twitter
    For Quick Alerts
    ALLOW NOTIFICATIONS  
    For Daily Alerts

    ಅಣ್ಣಾವ್ರು ಅವತ್ತೇ 'ಕುಮಾರರಾಮ' ಸಿನಿಮಾ ಮಾಡಬೇಕಿತ್ತು, ಆದ್ರೆ ಆಗಿಲ್ಲ ಏಕೆ?

    |

    ಆಡು ಮುಟ್ಟದ ಸೊಪ್ಪಿಲ್ಲ, ರಾಜ್ ಕುಮಾರ್ ಮಾಡದ ಪಾತ್ರಗಳಿಲ್ಲ ಎಂಬ ಮಾತು ಅಣ್ಣಾವ್ರ ಪಾಲಿಗೆ ಬಹಳ ಸೂಕ್ತ. ಪೌರಾಣಿಕ, ಐತಿಹಾಸಿಕ, ಸಾಮಾಜಿಕ, ಬಾಂಡ್ ಅಂಥ ಪಾತ್ರಗಳನ್ನು ನಿರ್ವಹಿಸಿರುವ ರಾಜ್ ಕುಮಾರ್ ಚಿತ್ರರಂಗಕ್ಕೆ ನಿಜವಾದ ನಟ ಸಾರ್ವಭೌಮ.

    'ನನಗೆ ಇಂತಹದ್ದೇ ಸಿನಿಮಾ ಮಾಡ್ಬೇಕು, ಇಂತಹದ್ದೇ ಪಾತ್ರ ಮಾಡಬೇಕು ಎಂಬ ಯಾವುದೇ ಆಸೆ ಇರಲಿಲ್ಲ, ಅವರು (ಚಿತ್ರರಂಗದವರು) ಇದನ್ನು ಮಾಡಿ ಚೆನ್ನಾಗಿರುತ್ತೇ ಅಂತಿದ್ದರು, ನಾನು ಮಾಡ್ತಿದ್ದೆ, ಅದನ್ನು ನೀವು ಇಷ್ಟ ಪಡ್ತಿದ್ರಿ' ಎಂದು ರಾಜ್ ಕುಮಾರ್ ಅವರೇ ಅನೇಕ ವೇದಿಕೆಗಳಲ್ಲಿ ಹೇಳಿದ್ದರು. ಆದರೆ, ಅಣ್ಣಾವ್ರಿಂದ ಈ ಸಿನಿಮಾ ಮಾಡಿಸಬೇಕು ಎಂದು ಪ್ರಯತ್ನಿಸಿ ಕೈಬಿಟ್ಟಿರುವ ಅನೇಕ ಪ್ರಾಜೆಕ್ಟ್‌ಗಳಿವೆ. ಅದರಲ್ಲಿ ಒಂದು ಕುಮಾರರಾಮನ ಕಥೆ.

    ಅಪ್ಪಾಜಿ ಯಾವತ್ತು ನನ್ನನ್ನು ಹೆಸರಿಟ್ಟು ಕರೆಯುತ್ತಿರಲಿಲ್ಲ: ಡಾ.ರಾಜ್ ಬಗ್ಗೆ ಅಪ್ಪು ಭಾವುಕ ಸಾಲುಅಪ್ಪಾಜಿ ಯಾವತ್ತು ನನ್ನನ್ನು ಹೆಸರಿಟ್ಟು ಕರೆಯುತ್ತಿರಲಿಲ್ಲ: ಡಾ.ರಾಜ್ ಬಗ್ಗೆ ಅಪ್ಪು ಭಾವುಕ ಸಾಲು

    'ಕಂಪ್ಲಿ ರಾಜ್ಯದ ರಾಜಕುಮಾರನಾದ ಕುಮಾರರಾಮನ ಕಥೆಯನ್ನು ಸಿನಿಮಾ ಮಾಡಬೇಕು ಎಂದು ನಿರ್ಧರಿಸಿ ಎಲ್ಲ ತಯಾರಿ ನಡೆದಿತ್ತು. ಪೂಜೆಯೂ ಆಗಿತ್ತು. ಆಮೇಲೆ ಕೆಲವು ಕಾರಣಗಳಿಂದ ಬೇಡ ಎಂದು ನಿಲ್ಲಿಸಲಾಯಿತು' ಎಂದು ಹಿರಿಯ ನಿರ್ಮಾಪಕ ಕೆಸಿಎನ್ ಚಂದ್ರಶೇಖರ್ ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಬಹಿರಂಗಪಡಿಸಿದರು. ಮುಂದೆ ಓದಿ...

    ಚಿಕ್ಕಮ್ಮನೇ ಮಗನನ್ನು ಪ್ರೀತಿಸುವ ಕಥೆ

    ಚಿಕ್ಕಮ್ಮನೇ ಮಗನನ್ನು ಪ್ರೀತಿಸುವ ಕಥೆ

    ಚಿಕ್ಕಮ್ಮನೇ ಮಗನನ್ನು ಪ್ರೀತಿಸುವ, ವ್ಯಾಮೋಹಿಸುವ ಸನ್ನಿವೇಶಗಳು ಈ ಚಿತ್ರದಲ್ಲಿತ್ತು. ಕುಮಾರರಾಮ ಮತ್ತು ರತ್ನಾಜಿ ಪ್ರೀತಿಸುತ್ತಾರೆ. ಆದರೆ, ಕುಮಾರರಾಮನ ತಂದೆ ರತ್ನಾಜಿಯನ್ನು ಮದುವೆ ಆಗಿಬಿಡುತ್ತಾರೆ. ಈ ಮದುವೆ ಬಳಿಕ ವರಸೆಯಲ್ಲಿ ಕುಮಾರರಾಮ ರತ್ನಾಜಿಗೆ ಮಗ ಆಗುತ್ತಾನೆ. ಪರನಾರಿ ಸಹೋದರನೆಂಬ ಖ್ಯಾತಿ ಹೊಂದಿದ್ದ ಕುಮಾರರಾಮ ರತ್ನಾಜಿಯನ್ನು ಚಿಕ್ಕಮ್ಮನಂತೆ ಕಾಣುತ್ತಾನೆ. ಮದುವೆ ನಂತರವೂ ರತ್ನಾಜಿ, ಕುಮಾರರಾಮನನ್ನು ಪೀಡಿಸುತ್ತಾಳೆ.

    ಚಿಕ್ಕಮ್ಮನನ್ನು ಪ್ರೀತಿಸುವ ಪಾತ್ರದಲ್ಲಿ ರಾಜ್ ಕುಮಾರ್?

    ಚಿಕ್ಕಮ್ಮನನ್ನು ಪ್ರೀತಿಸುವ ಪಾತ್ರದಲ್ಲಿ ರಾಜ್ ಕುಮಾರ್?

    ಚಿಕ್ಕಮ್ಮನನ್ನು ಪ್ರೀತಿಸುವ ಕುಮಾರರಾಮನ ಪಾತ್ರದಲ್ಲಿ ರಾಜ್ ಕುಮಾರ್ ಅವರನ್ನು ನೋಡಲು ಅಭಿಮಾನಿಗಳು ಒಪ್ಪುತ್ತಾರಾ ಎಂಬ ಚರ್ಚೆಯೊಂದು ಎದುರಾಯಿತು. ಅಣ್ಣಾವ್ರು ಸಕಾರಾತ್ಮಕವಾಗಿ ನೋಡಿಯೇ ಹೆಚ್ಚು ಇಷ್ಟಪಡ್ತಿದ್ದವರು ಇಂತಹ ಪಾತ್ರ ಹೇಗೆ ಸ್ವೀಕರಿಸಬಹುದು ಎಂಬ ಆತಂಕ ಕಾಡಿತು. ಇದರಿಂದ ಅಭಿಮಾನಿಗಳು ತಿರುಗಿಬೀಳಬಹುದೇ ಎಂಬ ಆಲೋಚನೆಯಿಂದ ಈ ಪ್ರಾಜೆಕ್ಟ್ ಕೈಬಿಡಬೇಕಾಯಿತು ಎಂದು ಚಂದ್ರಶೇಖರ್ ಬಹಿರಂಗಪಡಿಸಿದ್ದಾರೆ.

    'ಬಂಗಾರದ ಮನುಷ್ಯ' ಸಿನಿಮಾದ ನೋಡಿದ ಕಥೆ ಹೇಳಿದ ಜಗ್ಗೇಶ್'ಬಂಗಾರದ ಮನುಷ್ಯ' ಸಿನಿಮಾದ ನೋಡಿದ ಕಥೆ ಹೇಳಿದ ಜಗ್ಗೇಶ್

    ವಿವಾದ ಗಾಳಿ ಬೀಸಿತ್ತು

    ವಿವಾದ ಗಾಳಿ ಬೀಸಿತ್ತು

    ಒಂದು ಕಡೆ ಚಿಕ್ಕಮ್ಮನ ಪ್ರೀತಿಸುವ ಪಾತ್ರದಲ್ಲಿ ರಾಜ್ ಕುಮಾರ್ ಮತ್ತೊಂದೆಡೆ ಹಿಂದೂ-ಮುಸ್ಲಿಂ ನಡುವೆ ವಿವಾದಕ್ಕೆ ಕಾರಣವಾಗಬಹುದು ಎಂಬ ಅಂಶವೂ ಕಥೆಯಲ್ಲಿತ್ತು. ದೆಹಲಿ ಸುಲ್ತಾನ ಮತ್ತು ಕುಮಾರರಾಮನ ನಡುವಿನ ಸನ್ನಿವೇಶಗಳಲ್ಲಿ ಸುಲ್ತಾನರಿಗೆ ಅಗೌರವ ತೋರಿಸುವ ದೃಶ್ಯಗಳಿದ್ದವು. ಆ ಸಮಯಕ್ಕೆ ಅದು ಸೂಕ್ಷ್ಮವಾಗಿತ್ತು. ಈ ಕಾರಣಗಳಿಂದ ಕುಮಾರರಾಮ ಆ ಸಮಯದಲ್ಲಿ ಸಕ್ಸಸ್ ಆಗಲಿಲ್ಲ ಎಂದು ಕೆಸಿಎನ್ ಚಂದ್ರಶೇಖರ್ ಮಾಹಿತಿ ನೀಡಿದ್ದಾರೆ.

    ಅದೇ ಪಾತ್ರ ಶಿವಣ್ಣ ಮಾಡಿದ್ರು

    ಅದೇ ಪಾತ್ರ ಶಿವಣ್ಣ ಮಾಡಿದ್ರು

    2006ರಲ್ಲಿ ಅದೇ ಕಥೆಯನ್ನು ರಾಜ್ ಕುಮಾರ್ ಅವರ ಪುತ್ರ ಶಿವರಾಜ್ ಕುಮಾರ್ ಮಾಡಿದರು. 'ಗಂಡುಗಲಿ ಕುಮಾರರಾಮ' ಎಂಬ ಹೆಸರಿನಲ್ಲಿ ಈ ಸಿನಿಮಾ ತಯಾರಾಗಿ ಬಿಡುಗಡೆ ಆಯಿತು. ಕುಮಾರರಾಮನ ಪಾತ್ರದಲ್ಲಿ ಶಿವಣ್ಣ ನಟಿಸಿ ಸೈ ಎನಿಸಿಕೊಂಡರು. ಆದ್ರೆ, ಸಿನಿಮಾ ನಿರೀಕ್ಷಿತ ಯಶಸ್ಸು ಸಾಧಿಸಿಲ್ಲ.

    English summary
    Why did 'Kumara Rama' Based movie not come in the time of Rajkumar?.
    Friday, April 9, 2021, 14:08
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X