»   » ಬಾಲ್ಕನಿಯಲ್ಲಿ ಶಾಹಿದ್ ಜೊತೆ ಅನುಷ್ಕಾ ಗಾಢ ಚುಂಬನ

ಬಾಲ್ಕನಿಯಲ್ಲಿ ಶಾಹಿದ್ ಜೊತೆ ಅನುಷ್ಕಾ ಗಾಢ ಚುಂಬನ

Posted By:
Subscribe to Filmibeat Kannada

ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡಿದಿದೆ. ಆದರೆ ಸುದ್ದಿ ಮಾತ್ರ ಇಡೀ ಜಗತ್ತಿಗೆ ಗೊತ್ತಾಗಿದೆ. ಬಾಲಿವುಡ್ ಚಾಕೋಲೇಟ್ ಬಾಯ್ ಶಾಹಿದ್ ಕಪೂರ್ ಹಾಗೂ ಅನುಷ್ಕಾ ಶರ್ಮಾ ಇಬ್ಬರೂ ಕಣ್ಣುತಪ್ಪಿಸಿ ಮುದ್ದಾಡಿದ ಪ್ರಣಯ ಪ್ರಸಂಗ ಈಗ ಬಾಲಿವುಡ್‌ನಲ್ಲಿ ಭಾರಿ ಕೋಲಾಹಲವೆಬ್ಬಿಸಿದೆ.


ಇಮ್ರಾನ್ ಖಾನ್ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಇವರಿಬ್ಬರೂ ಭಾಗಿಯಾಗಿದ್ದರು. ಒಂದು ಕಡೆ ಕಾರ್ಯಕ್ರಮ ನಡೆಯುತ್ತಿದ್ದರೆ ಇನ್ನೊಂದು ಕಡೆ ಇವರಿಬ್ಬರೂ ಕಣ್ಣುತಪ್ಪಿಸಿ ಮಾಯವಾಗಿದ್ದರು. ಬಳಿಕ ಬಾಲ್ಕನಿಯಲ್ಲಿ ಕೂತು ಪರಸ್ಪರ ಚುಂಬನದಲ್ಲಿ ಮೈಮರೆತಿದ್ದರು ಎಂಬುದನ್ನು 'ಮುಂಬೈ ಮಿರರ್' ಪತ್ರಿಕೆ ಸವಿವರವಾದ ಸುದ್ದಿ ಪ್ರಕಟಿಸಿದೆ.

ಕಾರ್ಯಕ್ರಮದಲ್ಲೇ ಇವರಿಬ್ಬರ ಕಣ್ಣು ಕಣ್ಣು ಕಲೆತು, ದೇಹದ ಉಷ್ಣಾಂಶದಲ್ಲಿ ತೀವ್ರ ಏರಿಕೆ ಕಂಡು ಇಬ್ಬರೂ ಬಾಲ್ಕನಿಗೆ ದೌಡಾಯಿಸಿದ್ದರು. ಬಳಿಕ ಇಬ್ಬರೂ ಬಾಹುಬಂಧನ, ಅಧರ ಚುಂಬನದಲ್ಲಿ ಮೈಮರೆತಿದ್ದಾಗಿ ಪತ್ರಿಕೆ ವರದಿ ಮಾಡಿದೆ.

'ಬದ್ಮಾಷ್ ಕಂಪನಿ' ಚಿತ್ರ ಬಿಡುಗಡೆ ವೇಳೆಯಲ್ಲೇ ಇವರಿಬ್ಬರ ನಡುವೆ ಪ್ರೇಮ ಅಂಕುರಿಸಿತ್ತು ಎನ್ನಲಾಗಿದೆ. ಮನೀಷ್ ಶರ್ಮ ಅವರ ಮತ್ತೊಂದು ಚಿತ್ರಕ್ಕೂ ಇಬರಿಬ್ಬರೂ ಸಹಿ ಹಾಕಿದ್ದಾರೆ. ಈ ಹಿಂದೆ ಶಾಹಿದ್ ಕಪೂರ್ ಬರ್ತ್‌ಡೇ ಪಾರ್ಟಿಯಲ್ಲಿ ರಣವೀರ್ ಸಿಂಗ್‌ ಜೊತೆ ಅನುಷ್ಕಾ ತುಟಿಗೆ ತುಟಿ ಬೆರೆಸಿದ್ದರು.

ಕರೀನಾ ಕಪೂರ್ ಜೊತೆಗಿನ ಶಾಹಿದ್ ಸಂಬಂಧ ಮುರಿದು ಬಿದ್ದ ಕಾರಣ ಆತ ವಿದ್ಯಾ ಬಾಲನ್, ಪ್ರಿಯಾಂಕಾ ಚೋಪ್ರಾ, ಬಿಪಾಶಾ ಬಸು ಜೊತೆ ಒಂದಷ್ಟು ದಿನ ಐಸ್‌ಪೈಸ್ ಆಡಿದ್ದ. ಈಗ ಅನುಷ್ಕಾ ಜೊತೆ ಡಿಂಗ್ ಡಾಂಗ್ ಸುದ್ದಿ ಹೊರಬಿದ್ದಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಹಿದ್, ಇದಲ್ಲಾ ಸುಳ್ಳು. ಯಾರೋ ತಮಗೆ ಆಗದವರ ಕಿತಾಪತಿ ಇದು ಎಂದು ತಡಬಡಾಯಿಸಿದ್ದಾನೆ. (ಮೂಲ ಮುಂಬೈ ಮಿರರ್)

English summary
After walking hand in hand at Imran Khan's success bash, Shahid Kapoor and Anushka Sharma were reportedly spotted kissing in the balcony. The duo got a bit too intimate making other guests uncomfortable, reports Mumbai Mirror.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada