೊ ಸಿನಿಮೋತ್ಸವದ ಗೋಲ್ಡನ್ ಜ್ಯೂರಿ ಸದಸ್ಯರಾಗಿದ್ದರು. ಬಳಿಕ 2016 ರಲ್ಲಿ ಕ್ಯಾನಸ್ ಫಿಲಂ ಫೆಸ್ಟ್‌ನಲ್ಲಿ ಕ್ರಿಟಿಕ್ ವೀಕ್ ಜ್ಯೂರಿ ಸದಸ್ಯರಾಗಿದ್ದರು. 71 ನೇ ಬರ್ಲಿನ್ ಸಿನಿಮೋತ್ಸವದಲ್ಲಿ ಅಧಿಕೃತ ಜ್ಯೂರಿ ಸದಸ್ಯರಾಗಿಯೂ ನದಾವ್ ಕಾರ್ಯ ನಿರ್ವಹಿಸಿದ್ದಾರೆ.

ನದಾವ್ ನಿರ್ದೇಶನದ ಸಿನಿಮಾಗಳು
ವಿಶ್ವಾಸಾರ್ಹ ಜ್ಯೂರಿ ಸದಸ್ಯ ಆಗಿರುವ ಜೊತೆಗೆ ತಮ್ಮ ಸಿನಿಮಾಗಳಿಂದಲೂ ಜನಪ್ರಿಯತೆಗಳಿಸಿದ್ದಾರೆ ನದಾವ್ ಲಪಿದ್. ಇವರ ಮೊದಲ ಸಿನಿಮಾ 'ಪೋಲಿಸ್‌ಮ್ಯಾನ್'ಗೆ ಲೊಕಾರ್ನೊ ಸಿನಿಮೋತ್ಸವದಲ್ಲಿ ಜ್ಯೂರಿಗಳಿಂದ ವಿಶೇಷ ಪ್ರಶಸ್ತಿ ಲಭಿಸಿತ್ತು. 2014 'ಟೀಚರ್', 2019 ರ 'ಕಿಂಡರ್‌ಗಾರ್ಟೆನ್ ಟೀಚರ್' ಸಿನಿಮಾಗಳು ಸಹ ಹೆಸರು ಗಳಿಸಿದವು. ನಿರ್ದೇಶಕನಿಗೂ ಹೆಸರು ತಂದುಕೊಟ್ಟವು. ಸಿನಿಮಾಗಳ ಜೊತೆಗೆ ಪುಸ್ತಕವನ್ನೂ ನದಾವ್ ಬರೆದಿದ್ದಾರೆ. ಕೆಲವು ಡಾಕ್ಯುಮೆಂಟರಿಗಳನ್ನು ಸಹ ನಿರ್ಮಾಣ ಮಾಡಿದ್ದಾರೆ.

ಸರ್ಕಾರದೊಂದಿಗೆ ಭಿನ್ನಾಭಿಪ್ರಾಯ ಹೊಂದಿರುವ ನಿರ್ದೇಶಕ
ನದಾವ್ ಲಪಿದ್, ಇಸ್ರೇಲಿ ಸರ್ಕಾರದ ಧ್ಯೆಯ-ಉದ್ದೇಶಗಳೊಟ್ಟಿಗೆ ಭಿನ್ನಾಭಿಪ್ರಾಯ ಇರಿಸಿಕೊಂಡಿರುವ ನಿರ್ದೇಶಕ. ಇದಕ್ಕೆ ಅವರ ಇತ್ತೀಚಿನ ಸಿನಿಮಾ 'ಅಹೆದ್ಸ್ ನೀ' ಉದಾಹರಣೆ. ಇಸ್ರೇಲಿ ಸರ್ಕಾರ ಜಾರಿಗೆ ತಂದ 'ಶೋಮ್ರೊನ್' (ಪ್ರಾದೇಶಿಕತೆಗೆ ಒತ್ತು ನೀಡಲು ತರಲಾದ ಯೋಜನೆ)ಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಶೋಮ್ರೊನ್ ಸಿನಿಮಾ ಫಂಡ್ ವಿರೋಧಿಸಿ 250 ಇಸ್ರೇಲಿ ಸಿನಿಮಾ ಕರ್ಮಿಗಳು ಸರ್ಕಾರದ ವಿರುದ್ಧ ಪತ್ರ ಬರೆದಿದ್ದರು ಅದರಲ್ಲಿ ನದಾವ್ ಲಪಿದ್ ಸಹ ಒಬ್ಬರು. ಶೋಮ್ರೊನ್ ಸಿನಿಮಾ ಫಂಡ್ ಅನ್ನು ವೆಸ್ಟ್ ಬ್ಯಾಂಕ್‌ನಲ್ಲಿನ ಇಸ್ರೇಲಿಗಳನ್ನು ಬಲಪಡಿಸಲು ಅಲ್ಲಿರುವ ಪ್ಯಾಲೆಸ್ತೇನಿಯರಿಗೆ ವಿರುದ್ಧವಾಗಿ ಬಳಸಲು ನೀಡಲಾಗುತ್ತಿದೆ ಎಂಬುದು ಫಂಡ್ ನಿರಾಕರಣೆಗೆ ಪ್ರಮುಖ ವಾದ.

ಪ್ಯಾಲಸ್ತೇನಿ ಯುವಕನ ಬಗ್ಗೆ ಸಿನಿಮಾ ಮಾಡಲಿದ್ದಾರೆ
ಇಸ್ರೇಲಿ ಕಲಾವಿದರ ಮೇಲೆ ಆಗುತ್ತಿರುವ ರಾಜಕೀಯ ಒತ್ತಡ. ಬಲಪಂಥೀಯ ರಾಜಕಾರಣಿಗಳಿಂದ ಅವರ ಧ್ಯೇಯಗಳ ಹೇರಿಕೆಯಿಂದ ಕಲಾವಿದರು ಅನುಭವಿಸುತ್ತಿರುವ ಸಮಸ್ಯೆಯ ಬಗ್ಗೆ ನಿರ್ದೇಶಕ ನದಾವ್ ಲಪಿದ್ 2021 ರಲ್ಲಿ 'ಅಹೆದ್ಸ್ ನೀ' ಸಿನಿಮಾ ನಿರ್ದೇಶಿಸಿದ್ದಾರೆ. ಈ ಸಿನಿಮಾ ಕ್ಯಾನಸ್ ಸಿನಿಮೋತ್ಸವದಲ್ಲಿ ಪ್ರದರ್ಶನ ಕಂಡು ಉತ್ತಮ ಪ್ರತಿಕ್ರಿಯೆಯನ್ನೂ ಗಳಿಸಿಕೊಂಡಿದೆ. ಇದೀಗ ನದಾವ್ ಲಪಿದ್, ತಮ್ಮ ಹೊಸ ಸಿನಿಮಾ ಘೋಷಿಸಿದ್ದು, 16 ವರ್ಷದ ಪ್ಯಾಲೆಸ್ತೇನಿ ಯುವಕ ಅಹೇದ್ ತಮಿನಿ ಬಗ್ಗೆ ಸಿನಿಮಾ ಮಾಡಲು ತಯಾರಾಗಿದ್ದಾರೆ. ಈತ ಇಸ್ರೇಲಿ ಯೋಧನಿಗೆ ಕಪಾಳಕ್ಕೆ ಹೊಡೆದಿದ್ದಕ್ಕೆ 2017 ರಲ್ಲಿ ಜೈಲಿಗೆ ಹಾಕಲಾಗಿದೆ. ಇಸ್ರೇಲಿ ನಿರ್ದೇಶಕನೊಬ್ಬ ಪ್ಯಾಲೆಸ್ತೇನಿಗಳ ಪರ ಸಿಂಪತಿ ಹೊಂದಿರುವುದಕ್ಕೆ ನದಾವ್ ಬಗ್ಗೆ ಇಸ್ರೇಲ್ ಸರ್ಕಾರಕ್ಕೆ ಹಾಗೂ ಕೆಲ ನಾಗರೀಕರಿಗೆ ಅಸಮಾಧಾನ ಇದೆ.

2014 ರಿಂದ ಗೋವಾ ಸಿನಿಮೋತ್ಸವದೊಂದಿಗೆ ನಂಟು
ನದಾವ್‌ಗೆ ಗೊವಾ ಸಿನಿಮೋತ್ಸವದ ಜೊತೆಗೆ ಹಳೆಯ ನಂಟಿದೆ. ನದಾವ್ ಅವರ ಸಿನಿಮಾಗಳು ಗೋವಾ ಸಿನಿಮೋತ್ಸವದಲ್ಲಿ ಪ್ರದರ್ಶನ ಕಂಡಿವೆ. 2014 ರಲ್ಲಿ ನದಾವ್‌ರ 'ದಿ ಕಿಂಡರ್‌ಗಾರ್ಟೆನ್ ಟೀಚರ್' ಸಿನಿಮಾ ಗೋವಾ ಸಿನಿಮೋತ್ಸವದಲ್ಲಿ ಪ್ರದರ್ಶನವಾದ ಜೊತೆಗೆ ಆ ಸಿನಿಮಾದ ಸರಿಟ್ ಲಾರಿ ಉತ್ತಮ ನಟಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. ಈ ಬಾರಿಯ ಸಿನಿಮೋತ್ಸವದಲ್ಲಿ ನದಾವ್, ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದರು. ಹದಿನಾರು ಸಿನಿಮಾಗಳನ್ನು ವೀಕ್ಷಿಸಿ ಅತ್ಯುತ್ತಮ ಸಿನಿಮಾ, ನಟ, ನಟಿ, ನಿರ್ದೇಶಕ ಇತ್ಯಾದಿಗಳನ್ನು ಆಯ್ಕೆ ಮಾಡಿದರು. ಆದರೆ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾವನ್ನು ಪ್ರೊಪಾಗಾಂಡಾ ಹಾಗೂ ಅತ್ಯಂತ ಕೀಳು ಅಭಿರುಚಿಯ ಸಿನಿಮಾ ಎಂದು ತೆಗಳಿದರು.